Connect with us

BIG BOSS

BBK 11 : ಸೃಜನ್ ಲೊಕೇಶ್ ಜೊತೆ ಬಂದ ಹೊಸ ಕಾರಲ್ಲಿ ಹೊರ ಹೊಗೋದು ಯಾರು ಗೊತ್ತಾ ??

Published

on

BBK 11 : ಬಿಗ್ ಬಾಸ್ ಕನ್ನಡ ಶೋ ನಲ್ಲಿ ವಾರದ ಕೊನೆಯಲ್ಲಿ ಕಿಚ್ಚನ ಜೊತೆಗೆ ಪಂಚಾಯತಿ ನಡೆಯುತ್ತೆ. ಆದ್ರೆ ಈ ವಾರ ಸುದೀಪ್ ಬಂದಿಲ್ಲ. ಹಾಗಾಗಿ ಶನಿವಾರದ ಎಪಿಸೋಡ್​ಗೆ ನಿರ್ದೇಶಕ ಯೋಗರಾಜ್ ಭಟ್ ಮನೆಗೆ ಬಂದಿದ್ದರು. ಇನ್ನು ಭಾನುವಾರದ ಎಪಿಸೋಡ್​ಗೆ ಹೊಸ ಅತಿಥಿ ಬಂದಿದ್ದು ತಮ್ಮೊಟ್ಟಿಗೆ ಕಾರುಗಳನ್ನು ಸಹ ಕರೆತಂದಿದ್ದಾರೆ.

ಕಳೆದ ಶನಿವಾರ ಸುದೀಪ್ ಅವರ ತಾಯಿ ಸರೋಜಮ್ಮ ನಿಧನರಾದ ಕಾರಣ ಸುದೀಪ್ ಆ ನಂತರದ ತಮ್ಮ ಎಲ್ಲ ಚಿತ್ರೀಕರಣ, ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಈ ವೀಕೆಂಡ್​ನ ವಾರದ ಪಂಚಾಯಿತಿಗೆ ಸಹ ಸುದೀಪ್ ಬಂದಿಲ್ಲ. ಹಾಗಾಗಿ ಬಿಗ್​ಬಾಸ್ ಆಯೋಜಕರು ಇಬ್ಬರು ಅತಿಥಿಗಳನ್ನು ಮನೆಯ ಒಳಕ್ಕೆ ಕಳಿಸಿದ್ದಾರೆ. ಶನಿವಾರದ ಎಪಿಸೋಡ್​ಗೆ ನಿರ್ದೇಶಕ ಯೋಗರಾಜ್ ಭಟ್ ಅವರು ಬಂದಿದ್ದರು. ಮನೆಯ ಸದಸ್ಯರ ಕೈಲಿ ಕೆಲವು ತಮಾಷೆಯ ಟಾಸ್ಕ್​ಗಳನ್ನು ಮಾಡಿದ್ದರು. ಕೆಲವರಿಗೆ ಬುದ್ಧಿವಾದ ಹೇಳಿದ್ದರು. ಇದೀಗ ಭಾನುವಾರದ ಎಪಿಸೋಡ್​ಗೆ ಸೃಜನ್ ಬಂದಿದ್ದಾರೆ.

ಈ ಹಿಂದೆ ಸೃಜನ್ ಸ್ಪರ್ಧಿಯಾಗಿ ಬಿಗ್‌ಬಾಸ್‌ಗೆ ಬಂದಿದ್ದರು, ಆದರೆ ಈಗ ಅತಿಥಿಯಾಗಿ ಬಂದಿದ್ದಾರೆ. ಖಾಲಿ ಕೈಯಲ್ಲಿ ಬಾರದೆ ತಮ್ಮೊಡನೆ ದುಬಾರಿ ಟಾಟಾ ಕರ್ವ್ ಕಾರುಗಳನ್ನು ತಂದಿದ್ದರು. ಮನೆಗೆ ಬಂದಿದ್ದ ಕಾಲಿ ಕಾರುಗಳು ಎಲಿಮಿನೇಟ್ ಆಗಲಿರುವ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿವೆ. ಆದರೆ ಆ ವ್ಯಕ್ತಿ ಯಾರು ಎಂದು ಇವತ್ತಿನ ಎಪಿಸೋಡ್‌ನಲ್ಲಿ ಕಾದು ನೋಡಬೇಕಷ್ಟೇ.

ಮುಖ್ಯವಾಗಿ ಬಿಗ್‌ಬಾಸ್ ಮನೆಗೆ ಬಂದ ಸೃಜನ್ ಮೊದಲಿಗೆ ಟಾಸ್ಕ್ ನೀಡಿ ಕೆಲವು ತಾಷೆ ಆಟಗಳನ್ನೂ ಆಡಿದ್ದಾರೆ. ಬಳಿಕ ಮನೆಯಿಂದ ಯಾರು ಹೊರಹೋಗಬೇಕು ಹಾಗೂ ಯಾಕೆ ? ಎಂಬ ಸೂಕ್ತ ಕಾರಣ ಸ್ಪರ್ಧಿಗಳಿಗೆ ನೀಡಿದ್ದಾರೆ. ಐಶ್ವರ್ಯ ಸೇರಿದಂತೆ ಇನ್ನೂ ಹಲವರು ವಿಕ್ರಮ ಹೆಸರು ಹೇಳಿದ್ದಾರೆ. ಒಬ್ಬೊಬ್ಬರ ಹೆಸರು ಕೆಳಿ ಬಂದಿದ್ದು, ಕೊನೆಗೆ ಮತಗಲ ಆಧಾರದಲ್ಲಿ ಒಬ್ಬ ಸ್ಪರ್ಧಿಯನ್ನು ಇಂದು ಬಿಗ್‌ಬಾಸ್ ಮನೆಯಿಂದ ಹೊರ ಹಾಕಲಿದೆ.

BIG BOSS

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

Published

on

BBk12 :  ಕನ್ನಡ ಬಿಗ್ ಬಾಸ್ ಸೀಸನ್ 12 ಕೊನೆಯ ಹಂತದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಹೊರ ಬೀಳಲಿದೆ. ಬಿಗ್ ಬಾಸ್ ಫಿನಾಲೆ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸತತ 12 ಸೀಸನ್‌ಗಳನ್ನು ಕಿಚ್ಚ ಸುದೀಪ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಸೀಸನ್ 12 ಮುಕ್ತಾಯಗೊಳ್ಳುವ ಹಂತದಲ್ಲಿರುವಾಗ ಕಿಚ್ಚ ಸುದೀಪ್ ಸೋಸಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡು ಸ್ಪರ್ಧಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ಕಿಚ್ಚ ಪೋಸ್ಟ್ ಏನು?

ಕಿಚ್ಚ ತನ್ನಫೋಟೋವೊಂದನ್ನು ಹಂಚಿಕೊಂಡಿದ್ದಾರೆ.  ಇಂದು ಸೂರ್ಯ ಮುಳುಗುವ ವೇಳೆಗೆ ಬಿಗ್‌ಬಾಸ್ ಸೀಸನ್ – 12 ಮುಕ್ತಾಯಗೊಳ್ಳಲಿದೆ. ಈ ಸೀಸನ್‌ನ ಬೆಳವಣಿಗೆ ಮತ್ತು ಅದ್ಭುತ ಪ್ರಯಾಣ ಮುಂದಿನ ಪೀಳಿಗೆಗೆ ಸಾಕ್ಷಿಯಾಗಿದೆ. ಅಚಲ ಬೆಂಬಲಕ್ಕಾಗಿ ಪ್ರತಿಯೊಬ್ಬ ವೀಕ್ಷಕರಿಗೂ ನನ್ನ ಹೃತ್ತೂರ್ವಕ ಕೃತಜ್ಞತೆಗಳು.

ಇದನ್ನೂ ಓದಿ :  ಹನುಮಂತ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಇವರೇ ಅಂತೆ!

ಎಲ್ಲಾ ಸ್ಪರ್ಧಿಗಳಿಗೆ ಮತ್ತು ಸೀಸನ್‌ನ ವಿಜೇತರಿಗೆ ಹೃತ್ತೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಇಡೀ ಬಿಗ್‌ಬಾಸ್ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಗ್‌ಬಾಸ್ ಕಾರ್ಯಕ್ರಮವಿಲ್ಲ. ಹೊಸ ಸೀಸನ್ – 13 ಪ್ರಾರಂಭವಾಗುವವರೆಗೆ ಬಿಗ್‌ ಬಾಸ್ ವಿಶ್ರಾಂತಿ ಪಡೆಯಲು ಗೌರವಯುತವಾಗಿ ಮುಖ್ಯದ್ವಾರವನ್ನು ಮುಚ್ಚುತ್ತೇವೆ ಎಂದು ಬರೆದುಕೊಂಡಿದ್ದಾರೆ.

Continue Reading

BIG BOSS

ಹನುಮಂತ ಪ್ರಕಾರ ಬಿಗ್ ಬಾಸ್ ಗೆಲ್ಲೋದು ಇವರೇ ಅಂತೆ!

Published

on

BBK12 : ಬಿಗ್ ಬಾಸ್ ಸೀಸನ್ 12 ಕೊನೆಯ ಹಂತಕ್ಕೆ ಬಂದು ನಿಂತಿದೆ. ಸದ್ಯ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಅನ್ನೋ ಕುತೂಹಲ ಬಿಗ್ ಬಾಸ್ ವೀಕ್ಷಕರದ್ದು.  ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಈಗಾಗಲೇ ಬಹುತೇಕ ಮಂದಿ ವೋಟ್ ಮಾಡಿದ್ದು, ಫಿನಾಲೆಯತ್ತ ದೃಷ್ಟಿ ನೆಟ್ಟಿದ್ದಾರೆ.

ಬಿಗ್ ಬಾಸ್‌ 11ರಲ್ಲಿ ವೈಲ್ಡ್ ಕಾರ್ಡ್ ಪಡೆದಿದ್ದವರು ಗಾಯಕ ಹನುಮಂತ ಲಮಾಣಿ. ಆ ಸೀಸನ್‌ನ ವಿಜೇತರಾಗಿ ಹೊರಬಂದು ಇತಿಹಾಸ ಸೃಷ್ಟಿಸಿದ್ದರು. ವೈಲ್ಡ್ ಕಾರ್ಡ್ ಮೂಲಕ ಒಳಗೆ ಹೋದವರು ಗೆದ್ದು ತೋರಿಸಬಹುದೆಂದು ತೋರಿಸಿಕೊಟ್ಟಿದ್ದರು ಹನುಮಂತ. ಇದೀಗ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಅನ್ನೋ ಭವಿಷ್ಯ ನುಡಿದಿದ್ದಾರೆ.

ಯಾರು ವಿನ್ನರ್ ?

ಗಿಲ್ಲಿ ಅಣ್ಣ ನನ್ನ ಫೇವರಿಟ್, ಅವರೇ ವಿನ್ನರ್ ಆಗ್ತಾರೆ ಎಂದು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಹೇಳಿದ್ದಾರೆ.

ಈ ಬಾರಿಗೆ ಗಿಲ್ಲಿ ಚೆನ್ನಾಗಿ ಆಟವಾಡಿದ್ದಾರೆ. ಅವರು ಗೆಲ್ಲುವ ವಿಶ್ವಾಸ ನನಗೆ ಇದೆ. ಬಿಗ್ ಬಾಸ್ ಮನೆಯಲ್ಲಿ ಯಾವುದೇ ಭೇದ ಭಾವ ಮಾಡುವುದಿಲ್ಲ. ಈ ಬಾರಿ ಅತಿ ಹೆಚ್ಚು ವೋಟಿಂಗ್ ಆಗಿದೆ. ಅತಿ ಹೆಚ್ಚು ವೋಟು ಗಿಲ್ಲಿನಟ ತೆಗೆದುಕೊಂಡಿದ್ದಾರೆ. ನಾನು ಸಹ ಗಿಲ್ಲಿ ನಟನಿಗೆ ವೋಟ್ ಮಾಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

ನನ್ನ ಫೇವರಿಟ್ ಗಿಲ್ಲಿ ಅಣ್ಣ. ಎಲ್ಲರಿಗೂ ಆಲ್ ದಿ ಬೆಸ್ಟ್. ಸೋತೋರು ಬೇಜಾರ್ ಮಾಡ್ಕೋಬೇಡಿ. ಎಲ್ಲರಿಗೂ ಆಲ್ ದಿ ಬೆಸ್ಟ್, ಗಿಲ್ಲಿ ಅಣ್ಣನಿಗೆ ವಿಶೇಷ ಆಲ್ ದಿ ಬೆಸ್ಟ್. ಸುದೀಪ್ ಸರ್ ಮುಂದೆ ನಿಲ್ಲೋದೆ ಪುಣ್ಯ. ಫೈನಲ್ ವರೆಗೂ ಹೋಗೋದೆ ಪುಣ್ಯ  ಎಂದಿದ್ದಾರೆ.

Continue Reading

BIG BOSS

BBK12: ಗಿಲ್ಲಿ ವಿನ್ನರ್ ಆದ್ರೂ ನಿಲ್ಲದ ಕಿಚ್ಚು: ರಕ್ಷಿತಾ ಪರ ಸೋಷಿಯಲ್ ಮೀಡಿಯಾ ವಾರ್; ಯಾಕೆ ಗೊತ್ತಾ?

Published

on

BBK12: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಫಿನಾಲೆ ಇಂದು ನಡೆಯಲಿದ್ದು, ಆರು ಸ್ಫರ್ಧಿಗಳು ಫಿನಾಲೆ ತಲುಪಿದ್ದಾರೆ. ಅವರ ಪೈಕಿ ಗಿಲ್ಲಿ ನಟನೇ ಈ ಸೀಸನ್‌ನ ವಿನ್ನರ್‌ ಎಂದು ಇಡೀ ಕರ್ನಾಟಕ ಸುದ್ದಿ ಮಾಡುತ್ತಿದೆ. ಇನ್ನು ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಗಿಲ್ಲಿ ಬದಲು ರಕ್ಷಿತಾ ಶೆಟ್ಟಿ ಗೆಲ್ಲಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ.


ರಕ್ಷಿತಾ ಶೆಟ್ಟಿ ಕೇವಲ ಯೂಟ್ಯೂಬ್‌ ಕಂಟೆಂಟ್‌ ಕ್ರಿಯೇಟರ್‌. ಆದರೆ ಗಿಲ್ಲಿ ನಟ ನಟರಾಗಿದ್ದಾರೆ. ರಕ್ಷಿತಾ ಯೂಟ್ಯೂಬ್‌ ಒಂದರಿಂದಲೇ ಇಷ್ಟು ಫೇಮಸ್‌ ಆಗಿ ಬಿಗ್‌ಬಾಸ್‌ ಶೋಗೆ ಸ್ಥಾನ ಪಡೆದಿದ್ದಾರೆ. ಅದಕ್ಕಾಗಿ ಗಿಲ್ಲಿಗಿಂತಲೂ ರಕ್ಷಿತಾ ಗ್ರೇಟ್‌ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ರಕ್ಷಿತಾಗಿಂತ ಗಿಲ್ಲಿಗೆ ಅಭಿಮಾನಿಗಳು ಜಾಸ್ತಿ ಇದ್ದಾರೆ. ಅದೇ ಕಾರಣಕ್ಕಾಗಿ ಸಾಕಷ್ಟು ವೋಟ್‌ ಗಿಲ್ಲಿಗೆ ಬಂದಿವೆ. ಆದರೆ, ರಕ್ಷಿತಾ ಶೆಟ್ಟಿ ಗೆಲ್ಲಬೇಕು ಎಂಬ ಬಯಕೆ ಇರುವುದು ಈಗ ಜಗತ್ತಿಗೆ ಗೊತ್ತಾಗಿದೆ. ಕೆಲವು ಮಾಹಿತಿ ಪ್ರಕಾರ, ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಸ್ಥಾನ ಸಿಗುವುದು ಡೌಟ್‌ ಎನ್ನಲಾಗಿದೆ. ಗಿಲ್ಲಿ ವಿನ್ನರ್‌, ಅಶ್ವಿನಿ ಗೌಡ ರನ್ನರ್ ಎಂದು ಅನೇಕರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಫ್ಯಾನ್ಸ್ ಅಬ್ಬರ ಕಂಡು ಬೆಚ್ಚಿಬಿದ್ದ ಬಿಗ್ ಬಾಸ್ ಮನೆ ಮಂದಿ; ಸುದೀಪ್ ಕೊಟ್ಟ ಸುಳಿವೇನು?

ಇನ್ನು ಕೆಲವೇ ಸಮಯದಲ್ಲಿ ಬಿಗ್‌ಬಾಸ್‌ ಕನ್ನಡ 12ರ ವಿನ್ನರ್‌, ರನ್ನರ್‌ ಅದೇ ರೀತಿ 3ನೇ ಸ್ಥಾನ ಯಾರ ಪಾಲಾಗಲಿದೆ ಎಂಬುದು ತಿಳಿಯಲಿದೆ. ಕಲರ್ಸ್‌ ಕನ್ನಡದಲ್ಲಿ ಇಂದು ಪ್ರಕಟಿಸಲಾಗುತ್ತಿದ್ದು, ಕಪ್‌ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ

Continue Reading
Advertisement

Trending

Copyright © 2025 Namma Kudla News

You cannot copy content of this page