ದಿನಕ್ಕೊಂದು ಹೊಸ ಹೊಸ ರೀತಿಯ ಬಟ್ಟೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ಪೋಸ್ಟ್ ಹಂಚಿಕೊಳ್ಳುವ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಸದ್ಯ ʼBoys v/s Girlsʼ ಶೋನಲ್ಲಿ ಭಾಗವಹಿಸಿದ್ದಾರೆ. ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ಅವರು ಹೇಳಿರುವ ಹೇಳಿಕೆ ಹಾಗೂ ಅವರ ಉಗುರು ಪ್ರಸಂಗ ಫುಲ್ ವೈರಲ್ ಆಗ್ತಿದೆ.

‘Boys v/s Girls ’ ರಿಯಾಲಿಟಿ ಶೋನಲ್ಲಿ ನಿವಿ..!
ಕಲರ್ಸ್ ಕನ್ನಡದ Boys v/s Girls ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಸೇರಿದಂತೆ ಅನೇಕ ಸ್ಪರ್ಧಿಗಳಿದ್ದಾರೆ. ಆದರೆ ನಿವಿ, “ಹುಡುಗರನ್ನು ಇಂಪ್ರೆಸ್ ಮಾಡಲು ಬ್ರೇನ್ ಬೇಡ, ಬ್ಯೂಟಿ ಸಾಕು” ಎಂದು ಹೇಳಿದ್ದು, ಈ ಮಾತಿಗೆ ಕಲರ್ಸ್ ಕನ್ನಡ ವಾಹಿನಿಯ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿದೆ.
ತಮ್ಮ ಬಟ್ಟೆ ಮೂಲಕನೇ ಪಡ್ಡೆ ಹುಡುಗರ ಮನಸ್ಸು ಕದ್ದಿರುವ ನಿವೇದಿತಾ ಗೌಡ, ಚಂದನ್ ಶೆಟ್ಟಿ ಜೊತೆ ವಿಚ್ಛೇದನವಾದ ಬಳಿಕವಂತೂ ಫುಲ್ ಮಿಂಚುತ್ತಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡಿದ್ದಾರೆ. ಅದೆಷ್ಟೇ ಬ್ಯಾಡ್ ಕಮೆಂಟ್‌ಗಳು ಬಂದರೂ ಅದನ್ನು ಲೆಕ್ಕಿಸದೆ ತಮ್ಮಿಚ್ಛೆಯಂತೆ ಬದುಕುತ್ತಿರುವ ನಿವಿ ಪ್ರಸ್ತುತ Boys v/s Girls ಶೋನಲ್ಲಿ ಭಾಗವಹಿಸಿದ್ದು, ಈ ಶೋನಲ್ಲಿ ಯಾವ ಯಾವ ರೀತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ನಿವೇದಿತಾ ಗೌಡ ಉಗುರು ಪ್ರಸಂಗ :
ನಿವೇದಿತಾ ಗೌಡಳ ಉಗುರಿನ ಬಗ್ಗೆ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದ ವೇದಿಕೆ ಮೇಲೆ ಚರ್ಚೆ ನಡೆದಿದ್ದು, ಹಿರಿಯ ನಟಿ ಶ್ರುತಿ, ನಿವೇದಿತಾಳ ಬಳಿ “ಇಷ್ಟು ಉದ್ದದ ಉಗುರುಗಳನ್ನು ಇಟ್ಟುಕೊಂಡಿದ್ದೀಯಲ್ಲಾ, ಯಾರಾದರೂ ನಿಮಗೆ ಮುದ್ದೆ ಕೊಟ್ಟರೆ ಅದನ್ನು ಹೇಗೆ ತಿನ್ನುತ್ತೀರಿ? ಉಗುರಿನಿಂದ ತಿನ್ನಲು ತೊಂದರೆ ಆಗಲ್ವಾ'” ಎಂದು ಪ್ರಶ್ನಿಸಿದ್ದಾರೆ. ನಟಿ ಶ್ರುತಿ ಪ್ರಶ್ನೆಗೆ ಉತ್ತರಿಸಿದ ನಿವೇದಿತಾ ಗೌಡ, “ನಾನು ಮುದ್ದೆ ತಿನ್ನಲು ಸಾಮಾನ್ಯವಾಗಿ ಚಮಚ ಹಾಗೂ ಫೋರ್ಕ್ ಬಳಸುತ್ತೇನೆ. ಈಗ ಈ ಉಗುರುಗಳನ್ನೇ ಮುದ್ದೆ ತಿನ್ನಲು ಬಯಸುತ್ತೇನೆ. ಚಮಚ ಹಾಗೂ ಫೋರ್ಕ್ ರೀತಿ ಒಂದು ಉಗುರಿನಲ್ಲಿ ಮುದ್ದೆಯನ್ನು ಕಟ್ ಮಾಡಿ ಮತ್ತೊಂದರಲ್ಲಿ ಚುಚ್ಚಿ ತಿನ್ನುತ್ತೇನೆ'” ಎಂದಿದ್ದಾರೆ. ನಿವೇದಿತಾ ಗೌಡ ಉತ್ತರ ಕೇಳಿ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದಲ್ಲಿ ಎಲ್ಲರೂ ಶಾಕ್ ಆಗಿದ್ದಾರೆ.

ಇನ್ನು ನಿವೇದಿತಾ ಗೌಡ ಅವರ ಉಗುರುಗಳನ್ನು ಹೊಗಳುತ್ತಿದ್ದ ನಿರೂಪಕಿ ಅನುಪಮಾ ಗೌಡ ಇದೇ ವಿಚಾರವನ್ನು ಚರ್ಚಿಸಲು ಬಿಗ್ ಬಾಸ್ ಕನ್ನಡ ಸೀಜನ್ 11ರ ವಿನ್ನರ್ ಪ್ರಸ್ತುತ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದ ಸ್ಪರ್ಧಿ ಹನುಮಂತ ಅವರನ್ನು ಕೇಳಿದರು, “ಇದು ಸಂಪೂರ್ಣ ನಿಜವಾದ ಉಗುರು ನಿಮಗೆ ಏನು ಅನಿಸುತ್ತದೆ ಹನುಮಂತು ಅವರೇ” ಎಂದು ಕೇಳಿದ್ದಾಗ “ನಾನು ಒಂದು ಉಗುರು ಬಿಟ್ಟಿದ್ದೇನೆ ಕೆರೆದುಕೊಳ್ಳೋಕೆ” ಎಂದು ಉತ್ತರಿಸಿದ್ದಾರೆ. ಹನುಮಂತ ಅವರ ಉತ್ತರ ಕೇಳಿ ಎಲ್ಲರೂ ನಕ್ಕಿದ್ದು, ಹನುಮಂತ ಒಂದೇ ಉತ್ತರದಲ್ಲಿ ವೇದಿಕೆ ಮೇಲಿದ್ದವರ ಬಾಯಿ ಮುಚ್ಚಿಸಿದ್ದಾರೆ.