Connect with us

LATEST NEWS

ಕಾರ್ಕಳದಲ್ಲಿ ಅಣ್ಣನ ಹಾದಿ ಹಿಡಿದ ತಂಗಿ .. ಅಣ್ಣ ಸಾವಿಗೆ ನೊಂದು  ಜೀವಾಂತ್ಯಗೊಳಿಸಿದ ನಿಶಾ.!

Published

on

ಉಡುಪಿ  : ತನ್ನ ಪ್ರೀತಿಯ ಅಣ್ಣನ ಸಾವಿಗೆ ನೊಂದು ತಂಗಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉಡುಪಿ ಜಿಲ್ಲೆಯ ಕಾರ್ಕಳತಾಲೂಕಿನ ಕಲ್ಯಾ ಗ್ರಾಮದಲ್ಲಿ ಹಾಡಿಯಲ್ಲಿ ಸಂಭವಿಸಿದೆ.

ನಿಟ್ಟೆಯ ಮೆಸ್ಕಾಂ ಉದ್ಯೋಗಿ ಕಲ್ಯಾ ಗ್ರಾಮದ ನಿಶಾ (23) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ನಿಶಾ ಅವರು ನಿಟ್ಟೆಯ ಮೆಸ್ಕಾಂ ನಲ್ಲಿ ಉದ್ಯೋಗಿಯಾಗಿದ್ದರು.

ಇವರ ಸಹೋದರ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಿಶಾರವರ ತಾಯಿ ಶಕುಂತಳಾರವರು ಮಾನಸಿಕವಾಗಿ ನೊಂದಿದ್ದರು.

ಇದರಿಂದ ನಿಶಾ ಕೂಡ ಮಾನಸಿಕವಾಗಿ ನೊಂದು, ಇದೇ ದಾರಿ ಹಿಡಿದಿರಬಹುದೆಂದು ಶಂಕಿಸಲಾಗಿದೆ.

ಮಧ್ಯಾಹ್ನ ತನ್ನ ಮನೆಯ ಪಕ್ಕದ ಹಾಡಿಯಲ್ಲಿ ನೇಣು ಬಿಗಿದುಕೊಂಡು ನಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಮೃತರ ತಂದೆ ರವಿ ಪೂಜಾರಿ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

LATEST NEWS

ಒಬ್ಬರಿಗೊಬ್ಬರು ತಾಳಿಕಟ್ಟಿಕೊಂಡ ಯುವತಿಯರು; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಸ್ನೇಹಿತೆಯರ ಮದುವೆ ವೀಡಿಯೋ

Published

on

ಯವತಿಯರಿಬ್ಬರು ಒಬ್ಬರಿಗೊಬ್ಬರು ತಾಳಿ ಕಟ್ಟಿ ಹಾರ ಬದಲಾಯಿಸಿ ಹಸೆಮಣೆ ಏರಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಕ್ಷಿಣ ಭಾರತದ ಕೇರಳ ಅಥವಾ ತಮಿಳುನಾಡಿನಲ್ಲಿ ಈ ಮದುವೆ ನಡೆದಿರುವುದಾಗಿ ವಿಡಿಯೋ ವೀಕ್ಷಿಸಿದ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಬ್ಬರು ಯುವತಿಯರು ಮದುವೆ ಮಂಟಪದಲ್ಲಿ ತಾಳಿಯನ್ನು ಪ್ರದರ್ಶಿಸಿ ಒಬ್ಬರಿಗೊಬ್ಬರು ತಾಳಿ ಕಟ್ಟಿಕೊಂಡು ಪ್ರತಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ.

ಇದು ನಿಜ ಮದುವೆಯಾ ಅಥವಾ ರೀಲ್ಸ್ ಗಾಗಿ ಮಾಡಿರೋದಾ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಕೆಲವರು ಈ ವಿಡಿಯೋಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದು, ನಮ್ಮ ದೇಶದ ಸಂಸ್ಕೃತಿಯನ್ನು ಹಾಳು ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಐವರು ಮಡದಿಯರ ಮುದ್ದಿನ ಗಂಡ.. ಇಂದು 11 ಮಕ್ಕಳ ತಂದೆ..! ಈತನ ಐದು ಮದುವೆಗೆ ಕಾರಣ ಏನು ಗೊತ್ತಾ?

ಸಲಿಂಗಿಗಳ ಮದುವೆಗೆ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿಲ್ಲವಾಗಿದ್ದರೂ, ಲೀವ್ ಇನ್ ರಿಲೇಷನ್ ಶಿಪ್ ನಲ್ಲಿ ಇರಲು ಅವಕಾಶ ನೀಡಿದೆ. ಹಾಗೊಂದು ವೇಳೆ ಮದುವೆ ಆದರೆ ಅದನ್ನು ಮಾನ್ಯಗೊಳಿಸುವ ವಿಚಾರವನ್ನು ಶಾಸಕಾಂಗದ ಜವಾಬ್ದಾರಿಗೆ ಬಿಟ್ಟಿದೆ. ಈ ವಿಡಿಯೋ ವೈರಲ್ ಆದ ಬಳಿಕ ಭಾರತದಲ್ಲಿ ಸಲಿಂಗಿಗಳ ಮದುವೆ ವಿಚಾರವಾಗಿ ಸಾಕಷ್ಟು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

Continue Reading

DAKSHINA KANNADA

ಕುಂಭದ್ರೋಣ ಮಳೆಗೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

Published

on

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಾಗಾರಿ ಆರಂಭಗೊಂಡು ಹಲವು ವರ್ಷವಾದ್ರೂ ಇನ್ನೂ ಕೂಡಾ ಪೂರ್ಣಗೊಂಡಿಲ್ಲ. ಕೆಲವಡೆ ಸಂಚಾರಕ್ಕೆ ಯೋಗ್ಯವಾದ ರಸ್ತೆ ಏನೋ ನಿರ್ಮಾಣ ಮಾಡಲಾಗಿದೆಯಾದರೂ ಮಳೆಗಾಲದಲ್ಲಿ ನೀರು ಹರಿದು ಹೋಗುವ ವ್ಯವಸ್ಥೆಯೇ ಮಾಡಿಲ್ಲ.

 

ಕಳೆದ ವರ್ಷ ಇದೇ ಸಮಸ್ಯೆಯಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಇದೀಗ ಮಳೆಗಾಲ ಸಮೀಪಿಸ್ತಾ ಇದ್ದು , ಅಕಾಲಿಕ ಮಳೆ ಕೂಡಾ ಆರಂಭವಾಗಿದೆ. ಭಾನುವಾರ ಬಂಟ್ವಾಳ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ಮತ್ತೆ ಹೆದ್ದಾರಿ ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಮಳೆಯಿಂದಾಗಿ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದ್ದಾರೆ.

ಬಂಟ್ವಾಳ ತಾಲೂಕಿ ಕಲ್ಲಡ್ಕ ಸಮೀಪದ ಸೂರಿಕುಮೇರು ಎಂಬಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಇಡೀ ರಸ್ತೆಯೇ ನದಿಯಂತಾಗಿ ಹೋಗಿದೆ. ಇದರ ನಡುವೆ ಸಣ್ಣಪುಟ್ಟ ವಾಹನಗಳು ಸಂಚರಿಸಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರು ಹೆದ್ದಾರಿ ಕಾಮಗಾರಿಗೆ ಹಿಡಿ ಶಾಪ ಹಾಕಿದ್ದಾರೆ.

ಇದನ್ನೂ ಓದಿ: ಉಡುಪಿ : ಹುಲಿ ವೇಷದಾರಿ ಹೃದಯಾಘಾತಕ್ಕೆ ಬಲಿ

ಹೆದ್ದಾರಿಯ ಇಕ್ಕೆಲೆಯಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದೇ ಇರುವುದು ಈ ಅವ್ಯವಸ್ಥೆಗೆ ಕಾರಣವಾಗಿದ್ದು, ತಕ್ಷಣವೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Continue Reading

LATEST NEWS

ಯುದ್ಧದ ಬಗ್ಗೆ ಪ್ರಧಾನಿ, ರಕ್ಷಣಾ ಸಚಿವರು ನಿರ್ಧಾರ ಮಾಡುತ್ತಾರೆ : ಪುತ್ತಿಗೆ ಶ್ರೀ

Published

on

ಉಡುಪಿ : ಭಾರತ ಹಾಗೂ ಪಾಕ್ ನಡೆವೆ ಈಗಾಗಲೇ ಉದ್ವಿಗ್ನತೆ ಉಂಟಾಗಿದ್ದು ಭವಿಷ್ಯ ಹೇಳುವುದು ಕಠಿಣ. ಈ ಕುರಿತು ಮಾತನಾಡಿದ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ “ಯುದ್ಧ ಬೇಕೋ ಬೇಡವೋ ಎನ್ನುವುದು ಪ್ರಧಾನಿ ಮತ್ತು ರಕ್ಷಣಾ ಸಚಿವರು ತೆಗೆದುಕೊಳ್ಳಬೇಕಾದ ನಿರ್ಧಾರ” ಎಂದು ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಪುತ್ತಿಗೆ ಶ್ರೀಗಳು “ಕಾಶ್ಮೀರ ಘಟನೆಗೆ ಹಿನ್ನೆಲೆ ಮತ್ತು ಕಾರಣವೇನೇಂದು ನಮಗೆ ಗೊತ್ತಿಲ್ಲ. ಕಾಶ್ಮೀರ ದಲ್ಲಿ ಭದ್ರತೆಯನ್ನು ಹೆಚ್ಚಿಸ ಬೇಕು. ಭದ್ರತೆಗೆ ಪ್ರಥಮ ಪ್ರಾಶಸ್ತ್ಯ ನೀಡ ಬೇಕು. ಶಾಂತಿಯಿಂದ ಸಮಸ್ಯೆ ಪರಿಹಾರ ಆಗುವುದು ಎಷ್ಟು ಮುಖ್ಯವೋ ಶಾಶ್ವತ ಪರಿಹಾರ ಸಿಗುವುದು ಕೂಡ ಅಷ್ಟೇ ಮುಖ್ಯ ಶಾಂತಿ, ಶಾಂತಿ ಎಂದು ಹೇಳಿ ನಾವೇ ಯಾವಾಗಲೂ ಸಂಕಷ್ಟಕ್ಕೀಡಾಗುತ್ತಿದ್ದರೆ ಅರ್ಥವಿಲ್ಲ. ಶಾಶ್ವತ ಪರಿಹಾರವೇ ಮುಖ್ಯ” ಎಂದರು.

ಪೆಹಲ್ಗಾಂವ್  ಘಟನೆಯಿಂದ ನನಗೆ ಆಶ್ಚರ್ಯವಾಗಿದೆ. ಈವರೆಗೆ ಧರ್ಮವನ್ನು ನೋಡಿ ಭಯೋತ್ಪಾದನೆ ನಡೆಯುತ್ತಿರಲಿಲ್ಲ. ಮಾರ್ಕೆಟ್ ನಲ್ಲಿ , ಬಸ್ ಸ್ಟ್ಯಾಂಡ್ ನಲ್ಲಿ ಎಲ್ಲೆಂದರಲ್ಲಿ  ಬಾಂಬ್ ಹಾಕುತ್ತಿದ್ದರು. ಅದನ್ನು ಮಾನಸಿಕ ದೌರ್ಬಲ್ಯ ಎಂದು ಭಾವಿಸ ಬಹುದಿತ್ತು. ಈಗ ಧರ್ಮವನ್ನು ಕೇಳಿ ಹೊಡೆಯುತ್ತಿದ್ದಾರೆ. ಹಿಂದೂ ಸಮಾಜ ಜಾಗೃತವಾಗ ಬೇಕು, ಒಗ್ಗಟ್ಟಾಗ ಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು, ಭಯೋತ್ಪಾದಕರಿಗೆ ಕಠಿನ ಶಿಕ್ಷೆಯಾಗ ಬೇಕು. ತಾತ್ಕಾಲಿಕ ಪರಿಹಾರಗಳಿಂದ ಸಮಸ್ಯೆ ಬಗೆಹರಿಯಲ್ಲ. ಶಾಶ್ವತ ಪರಿಹಾರ ಏನು ಅನ್ನೋದನ್ನ ಪ್ರಧಾನ ಮಂತ್ರಿಗಳು ಮತ್ತು ಸಚಿವ ಸಂಪುಟ ನಿರ್ಧಾರ ಮಾಡ ಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page