Connect with us

BANTWAL

ಬಂಟ್ವಾಳ: ಕಟ್ಟಡದ 4ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಿದ್ದು ಯುವಕ ಸಾವು

Published

on

ಬಂಟ್ವಾಳ: ಕಟ್ಟಡವೊಂದರ 4 ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವಕನೋರ್ವ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ಪಡೀಲ್ ಬಳಿ ನಡೆದಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಅಜಿಲಮೊಗರು ಪುಣ್ಕೆದಡಿ ನಿವಾಸಿ ವಿಜಯ್‌ ಪುಣ್ಕೆದಡಿ (23)ಮಹಡಿಯಿಂದ ಬಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾನೆ.

ನಿನ್ನೆ ಬೆಳಗ್ಗೆ ಎಂದಿನಿಂತೆ ಕೆಲಸಕ್ಕೆ ಹೋಗಿದ್ದ ವಿಜಯ್ ಕೆಲಸ ಮಾಡುವ ವೇಳೆ ಆಯತಪ್ಪಿ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವಿಜಯ್ ಅದಾಗಲೇ ಮೃತಪಟ್ಟದ್ದಾನೆ ಎಂದು ವೈದ್ಯ ರು ತಿಳಿಸಿದ್ದಾರೆ.

ಮೃತ ವಿಜಯ್ ತಂದೆ ,ತಾಯಿ ಅಕ್ಕ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BANTWAL

ಬಂಟ್ವಾಳ: ‘ತನ್ನ ಮಗನದ್ದು ಆತ್ಮಹತ್ಯೆ ಅಲ್ಲ, ಕೊಲೆ’ ಎಂದು ಪೊಲೀಸ್ ಠಾಣೆ ಮೆಟ್ಟಲೇರಿ ನ್ಯಾಯಕ್ಕಾಗಿ ಮೊರೆ ಇಟ್ಟ ತಾಯಿ

Published

on

ಬಂಟ್ವಾಳ: ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದ ರಮಾನಂದ ಅವರದು ಆತ್ಮಹತ್ಯೆ ಅಲ್ಲ, ಇದೊಂದು ವ್ಯವಸ್ಥಿತ ಕೊಲೆ ಎನ್ನುವ ಸಂಶಯವಿದ್ದು, ಸೂಕ್ತವಾದ ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಡಿ ಎಂದು ರಮಾನಂದ ತಾಯಿ ಜಾನಕಿ ಅವರು ವಾಮಂಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಬರಿಮಾರು ಗ್ರಾಮದ ದೇಲಬೆಟ್ಟು ನಿವಾಸಿ ರಮಾನಂದ (25) ಅವರು ನ.25 ರಂದು ನಾಪತ್ತೆಯಾಗಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಕೂಡ ದಾಖಲಾಗಿತ್ತು.

ಈ ಮಧ್ಯೆ ಅದೇ ದಿನ ಮಧ್ಯಾಹ್ನದ ವೇಳೆ ಈತನ ಶವ ಮಂಗಳೂರು ತಾಲೂಕಿನ ವಾಮಂಜೂರು ಕೆತ್ತಿಕಲ್ಲು ಬಳಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು, ಹಗ್ಗ ತುಂಡಾಗಿ ಕೆಳಗೆ ಬಿದ್ದಂತೆ ಕಾಣಿಸಿಕೊಂಡಿದ್ದು, ವಾಮಂಜರೂ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಡೆ*ತ್ ನೋಟ್ ಬರೆದಿಟ್ಟು ಆತ್ಮಹ*ತ್ಯೆಗೆ ಶರ*ಣಾದ ಮಹಿಳೆ; ಇಬ್ಬರು ಮಕ್ಕಳು ಅನಾಥ

ಆದರೆ ಮನೆಯವರಿಗೆ ಸಾವಿನ ಬಗ್ಗೆ ಸಂಶಯವಿದ್ದು, ಇದೊಂದು ವ್ಯವಸ್ಥಿತ ರೀತಿಯ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

Continue Reading

BANTWAL

ಬಂಟ್ವಾಳ: 13ನೇ ವರ್ಷದ ‘ಸತ್ಯಧರ್ಮ’ ಜೋಡು ಕರೆ ಕಂಬಳಕ್ಕೆ ಚಾಲನೆ

Published

on

ಬಂಟ್ವಾಳ: ಶ್ರೀರಾಮಾಂಜನೇಯ ಗೆಳೆಯರ ಬಳಗ ಮೈರ, ಉಳಿ ಗ್ರಾಮ ಕಕ್ಯೆಪದವು ಬಂಟ್ವಾಳ ಇವರಿಂದ ವೇದಮೂರ್ತಿ ರಾಘವೇಂದ್ರ ಭಟ್ ಕೊಡಂಬೆಟ್ಟು ಕಾರಿಂಜ ಇವರ ಶುಭಾಶೀರ್ವಾದದೊಂದಿಗೆ ಕಕ್ಯಪದವು ಮೈರ ಬರ್ಕೆಜಾಲು ಎಂಬಲ್ಲಿ 13ನೇ ವರ್ಷದ ಸತ್ಯದರ್ಮ ಜೋಡುಕರೆ ಬಯಲು ಕಂಬಳ ಇಂದು ಬೆಳಿಗ್ಗೆ ಆರಂಭಗೊಂಡಿತು.

ಶಾಸಕ ಉಳೇಪ್ಪಾಡಿಗುತ್ತು ರಾಜೇಶ್ ನಾಯ್ಕ್‌ ಅವರ ಗೌರವಾಧ್ಯಕ್ಷತೆಯಲ್ಲಿ, ಬರೋಡ ಉದ್ಯಮಿ ಶಶೀಧರ ಶೆಟ್ಟಿ ನವಶಕ್ತಿ ಇವರ ಸಾರಥ್ಯದಲ್ಲಿ, ಜಗನ್ನಾಥ್‌ ಬಂಗೇರ ನಿರ್ಮಲ್‌ ಇವರ ಮಾರ್ಗದರ್ಶನದಲ್ಲಿ ಜಿಲ್ಲಾ ಕಂಬಳ ಸಮಿತಿ ಸಹಭಾಗಿತ್ವದೊಂದಿಗೆ, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ ಮತ್ತು ಸತ್ಯಧರ್ಮದ ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ ಇವರ ಮುಂದಾಳತ್ವದಲ್ಲಿ ಆರಂಭಗೊಂಢಿರುವ ಕಂಬಳ ವೀಕ್ಷಣೆಗೆ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ.

ಮೊದಲಿಗೆ ಕಂಬಳದ ಕರೆಗೆ ಪೂಜೆ ನೆರವೇರಿಸಿ, ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗನ್ನಾಥ ಬಂಗೇರ ವಹಿಸಿದ್ದರು. ವಿವಿಧ ಗಣ್ಯರು ಸಭಾ ಕಾರ್ಯಕ್ರಮದಲ್ಲಿ ಪಾಳ್ಗೊಂಡರು.

Continue Reading

BANTWAL

ಬಂಟ್ವಾಳ ತಾ.ಪಂ ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್ ತುಂಬೆ ನಿಧನ

Published

on

ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಬಂಟ್ವಾಳ ತಾಲೂಕು ಪಂಚಾಯತ್ ನ ಮಾಜಿ ಸದಸ್ಯರಾಗಿ ಜನಪ್ರಿಯರಾಗಿದ್ದ ಸೋಮಪ್ಪ ಕೋಟ್ಯಾನ್ ತುಂಬೆ ಅವರು ನಿಧನರಾಗಿದ್ದಾರೆ.


ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದ ಸೋಮಪ್ಪ ಹುಟ್ಟು ಹೋರಾಟಗಾರರಾಗಿ, ಬಿಜೆಪಿ ಜಿಲ್ಲಾ ಮಂಡಲದ ವಿವಿಧ ಜವಾಬ್ದಾರಿಯನ್ನು ನಿಭಾಯಿಸಿದವರು.

ಅನೇಕ ಸಂಘಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಇವರು, ಕಳೆದ 25 ವರ್ಷಗಳಿಂದ ತುಂಬೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿಯಾಗಿ, ಬಿಲ್ಲವ ಸಮಾಜದ ಗುರಿಕಾರರಾಗಿ, ಯುವ ಸಮುದಾಯದ ಮಾರ್ಗದರ್ಶಕರಾಗಿದ್ದರು.

ಇದನ್ನೂ ಓದಿ: ಸರಪಾಡಿ ಯುವಕ‌ ಮಂಡಲದ ಮಾಜಿ ಅಧ್ಯಕ್ಷ ಸತೀಶ್ ಪೈ ಹೃದಯಾಘಾತದಿಂದ ನಿಧನ

ಅಲ್ಪ ಕಾಲದ ಅನಾರೋಗ್ಯ ದಿಂದಾಗಿ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಎರಡು ಗಂಡು, ಒಂದು ಹೆಣ್ಣು ಮಕ್ಕಳ ಸಹಿತ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page