ಯಕ್ಷಗಾನ ಛಂದೋ ಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ ಇನ್ನಿಲ್ಲ..
ಮಂಗಳೂರು : ಯಕ್ಷಗಾನ ಛಂದೋ ಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನರಾದರು,
ಕಳೆದ ಒಂದು ವಾರದಿಂದ ಮಂಗಳೂರು ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು,
ಯಕ್ಷಗಾನ ಸಾಹಿತ್ಯದಲ್ಲಿ ಛಂದಸ್ಸಿನ ಬಗೆಗೆ ಅಪಾರವಾದ ಅಧ್ಯಯನ ನಡೆಸಿದ ಇವರು ಹಂಪಿಯ ಕನ್ನಡ ವಿವಿಯಿಂದ ಡಿ. ಲಿಟ್. ಪದವಿ ಪಡೆದ ಡಾ| ಎನ್. ನಾರಾಯಣ ಶೆಟ್ಟಿ
ಅವರು ಕಾರ್ಕಳ ತಾಲೂಕು ನಂದಿಕೂರಿನಲ್ಲಿ ಎಳತ್ತೂರು ಗುತ್ತು ದಿ| ಅಚ್ಚಣ್ಣ ಶೆಟ್ಟಿ ಮತ್ತು ನಂದಿಕೂರು ಚೀಂಕ್ರಿಗುತ್ತು ದಿ| ಕಮಲಾಕ್ಷಿ ಶೆಡ್ತಿ ದಂಪತಿಯ ಪುತ್ರನಾಗಿ 1934 ಫೆ. 1ರಂದು ಜನಿಸಿದ್ದು, ಐದನೇ ತರಗತಿ ಯಲ್ಲಿ ದ್ದಾಗಲೇ ಜೈಮಿನಿ ಭಾರತವನ್ನು ಕಂಠಪಾಠ ಮಾಡಿದ್ದರು.
ಆರನೇ ತರಗತಿಯಿಂದ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿ ದರ್ಪಣ, ಹೇಮಚಂದ್ರಮ ಛಂದೋ ನು ಶಾಸನಗಳನ್ನು ಅಧ್ಯಯನ ಮಾಡಿದರು.
ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ದೇರಾಜೆ ಸ್ಮತಿ ಗೌರವ, ಕುಕ್ಕಿಲ ಪ್ರಶಸ್ತಿ, ಸನಾತನ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, , ಅಗರಿ ಪ್ರಶಸ್ತಿ, ಶ್ರೇಷ್ಠ ಯಕ್ಷಗಾನ ಸಾಹಿತ್ಯ ಸಾಧನಾ ಪ್ರಶಸ್ತಿ, ಯಕ್ಷ ಧ್ರುವ ಕೊಡ ಮಾಡುವ ಪಟ್ಲ ಪ್ರಶಸ್ತಿ 2018, ವಿಂಶತಿ ತಮ ವಿದ್ವತ್ ಪ್ರಶಸ್ತಿ, ಸ್ಕಂದ ಪುರಸ್ಕಾರ, ತಲ್ಲೂರು ಕನಕಾ-ಅಣ್ಣಯ್ಯ ಪ್ರಶಸ್ತಿ, ಮುದ್ದಣ ಪುರಸ್ಕಾರ, ಕಲ್ಕೂರ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಅಭಿನವ ನಾಗವರ್ಮ, ಯಕ್ಷ ಪಾಣಿನಿ, ಛಂದೋಂಬುಧಿ ಚಾರು ಚಂದ್ರ, ಛನªಶ್ಚತುರಾನನ, ಯಕ್ಷ ಛಂಧೋ ಭಾರ್ಗವ, ಛಂದೋ ವಾರಿಧಿ ಚಂದ್ರ ಬಿರುದುಗಳನ್ನು ಪಡೆದಿದ್ದರು,
ನೇರ ನಡೆ ನುಡಿಯ ನಿಷ್ಟುರವಾದಿ ನಾರಾಯಣ ಮಾಸ್ಟ್ರು:
ನೇರಾ ನಡೆನುಡಿಯ ನಿಷ್ಟುರವಾದಿಯಾಗಿದ್ದು ನಾರಾಯಣ ಮಾಸ್ಟ್ರು ಎಂದೇ ಖ್ಯಾತ ರಾಗಿದ್ದರು ಡಾ. ಶಿಮಂತೂರು ನಾರಾಯಣ ಶೆಟ್ಟಿ. ಮಾಸ್ಟ್ರ ಛಂದಸ್ವತೀ ಪ್ರಸಂಗ ಸಂಪುಟದಲ್ಲಿ 5 ಪ್ರಸಂಗಗಳನ್ನಷ್ಟೇ ಸಂಪಾದಿಸಿ ಪ್ರಕಟಿಸಲಾಯಿತು ಎನ್ನುವುದು ಬೇಸರದ ಸಂಗತಿಯಾಗಿದೆ. .ಪಟ್ಲ ಪ್ರಕಾಶನ ಅವರ ಎಲ್ಲಾ ಪ್ರಸಂಗಳ ಪ್ರಕಟಣೆಗೆ ಸಿದ್ದವಾಗಿತ್ತು.
ಆದರೇ ಅದಾಗಲೇ ಅವರು ಇಹ ಲೋಕ ತ್ಯಜಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಎಂದೋ ಸಲ್ಲ ಬೇಕಿತ್ತು ಆದರೆ ಅದು ಸಿಕ್ಲಕಿಲ್ಲ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.ಅವರ ಸಾಹಿತ್ಯ ಕಬ್ಬಿಣದ ಕಡಲೆಯಾಗಿತ್ತು. ವಿದ್ವಾಂಸರಿಗಿಂತಲೂ ಸಾಮಾನ್ಯರನ್ನು ಹಚ್ಚಿ ಮೆಚ್ಚಿ ಕೊಳ್ಳುತ್ತಿದ್ದವರು.ಗೋವಾ ದುರಂತ,ಕೃಷಿ ವಿಜಯ,ಪಂಜುರ್ಲಿ ಸಂಧಾನ,ಕಂಡದ ಪುಣಿತ ಕಾಳಗ…ಇವು ಶಿಮಂತೂರು ಬರೆದ ಪ್ರಸಂಗಗಳು ಆದರೆ ಬಹು ಜನರಿಗೆ ತಿಳಿದಿರಕ್ಕಿಲ್ಲ. ಕೊಲೆಕ್ಕಾಡಿ,ಪಟ್ಲ,ಪಚ್ಚನಾಡಿ ಹೀಗೆ ಹಲವು ಶಿಷ್ಯರಿಗೆ ಗುರುಗಲಾಗಿದ್ದರು ನಾರಾಯಣ ಮಾಸ್ಟ್ರು ..!
…

ಕನ್ನಡದ ಅನಘ ಛಂದೋ ರತ್ನಗಳು, ಯಕ್ಷಗಾನ ಛಂದೋಂಬುಧಿ , ವಿಚಿತ್ರಾ ತ್ರಿಪದಿ, ಮುಂತಾದ ಅಮೂಲ್ಯ ಕೃತಿಗಳನ್ನೂ, ಕಟೀಲು ಕ್ಷೇತ್ರ ಮಹಾತ್ಮೆ, ದೀಕ್ಷಾ ಕಂಕಣ, ರಾಜಮುದ್ರಿಕಾ, ಸೊರ್ಕುದ ಸಿರಿಗಿಂಡಿ ಮುಂತಾದ ಯಕ್ಷಗಾನ ಪ್ರಸಂಗಗಳನ್ನೂ ರಚಿಸಿದ್ದಾರೆ.
ಇವರ ಕೃತಿಗಳು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ವಾರ್ಷಿಕೋತ್ಸವದಲ್ಲಿ ಕೃತಿ ರೂಪ ದಲ್ಲಿ ಹೊರ ಬರಲಿದೆ.
ಸಂಸದ ನಳಿನ್ ಸಂತಾಪ:ಯಕ್ಷಗಾನ ಛಂದೋಬ್ರಹ್ಮ’, ‘ಅಭಿನವ ನಾಗವರ್ಮ’ ಬಿರುದಾಂಕಿತ ಹಿರಿಯ ವಿದ್ವಾಂಸ ಡಾ. ಎನ್. ನಾರಾಯಣ ಶೆಟ್ಟಿ ಶಿಮಂತೂರು ಅವರ ನಿಧನ ಯಕ್ಷಗಾನ ಛಂದಸ್ಸು ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಶಿಮಂತೂರು ನಾರಾಯಣ ಶೆಟ್ಟಿ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಿಕರಿಗೆ, ಶಿಷ್ಯರಿಗೆ ಭಗವಂತ ಕರುಣಿಸಲಿ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರಾಗಿ, ಯಕ್ಷಗಾನ ಛಂದಸ್ಸು ಕ್ಷೇತ್ರದ ಸಾಧಕನಾಗಿ, ಕವಿ, ವಿಮರ್ಶಕ, ಪ್ರಸಂಗಕರ್ತರಾಗಿ ಸಾಹಿತ್ಯ, ಯಕ್ಷಗಾನ ಕ್ಷೇತ್ರಕ್ಕೆ ನಾರಾಯಣ ಶೆಟ್ಟಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಯಕ್ಷಗಾನ ಛಂದೋಂಬುಧಿ ಎನ್ನುವ ತನ್ನ ಗ್ರಂಥದ ಮೂಲಕ ಶಿಮಂತೂರು ಅವರು ಅಜರಾಮರರಾಗಲಿದ್ದಾರೆ. ‘ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗವನ್ನು ಎಳವೆಯಲ್ಲಿಯೇ ರಚಿಸುವ ಮೂಲಕ ಶಿಮಂತೂರು ಅವರು ಪ್ರಖ್ಯಾತಿ ಪಡೆದವರು. ಅವರ ಅಗಲಿಕೆ ದುಖಃ ಉಂಟು ಮಾಡಿದೆ ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.