Connect with us

LATEST NEWS

ಮಕ್ಕಳ ಜೀವ ಉಳಿಸಲು ನೂರಾರು ಜೇನುನೊಣಗಳ ಕಡಿತ ಅನುಭವಿಸಿ ಪ್ರಾಣಬಿಟ್ಟ ಮಹಿಳೆ

Published

on

ಮಧ್ಯಪ್ರದೇಶ: ಜೇನುನೊಣಗಳ ದಾಳಿಯಿಂದ ಸುಮಾರು 20 ಅಂಗನವಾಡಿ ಮಕ್ಕಳನ್ನು ರಕ್ಷಿಸಿ, ಸ್ವತಃ ನೂರಾರು ಜೇನುನೊಣಗಳ ಕಡಿತಕ್ಕೆ ಒಳಗಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಜಾವಾದ್ ತಹಸಿಲ್ನ ರಣಪುರ ಗ್ರಾಮದಲ್ಲಿ ನಡೆದಿದೆ. ಅಂಗನವಾಡಿ ಕೇಂದ್ರದ ಸಹಾಯಕಿ ಕಾಂಚನ್ ಬಾಯಿ ಮೇಘವಾಲ್ (40) ಮೃತಪಟ್ಟ ಮಹಿಳೆ.


ಫೆಬ್ರವರಿ 2, 2026ರ ಸೋಮವಾರದಂದು ರಣಪುರ ಗ್ರಾಮದ ಅಂಗನವಾಡಿಯಲ್ಲಿ ಮಕ್ಕಳು ಹೊರಗಡೆ ಆಟವಾಡುತ್ತಿದ್ದಾಗ ಹತ್ತಿರದ ಮರದಲ್ಲಿದ್ದ ಜೇನುನೊಣಗಳು ದಿಢೀರ್ ದಾಳಿ ಮಾಡಿದವು. ಮಕ್ಕಳನ್ನು ಜೇನುನೊಣಗಳು ಮುತ್ತಿಗೆ ಹಾಕಿದಾಗ, ಕಾಂಚನ್ ಬಾಯಿ ತಕ್ಷಣ ಕಾರ್ಯಪ್ರವೃತ್ತರಾಗಿ ಅಲ್ಲಿದ್ದ ಟಾರ್ಪಾಲಿನ್ ಮತ್ತು ಚಾಪೆಗಳಿಂದ ಮುಚ್ಚಿ ಒಬ್ಬೊಬ್ಬರಾಗಿ ಸುಮಾರು 20 ಮಕ್ಕಳನ್ನು ಸುರಕ್ಷಿತವಾಗಿ ಕೋಣೆಗೆ ಕರೆದೊಯ್ದು ರಕ್ಷಿಸಿದ್ದಾರೆ.

ಮಕ್ಕಳನ್ನು ರಕ್ಷಿಸುವ ಪ್ರಕ್ರಿಯೆಯಲ್ಲಿ ಅವರು ನೂರಾರು ಜೇನುನೊಣಗಳ ಕಡಿತಕ್ಕೆ ಗುರಿಯಾಗಿ ಕುಸಿದುಬಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಗಂಡನ ಮೇಲೆ ಕುಳಿತು ಹಿಗ್ಗಾಮುಗ್ಗಾ ಥಳಿಸಿದ ಪತ್ನಿ! ವೀಡಿಯೋ ವೈರಲ್

ಕಾಂಚನ್ ಬಾಯಿ ಅವರು ಕುಟುಂಬದ ಏಕೈಕ ಆಧಾರವಾಗಿದ್ದರು. ಅವರ ಪತಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಅವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದೀಗ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

DAKSHINA KANNADA

ಬಂಟ್ವಾಳ : ಹುಲ್ಲಿನಿಂದಾವೃತ ಜಾಗದಲ್ಲಿ ಆಕಸ್ಮಿಕ ಬೆಂ*ಕಿ

Published

on

ಬಂಟ್ವಾಳ : ಹುಲ್ಲಿನಿಂದಾವೃತವಾದ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಖಾಸಗಿ  ಜಾಗವೊಂದರಲ್ಲಿ ಅ*ಗ್ನಿ ಆಕಸ್ಮಿಕ ಸಂಭವಿಸಿದ್ದು, ಸಮೀಪದ ಸಂಚಯಗಿರಿಯವರೆಗೂ ವ್ಯಾಪಿಸಿತು.

ಹುಲ್ಲಿನಿಂದಾವೃತ ಜಾಗದಲ್ಲಿ ಬೆಂ*ಕಿ ಕಾಣಿಸಿಕೊಂಡಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಕೂಡಲೇ ಸ್ಥಳೀಯರು ಬಂಟ್ವಾಳದ ಅ*ಗ್ನಿಶಾಮಕದಳಕ್ಕೆ ಕರೆ ಮಾಡಿದ್ದು, ಈ ವೇಳೆ ಬಂಟ್ವಾಳದಲ್ಲಿದ್ದ ಏಕೈಕ ಅ*ಗ್ನಿಶಾಮಕ ವಾಹನ ಮಂಚಿಗೆ ಕರೆಯೊಂದರ ಮೇಲೆ ತೆರಳಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ವಾಹನ ಆಗಮಿಸಿದ್ದು, ಅಷ್ಟರಲ್ಲಾಗಲೇ ಸ್ಥಳೀಯರು ನಂದಿಸುವ ಕಾರ್ಯ ಆರಂಭಿಸಿದ್ದರು.

ಈ ಜಾಗದ ಹಿಂಭಾಗ ಸಂಚಯಗಿರಿ ಬಡಾವಣೆ ಇದ್ದು, ಇಲ್ಲಿಯೂ ಕೆಲ ಭಾಗಕ್ಕೆ ಬೆಂ*ಕಿ ವ್ಯಾಪಿಸಿತ್ತು. ಗ್ರಾಮ ಆಡಳಿತಾಧಿಕಾರಿ ಯಶ್ವಿತಾ, ಸಿಬ್ಬಂದಿ ಸದಾಶಿವ ಕೈಕಂಬ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

ಜಾಗ ಖರೀದಿಸಿ ಖಾಲಿ ಬಿಟ್ಟುಬಿಡುವವರು ಜಾಗದಲ್ಲಿ ಹುಲ್ಲು ಬೆಳೆದು ಸಮೀಪದವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ, ಅಗ್ನಿ ಆಕಸ್ಮಿಕದ ಸಂದರ್ಭ ಸ್ಥಳೀಯರು ಹರಸಾಹಸಪಡಬೇಕಾಗುತ್ತದೆ. ಈ ಕುರಿತು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಈ ಸಂದರ್ಭ ಒತ್ತಾಯಿಸಿದರು.

Continue Reading

LATEST NEWS

ಮಗನೇ ಹೋದ ಮೇಲೆ ಕಾರು ಯಾಕೆ? 6 ಕೋಟಿಯ BMW ಸಮಾಧಿ ಮಾಡಿದ ತಂದೆ!

Published

on

ಮಾಸ್ಕೋ: ಮಗನ ಅಗಲಿಕೆಯ ದುಃಖವನ್ನು ತಾಳಲಾರದೆ, ಅಹಮದಾಬಾದ್‌ನ ತಂದೆಯೊಬ್ಬರು ಮಗನ ನೆನಪಿಗಾಗಿ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ BMW ಕಾರನ್ನು ಸಮಾಧಿ ಮಾಡಿದ್ದಾರೆ.


ತಂದೆಯು ಮಗನ ಹುಟ್ಟುಹಬ್ಬದ ಅಂಗವಾಗಿ ಈ ಐಷಾರಾಮಿ BMW ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಕಾರು ಖರೀದಿಸಿದ ಕೆಲವೇ ದಿನಗಳಲ್ಲಿ ಮಗ ಅಕಾಲಿಕ ಮರಣಕ್ಕೀಡಾದನು. ಇದರ ಪರಿಣಾಮ ಮಗ ಸಮಾಧಿ ಪಕ್ಕದಲ್ಲೇ ಹೊಸ BMW ಕಾರನ್ನು ಸಮಾಧಿ ಮಾಡಿದ ವೀಡಿಯೋ ವೈರಲ್‌ ಆಗುತ್ತಿದೆ.

ಮಗನೇ ಇಲ್ಲದ ಮೇಲೆ ಈ ಕಾರು ಏಕೆ ಎಂದು ನೊಂದ ತಂದೆ, ಅದನ್ನು ಗುಂಡಿ ತೋಡಿ ಸಮಾಧಿ ಮಾಡುವ ನಿರ್ಧಾರ ಮಾಡಿದರು. ಜೆಸಿಬಿ ಮೂಲಕ ಗುಂಡಿ ತೋಡಿ, ಬೆಲೆಬಾಳುವ ಕಾರನ್ನು ಮಗನ ಸಮಾಧಿಯ ಪಕ್ಕದಲ್ಲೇ ಹೂಳುತ್ತಿರುವ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಪತ್ನಿ ತವರು ಮನೆಯಿಂದ ಬಂದಿಲ್ಲ ಎಂದು ಮಾವನನ್ನೇ ಕೊಂದ ಅಳಿಯ!

ಈ ಘಟನೆಗೆ ಸಂಬಂಧಿಸಿದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಇದು ತಂದೆಯ ಪ್ರೀತಿಯ ಸಂಕೇತ ಎಂದರೆ, ಮತ್ತೆ ಕೆಲವರು ಹಣವನ್ನು ದಾನ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Continue Reading

LATEST NEWS

ಕಾರಿನಲ್ಲಿ ಪತ್ತೆಯಾಯ್ತು ಪ್ರೇಮಿಗಳ ಶ*ವ!

Published

on

ಉತ್ತರ ಪ್ರದೇಶ/ಮಂಗಳೂರು : ಪ್ರೇಮಿಗಳ ದಿನದಂದೇ ದುರಂ*ತವೊಂದು ನಡೆದಿದೆ. ಕಾರಿನಲ್ಲಿ ಪ್ರೇಮಿಗಳ ಶ*ವ ಪತ್ತೆಯಾಗಿದೆ. ಈ ಘಟನೆ ನಡೆದಿರೋದು  ಉತ್ತರ ಪ್ರದೇಶದ ನೋಯ್ಡಾದಲ್ಲಿ. ಶೂಟ್ ಮಾಡಿಕೊಂಡು ಪ್ರೇಮಿಗಳು ಕಾರಿನಲ್ಲೇ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನಿಲ್ಲಿಸಿದ್ದ ಕಾರಿನಲ್ಲಿ ಇಬ್ಬರ ಮೃ*ತದೇಹಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದ್ದು, ಇಬ್ಬರೂ ಗುಂಡು ಹಾ*ರಿಸಿಕೊಂಡು ಮೃ*ತಪಟ್ಟಿರುವುದು ದೃಢವಾಗಿದೆ.

ಇಬ್ಬರಿಗೂ ಗುಂ*ಡೇಟಿನ ಗಾ*ಯಗಳಾಗಿದ್ದು, ಮೃ*ತ ಯುವಕನ ಕೈಯಲ್ಲಿ ಪಿಸ್ತೂಲ್ ಪತ್ತೆಯಾಗಿದೆ. ಯುವಕ ಮೊದಲು ಯುವತಿಗೆ ಗುಂ* ಡು ಹಾ*ರಿಸಿ, ನಂತರ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page