Connect with us

INTERNATIONAL

ವೆನೆಜುವೆಲಾದ ಅಧ್ಯಕ್ಷರಾಗುತ್ತಾರಾ ಡೊನಾಲ್ಡ್ ಟ್ರಂಪ್..?‌ ಅಧಿಕೃತ ಪೋಸ್ಟ್‌ನಲ್ಲೇನಿದೆ!?

Published

on

ವಾಷಿಂಗ್ಟನ್:‌ ಕಳೆದ ಜ.03, 2026ರಂದು ಅಮೆರಿಕವು ವೆನೆಜುವೆಲಾ ವಿರುದ್ದ ಮಿಲಿಟರಿ ದಾಳಿ ನಡೆಸಿ, ಅಲ್ಲಿನ ಅಧ್ಯಕ್ಷ ನಿಕೋಲಸ್‌ ಮಡುರೋ ಮತ್ತು ಅವರ ಪತ್ನಿಯನ್ನು ಬಂಧಿಸಿತ್ತು. ಇದೀಗ ಡೊನಾಲ್ಡ್‌ ಟ್ರಂಪ್‌ ತಮ್ಮನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವುದು ಅಚ್ಚರಿಯನ್ನುಂಟು ಮಾಡಿದೆ.


ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರುಥ್‌ನಲ್ಲಿ ಆಘಾತಕಾರಿ ಪೋಸ್ಟ್‌ವೊಂದನ್ನು ಮಾಡಿದ್ದು, ಅದರಲ್ಲಿ ಅವರು ತಮ್ಮನ್ನು “ವೆನೆಜುವೆಲಾದ ಹಂಗಾಮಿ ಅಧ್ಯಕ್ಷ” ಎಂದು ಬಣ್ಣಿಸಿಕೊಂಡಿದ್ದಾರೆ.

ದೇಶದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್‌ ಅವರನ್ನು ವೆನೆಜುವೆಲಾದ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಪೋಸ್ಟ್‌ ತ್ವರಿತವಾಗಿ ವೈರಲ್‌ ಆಗಿದ್ದು, ಜನರು ಟ್ರಂಪ್‌ ಅವರ ಉದ್ದೆಶಗಳನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಯೋಜನೆಯ ಫಲ ಜನರಿಗೆ ಸಿಗಬಾರದೆಂದು ಕಾಂಗ್ರೆಸ್ ಅಪ ಪ್ರಚಾರ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ವೆನೆಜುವೆಲಾದ ತೈಲ ನಿಕ್ಷೇಪಗಳ ಕುರಿತು ಟ್ರಂಪ್‌ ನಿರಂತರವಾಗಿ ತೈಲ ಕಂಪನಿಗಳೊಂದಿಗೆ ಸಭೆ ನಡೆಸುತ್ತಿರುವ ಮತ್ತು ಇರಾನ್‌ ಮತ್ತು ಗ್ರೀನ್‌ಲ್ಯಾಂಡ್‌ ಕುರಿತು ನಿರಂತರವಾಗಿ ಬೆದರಿಕೆ ಹೇಳಿಕೆಗಳನ್ನು ನೀಡುತ್ತಿರುವ ಸಮಯದಲ್ಲೇ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಒಟ್ಟಿನಲ್ಲಿ ಟ್ರಂಪ್‌ ಪೋಸ್ಟ್‌ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

INTERNATIONAL

ಬಾಂಗ್ಲಾದೇಶದ ಮುಂದಿನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಆಯ್ಕೆ; ಅಭಿನಂದಿಸಿದ ಮೋದಿ

Published

on

ಮಂಗಳೂರು/ಢಾಕಾ : ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ಬಳಿಕ ಬಂದ ಮುಹಮ್ಮದ್ ಯೂನಸ್ ನೇತೃತ್ವದ ಆಡಳಿತವನ್ನು ಬದಲಿಸಿ ಹೊಸ ಸರ್ಕಾರ ರಚಿಸಲು ಚುನಾವಣೆ ನಡೆದಿದೆ. ಹೀಗಾಗಿ ಯಾರು ಗದ್ದುಗೆ ಏರಲಿದ್ದಾರೆ ಎಂಬ ಕುತೂಹಲವಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ(ಬಿಎನ್‌ಪಿ) ಮುಂದಿನ ಸರ್ಕಾರ ರಚಿಸುವ ತಯಾರಿಯಲ್ಲಿದೆ.

ಬಾಂಗ್ಲಾದೇಶದ ಅಧಿಕಾರದ ಚುಕ್ಕಾಣಿಯನ್ನು ಬಿಎನ್‌ಪಿ ಪಕ್ಷದ ಮುಖ್ಯಸ್ಥ ತಾರಿಕ್ ರೆಹಮಾನ್ ವಹಿಸಿಕೊಳ್ಳಲಿದ್ದಾರೆ. ಶನಿವಾರ(ಫೆ.14) ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಅಭಿನಂದಿಸಿದ ಮೋದಿ :

ಭಾರತದ ಪ್ರಧಾನಿ ನರೇಂದ್ರ ಮೋದಿ ರೆಹಮಾನ್ ಮತ್ತು ಬಿಎನ್‌ಪಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಎಕ್ಸ್ ಮೂಲಕ ಅಭಿನಂದನೆ ಸಲ್ಲಿಸಿರುವ ನರೇಂದ್ರ ಮೋದಿಯವರು, ಬಾಂಗ್ಲಾದೇಶದ ಸಂಸತ್‌ ಚುನಾವಣೆಯಲ್ಲಿ ಬಿಎನ್‌ಪಿಯನ್ನು ಬಹುಮತದತ್ತ ಕೊಂಡೊಯ್ದ ತಾರಿಕ್ ರೆಹಮಾನ್ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಗೆಲುವು ಬಾಂಗ್ಲಾದೇಶದ ಜನರು ನಿಮ್ಮ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ.

ಇದನ್ನೂ ಓದಿ : ಫುಟ್ ಪಾತ್ ಸವಾರನಿಗೆ ಸರಿಯಾಗಿ ಗ್ರಹಚಾರ ಬಿಡಿಸಿದ ಅಜ್ಜಿ; ವೀಡಿಯೋ ವೈರಲ್!

ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶವನ್ನು ಬೆಂಬಲಿಸುವುದನ್ನು ಭಾರತ ಮುಂದುವರಿಸುತ್ತದೆ. ನಮ್ಮ ಬಹುಮುಖ ಸಂಬಂಧಗಳನ್ನು ಬಲಪಡಿಸಲು ಹಾಗೂ ಸಾಮಾನ್ಯ ಅಭಿವೃದ್ಧಿ ಗುರಿಗಳನ್ನು ತಲುಪುವ ಉದ್ದೇಶದಿಂದ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Continue Reading

DAKSHINA KANNADA

ದುಬೈ : ತುಳುನಾಡ ಸಂಸ್ಕೃತಿಯ ಅನಾವರಣ ಉಪನ್ಯಾಸ ಕಾರ್ಯಕ್ರಮ

Published

on

ಮಂಗಳೂರು/ದುಬೈ : ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ದುಬೈಯಲ್ಲಿ ಯು.ಎ.ಇ. ಬಂಟ್ಸ್ ಮತ್ತು ಯು.ಎ.ಇ.ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳ ಆಶ್ರಯದಲ್ಲಿ ತುಳುನಾಡ ಸಂಸ್ಕೃತಿಯ ಅನಾವರಣ ಉಪನ್ಯಾಸ ಕಾರ್ಯಕ್ರಮ  ಫಾರ್ಚೂನ್ ಪ್ಲಾಝಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಪೂರ್ಣ ಕುಂಭ ಹಾಗೂ ಚೆಂಡೆ ವಾದನದೊಂದಿಗೆ ಬಾರ್ಕೂರು ಮಹಾ ಸಂಸ್ಥಾನದ ಪೀಠಾಧಿಪತಿ  ಶ್ರೀ ಡಾ.ವಿದ್ಯಾವಾಚಾಸ್ಪತಿ ವಿಶ್ವಸಂತೋಷ ಭಾರತಿ ಸ್ವಾಮೀಜಿಯವರನ್ನು ಬರಮಾಡಿಕೊಂಡು ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರವಚನ ಹಾಗೂ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಸ್ವಾಮೀಜಿ ಸಂಪೂರ್ಣ ಮಾಹಿತಿ ನೀಡಿದರು.

ಉದ್ಯಮಿಗಳಾದ ಡಾ.ಬಿ.ಆರ್.ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ಬಿ. ಕೆ. ಗಣೇಶ್ ರೈ ಉಪಸ್ಥಿತರಿದ್ದರು.

ಇದನ್ನೂ ಓದಿ : ಹಠಾತ್ ನಾಪತ್ತೆಯಾದ ಯುವತಿ; ಆಕೆಯ ಹಾಸಿಗೆಯಲ್ಲಿತ್ತು ಹಾವಿನ ಪೊರೆ…ಇದು ‘ನಾಗಿಣಿ’ ಕಥೆ!

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ  ಸರ್ವೋತ್ತಮ ಶೆಟ್ಟಿ ಸ್ವಾಗತಿಸಿದರು. ಯು.ಎ.ಇ ಬಂಟ್ಸ್ನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜೇಶ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.

 

Continue Reading

DAKSHINA KANNADA

ಕುಲಾಲ ಫ್ಯಾಮಿಲಿ ಯುಎಇ ಆಯೋಜನೆಯಲ್ಲಿ ಶ್ರೀಸತ್ಯನಾರಾಯಣ ಪೂಜೆ

Published

on

ಮಂಗಳೂರು/ದುಬೈ : ದುಬೈನ ಗ್ಲೆಂಡೆಲ್ ಅಂತಾರಾಷ್ಟ್ರೀಯ ಶಾಲಾ ಸಭಾಂಗಣದಲ್ಲಿ ಶ್ರೀ ಸುಬ್ರಹ್ಮಣ್ಯ ಭಟ್  ಹಾಗೂ ಕೆ.ವಿ.ಅಡಿಗರ ಪೌರೋಹಿತ್ಯದಲ್ಲಿ, ಕುಲಾಲ ಫ್ಯಾಮಿಲಿ ಯುಎಇ ಆಯೋಜನೆಯ ಶ್ರೀಸತ್ಯನಾರಾಯಣ ದೇವರ ಪೂಜೆ ಸಂಪನ್ನಗೊಂಡಿತು.

ಪದ್ಮರಾಜ್ ಕುಲಾಲ್ ಎಕ್ಕಾರ್ ನೇತೃತ್ವದಲ್ಲಿ ಹಾಗೂ ಅವರ ಜೊತೆಗೆ ಕೈ ಜೋಡಿಸಿದ ಕುಲಾಲ ಪ್ಯಾಮಿಲಿ ಅಡ್ಮಿನ್ ಬಳಗ ಆಯೋಜಿಸಿದ ಪೂಜಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು.

ಕುಲಾಲ ಪ್ಯಾಮಿಲಿಯ ಸುಮಂಗಲಿಯರು, ದೀಪ ಪ್ರಜ್ವಲನೆ ಮಾಡುವ ಮೂಲಕ ಪೂಜಾ ವಿಧಿ ವಿಧಾನಗಳು ಆರಂಭಗೊಂಡಿತು. ಸುಜಾತ ಹಾಗೂ ಕಿರಣ್ ಕುಲಾಲ್ ದಂಪತಿ ಪೂಜೆಯ ಸಂಕಲ್ಪದಲ್ಲಿ ಪಾಲುಗೊಂಡರು.  ಪದ್ಮರಾಜ್ ಎಕ್ಕಾರ್, ರಾಜೇಶ್ ಶೆಣೈ ಹಾಗೂ  ಸಚಿನ್ ಕುಲಾಲ್ ಶ್ರೀವಿಷ್ಣು ಸಹಸ್ರನಾಮಾವಳಿ ಪಠಣ ಮಾಡಿದರು.

ಶ್ರೀ ಓಂ ಶ್ರೀ ಭಕ್ತ ವೃಂದ ಶಾರ್ಜಾ ಇವರಿಂದ ಭಜನೆ ಸಂಕೀರ್ತನೆ ನಡೆಯಿತು. ಕುಲಾಲ ಸಮಾಜದ ಬಾಂಧವರು ನಡೆಸಿಕೊಟ್ಟ ಕುಣಿತ ಭಜನೆ ಸೇರಿದ ಭಕ್ತ ಜನರ ಮೆಚ್ಚುಗೆಗೆ ಪಾತ್ರವಾಯಿತು. ವಿದುಷಿ ಮಧುರಾ ವಿಶ್ವನಾಥ್ ಗಾಯನದ ಮುಖೇನ ನಡೆಸಿಕೊಟ್ಟ ಸತ್ಯನಾರಾಯಣ ದೇವರ ಕಥಾ ಕಾಲಕ್ಷೇಪಕ್ಕೆ ಸೇರಿದ ಭಕ್ತ ಸಮೂಹ ಭಾವಪರವಶರಾದರು.

ಇದನ್ನೂ ಓದಿ : ಓಮನ್‌ನಲ್ಲಿ ಭೀಕರ ಅಪಘಾತ; ಕಾಪು ಯುವಕ ಸಹಿತ ಮೂವರು ಸಾವು

ಮಹಾಮಂಗಳಾರತಿ ಬಳಿಕ ದಾನಿಗಳನ್ನು ಗೌರವಿಸಿ, ಶ್ರೀ ದೇವರ ಪ್ರಸಾದ ನೀಡಲಾಯಿತು. ಹಾಗೂ ಭಕ್ತಾದಿಗಳು ಎಲ್ಲರೂ ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಿ ಸಂತುಷ್ಟರಾದರು. ದುಬೈಯ ಹಲವು ಸಮಾಜದ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page