Connect with us

LATEST NEWS

ನದಿ ತಟದಲ್ಲಿ ಮಹಿಳೆಯ ಮೃತದೇಹ: ಕಾರ್ಕಳ ಮೂಲದವರು ಎಂದು ಗುರುತು ಪತ್ತೆ

Published

on

ಮಂಗಳೂರು: ಅಪರಿಚಿತ ಮಹಿಳೆಯೊಬ್ಬರ ಮೃತದೇಹ ನಿನ್ನೆ ಮಂಗಳೂರಿನ ಹೊಯಿಗೆ ಬಜಾರ್ ತಟದಲ್ಲಿ ಪತ್ತೆಯಾಗಿತ್ತು. ಮೃತದೇಹ ಕಾರ್ಕಳ ನಿವಾಸಿ ಸರೋಜ (31) ಎಂದು ಗುರುತು ಪತ್ತೆ ಹಚ್ಚಲಾಗಿದ್ದು, ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನಿನ್ನೆ ಬೆಳಗ್ಗೆ ಹೊಯಿಗೆ ಬಜಾರ್ ನಲ್ಲಿ ದಕ್ಕೆಗೆ ಎಂದು ತೆರಳಿದ್ದ ಮೀನುಗಾರರಿಗೆ ಮೃತದೇಹ ಕಂಡುಬಂದಿದ್ದು, ಕೂಡಲೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸರೋಜಾರನ್ನು ಹಲವು ವರ್ಷಗಳ ಮೊದಲು ಕಾರ್ಕಳಕ್ಕೆ ಮದುವೆ ಮಾಡಿಕೊಡಲಾಗಿತ್ತು. ಕಳೆದ 4 ದಿನಗಳ ಮೊದಲು ತನ್ನ 4 ವರ್ಷದ ಮಗುವಿನೊಂದಿಗೆ ತಾಯಿಮನೆಗೆ ಬಂದಿದ್ದರು.

ಶನಿವಾರ ತಾಯಿ ಮನೆಯಲ್ಲಿ ಮಗುವನ್ನು ಇರಿಸಿ ಮನೆ ಬಿಟ್ಟು ಹೊರಗೆ ಬಂದವರು ಮರಳಿ ಮನೆಗೆ ಹಿಂತಿರುಗಿರಲಿಲ್ಲ.

ಅದಾದ ಬಳಿಕ ನಿನ್ನೆ ಸರೋಜರವರ ಮೃತದೇಹ ಹೊಯಿಗೆ ಬಜಾರ್ ತಟದಲ್ಲಿ ಪತ್ತೆಯಾಗಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ.

FILM

ಬಾಲಿವುಡ್ ಕಿಂಗ್ ಖಾನ್ ಪುತ್ರನಿಗೆ ಬೆಂಬಲ ನೀಡಿದ ಚಿತ್ರರಂಗ !

Published

on

ಮಂಗಳೂರು/ಮುಂಬೈ : ಸ್ಟಾರ್ ಹೀರೋಗಳ ಪುತ್ರರು ನಟನಾ ಪರಂಪರೆಯನ್ನು ಮುಂದುವರಿಸಿಕೊಂಡು ನಾಯಕರಾಗಿ ಪಾದಾರ್ಪಣೆ ಮಾಡುವುದು ಸಾಮಾನ್ಯ. ಆದರೆ, ಶಾರುಖ್ ಖಾನ್ ಅವರ ಮಗ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಹೌದು, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ‘ದಿ ಬ್ಯಾಡಸ್ ಆಫ್ ಬಾಲಿವುಡ್’ ಎಂಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದು ಒಟಿಟಿ (OTT) ಪ್ಲಾಟ್‌ಫಾರ್ಮ್, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನೆಟ್‌ಫ್ಲಿಕ್ಸ್ ಹಾಗೂ ಶಾರುಖ್ ಅವರ ರೆಡ್ ಚಿಲ್ಲೀಸ್ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ: ಸ್ವಂತ ಮಗಳ ಮೇಲೆಯೇ ಆತ್ಯಾಚಾರವೆಸಗಿ ಗರ್ಭವತಿ ಮಾಡಿದ ತಂದೆ

ಈ ಸಿನಿಮಾಗೆ ನಾಯಕ ನಟನಾಗಿ ‘ಕಿಲ್’ ಚಿತ್ರದ ಮೂಲಕ ಬ್ಲಾಕ್ ಬ್ಲಸ್ಟರ್ ಹಿಟ್ ಪಡೆದ ಲಕ್ಷ್ಯ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಸಹೇರ್ ಬಾಂಬಾ ನಟಿಸುತ್ತಿದ್ದಾರೆ. ಬಾಬಿ ಡಿಯೋಲ್ ಮತ್ತು ಮೋನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ.

ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಮುಖ ತಾರೆಗಳು

ಆರ್ಯನ್ ಖಾನ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಬಾಲಿವುಡ್‌ನ ಮೂವರು ಖಾನ್‌ಗಳಾದ ಶಾರುಖ್, ಅಮೀರ್ ಮತ್ತು ಸಲ್ಮಾನ್ ಇದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೊಂದಿಗೆ ರಣವೀರ್ ಸಿಂಗ್, ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ನಿರ್ದೇಶಕರಾದ ರಾಜಮೌಳಿ ಮತ್ತು ಕರಣ್ ಜೋಹರ್ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಎಲ್ಲಾ ಕಾರಣಗಳಿಂದ ನೆಟ್ಟಿಗರು ಇಡೀ ಚಿತ್ರರಂಗವೇ ಸ್ಟಾರ್ ನಾಯಕನ ಮಗನ ಬೆಂಬಲಕ್ಕೆ ನಿಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಶಾರುಖ್ ಖಾನ್ ಅವರ ಮಗ ನಿರ್ದೇಶಕನಾಗಿ ಯಾವ ರೀತಿಯ ಕಥೆ ಹೆಣೆಯುತ್ತಾರೆ ಎಂದು ಕಾದು ನೋಡಬೇಕಿದೆ.

 

 

Continue Reading

LATEST NEWS

ಸ್ವಂತ ಮಗಳ ಮೇಲೆಯೇ ಆತ್ಯಾಚಾರವೆಸಗಿ ಗರ್ಭವತಿ ಮಾಡಿದ ತಂದೆ

Published

on

ದಿನದಿಂದ ದಿನಕ್ಕೆ ದೇಶದಲ್ಲಿ ಆತ್ಯಾಚಾರ ಲೈಂಗಿಕ ದೌರ್ಜನ್ಯಗಳ ಸಂಖ್ಯೆ ಹಚ್ಚುತ್ತಿದೆ. ಇದೀಗ ಇಂತಹದ್ದೇ ಒಂದು ಘಟನೆ ಗುಜರಾತ್‌ನಲ್ಲಿ ನಡೆದಿದೆ. 14 ವರ್ಷದ ತನ್ನ ಹೆತ್ತ ಮಗಳ ಮೇಲೆ ತಂದೆಯೊಬ್ಬ ಆತ್ಯಾಚಾರ ಎಸಗಿ ಆಕೆಯನ್ನು ಗರ್ಭವತಿ ಮಾಡಿದ ಘಟನೆ ಗುಜರಾತ್ನ ಅಹ್ಮದಾಬಾದ್ ನಲ್ಲಿ ನಡೆದಿದೆ.

ತನ್ನ 14 ವರ್ಷದ ಮಗಳ ಮೇಲೆ ನಿರಂತರವಾಗಿ ತಂದೆ ಆತ್ಯಾಚಾರವೆಸಗುತ್ತಿದ್ದ. ನಂತರ ಯಾರಲ್ಲೂ ಹೇಳದ ಹಾಗೆ ಬೆದರಿಕೆ ಹಾಕಿದ್ದ. ಆದರೆ ಆಕೆ ಹೊಟ್ಟೆನೋವಿನಿಂದ ಬಳಲುತ್ತಿದ್ದಾಗ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಂತಿಮವಾಗಿ ಫೆಬ್ರವರಿ 5 ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ.

ಆರೋಪಿಗೆ 6 ಮಕ್ಕಳಿದ್ದಾರೆ. ಅದರಲ್ಲಿ ಒಬ್ಬಾಕೆಯ ಮೇಲೆ ಆತ್ಯಾಚಾರವೆಸಗಿದ್ದಾನೆ. ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಮತ್ತು ಪೋಕ್ಸೊ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Continue Reading

DAKSHINA KANNADA

ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ-ಮಳಿಗೆಗಳಿಗೆ ಮೇಯರ್ ದಿಢೀರ್ ದಾಳಿ

Published

on

ಮಂಗಳೂರು : ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ-ಮಳಿಗೆಗಳಿಗೆ ಮೇಯರ್ ಮನೋಜ್ ಕುಮಾರ್ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  ನಡೆಯಿತು.

ಮಂಗಳುರಿನ ಫಿಝಾ ಬೈ ನೆಕ್ಸ್ ಮಾಲ್ ಹಾಗೂ ಟೋಕಿಯಾ ಮಾರ್ಕೇಟ್‌ಗಳಿಗೆ ಮೇಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಕೆಲವೊಂದು ಅಂಗಡಿಗಳು ಟ್ರೇಡ್‌ಲೈನ್ಸನ್ ನವೀಕರಿಸದ ಹಿನ್ನಲೆಯಲ್ಲಿ ಬೀಗ ಜಡಿದರು. ಮಾತ್ರವಲ್ಲದೇ ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ ಮಾಲಕಕರಿಗೆ ಮೇಯರ್ ವಾರ್ನಿಂಗ್ ನೀಡಿದ್ದಾರೆ.

ಇದನ್ನೂ ಓದಿ : ಸಿದ್ಧರಾಮಯ್ಯಗೆ ಬಿಗ್ ರಿಲೀಫ್; ಸಿಬಿಐ ತನಿಖೆಯಿಂದ ಪಾರಾದ ಸಿಎಂ

ಈ ಸಂದರ್ಭ ಮಾತನಾಡಿದ ಮೇಯರ್, “ಹಲವಾರು ಮಂದಿಯ ದೂರಿನ ಮೇರಿಗೆ ದಾಳಿ ಮಾಡಲಾಗಿದೆ. ಕೆಲವೊಂದು ಅಂಗಡಿಗಳಲ್ಲಿ ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಹಿನ್ನಲೆಯಲ್ಲಿ ಅವರಿಗೆ ನೋಟೀಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಲಾಗುವುದು” ಎಂದು ಹೇಳಿದರು. ಈ ವೇಳೆ ಉಪಮೇಯರ್ ಭಾನುಮತಿ, ಪಾಲಿಕೆ ಸದಸ್ಯೆ ಸುಮಿತ್ರಾ ಕರಿಯ,ಕಂದಾಯ ಅಧಿಕಾರಿ ವಿಜಯ್,ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page