Connect with us

UDUPI

ಉಡುಪಿಯಲ್ಲಿ ಮಹಾ ಮಳೆಗೆ ಮಹಿಳೆ ಸಾವು : ಜಿಲ್ಲೆಯಾದ್ಯಂತ ರೆಡ್‌ ಅಲರ್ಟ್ ಘೋಷಣೆ..!

Published

on

ಉಡುಪಿಯಲ್ಲಿ ಮಹಾ ಮಳೆಗೆ ಮಹಿಳೆ ಸಾವು : ಜಿಲ್ಲೆಯಾದ್ಯಂತ ರೆಡ್‌ ಅಲರ್ಟ್ ಘೋಷಣೆ..!

ಉಡುಪಿ : ಕರಾವಳಿಯಲ್ಲಿ ಮಳೆಯ ಅಬ್ಬರ ಇಂದು ಕೂಡ ಮುಂದುವರೆದಿದೆ. ಕೃಷ್ಣ ನಗರಿ ಉಡುಪಿ ಜಿಲ್ಲೆಗೆ ಭಾರಿ ಗಾಳಿ ಮಳೆಯ ಕಾರಣ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಇನ್ನು ಇಂದು ಸುರಿದ ಭಾರಿ ಮಳೆಗೆ ಒಂದು ಸಾವು ಸಂಭವಿಸಿದೆ. ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಮುರೂರು ಎಂಬಲ್ಲಿ ಸೂರಮ್ಮ ಪೂಜಾರ್ತಿ (66) ಎಂಬ ಮಹಿಳೆ ಮೃತಪಟ್ಟಿದ್ದಾಳೆ.

ಕೃಷಿ ಕೆಲಸ ಮಾಡಲು ಹೋಗಿ ಬರುವಾಗ ಹೊಳೆ ನೀರಿನ ಸೆಳೆತಕ್ಕೆ ಸಿಲುಕಿ ಸೂರಮ್ಮ ಸಾವನ್ನಪ್ಪಿದ್ದಾರೆ. ಕಳೆದ ಮೂರು ತಿಂಗಳಿಂದ ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಒಟ್ಟು ಐದು ಮಂದಿ ಸಾವನ್ನಪ್ಪಿದ್ದಾರೆ.

ಬೈಂದೂರು -3, ಕುಂದಾಪುರ ಮತ್ತು ಉಡುಪಿ ತಾಲೂಕಿನಲ್ಲಿ ತಲಾ ಒಬ್ಬರು ಮಳೆಯಿಂದ ಸಾವನ್ನಪ್ಪಿದ್ದಾರೆ.

ಆನೇಕ ಕಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದರೆ. ಅನೇಕ ಅನಾಹುತಾಗಳು ಸಂಭವಿಸಿದೆ. ಮೀನುಗಾರರರಿಗೂ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ನಮ್ಮ ಕುಟುಂಬದ ಮಕ್ಕಳನ್ನ ನಾವೇ ಸರಿಯಾಗಿ ಗಮನಿಸಬೇಕು: ಲವ್ ಜಿಹಾದ್ ಕುರಿತು ಶಾಸಕ ಯತ್ನಾಳ್ ಹೇಳಿಕೆ

Published

on

ಉಡುಪಿ: ಕರಾವಳಿಯಲ್ಲಿ ಹೆಚ್ಚುತ್ತಿರುವ ಲವ್‌ ಜಿಹಾದ್‌ ಬಗ್ಗೆ ಉಡುಪಿಯಲ್ಲಿ ಇಂದು ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್‌ ಪ್ರತಿಕ್ರಿಯೆ ನೀಡಿದ್ದಾರೆ.

ಲವ್ ಜಿಹಾದ್ ಕರಾವಳಿ ಭಾಗದಲ್ಲಿ ಹೆಚ್ಚುತ್ತಿದೆ. ಮೊದಲು ಈ ಬಗ್ಗೆ ಹಿಂದುಗಳು ಜಾಗೃತರಾಗಬೇಕು. ನಮ್ಮ ಕುಟುಂಬದ ಮಕ್ಕಳನ್ನು ನಾವೇ ಸರಿಯಾಗಿ ನೋಡಿಕೊಳ್ಳಬೇಕು, ಲವ್‌ ಜಿಹಾದ್‌ನಲ್ಲಿ ದೊಡ್ಡ ಜಾಗತಿಕ ಜಾಲವೇ ಶಾಮೀಲಾಗಿದೆ ಎಂದರು.

ಬೆಂಗಳೂರಿನಲ್ಲಿ ಬ್ರಾಹ್ಮಣ ಹೆಣ್ಣುಮಗಳನ್ನು ಮದುವೆಯಾಗಿ ಮಗು ಕೊಟ್ಟು ಮತ್ತೊಂದು ಮದುವೆಯಾದ ಪ್ರಕರಣ ಇತ್ತೀಚೆಗೆ ನಡೆದಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಅಪಾಯ ಖಂಡಿತ.

ಇದನ್ನೂ ಓದಿ: ರಾಹುಲ್ ಗಾಂಧಿ ಒಬ್ಬ ಅಪ್ರಾಪ್ತ ಬುದ್ಧಿಹೀನ: ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಹೇಳಿಕೆ

ಈ ಸರಕಾರ ಅಂತೂ ಏನು ಮಾಡಲ್ಲ ಎಂದ ಯತ್ನಾಳ್, 18 ವರ್ಷ ಪ್ರಾಯವಾದರೆ ಕಾನೂನಾತ್ಮಕವಾಗಿ ಏನು ಮಾಡಲು ಬರಲ್ಲ. ತಂದೆ ತಾಯಿ ಒಪ್ಪಿಗೆ ಇಲ್ಲದೆ ಇಂತಹ ಮದುವೆಗಳಿಗೆ ಅವಕಾಶ ನೀಡಬಾರದು. ಕಾನೂನು ಜಾರಿ ಮಾಡುವ ಸರ್ಕಾರ ಬರಬೇಕು. ಆದರೆ ಇದು ಕಾಂಗ್ರೆಸ್ ನಿಂದ ಆಗಲ್ಲ ಎಂದು ನುಡಿದರು.

Continue Reading

LATEST NEWS

ರಾಹುಲ್ ಗಾಂಧಿ ಒಬ್ಬ ಅಪ್ರಾಪ್ತ ಬುದ್ಧಿಹೀನ: ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಹೇಳಿಕೆ

Published

on

ಉಡುಪಿ: ರಾಹುಲ್‌ ಗಾಂಧಿ ತಲೆಯಲ್ಲಿ ಮೆದುಳಿಲ್ಲ.. ಅಪ್ರಾಪ್ತ ಬುದ್ದಿಹೀನ ಎಂದು ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.‌


ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸದನದಲ್ಲಿ ಚರ್ಚೆ ನಡಿಬೇಕು. ಚರ್ಚೆ ನಡೆಯದೇ ಇನ್ನೂ ಪ್ರಕಟವಾಗದ ಪುಸ್ತಕದ ಬಗ್ಗೆ ರಾಹುಲ್‌ ಗಾಂಧಿ ಮಾತನಾಡುತ್ತಾರೆ. ಹಾಗೇ ನೋಡಿದರೆ ನೆಹರು-ಇಂದಿರಾಗಾಂಧಿ ಮನೆತನದ ಹಗರಣಗಳು, ಸೆಕ್ಸ್‌ ಹಗರಣಗಳ ಪುಸ್ತಕಗಳು ಬಹಳಷ್ಠಿವೆ. ಅದನ್ನು ಪಾರ್ಲಿಮೆಂಟ್‌ನಲ್ಲಿ ಚರ್ಚೆ ಮಾಡಲಿ ಎಂದು ಹೇಳಿದರು. ನೆಹರು ಮೌಂಟ್ ಬ್ಯಾಟನ್ ಪತ್ನಿ ಜೊತೆ ಏನು ಸಂಪರ್ಕ ಇತ್ತು, ಶೇಕ್‌ ಅಬ್ದುಲ್ಲಾ ಮನೆಯವರ ಜೊತೆ ಏನು ಸಂಬಂಧ ಇತ್ತು. ಇದನ್ನು ಚರ್ಚೆ ಮಾಡಲಿ ಎಂದು ನುಡಿದರು.

ಇದನ್ನೂ ಓದಿ: ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ; ಬಿಇಓ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

ಮಾಜಿ ಸೇನಾ ಮುಖ್ಯಸ್ಥರು ತಮ್ಮ ಪುಸ್ತಕದಲ್ಲಿ ಫ್ರೀ ಹ್ಯಾಂಡ್ ಅಂದರೆ ನಿರ್ಣಯ ತೆಗೆದುಕೊಳ್ಳಲು ಸ್ವತಂತ್ರರು ಎಂದು ಬರೆದಿದ್ದಾರೆ. ಸೈನಿಕರಿಗೆ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಅವಕಾಶ ನೀಡಿದ್ದರಿಂದ ಕಾಶ್ಮೀರದಲ್ಲಿ ನೆಮ್ಮದಿ ಇದೆ. ಎಲ್ಲೂ ಕೂಡ ಕಲ್ಲುತೂರಾಟ ಇಲ್ಲ. ಇದೆಲ್ಲ ಯಾಕೆಂದರೆ ಮೋದಿ ಅವರು ಫ್ರೀ ಹ್ಯಾಂಡ್‌ ಕೊಟ್ಟಿದರಿಂದಲೇ ಇವತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಆ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರು ತಮ್ಮ ಜೀವನ ಚರಿತ್ರೆಯಲ್ಲಿ ಇದನ್ನ ಬರೆದಿದ್ದಾರೆ. ಆದರೆ ಫ್ರೀ ಹ್ಯಾಂಡ್‌ ಅಂದ್ರೆ ನಾಯಕತ್ವ ವಿಫಲ ಎಂದು ಈ ಮೂರ್ಖ ಹೇಳುತ್ತಾನೆ ಎಂದು ರಾಹುಲ್‌ ಗಾಂಧಿಯವರ ಸಂಸತ್‌ ಅಧಿವೇಶನದ ವರ್ತನೆಗೆ ಶಾಸಕ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

Continue Reading

LATEST NEWS

ಉಡುಪಿ: ಫೇಸ್ ಬುಕ್ ನಲ್ಲಿ ಅವಾಚ್ಯ ಕಮೆಂಟ್ ಮಾಡಿದ್ದ ವ್ಯಕ್ತಿ ಅರೆಸ್ಟ್

Published

on

ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಪೇಜ್‌ ಒಂದರಲ್ಲಿ ಪ್ರಕಟವಾದ ಸಂದರ್ಶನಕ್ಕೆ ಅವಾಚ್ಯವಾಗಿ ಕಮೆಂಟ್‌ ಮಾಡಿದ ಆರೋಪಿಯನ್ನು ಕುಂದಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರಿನ ಮತ್ತಿಕೆರೆ ನಿವಾಸಿ 45 ವರ್ಷ ಪ್ರಾಯದ ಪ್ರಕಾಶ್‌ ಎಸ್‌. ಬಂಧಿತ ಆರೋಪಿಯಾಗಿದ್ದಾನೆ.

ಸಂದರ್ಶನ ಲೇಖನವನ್ನು ಒಳಗೊಂಡ ಪೇಜ್ ಗೆ ಫೇಸ್ ಬುಕ್ ನಲ್ಲಿ ‘ಹೆಮ್ಮೆಯ ಕಾರ್ಯಕರ್ತ’ ಎಂಬ ಖಾತೆಯಿಂದ ಅವಾಚ್ಯವಾಗಿ ಕಮೆಂಟ್ ಹಾಕಿದ್ದ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಮಂಗಳೂರು: ಆನ್ ಲೈನ್ ಇನ್ಶೂರೆನ್ಸ್‌ ಹೆಸರಿನಲ್ಲಿ ವಂಚನೆ ಪ್ರಕರಣ; ಆರೋಪಿ ಅರೆಸ್ಟ್

ಕುಂದಾಪುರ ಉಪವಿಭಾಗದ ಡಿ.ವೈ.ಎಸ್‌.ಪಿ. ಎಚ್‌ ಡಿ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್‌ ಠಾಣೆಯ ನಿರೀಕ್ಷಕ ಜಯರಾಮ್‌ ಡಿ. ಗೌಡ ನೇತೃತ್ವದ ಕುಂದಾಪುರ ಠಾಣೆಯ ಪಿ.ಎಸ್‌.ಐ. ಗಳಾದ ನಂಜಾ ನಾಯ್ಕ್‌ ಎನ್‌. ಮತ್ತು ಪುಷ್ಪಾ ಹಾಗೂ ಸಿಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page