Connect with us

LATEST NEWS

ಯಕ್ಷಧ್ರುವ ಪಟ್ಲ ಫೌಂಢೇಶನ್ ನಿಂದ ಯಕ್ಷ ಕಲಾವಿದನಿಗೆ ನೂತನ ಮನೆ ಹಸ್ತಾಂತರ

Published

on

ಸುಳ್ಯ: ಕರಾವಳಿ ಕರ್ನಾಟಕದ ಕಲಾವಿದರ ಪಾಲಿಗೆ (ಯಕ್ಷಗಾನ / ನಾಟಕ ರಂಗಭೂಮಿ / ದೈವಾರಾದನೆ) ಸಹಕರಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಢೇಶನ್ ಹತ್ತು ಹಲವು ಯೋಜನೆಗಳಲ್ಲಿ ಪಟ್ಲ ಯಕ್ಷಾಶ್ರಯ ಯೋಜನೆಯು ಪ್ರಸ್ತುತ ಯಶಸ್ವಿಯಾಗುತ್ತಿದೆ.

ಅದೇ ರೀತಿ ಫೆ.22 ರಂದು ಪಟ್ಲ ಯಕ್ಷಾಶ್ರಯ ಯೋಜನೆಯಡಿ ಯಕ್ಷಗಾನ ರಂಗದ ಹಿರಿಯ ಕಲಾವಿದರು ಸಸಿಹಿತ್ಲು ಭಗವತೀ ಮೇಳದ ಶ್ರೀ ಗುಡ್ಡಪ್ಪ ಸುವರ್ಣರಿಗೆ ಸುಳ್ಯ ತಾಲೂಕಿನ ಪಂಜ ಗ್ರಾಮದಲ್ಲಿ ಪಟ್ಲ ಫೌಂಡೇಶನ್ ಮೂಲಕ ನೂತನ ಮನೆಯನ್ನು ನಿರ್ಮಿಸಿ ಗೃಹಪ್ರವೇಶ ಕಾರ್ಯಕ್ರಮ ನೆರವೇರಿಸಿ ಮನೆಯನ್ನು ಹಸ್ತಾಂತರಿಸಿದರು.


ಕೊಡುಗೈ ದಾನಿಗಳು, ಫೌಂಡೇಶನಿನ ಮಹಾದಾನಿಗಳೂ ಆದ ಶಶಿಧರ ಬಿ.ಶೆಟ್ಟಿ ಬರೋಡ ರವರ ಹೆಸರಿನಲ್ಲಿ ಈ ಮನೆಯನ್ನು ನಿರ್ಮಿಸಲಾಗಿರುತ್ತದೆ. ಪುತ್ತೂರು ಘಟಕದ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ, ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಸಸಿಹಿತ್ಲು ಮೇಳದ ಯಜಮಾನ ರಾಜೇಶ್ ಗುಜರನ್, ಸುಳ್ಯ ಘಟಕದ ಶ್ರೀನಾಥ್ ರೈ, ಪ್ರೀತಮ್ ರೈ, ಬೆಳ್ಳಾರೆ ರಮೇಶ್ ರೈ, ಪ್ರಶಾಂತ್ ರೈ ಪಂಜ, ಡಾ.ಪ್ರಖ್ಯಾತ ಶೆಟ್ಟಿ ಹಾಗೂ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನೂತನ ಮನೆಯ ಕೀಲಿಕೈಯನ್ನು ಶ್ರೀ ಗುಡ್ಡಪ್ಪ ಸುವರ್ಣ ದಂಪತಿಯವರನ್ನು ಗೌರವಿಸಿ ಹಸ್ತಾಂತರಿಸಲಾಯಿತು. ಶ್ರೀ ಗುಡ್ಡಪ್ಪ ಸುವರ್ಣ ದಂಪತಿಯವರು ಮಹಾದಾನಿ ಶಶಿಧರ ಬಿ ಶೆಟ್ಟಿ ಬರೋಡ ಇವರಿಗೆ ಹಾಗೂ ಅವರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿ, ಪಟ್ಲ ಫೌಂಡೇಶನಿಗೆ ಹಾಗೂ ಸತ್ಕಾರ್ಯಕ್ಕೆ ಸಹಕಾರ ನೀಡುವ ಎಲ್ಲಾ ದಾನಿಗಳಿಗೆ ಶುಭವನ್ನು ಕೋರಿದರು.

LATEST NEWS

ಭಾರೀ ಸದ್ದು ಮಾಡುತ್ತಿದೆ ‘ಜನಿವಾರ’ ಪ್ರಕರಣ ..! ಅಷ್ಟಕ್ಕೂ ಎಕ್ಸಾಂ ಹಾಲ್‌ನಲ್ಲಿ ನಡೆದಿದ್ದೇನು ..?

Published

on

ಬ್ರಾಹ್ಮಣ ಸಮುದಾಯಕ್ಕೆ ಜನಿವಾರ ಅಥವಾ ಯಜ್ಞೋಪವೀತ ಎಂಬುವುದು ಬಹಳ ಮಹತ್ವದ್ದಾಗಿದೆ. ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಗಾಯತ್ರಿ ಮಂತ್ರ ದೀಕ್ಷೆಯ ಜತೆಗೆ ಬ್ರಾಹ್ಮಣ ವಟುಗಳಿಗೆ ಧಾರಣೆ ಮಾಡಿಸುವ 3 ಎಳೆಗಳುಳ್ಳ ಪವಿತ್ರ ದಾರವೇ ‘ಜನಿವಾರ’. ಅದನ್ನು ಧರಿಸಿದ ನಂತರ ಆತ ಗಾಯತ್ರಿ ಮಂತ್ರ ಉಪಾಸನೆ ಮಾಡಲು, ವೇದಗಳನ್ನು ಕಲಿಯಲು, ಯಜ್ಞ ಮಾಡಲು ಅರ್ಹನಾಗುತ್ತಾನೆ. ಆದರೆ ಇದೀಗ ರಾಜ್ಯದಲ್ಲಿ ಇಡೀ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡುವಂತಹ ಘಟನೆಗಳು ನಡೆದಿದೆ. ಒಂದೆಡೆ ಶಿವಮೊಗ್ಗದಲ್ಲಿ ವಿದ್ಯಾರ್ಥಿಯ ಜನಿವಾರ ತುಂಡರಿಸಿ ಕಸದ ಬುಟ್ಟಿಗೆ ಎಸೆದರೆ ಇನ್ನೊಂದೆಡೆ ಬೀದರ್​​​ನಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ವಂಚಿಸಿದ್ದಾರೆ. ಸದ್ಯ, ರಾಜಕೀಯವಾಗಿಯೂ ಭಾರೀ ಸದ್ದು ಮಾಡುತ್ತಿರುವ ‘ಜನಿವಾರ’ ಪ್ರಕರಣದ ಸಮಗ್ರ ಮಾಹಿತಿ ಇಲ್ಲಿದೆ.

ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಲಾಗಿದೆ ಎಂದು ಪೋಷಕರು ಆರೋಪಿಸಿದ್ದು, ಎರಡೂ ಘಟನೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಮತ್ತು ಕೈಗೆ ಕಟ್ಟಿದ್ದ ಕಾಶಿ ದಾರವನ್ನು ತೆಗೆಸಿ ಅಧಿಕಾರಿಗಳು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಅಂತೆಯೇ ಬೀದರ್‌ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿಲ್ಲ. ಅಧಿಕಾರಿಗಳ ಈ ಕ್ರಮದ ವಿರುದ್ಧ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಹಾಸಭಾದ ಅಧ್ಯಕ್ಷ ಎಸ್​​ ರಘುನಾಥ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ಪ್ರತಿಭಟನೆಗೂ ಕರೆ ನೀಡಿದ್ದಾರೆ.

ಇದನ್ನೂ ಓದಿ : ವಿದ್ಯಾರ್ಥಿಗಳ ಜನಿವಾರ ತೆಗಿಸಿದ ಸಿಬ್ಬಂದಿ; ಬ್ರಾಹ್ಮಣ ಸಮುದಾಯದಿಂದ ಭಾರೀ ಆಕ್ರೋಶ

ರಾಜ್ಯ ಸರ್ಕಾರ ಹಾಗೂ ಸಚಿವರು ಹೇಳಿದ್ದೇನು ?

ಬೀದರ್ ಹಾಗೂ ಶಿವಮೊಗ್ಗದ ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಸರ್ಕಾರ ಈ ಕೂಡಲೇ ಬೇಷರತ್ ಕ್ಷಮೆಯಾಚಿಸಲಿ” ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ, “ಜನಿವಾರ ತೆಗೆಸಿದ ಕ್ರಮದ ವಿರುದ್ಧ ಹಿಂದೂಗಳು ಒಂದಾಗಿ ಹೋರಾಟ ಮಾಡಬೇಕು ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆದರೆ ಅದು ಅತಿರೇಕದ ವರ್ತನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಹೇಳಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸಿ ಕ್ರಮಕ್ಕೆ ಸೂಚಿಸುತ್ತೇವೆ” ಎಂದು ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಕರೆ ನೀಡಿದ್ದಾರೆ.

ರಾಜ್ಯದಾದ್ಯಂತ ಹೋರಾಟಕ್ಕೆ ಕರೆ :

ಜನಿವಾರ ತೆಗೆಸಿದ ವಿಚಾರವಾಗಿ ಕರ್ನಾಟಕ ರಾಜ್ಯದಾದ್ಯಂತ ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕರೆ ನೀಡಿದೆ. ಈ ವಿಚಾರವಾಗಿ ಬೆಂಗಳೂರಿನ ಪ್ರೆಸ್ ​ಕ್ಲಬ್​ನಲ್ಲಿ ನಾಳೆ (ಏ.19) ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ಕರೆಯಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್ ಮಾಹಿತಿ ನೀಡಿದ್ದಾರೆ.

Continue Reading

LATEST NEWS

ಎಸ್‌ಎಸ್‌ಎಲ್‌ಸಿ ಅಲ್ಲಿ ಈ ಬಾರಿ ಎಷ್ಟು ಗ್ರೇಸ್ ಮಾರ್ಕ್ಸ್‌ ಸಿಗಲಿದೆ ಗೊತ್ತಾ..?

Published

on

ಬೆಂಗಳೂರು: ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದಿದೆ. ಇದರ ಫಲಿತಾಂಶ ಬರುವುದಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಇದೇ ಹೊತ್ತಲ್ಲಿ ಶಿಕ್ಷಣ ಸಚಿವರು ಬಿಗ್‌ಶಾಕ್ ಒಂದನ್ನು ನೀಡಿದ್ದರು. ಅದೇನೆಂದರೆ ಈ ವರ್ಷ ಗ್ರೇಸ್ ಮಾರ್ಕ್ಸ್‌ ಇರುವುದಿಲ್ಲ.

ಕಳೆದ ಬಾರಿ ಶಿಕ್ಷಣ ಇಲಾಖೆಯು ತೆಗೆದುಕೊಂಡಿದ್ದ ಕೆಲವೊಂದು ಕ್ರಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಕಳೆದ ಬಾರಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ತುಸು ನಿರಾಳತೆ ಇತ್ತು. ಆದರೆ ಈ ಬಾರಿ ಅದು ಇಲ್ಲ. ಆದರೆ ಇದನ್ನು ಪರೀಕ್ಷೆಯ ಪೂರ್ವವೇ ತಿಳಿಸಲಾಗಿತ್ತು.

ಈ ಬಾರಿ ಇರಲ್ಲ ಗ್ರೇಸ್ ಮಾರ್ಕ್ಸ್

ಶಿಕ್ಷಣ ಇಲಾಖೆಯು ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಶೇ 10ರಷ್ಟು ಗ್ರೇಸ್ ಮಾರ್ಕ್ಸ್ ಕೊಟ್ಟಿತ್ತು. ಇದರಿಂದ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಸಹ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ಈ ಬಾರಿ ಕಳೆದ ಬಾರಿಯಂತೆ ಗ್ರೇಸ್ ಮಾರ್ಕ್ಸ್ ಇಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಸುಧಾರಣೆಗೆ ಪರಿಚಯಿಸಲಾಗಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿಯನ್ನು ಈ ವರ್ಷದಿಂದ ತೆಗೆಯಲಾಗಿದೆ.

Continue Reading

LATEST NEWS

ಪ್ರೀತಿಸಿ ಮದುವೆಯಾದವರ ಬಾಳಲ್ಲಿ ವಿಧಿಯಾಟ..! ‘ನೀ ನನ್ನ ಲವ್ವರ..’ ಎನ್ನುತ್ತಲೇ ಒಬ್ಬಂಟಿಯಾದ ..!

Published

on

ಮಂಗಳೂರು/ರಾಯಚೂರು : ಪ್ರೀತಿಸಿದವರನ್ನು ಮದುವೆಯಾಗುವ ಯೋಗ ಎಲ್ಲರಿಗೂ ಇರುವುದಿಲ್ಲ. ಒಂದು ವೇಳೆ ಹಾಗಾದರೆ ಅವರಂಥ ಅದೃಷ್ಟವಂತರು ಮತ್ತಾರೂ ಇಲ್ಲ. ಎಲ್ಲಾ ಪ್ರೀತಿಯು ಗೆಲ್ಲುತ್ತದೆ ಎಂದು ಹೇಳಲು ಆಗುವುದಿಲ್ಲ. ಕೆಲವೊಂದು ಸೋಲಲೂ ಬಹುದು. ಆದರೆ ಇದೀಗ ರಾಜ್ಯದಲ್ಲಿ ವಿಭಿನ್ನ ದುರಂತ ಪ್ರೇಮಕತೆಯೊಂದು ನಡೆದಿದೆ. ನಾ ಡ್ರೈವರ.. ನೀ ನನ್ನ ಲವ್ವರ.. ಅಂತಿದ್ದವನು ಇದೀಗ ಒಂಟಿಯಾಗಿದ್ದಾನೆ. ಆರು ವರ್ಷ ಕಾದು ಮದುವೆಯಾದ ಜೋಡಿಹಕ್ಕಿ ಇದೀಗ ಬೇರೆಬೇರೆಯಾಗಿದೆ.

ಕಾಲೇಜಿನಲ್ಲಿ ಪ್ರೀತಿ ಶುರು : 

ರಮೇಶ್ ಹಾಗೂ ಯಶೋಧಾ ಹೈಸ್ಕೂಲ್ ಫ್ರೆಂಡ್ಸ್. ಅವರಿಬ್ಬರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದವರು. ಕಾಲೇಜಿನಲ್ಲಿದ್ದಾಗ ಪ್ರೀತಿ ಶುರುವಾಗಿ, ಆರು ವರ್ಷದಿಂದ ಲವ್ ಮಾಡಿ, ಕೈ ಕೈ ಹಿಡಿದು ಓಡಾಡಿ, ಬೈಕ್ನಲ್ಲಿ ಸ್ಟೈಲೀಶ್ ಆಗಿ ರೀಲ್ಸ್ ಕೂಡ ಮಾಡಿದ್ದರು. ಯಶೋಧಾಗೆ 18 ವರ್ಷವಾಗಲಿ ಎಂದು ರಮೇಶ್ ಆರು ವರ್ಷ ಕಾದಿದ್ದಾನೆ. ಆಕೆಗಾಗಿ ತನ್ನ ಓದು ಅರ್ಧಕ್ಕೆ ಬಿಟ್ಟು ಕಾರು ಚಾಲಕನಾಗಿ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದ. ಕಳೆದ 15 ದಿನಗಳ ಹಿಂದಷ್ಟೇ ಸಿಂಧನೂರಿನಲ್ಲಿ ಇಬ್ಬರೂ ಖುಷಿಖುಷಿಯಾಗಿ ರಿಜಿಸ್ಟರ್ ಮದುವೆಯಾಗಿದ್ದಾರೆ.

ಕುಟುಂಬಸ್ಥರಿಂದ ನಾಪತ್ತೆ ದೂರು : 

ಓಡಿ ಹೋಗಿ ವಿವಾಹವಾದ ಬಳಿಕ ರಮೇಶ್ ಹಾಗೂ ಯಶೋಧಾ ಬೆಂಗಳೂರಿಗೆ ಬಂದು ಜೀವನ ನಡೆಸುತ್ತಿದ್ದರು. ಈ ಮಧ್ಯೆ ಲಿಂಗಸುಗೂರು ಠಾಣೆಗೆ ಯೋಶೋಧಾ ಕುಟುಂಬಸ್ಥರಿಂದ ನಾಪತ್ತೆ ದೂರು ನೀಡಲಾಗಿದೆ. ಆ ಬಳಿಕ ರಮೇಶ್ ಗೆ ಲಿಂಗಸುಗೂರು ಪೊಲೀಸರು ಕರೆ ಮಾಡಿ ವಿಚಾರಣೆಗೆಂದು ಠಾಣೆಗೆ ಕರೆದಿದ್ದಾರೆ. ರಿಜಿಸ್ಟರ್ ಮ್ಯಾರೇಜ್ ಆದರೂ ಸಹ ಯಶೋಧಾಳನ್ನ ಆಕೆ ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದಾರೆ. ಸ್ಥಳೀಯ ಜನಪ್ರತಿನಿಧಿಯೊಬ್ಬರ ಒತ್ತಡಕ್ಕೆ ಮಣಿದು ಪೊಲೀಸರು ಹೀಗೆ ಮಾಡಿದ್ದಾರೆ ಎಂದು ಆರೋಪ ಕೂಡ ಕೇಳಿಬಂದಿದ್ದು, ಸದ್ಯ ರಮೇಶ್ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page