ಮಂಗಳೂರು/ಬೆಂಗಳೂರು: ರಿಯಾಲಿಟಿ ಶೋ ಮೂಲಕವೇ ಕನ್ನಡಿಗರ ಮನೆಮಾತಾಗಿರುವ ಗಗನ ಭಾರಿ ಸದ್ಯ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ’ ಮೆಂಟರ್ ಆಗಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಒಂದು.. ನಾನು ಅಷ್ಟೊಂದು ಫೇಮಸ್ ಇಲ್ಲದ ಸಂದರ್ಭದಲ್ಲೇ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡದ ಸ್ಟಾರ್ ನಟರೊಬ್ಬರು ಫಾಲೋ ಮಾಡ್ತಿದ್ರು ಎಂದು ಹೇಳಿದ್ದಾರೆ. ಇದು ಅಭಿಮಾನಿಗಳ ಕೂತುಹಲಕ್ಕೆ ಕಾರಣವಾಗಿದೆ.

ಕಿರುತೆರೆಯಲ್ಲಿ ಫೇಮಸ್ಸು ಆಗಿರುವವರ ಪೈಕಿ ಗಗನಾ ಕೂಡಾ ಒಬ್ಬರು. “ಮಹಾನಟಿ” ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದಲ್ಲದೇ, ಮನೆಮಗಳಂತೆ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ ನಟಿ ಗಗನಾ ಭಾರಿ. ತಮ್ಮ ಇನ್‌ಸ್ಟೆಂಟ್ ಡೈಲಾಗ್‌ಗಳ ಮೂಲಕವೇ ಪ್ರೇಕ್ಷಕರ ಮನಕದ್ದ ಚೆಲುವೆ.
ಡೈಲಾಗ್ ಡೆಲಿವರಿಗೆ ಫೇಮಸ್ ಆಗಿದ್ದ ಗಗನಾ ಭಾರಿ, ಮಹಾನಟಿ ರಿಯಾಲಿಟಿ ಶೋನ ಉದ್ದಕ್ಕೂ ಬಹಳಷ್ಟು ಪಾಪ್ಯುಲಾರಿಟಿ ಗಳಿಸಿದ್ದರು. “ಮಹಾನಟಿ” ರಿಯಾಲಿಟಿ ಶೋ ಅಷ್ಟೇ ಅಲ್ಲದೆ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ರಿಯಾಲಿಟಿ ಶೋನಲ್ಲಿಯೂ ಈಕೆ ಕಾಣಿಸಿಕೊಂಡಿದ್ದಾರೆ. ಇದೀಗ “ಭರ್ಜರಿ ಬ್ಯಾಚುಲರ್” ಸೀಸನ್ 2 ನಲ್ಲಿಯೂ ಭಾಗವಹಿಸಿದ್ದಾರೆ. ತಮ್ಮ ಐಟಿ ಕೆಲಸ ಬಿಟ್ಟು ಇದೀಗ ರಿಯಾಲಿಟಿ ಶೋ ಗಳಲ್ಲಿಯೇ ಸಕ್ರಿಯರಾಗಿದ್ದಾರೆ.
ಆದರೆ ಗಗನಾ ಭಾರಿ “ಮಹಾನಟಿ” ರಿಯಾಲಿಟಿ ಶೋಗೆ ಬರುವ ಮೊದಲೇ ಇವರನ್ನು ಕನ್ನಡದ ಸ್ಟಾರ್ ನಟರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದರು.. ಎಂಬ ವಿಚಾರವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಹಾಡು ನಕಲು ಮಾಡಿದ ಆರೋಪ; ಎಆರ್ ರೆಹಮಾನ್‌ಗೆ 2 ಕೋಟಿ ರೂ. ದಂಡ
ಈ ವಿಚಾರವನ್ನು ಗಗನಾ ಭಾರಿ ಅವರೇ ಹಂಚಿಕೊಂಡಿದ್ದು, “”ನಾನು ರಿಯಾಲಿಟಿ ಶೋಗೆ ಬರುವುದಕ್ಕೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದೆ. ಹೀಗಿರುವಾಗ ನನ್ನ ಒಂದು ರೀಲ್ಸ್ ರವಿ ಸರ್‌ಗೆ ಇಷ್ಟವಾಗಿ, ಅವರು ಅದನ್ನು ಲೈಕ್ ಮಾಡಿದರು. ಜೊತೆಗೆ ನನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಕೂಡ ಮಾಡಿದ್ರು. ‘ಮಹಾನಟಿ’ ಶೋಗಿಂತಲೂ ಮುಂಚೆ ಯಾರಾದರೂ ಸೆಲೆಬ್ರಿಟಿ ನನ್ನನ್ನು ಫಾಲೋ ಮಾಡಿದ್ದಾರೆ ಎಂದರೆ, ಅದು ರವಿಚಂದ್ರನ್ ಸರ್. ನಾನು ಆಮೇಲೆ ರವಿ ಸರ್‌ಗೆ ಮೇಸೆಜ್ ಮಾಡಿ, ‘ನೀವು ನನ್ನನ್ನು ಫಾಲೋ ಮಾಡಿದ್ದು ನನಗೆ ಖುಷಿ ಆಯ್ತು, ನನಗೆ ಬೂಸ್ಟ್ ಅಪ್ ಸಿಕ್ಕಂತೆ ಆಯ್ತು ಅಂತ ಹೇಳಿದ್ದೆ. ಬಹಳಷ್ಟು ಜನ ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್ ಅವರದ್ದು ಲಕ್ಕಿ ಹ್ಯಾಂಡ್ ಎಂದು ಹೇಳುವುದನ್ನು ಕೇಳಿದ್ದೆ, ಅದು ನನ್ನ ವಿಷಯದಲ್ಲಿ ಸತ್ಯವೇ ಆಯಿತು. ಅವರು ನನ್ನನ್ನು ಫಾಲೋ ಮಾಡಲು ಆರಂಭಿಸಿ ಕೆಲವೇ ದಿನಗಳಿಗೆ ಮಹಾ ನಟಿ ಎಂಬ ದೊಡ್ಡ ರಿಯಾಲಿಟಿ ಶೋ ಗೆ ನಾನು ಆಯ್ಕೆಯಾಗಿ ಇಂದು ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆದಿದ್ದೇನೆ” ಎಂದಿದ್ದಾರೆ ನಟಿ ಗಗನಾ.