Connect with us

LATEST NEWS

ಸತ್ತ ಪತಿಯ ಇಬ್ಬರು ಸಹೋದರರೊಂದಿಗೆ ಪತ್ನಿ ಅಕ್ರ*ಮ ಸಂಬಂಧ; ಅತ್ತೆ ಕಥೆ ಮುಗಿಸಿದ ಸೊಸೆ!

Published

on

ಮಂಗಳೂರು/ಝಾನ್ಸಿ : ಉತ್ತರ ಪ್ರದೇಶದಲ್ಲಿ ಅಕ್ರಮ ಸಂಬಂಧಕ್ಕೆ, ಆಸ್ತಿ ವಿವಾದಕ್ಕೆ ಜೀವವೊಂದು ಬ*ಲಿಯಾಗಿದೆ. ಸ*ತ್ತ ಪತಿಯ ಇಬ್ಬರು ಸಹೋದರರೊಂದಿಗೆ ಅಕ್ರ*ಮ ಸಂಬಂಧ ಹೊಂದಿದ್ದ ಮಹಿಳೆ ಅವರ ತಾಯಿಯನ್ನು ಕೊಂ*ದಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ವರದಿಯಾಗಿದೆ.

ಝಾನ್ಸಿಯ ಕುಮ್ಹಾರಿಯಾ ಗ್ರಾಮದಲ್ಲಿ ಜೂನ್ 24 ರಂದು 54 ವರ್ಷದ ಸುಶೀಲಾ ದೇವಿ ತನ್ನ ಮನೆಯಲ್ಲಿ ಶ*ವವಾಗಿ ಪತ್ತೆಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಸುಶೀಲಾ ದೇವಿಯ ಕಿರಿಯ ಸೊಸೆ ಪೂಜಾ, ಆಕೆಯ ಸಹೋದರಿ ಕಮಲಾ ಮತ್ತು ಕಮಲಾಳ ಪ್ರಿಯಕರ ಅನಿಲ್ ವರ್ಮಾನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಪೂಜಾಳಿಗಿದ್ದ ಅಕ್ರಮ ಸಂಬಂಧ, ಆಸ್ತಿ ಆಸೆಯೇ ಕೃತ್ಯಕ್ಕೆ ಕಾರಣ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.

ಅಕ್ರಮ ಸಂಬಂಧ…ಆಸ್ತಿ ವಿವಾದ…ಕೊಲೆ!

ಗಂಡ ಸ*ತ್ತ ಬಳಿಕ ಪೂಜಾ, ಪತಿಯ ಸಹೋದರ ಕಲ್ಯಾಣ್ ಸಿಂಗ್ ನೊಂದಿಗೆ ಅಕ್ರ*ಮ ಸಂಬಂಧದಲ್ಲಿದ್ದಳು. ಕಲ್ಯಾಣ್ ಸಿಂಗ್ ಸಾ*ವನ್ನಪ್ಪಿದ ಮೇಲೆ ಪೂಜಾ ತನ್ನ ಪತಿಯ ತಂದೆ ಅಜಯ್ ಸಿಂಗ್ ಹಾಗೂ ಪತಿಯ ಮತ್ತೊಬ್ಬ ಸಹೋದರ ಸಂತೋಷ್ ಜೊತೆ ಕುಮ್ಹರಿಯಾದಲ್ಲಿರುವ ಪೂರ್ವಜರ ಮನೆಗೆ ತೆರಳಿ ಅಲ್ಲೇ ವಾಸವಾಗಿದ್ದಳು.

ಸಂತೋಷ್ ಜೊತೆ ಸಂಬಂಧದಲ್ಲಿದ್ದ ಪೂಜಾಗೆ ಒಂದು ಹೆಣ್ಣು ಮಗು ಹುಟ್ಟಿತ್ತು. ಇದನ್ನು ವಿರೋಧಿಸಿ ಸಂತೋಷ್ ಪತ್ನಿ ತವರು ಮನೆ ಸೇರಿದ್ದಳು. ಈ ನಡುವೆ ಪೂಜಾ ಕುಟುಂಬದ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಲು ಬಯಸಿದ್ದಳು. ಇದಕ್ಕೆ ಮಾವ ಅಜಯ್ ಸಿಂಗ್, ಪತಿಯ ಸಹೋದರ ಸಂತೋಷ್ ಒಪ್ಪಿದ್ದರು. ಆದ್ರೆ, ಅತ್ತೆ ಸುಶೀಲಾ ದೇವಿ ಒಪ್ಪಿರಲಿಲ್ಲ.

ಇದನ್ನೂ ಓದಿ : ಮತ್ತೊಂದು ಆಟದತ್ತ ಮುಖ ಮಾಡಿದ ಅಭಿನಯ ಚಕ್ರವರ್ತಿ; ಏನಿದೂ ಕಿಚ್ಚಾಸ್ ಕಿಂಗ್ಸ್ ?

ಹೀಗಾಗಿ ತನ್ನ ಸಹೋದರಿ ಮತ್ತು ಆಕೆಯ ಪ್ರಿಯಕರನ ಜೊತೆ ಸೇರಿ ಅತ್ತೆಯ ಕಥೆ ಮುಗಿಸಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಸಹೋದರರ ಸಾವಿನ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

 

 

LATEST NEWS

IND vs ENG: ಮೂರನೇ ಟೆಸ್ಟ್ ಪಂದ್ಯಕ್ಕೆ ಪ್ಲೆಯಿಂಗ್ 11 ಪ್ರಕಟ

Published

on

ಮಂಗಳೂರು/ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಎರಡು ತಂಡಗಳು ಈಗಾಗಲೇ ಪ್ಲೇಯಿಂಗ್​ ಇಲೆವೆನ್ ಘೋಷಿಸಿದೆ.


ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಎರಡನೇ ಪಂದ್ಯದಲ್ಲಿ ವಿಶ್ರಾಂತಿಯಲ್ಲಿದ್ದ ವೇಗಿ ಬುಮ್ರಾ ತಂಡಕ್ಕೆ ವಾಪಸ್ಸಾಗಿದ್ದು, ಪ್ರಸಿದ್ದ್ ಕೃಷ್ಣ ಅವರು ಜಾಗ ಬಿಟ್ಟಿದ್ದಾರೆ. ಕನ್ನಡಿಗ ಕರುಣ್ ನಾಯರ್‌ಗೆ ಈ ಬಾರಿಯೂ ಅವಕಾಶ ದೊರೆತಿದ್ದು, ಸವಾಲಿನ ಪಿಚ್‌ನಲ್ಲಿ ರನ್‌ ಮಳೆ ಸುರಿಸಬೇಕಾದ ಒತ್ತಡದಲ್ಲಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಜೋಶ್ ಟಂಗ್ ಬದಲಿಗೆ ವೇಗಿ ಜೋಫ್ರಾ ಆರ್ಚರ್ ತಂಡಕ್ಕೆ ಆಗಮಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ತಂಡಗಳು
ಇಂಗ್ಲೆಂಡ್ : ಜಾಕ್ ಕ್ರಾಲಿ, ಬೆನ್ ಡಕೆಟ್, ಓಲೀ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್, ಕ್ರಿಸ್ ವೋಕ್ಸ್, ಡನ್ ಕಾರ್, ಜೋಫ್ರಾ ಆರ್ಚರ್, ಶೋಯಿಬ್ ಬಶೀರ್.

ಭಾರತ :ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಕರುಣ್ ನಾಯರ್, ಶುಭಮನ್ ಗಿಲ್ (ನಾಯಕ), ರಿಷಬ್ ಪಂತ್, ರವೀಂದ್ರ ಜಡೇಜ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.

Continue Reading

DAKSHINA KANNADA

‘ಎಲ್ಲಾ ಆದ ಮೇಲೆ ಶಾಂತಿಸಭೆ’: ಸಂಸದ ಕೋಟ

Published

on

ಉಡುಪಿ: ಚರ್ಚೆ, ವಾದ-ವಿವಾದ, ಪ್ರಕರಣಗಳು ಆದ ಬಳಿಕ ಶಾಂತಿ ಸಭೆ ಇಷ್ಟು ದಿನಗಳ ನಂತರವಾ.. ಎಂಬ ಚರ್ಚೆ ಸಮಾಜದಲ್ಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇವತ್ತು ಎಲ್ಲಾ ಶಾಂತಿ ಸಭೆಗಳು, ಪೊಲೀಸ್ ಕ್ರಮಗಳು ಹಾಗೂ ಪೊಲೀಸ್ ಫೋರ್ಸ್‌ಗಳು ಎಲ್ಲವೂ ಕೂಡ ಈ ಸಮಾಜದ ಮುಖ್ಯ ವಾಹಿನಿಯಿಂದ ಬದುಕುತ್ತಿರುವಂತಹ ಹಿಂದೂಗಳ ಮೇಲೆ ಗಧಾ-ಪ್ರಹಾರ ಮಾಡಲು ರೂಪಿಸಿದ್ದಾರೆಯೇ ಎಂಬ ಭಾವನೆ ಮೂಡುತ್ತಿದೆ. ಇಂದು ಯಾವ ರೀತಿಯ ವಾತಾವರಣ ಇದೆ ಎಂದರೆ ಯಾರೇ ಒಬ್ಬ ಕಾರ್ಯಕರ್ತ ಅದು ಬಿಜೆಪಿ ಕಾರ್ಯಕರ್ತನೋ, ಹಿಂದೂತ್ವದ ಬಗ್ಗೆ ಮಾತನಾಡುವ ಸಾಮಾನ್ಯ ಕಾರ್ಯಕರ್ತ ಆಗಿರಬಹುದು, ಅವನ ಬದುಕಿನ ಹಕ್ಕನ್ನೇ ಮೊಟಕುಗೊಳಿಸುವಂತಹ ಪ್ರಯತ್ನಗಳು, ರೌಡಿಶೀಟರ್ ಹಾಕುವಂತಹ ಕೆಲಸಗಳು ನಡೆಯುತ್ತಿವೆ. ಪರಮೇಶ್ವರ್ ಅವರು ತಿಳುವಳಿಕೆ ಇರುವಂತಹ ಮಂತ್ರಿ. ಒಂದು ಸಮಾಜವನ್ನು ಒಡೆಯುವ, ಸಮಾಜದ ಮೇಲೆ ಗಧಾಪ್ರಹಾರ ಮಾಡುವ, ಸಮಾಜದ ಮೇಲೆ ದೌರ್ಜನ್ಯ ಮಾಡುವ ಕೆಲಸಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

WATCH VIDEO

Continue Reading

DAKSHINA KANNADA

ಮಿಸ್ ಆ್ಯಂಡ್ ಮಿಸಸ್ ಮಂಗಳೂರು ದಿವಾ ಮಿಡ್ಲ್‌ ಈಸ್ಟ್- 2025; ತುಳುನಾಡಿನ ಮಹಿಳೆಯರಿಗಾಗಿ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆ

Published

on

ಉಡುಪಿ: ಘೋಷನ್ ಇವೆಂಟ್ಸ್ ಮೀಡಿಯಾ ಮತ್ತು ಪ್ರಿಯಾ ಫ್ಯಾಶನ್ ದುಬೈ ಇದರ ಆಶ್ರಯದಲ್ಲಿ ತುಂಬೆ ಮೆಡಿ ಸಿಟಿ ಅಜ್ಮನ್ ಇದರ ಸಹಯೋಗದಲ್ಲಿ “ಮಿಸ್ ಆ್ಯಂಡ್ ಮಿಸಸ್ ಮಂಗಳೂರು ದಿವಾ ಮಿಡಲ್ ಈಸ್ಟ್- 2025” ಅಂತಾರಾಷ್ಟ್ರೀಯ ಸೌಂದರ್ಯ ಪ್ರದರ್ಶನ ಸ್ಪರ್ಧೆಯನ್ನು ನವೆಂಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲಾಗಿದೆ.


ಈ ಸ್ಪರ್ಧೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಘೋಷನ್ ಇವೆಂಟ್ಸ್ ಮೀಡಿಯಾದ ದೆಚಮ್ಮ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ತುಳುನಾಡಿನ ಮಹಿಳೆಯರಿಗೆ ವೇದಿಕೆ‌ ಒದಗಿಸುವ ನಿಟ್ಟಿನಲ್ಲಿ ಈ ಸೌಂದರ್ಯ ಪ್ರದರ್ಶನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆ ಎರಡು ವಿಭಾಗಗಳಲ್ಲಿ ನಡೆಯಲಿದೆ. “ಮಿಸ್ ಮಂಗಳೂರು ದಿವಾ” ಸ್ಪರ್ಧೆಯಲ್ಲಿ 18ರಿಂದ 35ವರ್ಷದೊಳಗಿನ ಅವಿವಾಹಿತ ಮಹಿಳೆಯರು ಭಾಗವಹಿಸ ಬಹುದು. ಮಿಸಸ್ ಮಂಗಳೂರು ದಿವಾ ಸ್ಪರ್ಧೆಯಲ್ಲಿ ಎಲ್ಲ ವಯೋಮಿತಿಯ ವಿವಾಹಿತ ಮಹಿಳೆಯರು ಪಾಲ್ಗೊಳ್ಳಬಹುದು ಎಂದರು. ಆಗಸ್ಟ್ ಅಂತ್ಯಕ್ಕೆ ನೋಂದಣಿ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಆ ಬಳಿಕ ಮಂಗಳೂರಿನಲ್ಲಿ ಅಡಿಷನ್ ನಡೆಯಲಿದ್ದು, ಅಲ್ಲಿ ಆಯ್ಕೆಯಾಗುವ ಸ್ಪರ್ಧಿಗಳು ನವೆಂಬರ್ ತಿಂಗಳು ದುಬೈನಲ್ಲಿ ನಡೆಯಲಿರುವ ಫೈನಲ್ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಲಿದ್ದಾರೆ.

ಫೈನಲ್ ಗೆ ಆಯ್ಕೆಯಾಗುವ ಸ್ಪರ್ಧಿಗಳಿಗೆ ವಿಸಾ, ವಿಮಾನ ಟಿಕೆಟ್, ಮೂರು ದಿನಗಳ ವಾಸ್ತವ್ಯವನ್ನು ಒದಗಿಸಲಾಗುವುದು. ಅಲ್ಲದೆ, ಊಟ, ಪ್ರಯಾಣ, ಫೋಟೋ ಶೂಟ್‌, ರ್ಯಾಂಪ್ ವಾಕ್ ತರಬೇತಿ, ಮೇಕಪ್ ಹಾಗೂ ಕಾಸ್ಟ್ಯೂಮ್ ಅನ್ನು ಉಚಿತವಾಗಿ ಆಯೋಜಕರು ಒದಗಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ತಲೆ ಸಿಮಿಯಾ ರೋಗಿಗಳಿಗೆ ನ್ಯೂಟ್ರಿಶಿಯನ್‌ ಬಾರ್‌ ಕೊಡುಗೆ ನೀಡಿದ ಎಂಆರ್‌ಪಿಎಲ್‌

ಘೋಷನ್ ಇವೆಂಟ್ಸ್ ಮೀಡಿಯಾದ ಸಬಿತಾ ಕರ್ಲೋ ಮಾತನಾಡಿ, ಫೈನಲ್ ನಲ್ಲಿ ಮೂರು ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲ ಸುತ್ತಿನಲ್ಲಿ ಸಾಂಪ್ರದಾಯಿಕ ವಸ್ತ್ರ ಧರಿಸಿ ಪ್ರದರ್ಶನ ನೀಡಬೇಕು. ಎರಡನೇ ಸುತ್ತಿನಲ್ಲಿ ಫಿಜನ್ ಹಾಗೂ ಮೂರನೇ ಸುತ್ತಿನಲ್ಲಿ ಗೌನ್ ಧರಿಸಿ ವಾಕ್ ಮಾಡಬೇಕು. ಮೂರನೇ ಸುತ್ತಿನ ಬಳಿಕ ಪ್ರಶ್ನಾವಳಿ ಸುತ್ತು ನಡೆಯಲಿದೆ. ಟಾಪ್ ಮೂವರು ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಿಯಾ ಫ್ಯಾಶನ್ ಮಾಲಕಿ ಪ್ರಿಯಾ ಫೆರ್ನಾಂಡಿಸ್, ಮಿಸ್ಟರ್ ಯುಎಇ ವಿನ್ನರ್ ಗೌತಮ್ ಬಂಗೇರ, ವಿಷ್ಣುವರ್ಧನ್ ಭಟ್ ಇದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page