Connect with us

DAKSHINA KANNADA

ಪಿಯುಸಿ ಪರೀಕ್ಷೆಯಲ್ಲಿ ಇನ್‌ಫಿನಿಟಿ ಕೋಚಿಂಗ್ ಕ್ಲಾಸಸ್‌ನ ಯಶ್ವಿತಾಗೆ ಡಿಸ್ಟಿಂಕ್ಷನ್

Published

on

ಮಂಗಳೂರು: ಜಪ್ಪಿನಮೋಗರಿನ ಪ್ರತಿಷ್ಠಿತ ಇನ್‌ಫಿನಿಟಿ ಕೋಚಿಂಗ್ ಕ್ಲಾಸಸ್‌ನ ವಿದ್ಯಾರ್ಥಿನಿ ಯಶ್ವಿತಾ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 600ಕ್ಕೆ 586 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡು ಸಾಧನೆ ಮಾಡಿದ್ದಾಳೆ.


ಈಕೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಲಿತು ತೇರ್ಗಡೆ ಹೊಂದಿದ್ದಳು. ನಂತರದ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಯಶ್ವಿತಾ ಕಂಕನಾಡಿಯ ವಾಸುಕಿ ನಗರದ ಕಲಾಕಾರ್ ನಿವಾಸಿ ಶಿವಾನಂದ ಮತ್ತು ರಮಣಿ ದಂಪತಿಯ ಪುತ್ರಿ.

DAKSHINA KANNADA

ಕಾಡು ಹಂದಿ ಮಾಂಸದ ಆಮಿಷವೊಡ್ಡಿ ವಂಚನೆ; ಖದೀಮನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

Published

on

ಕಡಬ : ಕಾಡು ಹಂದಿಯ ಮಾಂಸ ನೀಡುವುದಾಗಿ ಹಲವಾರು ಸಮಯಗಳಿಂದ ಹಲವರಿಂದ ಹಣ ಪಡೆದು  ವಂಚಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು  ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ  ಒಪ್ಪಿಸಿದ ಘಟನೆ ಮಂಗಳವಾರ(ಎ.15) ಕುಲ್ಕುಂದದಲ್ಲಿ  ನಡೆದಿದೆ.

ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ  ಕಾಡು ಹಂದಿ ಉರುಳಿಗೆ ಬಿದ್ದಿದ್ದು ಮಾಂಸ ಬೇಕಾದರೆ ಹೇಳಿ ಎಂದು ಈತ  ಹೇಳಿದ್ದ. ಮಹಿಳೆಯು ನಿರಾಕರಿಸಿ ಅಲ್ಲಿನ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಈ ಸಂದರ್ಭ ಈ ಹಿಂದೆ ಹಣ ನೀಡಿ ಈತನಿಂದಲೇ ಮೋಸ ಹೋದ ವ್ಯಕ್ತಿಯೊಬ್ಬರು ಎದುರುಕೊಂಡಿದ್ದು ಈತನನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಡಬ ತಾಲೂಕಿನ ಮರ್ದಾಳದ ಮಹೇಶ ಬಂಧಿತ ಆರೋಪಿ. ಈತ ಹಲವರಿಗೆ ವಿವಿಧ ರೀತಿಯಲ್ಲಿ  ವಂಚಿಸಿರುವುದು ತಿಳಿದು ಬಂದಿದೆ. ದೂರು ನೀಡಲು ಯಾರು ಮುಂದೆ ಬಾರದ ಕಾರಣ ಆತನನ್ನು ವಿಚಾರಿಸಿ ಪೊಲೀಸರು ಬಿಟ್ಟಿರುವುದಾಗಿ ತಿಳಿದುಬಂದಿದೆ.

ಈತ ಫೆಬ್ರವರಿ ತಿಂಗಳಲ್ಲಿ ಕೆಡ್ಡಸದ ಸಂದರ್ಭ  ಎಡಮಂಗಲದಲ್ಲಿ  ವ್ಯಕ್ತಿಯೊಬ್ಬರು  ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಬೈಕ್ ನಲ್ಲಿ ಬಂದು , ಹಂದಿ ಮಾಂಸ ಇದೆ. ಬೇಕಾದರೆ ಕೊಡುತ್ತೇನೆ ಎಂದು ಹೇಳಿ ಹಲವರಿಂದ  ಹಣ ಪಡೆದಿದ್ದ. ತನ್ನ ಜೊತೆ  ಹಿರಿಯ ವ್ಯಕ್ತಿಯನ್ನು ಕರೆದೊಯ್ದಿದ್ದ. ಅವರನ್ನು ಪಾಲೋಲಿ ಸೇತುವೆ ಬಳಿ  ಬೈಕ್ ನಿಂದ ಇಳಿಸಿ ಕ್ಷಣ ಮಾತ್ರದಲ್ಲಿ ಹಂದಿ ಮಾಂಸ ತರುವುದಾಗಿ ಹೇಳಿ  ಎಸ್ಕೇಪ್ ಆಗಿದ್ದ.

ಇದನ್ನೂ ಓದಿ : ಗರ್ಭಿಣಿ ಎಂದು ಸುಳ್ಳು ಹೇಳಿದ್ಲು…ಮಗುವಿಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿ ಜೈಲು ಸೇರಿದ್ಲು!

ವಂಚಿಸಿದ ವ್ಯಕ್ತಿ ತನ್ನ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿತ್ತು. ಆ ಸಂದರ್ಭದಲ್ಲಿ ಯಾರೂ ಠಾಣೆಗೆ ದೂರು ನೀಡದ ಕಾರಣ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿದುಬಂದಿದೆ.

 

 

Continue Reading

DAKSHINA KANNADA

ಮಂಗಳೂರಿನಲ್ಲಿ ನಡೆಯಿತಾ ಸಾಮೂಹಿಕ ಅತ್ಯಾಚಾರ? ಅರೆ ಪ್ರಜ್ಞಾವಸ್ಥೆಯಲ್ಲಿ ಬಿಹಾರದ ಯುವತಿ ಪತ್ತೆ!

Published

on

ಮಂಗಳೂರು : ಬಿಹಾರ ಮೂಲದ ಯುವತಿಯೊಬ್ಬಳು ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಇದೊಂದು ಸಾಮೂಹಿಕ ಅತ್ಯಾ*ಚಾರ ಅಗಿರಬಹುದೆಂದು ಸಾರ್ವಜನಿಕರು ಅನುಮಾನಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಯುವತಿಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ(ಮಾ.16) ತಡರಾತ್ರಿ ಸ್ಥಳೀಯ ಮನೆಬಾಗಿಲಿಗೆ ಬಂದು ಯುವತಿ ನೀರು ಕೇಳಿ ಅಲ್ಲೇ ಪ್ರಜ್ಷೆ ತಪ್ಪಿ ಬಿದ್ದಿದ್ದಾಳೆ. ತಕ್ಷಣ ಮನೆಯವರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿ ನಶೆಯಲ್ಲಿದ್ದು, ಆಕೆಯ  ಮೈ ಮೇಲೆ ಗಾ*ಯದ ಗುರುತುಗಳು ಕಾಣಿಸಿದ್ದು ಇದೊಂದು ಅತ್ಯಾ*ಚಾರ ಆಗಿರುವ ಅನುಮಾನ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶವೊಂದರಲ್ಲಿ ಇರುವ ಮನೆಗೆ ನಿತ್ಯ ಗಾಂ*ಜಾ ವ್ಯಸನಿಗಳು ಬರುತ್ತಿದ್ದು ನಿನ್ನೆಯೂ ನಾಲ್ವರು ಅಲ್ಲಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಯುವತಿ ಮನೆಯೊಂದರ ಬಾಗಿಲು ತಟ್ಟುತ್ತಿದ್ದಂತೆ ಯುವಕರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಸಚಿವೆ ಕಾರಿನ ಅಪಘಾ*ತದ ರಹಸ್ಯ ಬಯಲು ಮಾಡಿದ ಲಾರಿ ಬಣ್ಣ; ಆರೋಪಿ ಅಂದರ್

ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಚಿಕಿತ್ಸೆಯಲ್ಲಿ ಪಡೆಯುತ್ತಿರುವ ಯುವತಿಯನ್ನು ವಿಚಾರಣೆ ನಡೆಸಬೇಕಾಗಿದೆ. ಆದರೆ, ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿರುವಾಕೆ ಈವರೆಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಭೇಟಿ ನೀಡಿದ್ದಾರೆ ಎಂಬ ಮಾಹಿತಇ ಲಭ್ಯವಾಗಿದೆ.

Continue Reading

BANTWAL

ಬಂಟ್ವಾಳ: ನಿಯಂತ್ರಣ ‌ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಸ್ಕೂಟರ್; ಸವಾರ ದುರ್ಮರಣ

Published

on

ಬಂಟ್ವಾಳ: ಸ್ಕೂಟರ್ ಒಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಎಪ್ರಿಲ್‌ 15ರ ರಂದು ರಾತ್ರಿ ಕಳ್ಳಿಗೆ ಗ್ರಾಮದ ವಿರಾಜೆ ಎಂಬಲ್ಲಿ ಸಂಭವಿಸಿದೆ.

ಕಳ್ಳಿಗೆ ಗ್ರಾಮದ ಕಾರೆಜಾಲ್‌ ನಿವಾಸಿ ಮೆಲ್‌ ರಾಯ್‌ ಡೇಸಾ (25) ಮೃತಪಟ್ಟ ಯುವಕ. ಖಾಸಗಿ ಬ್ಯಾಂಕೊಂದರ ಉದ್ಯೋಗಿಯಾಗಿದ್ದ ಮೆಲ್‌ ರಾಯ್‌ ಡೇಸಾ ಅವರು ಕೆಲಸ ಮುಗಿಸಿ ಮನೆಗೆ ತೆರಳಲು ಬ್ರಹ್ಮರಕೋಟ್ಲು ಕಡೆಯಿಂದ ಕಳ್ಳಿಗೆ ಮಾರ್ಗದಲ್ಲಿ ಸ್ಕೂಟರ್‌ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಸ್ಕೂಟರ್‌ ಸಮೇತ ಹೊಂಡಕ್ಕೆ ಬಿದ್ದ ಕಾರಣ ತೀವ್ರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಗಮನಿಸಿ ಕೂಡಲೇ ತುಂಬೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅಷ್ಟರಲ್ಲಿ ಅವರು ಮೃತ ಪಟ್ಟಿದ್ದರು. ತೊಡಂಬಿಲ ಚರ್ಚ್ ನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಮೆಲ್‌ ರಾಯ್‌ ಅವರು ಐಸಿವೈಎಂ ತೊಡಂಬಿಲ ಘಟಕದ ಅಧ್ಯಕ್ಷರಾಗಿದ್ದರು. ಘಟನೆಗೆ ಸಂಬಂಧಿಸಿ ಬಂಟ್ವಾಳ ಟ್ರಾಫಿಕ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page