Connect with us

LATEST NEWS

ಆಸ್ಟ್ರೇಲಿಯಾದಲ್ಲಿ ಯುಗಾದಿ-ರಾಮನವಮಿ ಆಚರಣೆ

Published

on

ಸಿಡ್ನಿ: ಅಮೀ ಏಕ್ ಕುಟುಂಬ್ ವತಿಯಿಂದ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಯುಗಾದಿ, ರಾಮನವಮಿ ಆಚರಣೆ ನಡೆಯಿತು. ಮುನ್ನೂರಕ್ಕೂ ಅಧಿಕ ಸದಸ್ಯರು ಸಾಂಪ್ರದಾಯಿಕ ಉಡುಗೆಗಳಲ್ಲಿ ಭಾಗವಹಿಸಿದ್ದರು.

ಶ್ರೀರಾಮ ನವಮಿಯ ಪೂಜೆ, ಅಭಿಷೇಕ, ಭಜನೆ, ರಾಮ ಜಪ, ನೈವೇದ್ಯ ಆರತಿ, ಯುಗಾದಿ ಆಚರಣೆಯ ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ತಿಳಿವಳಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ವಿದೇಶದಲ್ಲಿ ಹಲವು ದಶಕಗಳಿಂದ ವಾಸವಿದ್ದ ಕುಟುಂಬಗಳ ಹೊಸ ಚಿಗುರು ಭಾರತೀಯ ಸಂಪ್ರದಾಯಗಳನ್ನು ಮರೆಯುತ್ತಿದ್ದು ಮಾತೃ ಭಾಷೆ ಹಾಗೂ ಸಂಸ್ಕೃತಿ ಸಂಸ್ಕಾರಗಳ ತಿಳಿವಳಿಕೆಯ ಜತೆಗೆ ಧಾರ್ಮಿಕ ಸಾಂಸ್ಕೃತಿಕ ಉನ್ನತಿ ಹಾಗೂ ಸಂಘಟಿತರಾಗಿ ಬೆಳೆಯಲು ಅಮೀ ಏಕ್ ಕುಟುಂಬ್ ಸಂಸ್ಥೆಯನ್ನು 2022ರಲ್ಲಿ ಸ್ಥಾಪಿಸಲಾಗಿದೆ ಎಂದು ಕಾಮಾಕ್ಷಿ ಶೆಣೈ ತಿಳಿಸಿದರು.

ಭಾರತೀಯ ಸಂಪ್ರದಾಯದಂತೆ ನೆಲದಲ್ಲಿ ಕುಳಿತು ಬಾಳೆ ಎಲೆಯಲ್ಲಿ ಊಟ, ಗೌಡ ಸಾರಸ್ವತರ ವಿಶೇಷತೆಗಳಾದ ಕೊಟ್ಟಿಗೆ, ಗಸಿ, ಗೇರುಬೀಜ ತೊಂಡೆಕಾಯಿ, ಅನ್ನ, ದಾಲ್, ತೋವೆ, ಪಾಯಸ ಮೊದಲಾದ ಭಕ್ಷಗಳನ್ನು ಬಡಿಸಲಾಯಿತು.

 

Advertisement
Click to comment

Leave a Reply

Your email address will not be published. Required fields are marked *

LATEST NEWS

ರಾಜ್ಯ ರಾಜಕೀಯದಲ್ಲಿ ಸಂಚಲನ; ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ನಿರಾಕರಿಸಿದ ರಾಜ್ಯಪಾಲರು!

Published

on

ಬೆಂಗಳೂರು: ಇಂದಿನಿಂದ (ಜ.22) ಆರಂಭವಾಗಲಿರುವ ಜಂಟಿ ಅಧಿವೇಶನಕ್ಕೂ ಮುನ್ನವೇ ರಾಜ್ಯ ರಾಜಕೀಯದಲ್ಲಿ ಸಂಚನ ಸೃಷ್ಟಿಯಾಗಿದೆ. ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಬಿಗ್‌ ಶಾಕ್‌ ಕೊಟ್ಟಿದ್ದಾರೆ.


ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶಗಳಿವೆ ಎಂಬ ಆಕ್ಷೇಪ ಎತ್ತಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಜಂಟಿ ಅಧಿವೇಶನದಲ್ಲಿ ಭಾಷಣ ಓದಲು ನಿರಾಕರಿಸಿದ್ದಾರೆ. ಇದು ಸರ್ಕಾರ ಮತ್ತು ಲೋಕಭವನದ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.

ಈ ನಡುವೆ ಲೋಕಭವನಕ್ಕೆ ಸಚಿವ ಹೆಚ್.ಕೆ. ಪಾಟೀಲ್ ನೇತೃತ್ವದ ನಿಯೋಗ ಭೇಟಿ ನೀಡಿ ರಾಜ್ಯಪಾಲರಿಗೆ ಸಾಂವಿಧಾನಿಕ ಹುದ್ದೆ ಸ್ಥಾನಮಾನಗಳ ಬಗ್ಗೆ ಮಾಹಿತಿ ನೀಡಿದೆ.

ಇದನ್ನೂ ಓದಿ: ವೃದ್ಧ ದಂಪತಿ ದುರಂತ ಅಂತ್ಯಕ್ಕೆ ಬಿಗ್ ಟ್ವಿಸ್ಟ್, ಮುಹೂರ್ತ ಇಟ್ಟಿದ್ದ ತಮ್ಮನ ವೈದ್ಯ ಮಗ ಅರೆಸ್ಟ್..!

ನಿಯಮಾವಳಿ ಏನು?
ರಾಜ್ಯಪಾಲರು ಭಾಷಣ ಓದಲು ನಿರಾಕರಿಸಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಸಂವಿಧಾನದ 361ನೇ ವಿಧಿ ಅಡ್ಡಿಯಾಗುತ್ತದೆ. ಈ ವಿಧಿಯ ಅಡಿಯಲ್ಲಿ ರಾಜ್ಯಪಾಲರ ಅಧಿಕಾರವಧಿಯಲ್ಲಿ ಕಾನೂನು ರಕ್ಷಣೆ ಇರುತ್ತದೆ. ರಾಜ್ಯಪಾಲರ ಈ ನಡೆ ಸಂವಿಧಾನಾತ್ಮಕ ಬಿಕ್ಕಟ್ಟಿಗೆ ಕಾರಣವಾಗುತ್ತದೆಯೇ ಹೊರತು ಶಿಕ್ಷಾರ್ಹ ಅಪರಾಧವಾಗುವುದಿಲ್ಲ.

Continue Reading

FILM

ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ನಟ ಉಗ್ರಂ ಮಂಜು

Published

on

ಕನ್ನಡದ ಜನಪ್ರಿಯ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್-11ರ ಸ್ಪರ್ಧಿ ಉಗ್ರಂ ಮಂಜು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ಕಾರ್ಯಕ್ರಮ ಸರಳವಾಗಿ ನಡೆದಿದೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಉಗ್ರಂ ಮಂಜು ಅವರ ಜೀವನದ ಹೊಸ ಅಧ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ 23ರಂದು ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮದುವೆಗೆ ಎರಡು ದಿನಗಳು ಬಾಕಿ ಇರುವಂತೆಯೇ, ಮಂಜು ಮನೆಯಲ್ಲಿ ಹಳದಿ ಶಾಸ್ತ್ರದ ಸಂಭ್ರಮ ವಿಜೃಂಭಣೆಯಿಂದ ನಡೆಯಿತು. ಕುಟುಂಬಸ್ಥರು, ಆಪ್ತರು ಹಾಗೂ ಬಂಧುಮಿತ್ರರ ಸಮ್ಮುಖದಲ್ಲಿ ಅರಿಶಿಣ ಶಾಸ್ತ್ರ ನೆರವೇರಿತು. ಸಂಪ್ರದಾಯದಂತೆ ಮಂಜು ಅವರಿಗೆ ಅರಿಶಿಣ ಲೇಪಿಸಿ, ಶುಭಾಶಯಗಳ ಸುರಿಮಳೆಗೈಯಲಾಯಿತು.

ಇದನ್ನೂ ಓದಿ: BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

ಇತ್ತೀಚೆಗೆ ಉಗ್ರಂ ಮಂಜು ಎರಡನೇ ಬಾರಿಗೆ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸದಸ್ಯರೊಂದಿಗೆ ತಮ್ಮ ಬ್ಯಾಚುಲರ್ ಪಾರ್ಟಿಯನ್ನು ಸಹ ಮಾಡಿಕೊಂಡಿದ್ದರು.

Continue Reading

LATEST NEWS

ಇವನೆಂಥಾ ಸೈಕೋ ಕಾಮಿ..! ಪಬ್ಲಿಕ್ ಟಾಯ್ಲೆಟ್ ನಲ್ಲಿ ನಾಯಿ ಮರಿಯ ಮೇಲೆ ಅತ್ಯಾಚಾರ..!

Published

on

ಮುಂಬೈ: ಇವನೆಂಥಾ ಕಾಮ ಪಿಶಾಚಿ. ಎರಡೂವರೆ ತಿಂಗಳ ನಾಯಿ ಮರಿ ಮೇಲೆ ಈ ಕಾಮುಕನೊಬ್ಬ ಸಾರ್ವಜನಿಕ ಶೌಚಾಲಯದಲ್ಲಿ ಅತ್ಯಾಚಾರವೆಸಗಿರುವ ಘಟನೆ ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ. ಅರೆಬೆತ್ತಲೆಯಾಗಿ ಮತ್ತು ಶಾರ್ಟ್ಸ್ ಧರಿಸಿ ಕಾಣಿಸಿಕೊಂಡ ಆರೋಪಿಯನ್ನು  ವಶಕ್ಕೆ ತೆಗೆದುಕೊಳ್ಳಲಾಗಿದೆ.

ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ವೀಡಿಯೋದಲ್ಲಿ ಆ ವ್ಯಕ್ತಿ ಆರಂಭದಲ್ಲಿ ಬಾಗಿಲು ತೆರೆಯಲು ನಿರಾಕರಿಸುವುದನ್ನು ಕಾಣಬಹುದು. ನಂತರ ಪೊಲೀಸರು ಬಲವಂತವಾಗಿ ಒಳಗೆ ಪ್ರವೇಶಿಸಿ ಆತನನ್ನು ವಶಕ್ಕೆ ಪಡೆದರು.

ನಾಯಿಮರಿಯನ್ನು ತಕ್ಷಣವೇ ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಯಿತು. ನಾಯಿಮರಿ ಈಗ ವೈದ್ಯಕೀಯ ಆರೈಕೆಯಲ್ಲಿದೆ ಮತ್ತು ಗಂಭೀರ ಸ್ಥಿತಿಯಲ್ಲಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page