Connect with us

FILM

ಮೃತ ಅಭಿಮಾನಿಗಳ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ತಲುಪಿಸಿದ ನಟ ಯಶ್

Published

on

FILM: ನಟ ಯಶ್​ ಅವರ ಜನ್ಮದಿನದ ಹಿನ್ನಲೆಯಲ್ಲಿ ಬ್ಯಾನರ್​ ಕಟ್ಟುವಾಗ ವಿದ್ಯುತ್​ ತಂತಿ ಸ್ಪರ್ಶಿಸಿ ಅಭಿಮಾನಿಗಳು ನಿಧನರಾದ ನೋವು ಇನ್ನೂ ಹಸಿಯಾಗಿದೆ. ಮೃತ ಅಭಿಮಾನಿಗಳಾದ ಮುರಳಿ, ನವೀನ್​ ಮತ್ತು ಹನುಮಂತ ಅವರ ಕುಟುಂಬದವರಿಗೆ ಪರಿಹಾರ ಹಣ ತಲುಪಿಸಲಾಗಿದೆ. ಗದಗ ಜಿಲ್ಲೆಯ ಸೊರಣಗಿ ಗ್ರಾಮದ ಅಭಿಮಾನಿಗಳು ಈ ಬಾರಿ ತಮ್ಮ ನೆಚ್ಚಿನ ನಟ ಯಶ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಬ್ಯಾನರ್​ ಕಟ್ಟುವಾಗ ವಿದ್ಯುತ್​ ತಂತಿ ತಗುಲಿದ್ದರಿಂದ ಮುರಳಿ, ನವೀನ್​ ಮತ್ತು ಹನುಮಂತ ಮೃತಪಟ್ಟಿದ್ದರು.

ಅಭಿಮಾನಿಗಳ ಸಾವಿನ ಸುದ್ದಿ ತಿಳಿದು ಯಶ್​ ಅವರು ಕಂಬನಿ ಮಿಡಿದರು. ಮರುದಿನ ಅವರು ಸೊರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಮೃತರ ಮನೆಗಳಿಗೆ ತೆರಳಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಈ ವೇಳೆ ಅವರಿಗೆ ಪರಿಹಾರ ಹಣದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ತಮ್ಮ ಕೈಲಾದ ಸಹಾಯ ಮಾಡುವುದಾಗಿ ಯಶ್​ ತಿಳಿಸಿದ್ದರು. ಈಗ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೀಡಿದ್ದಾರೆ.
ಸ್ಯಾಂಡಲ್ವುಡ್ ಸ್ಟಾರ್ ನಟ ಯಶ್​ ಅವರ ಜನ್ಮದಿನದ ಹಿನ್ನಲೆಯಲ್ಲಿ ಬ್ಯಾನರ್​ ಕಟ್ಟುವಾಗ ವಿದ್ಯುತ್​ ತಂತಿ ಸ್ಪರ್ಶಿಸಿ ಮೃತಪಟ್ಟ ಅಭಿಮಾನಿಗಳು ಮುರಳಿ, ನವೀನ್​ ಮತ್ತು ಹನುಮಂತ ಅವರ ಕುಟುಂಬದವರಿಗೆ ನಟ ಯಶ್ ಪರಿಹಾರ ನೀಡಿದ್ದು, ಈ ಚೆಕ್ ಅನ್ನು​ ಯಶ್ ಆಪ್ತರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿ ಪ್ರತಿ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಚೆಕ್​ ನೀಡಿದ್ದಾರೆ. ಈ ವೇಳೆ ಕುಟುಂಬಸ್ಥರು ತಮ್ಮ ಮಕ್ಕಳನ್ನು ನೆನೆದು ದುಃಖಿತರಾದರು.

FILM

ಬಾಲನಟನಾಗಿ ಖ್ಯಾತಿ ಗಳಿಸಿದ್ದ ಹರಿಮುರಳಿ ಶ*ವವಾಗಿ ಪತ್ತೆ

Published

on

ಮಂಗಳೂರು/ಕೇರಳ : ಮಲಯಾಳಂ ಚಿತ್ರರಂಗದಲ್ಲಿ ಬಾಲನಟನಾಗಿ ಖ್ಯಾತಿ ಗಳಿಸಿದ್ದ ಹರಿಮುರಳಿ ತನ್ನ ಮನೆಯಲ್ಲಿ ಶ*ವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 27 ವರ್ಷ ವಯಸ್ಸಾಗಿತ್ತು. ಕೇರಳದ ಪಯ್ಯನ್ನೂರಿನ ನಿವಾಸದಲ್ಲಿ ಹರಿಮುರಳಿ ಶ*ವ ಪತ್ತೆಯಾಗಿದೆ.

ಸಾ*ವಿಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲನಟನಾಗಿ ಖ್ಯಾತಿ : 

ಹರಿಮುರಳಿ, 2004 ರಲ್ಲಿ  ಲಾಲ್ ಜೋಸ್ ನಿರ್ದೇಶನದ ಹಾಗೂ ದಿಲೀಪ್ ಅಭಿನಯದ ಮಲಯಾಳಂ ಚಿತ್ರ ರಸಿಕನ್’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ  ಅಣ್ಣನ್ ತಂಬಿ, ಮದಂಪಿ, ಡಾನ್ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲ ನಟನಾಗಿ ಅಭಿನಯಿಸಿ ಖ್ಯಾತರಾಗಿದ್ದರು.

ಇದನ್ನೂ ಓದಿ : ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ ‘ಬಿಂದಾಸ್‌’ ನಟಿ

ಬಳಿಕ  ಶಿಕ್ಷಣವನ್ನು ಮುಂದುವರಿಸುವ ಸಲುವಾಗಿ ಕೆಲವು ವರ್ಷ ನಟನೆಯಿಂದ ದೂರ ಉಳಿದಿದ್ದರು. ನಂತರ ಪೃಥ್ವಿರಾಜ್, ಸುಕುಮಾರನ್ ಅಭಿನಯದ ಅಮರ್ ಅಕ್ಬರ್ ಆ್ಯಂಟನಿ ಚಿತ್ರದಲ್ಲಿ ಕಿರಿಯ ಸಹೋದರನ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದರು. ಅಲ್ಲದೇ, ಹರಿಮುರಳಿ ವಿಎಫ್ ಎಕ್ಸ್ ಆರ್ಟಿಸ್ಟ್ ಆಗಿಯೂ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು.

Continue Reading

FILM

ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ ‘ಬಿಂದಾಸ್‌’ ನಟಿ

Published

on

ಮುಂಬೈ: ನಟ ಪುನೀತ್‌ ರಾಜ್‌ ಕುಮಾರ್‌ ನಟನೆಯ ‘ಬಿಂದಾಸ್‌’ ಸಿನಿಮಾದಲ್ಲಿ ಅಭಿನಯಿಸಿದ್ದ ಹನ್ಸಿಕಾ ಮೊಟ್ವಾನಿ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಹನ್ಸಿಕಾ ಮತ್ತು ಉದ್ಯಮಿ ಸೊಹೈಲ್‌ ಖತುರಿಯಾ ಅವರಿಗೆ ವಿಚ್ಛೇದನ ಮಂಜೂರು ಮಾಡಿದೆ.

ಹೌದು.. ನಟಿ ಮೋಟ್ವಾನಿ ಮತ್ತು ಅವರ ಪತಿ ಉದ್ಯಮಿ ಸೊಹೈಲ್‌ ಖತುರಿಯಾ ನಡುವೆ ಕಳೆದ ಒಂದು ವರ್ಷದಿಂದ ವಿಚ್ಛೇದನದ ವದಂತಿ ಹಬ್ಬಿತ್ತು. ಇದೀಗ ಆ ವದಂತಿಗೆ ಅಧಿಕೃತವಾಗಿ ತೆರೆ ಬಿದ್ದಿದೆ.

ಡಿವೋರ್ಸ್‌ಗೆ ಕಾರಣವೇನು?
ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಯ ಪ್ರಕಾರ, ಇಬ್ಬರ ಲೈಫ್‌ಸ್ಟೈಲ್‌, ಆಲೋಚನೆ ಮತ್ತು ಸ್ವಭಾವಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದವು. ಸಣ್ಣ ಪುಟ್ಟ ವಿಷಯಗಳಿಗೂ ಜಗಳಗಳು ನಡೆಯುತ್ತಿದ್ದವು. ಹೀಗಾಗಿ, ಜೊತೆಗೆ ಇರುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಬಂದ ನಂತರ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಹನ್ಸಿಕಾ ಮೋಟ್ವಾನಿ-ಸೋಹೆಲ್‌ ಕತುರಿಯಾ.

ಜೀವನಾಂಶವೇಷ್ಟು?

ದಂಪತಿ 2024ರ ಜುಲೈ 2ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ಈಗ ಕಾನೂನುಬದ್ದವಾಗಿ ಬೇರ್ಪಟ್ಟಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ. ಆದರೆ ಈ ಡಿವೋರ್ಸ್‌ನಲ್ಲಿ ಗಮನಾರ್ಹ ವಿಷಯವೆಂದರೆ, ಹನ್ಸಿಕಾ ಮೋಟ್ವಾನಿ ಸೋಹೆಲ್‌ ಅವರಿಂದ ಯಾವುದೇ ರೀತಿಯ ಜೀವನಾಂಶ ಅಥವಾ ಆರ್ಥಿಕ ನೆರವನ್ನ ಕೇಳಿಲ್ಲ. ಗೌರವಯುತವಾಗಿ ಸಂಬಂಧವನ್ನ ಕೊನೆಗೊಳಿಸಲು ಅವರು ಬಯಸಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡದ ಬಿಂದಾಸ್‌ ಹಾಗೂ ಆಪ್ ಕಾ ಸುರೂರ್, ಒರು ಕಲ್ ಒರು ಕನ್ನಡಿ, ಮತ್ತು ಮೈ ನೇಮ್ ಈಸ್ ಶ್ರುತಿ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿರುವ ನಟಿ 2022ರ ಡಿಸೆಂಬರ್‌ನಲ್ಲಿ ಜೈಪುರದ ಮುಂಡೋಟಾ ಫೋರ್ಟ್ ಮತ್ತು ಅರಮನೆಯಲ್ಲಿ ಸೋಹೆಲ್‌ ಖತುರಿಯಾ ಅವರನ್ನು ವಿವಾಹವಾಗಿದ್ದರು.

Continue Reading

FILM

ಮೈಮರೆತ ತಾಯಿಯ ಎಡವಟ್ಟು; ಹಸಿದ ಮಗುವಿನ ಕಿವಿಗೆ ಹಾಲಿನ ಬಾಟಲಿ ಇಟ್ಟ ಮಹಿಳೆ!

Published

on

ಮಗುವಿಗೆ ಹಾಲು ಕುಡಿಸುವಾಗ ಮಹಿಳೆಯೊಬ್ಬಳು ಮಾಡಿದ ಎಡವಟ್ಟಿನ ವೀಡಿಯೋ ಇದೀಗ ವೈರಲ್‌ ಆಗಿದೆ. ಮಹಿಳೆ ಬೇರೆ ಯಾವುದೋ ಆಲೋಚನೆಯಲ್ಲಿ ಮಗುವಿನ ಬಾಯಿಗೆ ಹಾಲಿನ ಬಾಟಲಿ ಇಡುವ ಬದಲು ಮಗುವಿನ ಕಿವಿಗೆ ಇಟ್ಟಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಮಹಿಳೆಯ ವಿರುದ್ಧ ಗರಂ ಆಗಿದ್ದಾರೆ.


ಕಾರ್ಯಕ್ರಮವೊಂದು ನಡೆಯುತ್ತಿರುವಾಗ ಈ ಘಟನೆ ಸಂಭವಿಸಿದೆ. ಮಹಿಳೆಯು ತನ್ನ ಮಡಿಲಲ್ಲಿ ಮಗುವನ್ನು ಹಿಡಿದುಕೊಂಡು, ತನ್ನ ಮುಂಭಾಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಆಸಕ್ತಿಯಿಂದ ನೋಡುತ್ತಿರುತ್ತಾರೆ. ಅವರ ಸಂಪೂರ್ಣ ಗಮನ ಕಾರ್ಯಕ್ರಮದ ಮೇಲಿದ್ದರಿಂದ, ಬಾಟಲಿಯನ್ನು ಮಗುವಿನ ಬಾಯಿಗೆ ಇಡುತ್ತಿದ್ದೇನೆ ಎಂದು ಭಾವಿಸಿ ತಿಳಿಯದೇ ಮಗುವಿನ ಕಿವಿಗೆ ಇಟ್ಟಿದ್ದಾರೆ.

ತಾಯಿ ಏನು ಮಾಡುತ್ತಿದ್ದಾರೆ ಎಂಬುದು ತಿಳಿಯದೆ ಹಸಿದಿದ್ದ ಆ ಪುಟ್ಟ ಮಗು ಅಳಲು ಪ್ರಾರಂಭಿಸಿದೆ ಮತ್ತು ಹಾಲಿನ ಬಾಟಲಿಗಾಗಿ ಸುತ್ತಲೂ ಹುಡುಕಾಡಿದೆ.
ಈ ವೀಡಿಯೊವನ್ನು dr_abhinandan_tripathi ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ಅನೇಕ ನೆಟ್ಟಿಗರು ಮಹಿಳೆಯ ಬೇಜವಾಬ್ದಾರಿತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಇದನ್ನು ಹಾಸ್ಯವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ: ದ್ವಿಚಕ್ರ ವಾಹನಕ್ಕಾಗಿ ಪ್ರೇಯಸಿ ಕುಟುಂಬಕ್ಕೆ ಬೆಂಕಿ ಹಚ್ಚಿದ ಕಿರಾತಕ; ಚಿಕಿತ್ಸೆ ಫಲಿಸದೆ ತಾಯಿ ಸಾವು!

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮಗುವಿನ ಮೇಲೆ ತಾಯಿಗೆ ಜ್ಞಾನನೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತಾಯಿ ಅಂದ್ರೆ ಹೀಗೆ ಇರ್ಬೇಕು ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು, ಮಗು ಮೇಲೆ ಗಮನ ಕೊಡದೇ ಆ ಕಡೆ ಏನು ನೋಡ್ತಾ ಇದ್ದಿಯಾ ಸುಂದ್ರಿ ಎಂದು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page