ಮಂಗಳೂರು/ಲಕ್ನೋ: ದೆಹಲಿಯಲ್ಲಿ ನಡೆದ ಶ್ರದ್ದಾ ಕೊ*ಲೆ ಪ್ರಕರಣದಂತೆ ಹೋಲುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಪತ್ನಿ ಮತ್ತು ಆಕೆಯ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂ*ದು, ದೇಹವನ್ನು 15 ಪೀಸ್ ಮಾಡಿ, ನಂತರ ಡ್ರಮ್‌ನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಿಟ್ಟಿರುವ ಘಟನೆ ಉತ್ತರಪ್ರದೇಶದ ಬ್ರಹ್ಮಪುರಿಯ ಇಂದಿರಾ ನಗರದಲ್ಲಿ ನಡೆದಿದೆ.
ಖಾಸಗಿ ಹಡಗು ಕಂಪನಿಯ ಉದ್ಯೋಗಿ ಸೌರಭ್ ರಜಪೂತ್(29) ಕೊಲೆಯಾದ ಪತಿ. ಮೃತ ಸೌರಭ್ ಮಾ. 4ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಪೊಲೀಸರು ಅನುಮಾನದಿಂದ ಪತ್ನಿ ಮುಸ್ಕಾನ್(27)ನನ್ನ ವಿಚಾರಣೆ ನಡೆಸಿದ್ದರು. ಈ ವೇಳೆ ಆಕೆ ಪ್ರಿಯಕರ ಸಾಹಿಲ್(25) ಜೊತೆ ಸೇರಿ ಸೌರಭ್‌ನನ್ನು ಕೊ*ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೆಚ್ಚುವರಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಏನಿದು ಪ್ರಕರಣ ?
ಸೌರಭ್ ರಜಪೂತ್ ಮತ್ತು ಮುಸ್ಕಾನ್ ರಸ್ತೋಗಿ 2016ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮರ್ಚೆಂಟ್ ನೇವಿ ಕೆಲಸದಲ್ಲಿದ್ದ ಸೌರಭ್, ಹೆಂಡತಿಯನ್ನು ಬಿಟ್ಟುಹೋಗಲಾರದೆ ಕೆಲಸ ತೊರೆದನು. ಇದು ಕುಟುಂಬದಲ್ಲಿ ಜಗಳ ಉಂಟಾಗುವುದಕ್ಕೆ ಕಾರಣವಾಯಿತು. ಈಗಾಗೀ ದಂಪತಿ ಮನೆ ಬಿಟ್ಟು, ಬಾಡಿಗೆ ಮನೆ ಸೇರಿದರು.
2019ರಲ್ಲಿ ಮುಸ್ಕಾನ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಸೌರಭ್‌ಗೆ ಮಗಳ ಆಗಮನದ ಸಂತೋಷ ಒಂದು ಕಡೆಯಾದರೆ, ಇನ್ನೊಂದು ಕಡೆ ಮುಸ್ಕಾನ್ ಪ್ರಿಯಕರನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರ ತಿಳಿಯಿತು. ಇದು ದಂಪತಿಗಳ ನಡುವೆ ವೈಮನಸ್ಸು ಮೂಡುವುದಕ್ಕೆ ಕಾರಣವಾಯಿತು. ಕೊನೆಗೆ ವಿಚ್ಛೇದನಕ್ಕೆ ನಿರ್ಧರಿಸಿದ್ದರು. ಆದರೆ ಸೌರಭ್ ತನ್ನ ಮಗಳ ಭವಿಷ್ಯದ ಬಗ್ಗೆ ಚಿಂತಿಸಿ ಹಿಂದೆ ಸರಿದರು.
ಸೌರಭ್ ಮತ್ತೆ ಮರ್ಚೆಂಟ್ ನೇವಿ ಕೆಲಸಕ್ಕೆ ತೆರಳಿದ. ಫೇಬ್ರವರಿ 28ಕ್ಕೆ ಸೌರಭ್ ಅವರ ಮಗಳಿಗೆ ಆರು ವರ್ಷ ತುಂಬಿತ್ತು. ಆದ್ದರಿಂದ ಪ್ರೀತಿಯ ಮಗಳ ಹುಟ್ಟಿದ ಹಬ್ಬ ಆಚರಣೆ ಮಾಡಲು ಸೌರಭ್ ಊರಿಗೆ ಬರುತ್ತಾನೆ.
ಆದರೆ ಅಷ್ಟೊತ್ತಿಗಾಗಲೇ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್, ಸೌರಭ್‌ನನ್ನು ಕೊಲೆ ಮಾಡುವುದಕ್ಕೆ ಯೋಜನೆ ರೂಪಿಸಿದ್ದರು. ಅದರಂತೆ ಮಾರ್ಚ್ 4ರಂದು ಮುಸ್ಕಾನ್ ಸೌರಭ್‌ನ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಬೆರಿಸಿದ್ದಳು. ಹೆಂಡತಿಯ ಮೇಲೆ ನಂಬಿಕೆ ಹೊಂದಿದ್ದ ಸೌರಭ್ ಊಟ ಮಾಡಿ ನಿದ್ರೆಗೆ ಜಾರುತ್ತಾನೆ.
ಇದನ್ನೂ ಓದಿ: ಭಕ್ತರನ್ನು ಕೊಂಡೊಯ್ಯುತ್ತಿದ್ದ ದೋಣಿ ಮಗುಚಿ 7 ಮಂದಿ ನಾಪತ್ತೆ
ಈ ಸಂದರ್ಭದಲ್ಲಿ ಮುಸ್ಕಾನ್ ತನ್ನ ಪ್ರಿಯಕರನನ್ನು ಮನೆಗೆ ಕರೆಸಿ ಸೌರಭ್‌ನನ್ನು ಚಾಕುವಿನಿಂದ ಇರಿ*ದು ಕೊ*ಲೆ ಮಾಡುತ್ತಾರೆ. ನಂತರ ಯಾರಿಗೂ ಅನುಮಾನ ಬರದಂತೆ ದೇಹವನ್ನು 15 ತುಂಡುಗಳನ್ನಾಗಿ ಮಾಡಿ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿಬಿಡುತ್ತಾರೆ. ಯಾಕೆಂದರೆ ಸಕಾಲದಲ್ಲಿ ಮೃತದೇಹವನ್ನು ವಿಲೇವಾರಿ ಮಾಡುವುದು ಇವರಿಬ್ಬರ ಯೋಜನೆಯಾಗಿತ್ತು.

ಕೊ*ಲೆ ಮಾಡಿದ ಬಳಿಕ ಮುಸ್ಕಾನ್, ಸೌರಭ್‌ನ ಫೋನ್‌ನಿಂದ ಕುಟುಂಬಸ್ಥರಿಗೆ ಮೆಸೇಜ್ ಕಳುಹಿಸುವ ಮೂಲಕ ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನಿದ್ದಳು. ಬಳಿಕ ಆಕೆಯ ಪ್ರಿಯಕರ ಸಾಹಿಲ್ ಜೊತೆ ಸುತ್ತಾಡಲು ಮನಾಲಿಗೆ ತೆರಳಿದ್ದಳು. ಯಾರಿಗೂ ಅನುಮಾನ ಬರಬಾರದು ಎಂದು ಸೌರಭ್‌ನ ಫೋನ್ ಜೊತೆಗೆ ಒಯ್ದಿದ್ದಳು. ಕುಟುಂಬ ಬಿಟ್ಟು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದ ಸೌರಭ್, ಮನೆಯವರಿಗೆ ಪ್ರತಿದಿನ ಕರೆಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದ.
ಆದರೆ ಸೌರಭ್ ಸುಮಾರು ದಿನಗಳ ಕಾಲ ಫೋನ್ ಮಾಡದ ಕಾರಣ ಕುಟುಂಬ ಸದಸ್ಯರಿಗೆ ಅನುಮಾನ ಮೂಡಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸೌರಭ್ ಕುಟುಂಬದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ಮುಸ್ಕಾನ್ ಹಾಗೂ ಸಾಹಿಲ್‌ನನ್ನು ಬಂಧಿಸಿದ್ದಾರೆ. ವಿಚಾರಣೆಯ ನಂತರ ಭೀಕರ ಕೊಲೆಯನ್ನು ತಾವೇ ಮಾಡಿರುವುದಾಗಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.