Connect with us

LATEST NEWS

ಚಿಕನ್ ಕರಿ ಕೇಳಿದ್ದಕ್ಕೆ ಗಂಡನನ್ನು ಇಟ್ಟಿಗೆಯಿಂದ ಹೊಡೆದು ಕೊಂ*ದ ಪತ್ನಿ!

Published

on

ಮಂಗಳೂರು/ಉತ್ತರ ಪ್ರದೇಶ : ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗೆ ಕೊ*ಲೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಬೇರೆಯವರನ್ನು ಬಿಡಿ ತಮ್ಮವರನ್ನೇ ಕೊ*ಲೆಗೈಯುವ ಮಟ್ಟಕ್ಕೆ ಜನರು ಮುಂಗೋಪಿಗಳಾಗಿದ್ದಾರೆ. ಇಂತಹುದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಶಹಜಹಾನ್ ಪುರದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ತಲೆಯನ್ನು ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಕೊ*ಲೆಗೈದಿದ್ದಾಳೆ. ಆಕೆ ಆತನ ಮೇಲೆ ಕುಳಿತು ತಲೆಗೆ ಇಟ್ಟಿಗೆಯಿಂದ ಹೊಡೆದು ಹ*ತ್ಯೆ ಮಾಡಿದ್ದಾಳೆ. ಕೃತ್ಯದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಸತ್ಯಪಾಲ್(40) ಕೊ*ಲೆಗೀಡಾದ ಗಂಡ. ಗಾಯತ್ರಿ ದೇವಿ(39) ಕೊ*ಲೆಗೈದ ಪತ್ನಿ. 20 ವರ್ಷಗಳ ಹಿಂದೆ ಇವರಿಬ್ಬರಿಗೂ ಮದುವೆಯಾಗಿತ್ತು. ಇಬ್ಬರು ಮಕ್ಕಳಿದ್ದು, ಮಗಳು ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಮಗ 12ನೇ ತರಗತಿಯಲ್ಲಿ ಓದುತ್ತಿದ್ದಾನೆ.

ಗಾಯತ್ರಿ ದೇವಿ ಸಸ್ಯಾಹಾರಿಯಾಗಿದ್ದು, ಸತ್ಯಪಾಲ್ ಮಾಂಸಾಹಾರ ಪ್ರಿಯನಾಗಿದ್ದ. ಅಲ್ಲದೇ, ಆಗಾಗ್ಗೆ ಮನೆಯಲ್ಲಿ ಮಾಂಸಾಹಾರ ತಯಾರಿಸುವಂತೆ ಹೆಂಡತಿಯ ಬಳಿ ಹೇಳುತ್ತಿದ್ದ. ಈ ವಿಚಾರದಿಂದ ಪತಿ-ಪತ್ನಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ : ಮುಳುಗುತ್ತಾ ಮಂಗಳೂರು – ಉಡುಪಿ; ಅಧ್ಯಯನ ಏನು ಹೇಳುತ್ತೆ!?
ಗುರುವಾರ(ಆ.8)ಸತ್ಯಪಾಲ್ ಮತ್ತೆ ಮಾಂಸಾಹಾರ ಮಾಡುವಂತೆ ಹೇಳಿದ್ದಾನೆ. ಗಾಯತ್ರಿ ದೇವಿ ನಿರಾಕರಿಸಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಜಗಳ ತಾರಕಕ್ಕೇರಿದೆ. ಈ ವೇಳೆ ಗಾಯತ್ರಿ ಇಟ್ಟಿಗೆ ಎತ್ತಿಕೊಂಡು ಗಂಡನ ಮೇಲೆ ಹ*ಲ್ಲೆ ನಡೆಸಿದ್ದಾಳೆ. ಸತ್ಯಪಾಲ್ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಗಾಯತ್ರಿ ಅವನನ್ನು ಹಿಂಬಾಲಿಸಿ, ನೆಲಕ್ಕೆ ಕೆಡವಿ, ಅವನೆದೆಯ ಮೇಲೆ ಕುಳಿತು ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದಾಳೆ. ಎಷ್ಟರ ಮಟ್ಟಿಗೆ ಎಂದರೆ, ಆತನ ಮೆದುಳೇ ಹೊರಬಂದಿದೆ. ಆರೋಪಿ ಗಾಯತ್ರಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಳು ಎಂದು ಹೇಳಲಾಗಿದೆ.

DAKSHINA KANNADA

ಕಾಪು ಶ್ರೀ ಹೊಸ ಮಾರಿಗುಡಿ ಕ್ಷೇತ್ರ; ಸಂಭ್ರಮದಿಂದ ನಡೆದ ಮೆರವಣಿಗೆ

Published

on

ಉಡುಪಿ : ಪುನಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿರುವ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಚಿನ್ನದ ಹೊಸ ಗದ್ದುಗೆ ಸಮರ್ಪಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಪ್ರಯುಕ್ತ ಮೆರವಣಿಗೆ ಸಂಭ್ರಮದಿಂದ ನಡೆಯಿತು.

ನೂತನ ಸ್ವರ್ಣ ಗದ್ದುಗೆ, ಬೆಳ್ಳಿ ರಥೋತ್ಸವ, ಬಂಗಾರದ ಮೊಗ,  ಉಚ್ಚoಗಿ ದೇವಿಯ ಬಂಗಾರದ ಪಾದ ಪೀಠ, ಬಂಗಾರದ ಮುಖ, ಬೃಹತ್ ಗಾತ್ರದ ಗಂಟೆ, ಮತ್ತು ರಾಜಗೋಪುರ ಮಹಾದ್ವಾರದ ಬಾಗಿಲು ಸಹಿತ ಸಂಭ್ರಮದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತಾ!?

ಕೃಷ್ಣಾಪುರ ಮಠತ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಶೋಭಾಯಾತ್ರೆ ಉದ್ಘಾಟಿಸಿದರು. ಕಾಪು ಶ್ರೀ ಪೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದಿಗೆ ಸಮರ್ಪಣೆ ಸಮಿತಿ ಮುಂದಾಳತ್ವದಲ್ಲಿ ಭಕ್ತರು ಒಟ್ಟುಗೂಡಿಸಿದ ಬಂಗಾರ ಸಹಿತ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಮಾರಿಯಮ್ಮ ದೇವಿ ಬಂಗಾರದ ಗದ್ದುಗೆ ಸಹಿತ ಬೆಳ್ಳಿ ರಥ, ಬೃಹತ್ ಗಂಟೆ ಇತ್ಯಾದಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು.

ಮೆರವಣಿಗೆಯಲ್ಲಿ 30ಕ್ಕೂ ಅಧಿಕ ಟ್ಯಾಬ್ಲೋ,  ಕಲಶ ಹಿಡಿದ ಮಹಿಳೆಯರು ಸಹಿತ 10,000ಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಪ್ರಮುಖರಾದ ಸುನೀಲ್ ಕುಮಾರ್, ವಿನಯಕುಮಾರ ಸೊರಕೆ , ಲಾಲಾಜಿ ಆರ್ ಮೆಂಡನ್ ಮೊದಲಾದವರು ಭಾಗವಹಿಸಿದ್ದರು.

Continue Reading

DAKSHINA KANNADA

ವಳಚ್ಚಿಲ್ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರಥಮ ವರ್ಧಂತ್ಯೋತ್ಸವ ಸಂಪನ್ನ

Published

on

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ವಳಚ್ಚಿಲ್ ಪರಿಸರದಲ್ಲಿರುವ ವೈಕುಂಠದಲ್ಲಿನ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರಥಮ ವರ್ಧಂತ್ಯೋತ್ಸವ ಭಕ್ತಿಭಾವದಿಂದ ಮತ್ತು ಅದ್ದೂರಿಯಾಗಿ ಫೆಬ್ರವರಿ 10, 2025ರಂದು ನಡೆಯಿತು. ಈ ಭಕ್ತಿ ಮಯ ಸಮಾರಂಭದಲ್ಲಿ ಅನೇಕ ಭಕ್ತರು ಪಾಲ್ಗೊಂಡಿದ್ದರು ಮತ್ತು ಅನೇಕ ವೈದಿಕ ವಿಧಿವಿಧಾನಗಳು ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

ದಿನದ ಪ್ರಾರಂಭದಲ್ಲಿ ನಡೆದ ಭಜನೆಗಳು ದೇವಸ್ಥಾನದ ವಾತಾವರಣವನ್ನು ಭಕ್ತಿಭಾವದಿಂದ ತುಂಬಿಸಿದವು. ಇದರ ನಂತರ ಪುಣ್ಯಾಹವಚನ, ಗಣಹೋಮ, ವಿಷ್ಣು ಸಹಸ್ರನಾಮಹೋಮ ಮತ್ತು ಪಾವಮಾನ ಹೋಮ ನೆರವೇರಿತು. ಭಕ್ತರು ಸಂಕೀರ್ತನೆ ಮಾಡಿದ ವಿಷ್ಣು ಸಹಸ್ರನಾಮದ ಗಾಯನವು ಮಂದಿರದ ಆವರಣದಲ್ಲಿ ಆಧ್ಯಾತ್ಮಿಕ ಭಾವ ತುಂಬಿತು. ಭಕ್ತಿಭಾವದಿಂದ ನೆರವೇರಿದ ಪ್ರಸನ್ನ ಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು.

ಮಧ್ಯಾಹ್ನದ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ಭಜನೆಗಳು ಮತ್ತು ಮನೋಹರವಾದ ಸಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಪಡಿಸಲ್ಪಟ್ಟವು. ಸಂಜೆ 5:30 ರಿಂದ 7:30ರ ತನಕ ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರಿಂದ *ಶ್ರೀನಿವಾಸ ಕಲ್ಯಾಣ* ಯಕ್ಷಗಾನ ಪ್ರದರ್ಶನ ನಡೆಯಿತು. ಈ ಕಲಾತ್ಮಕ ಮತ್ತು ಭಕ್ತಿ ಮಯ ಯಕ್ಷಗಾನದ ಮೂಲಕ ಭಕ್ತರು ಶ್ರೀನಿವಾಸನ ದಿವ್ಯ ವಿವಾಹ ಮಹೋತ್ಸವವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಪಡೆದರು.

ಈ ಅದ್ಧೂರಿ ಸಮಾರಂಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎ. ರಾಘವೇಂದ್ರ ರಾವ್, ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್, ಟ್ರಸ್ಟಿಗಳಾದ ಎ. ವಿಜಯಲಕ್ಷ್ಮಿ ಆರ್. ರಾವ್ ಮತ್ತು ಪ್ರೊ.  ಎ. ಮಿತ್ರಾ ಎಸ್. ರಾವ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Continue Reading

LATEST NEWS

ಈ ಪ್ರಾಣಿಯ ಹೃದಯ ಒಂದು ಕೋಣೆಯಷ್ಟು ದೊಡ್ಡದಾಗಿದೆ ಗೊತ್ತಾ..!

Published

on

ಮಂಗಳೂರು : ಪ್ರಪಂಚದಲ್ಲಿ ಅನೇಕ ರೀತಿಯ ಪ್ರಾಣಿಗಳಿವೆ. ಕೆಲವು ಪ್ರಾಣಿಗಳು ತುಂಬಾ ಚಿಕ್ಕದಾಗಿದ್ದರೆ, ಇನ್ನು ಕೆಲವು ಪ್ರಾಣಿಗಳು ತುಂಬಾ ದೈತ್ಯಕಾರವಾಗಿರುತ್ತವೆ. ಆದರೆ ಈ ಒಂದು ಪ್ರಾಣಿ ಉಸಿರಾಡುವಾಗ ಮತ್ತು ಹೃದಯ ಬಡಿಯುವಾಗ ಅದರ ದೇಹದ ಎಲ್ಲಾ ಭಾಗಗಳು ನಡುಗುತ್ತವೆ. ಈ ಹೃದಯವು ಒಂದು ಸಣ್ಣ ಕೋಣೆಯಂತಿದೆ.

ಜಗತ್ತಿನಲ್ಲಿರುವ ಅತ್ಯಂತ ದೊಡ್ಡದಾದ ಜೀವಿ ಎಂದರೆ, ಅದು ನೀಲಿ ತಿಮಿಂಗಿಲ. ಅದರ ಹೃದಯದ ಉದ್ದ, ಅಗಲ ಮತ್ತು ತೂಕದ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇದರ ಹೃದಯ ಜಗತ್ತಿನಲ್ಲೇ ಅತಿದೊಡ್ಡ ಹೃದಯ ಎಂದು ಹೇಳಲಾಗುತ್ತದೆ.

ಬ್ಲೂವೇಲ್‌ನ ಹೃದಯ 14 ಅಡಿ ಉದ್ದ, 06 ಅಡಿ ಅಗಲ ಮತ್ತು 05 ಅಡಿ ಎತ್ತರವಿದೆ. ಕೆನಡಾದ ಟೊರೆಂಟೊದಲ್ಲಿರುವ ರಾಯಲ್ ಒಂಟಾರಿಯೊ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಅದರ ಹೃದಯವು 05 ಅಡಿ ಉದ್ದ, 4 ಅಡಿ ಅಗಲ ಮತ್ತು 5 ಅಡಿ ಎತ್ತರವಿದೆ. ಇದರ ತೂಕ 190 ಕೆ.ಜಿ ಅಂದರೆ 4-5 ಜನರು ಒಟ್ಟಿಗೆ ನಿಂತರೆ ಅವರನ್ನು ಸೇರಿಸಿದಾಗ ಸಿಗುವ ತೂಕ ನೀಲಿ ತಿಮಿಂಗಿಲದ ಹೃದಯದ ತೂಕಕ್ಕೆ ಸಮಾನವಾಗಿದೆ.

ಇದನ್ನೂ ಓದಿ: ಉಗುರು ಕಚ್ಚುವ ಅಭ್ಯಾಸ ನಿಮಗೂ ಇದ್ಯಾ..? ಹಾಗಾದರೆ ಈ ಸ್ಟೋರಿಯನ್ನೊಮ್ಮೆ ಓದಿ

ಭೂಮಿಯ ಮೇಲಿನ ಯಾವುದೇ ಜೀವಿಗೆ ಇಷ್ಟು ದೊಡ್ಡ ಹೃದಯವಿಲ್ಲ. ಆಫ್ರಿಕನ್ ಆನೆಯನ್ನು ಪ್ರಸ್ತುತ ಭೂಮಿಯಲ್ಲಿ ವಾಸಿಸುವ ಅತಿದೊಡ್ಡ ಪ್ರಾಣಿ ಎಂದು ಪರಿಗಣಿಸಲಾಗಿದೆ. ಅದರ ಗೋಳಾಕಾರದ ಹೃದಯವು 30 ಪೌಂಡ್ ಅಥವಾ 13.6 ಕಿಲೋಗ್ರಾಂಗಳಷ್ಟು ತೂಗುತ್ತದೆ. ಅಂದರೆ ತಿಮಿಂಗಿಲ ಹೃದಯವು ಆನೆಯ ಹೃದಯಕ್ಕಿಂತ 14 ಪಟ್ಟು ಭಾರವಾಗಿರುತ್ತದೆ.

ಮಾನವನ ಹೃದಯವು 283 ಕಿಲೋ ಗ್ರಾಂ ಇರುತ್ತವೆ. ಅಂದರೆ ನೀಲಿ ತಿಮಿಂಗಿಲದ ಹೃದಯವು ಮಾನವನ ಹೃದಯಕ್ಕಿಂತ 640 ಪಟ್ಟು ಹೆಚ್ಚು ತೂಗುತ್ತದೆ.

ನೀಲಿ ತಿಮಿಂಗಿಲದ ತೂಕ ಎಷ್ಟು?

ನೀಲಿ ತಿಮಿಂಗಿಲಗಳು ಸಾಮಾನ್ಯವಾಗಿ 150 ಟನ್ ಮತ್ತು 200 ಟನ್ ತೂಕವಿರುತ್ತದೆ. ಡೈನೋಸಾರ್‌ಗಳು ಸಹ ಅದರ ಗಾತ್ರವನ್ನು ಹೊಂದಿಸಲು ಸಾಧ್ಯವಾಗವುದಿಲ್ಲ. ಒಂದು ದೊಡ್ಡ ನೀಲಿ ತಿಮಿಂಗಿಲವು ಸುಮಾರು 30 ಮೀಟರ್ ಅಥವಾ 98 ಅಡಿ ಉದ್ದವಿದೆ. ಬೋಯಿಂಗ್ 737ನ ಗಾತ್ರ. ಮರಿ ತಿಮಿಂಗಿಲ ಜನಿಸಿದಾಗ, ಅದು 2-3 ಟನ್ ತೂಕ ಮತ್ತು 8 ಮೀಟರ್ ಉದ್ದವಿರುತ್ತದೆ.

Continue Reading
Advertisement

Trending

Copyright © 2025 Namma Kudla News

You cannot copy content of this page