Connect with us

LATEST NEWS

ಕಾಡಾನೆ ಜೊತೆ ಸೆಲ್ಫಿ ವಿಡಿಯೋ ತೆಗೆಯುವಾಗ ಅಟ್ಟಾಡಿಸಿಕೊಂಡು ಬಂದ ಆನೆ

Published

on

ಕೇರಳ: ಪ್ರವಾಸಿಗರು ತಮಗೆ ಅರಿವಿಲ್ಲದ ಜಾಗದಲ್ಲಿ ಯಾವುದೇ ಸಾಹಸಕ್ಕೆ ಇಳಿಯಬಾರದು ಅನ್ನೋದನ್ನ ಪ್ರವಾಸೋದ್ಯಮ ಇಲಾಖೆಗಳು ಫಲಕ ಅಳವಡಿಸಿ ಎಚ್ಚರಿಕೆ ನೀಡುತ್ತದೆ.

ಇನ್ನು ರಕ್ಷಿತಾರಣ್ಯದಲ್ಲಿ ಸಂಚರಿಸವಾಗ ವಾಹನ ನಿಲ್ಲಿಸಬೇಡಿ, ಪ್ರಾಣಿಗಳಿಗೆ ತೊಂದರೆ ಕೊಡಬೇಡಿ ಎಂಬುದಾಗಿ ಅಲ್ಲಲ್ಲಿ ಸೂಚನಾ ಫಲಕ ಕಂಡೇ ಇರ್ತೀರಾ. ಆದರೆ ಇಂತಹ ಎಚ್ಚರಿಕೆಯ ಮಾತನ್ನು ಮೀರಿ ಸಾಕಷ್ಟು ಜನರು ಒಂದಲ್ಲ ಒಂದು ಸಾಹಸ ಮಾಡಲು ಹೋಗಿ ಜೀವ ಕಳೆದುಕೊಂಡ ಸಾಕಷ್ಟು ನಿದರ್ಶನ ನಮ್ಮ ಕಣ್ಣ ಮುಂದೆ ಇದೆ. ಇತ್ತೀಚೆಗೆ ರೀಲ್ಸ್ ಮಾಡಲು ಹೋಗಿ ಬೇಕಾದಷ್ಟು ಅನಾಹುತಗಳನ್ನ ಮೈಮೇಲೆ ಎಳೆದುಕೊಂಡಿದ್ದೂ ನೋಡ್ತಾ ಇದ್ದೇವೆ. ಇದೀಗ ಅಂತಹದೇ ಒಂದು ಘಟನೆ ಕೇರಳದ ಮುತ್ತುಂಗ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದು, ಮೈಸೂರಿನ ಪತ್ರಕರ್ತರೊಬ್ಬರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ  ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೈಲ್ಡ್‌ ಲೈಫ್ ಫೋಟೋಗ್ರಾಫರ್ ಕೂಡಾ ಆಗಿರುವ ಮೈಸೂರಿನ ಎಂ.ಟಿ ಯೋಗೀಶ್ ಕುಮಾರ್  ಮುತ್ತುಂಗ ಅರಣ್ಯದಲ್ಲಿ ಕಾಡಾನೆ ಮುಂದೆ ಶೋ ತೋರಿಸಲು ಹೋಗಿ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ  ಟ್ಯಾಗ್ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ಆನೆಯೊಂದು ನಿಂತಿದ್ದು ಅದರ ಮುಂದೆ ಸೆಲ್ಫಿ ವಿಡಿಯೋ ತೆಗೆಯಲು ಕಾರಿನಿಂದ ಇಳಿದಿದ್ದಾರೆ. ಈ ವೇಳೆ ಆನೆ ಇಬ್ಬರನ್ನೂ ಅಟ್ಟಾಡಿಸಿಕೊಂಡು ಬಂದಿದೆಯಾದರೂ  ಕಾರು ಚಾಲಕ ಕಾರಿನ ವೇಗ ಕುಗ್ಗಿಸಿ ಇಬ್ಬರಿಗೂ ಆನೆಯಿಂದ ರಕ್ಷಣೆ ನೀಡುವ ಕೆಲಸ ಮಾಡಿದ್ದಾನೆ. ಆದ್ರೆ ಈ ವೇಳೆ ಓಡಿಸಿಕೊಂಡು ಬರುತ್ತಿದ್ದ ಆನೆಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದವರಲ್ಲಿ ಒಬ್ಬಾತ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆತನ ಮೇಲೆ ಮೊದಲು ಸೊಂಡಿಲಿನಿಂದ  ದಾಳಿ ಮಾಡಿದ ಆನೆ ಬಳಿಕ ಕಾಲಿನಿಂದ ತುಳಿಯುವ ಪ್ರಯತ್ನ ಮಾಡಿದೆ. ಈ ವೇಳೆ ಹೇಗೋ ಬಚಾವ್ ಆಗಿ ಮರದ ಎಡೆಗೆ ಹೊರಳಿ ಹೋದ ಆತ ಆನೆಯಿಂದ ತನ್ನ ಜೀವ ಉಳಿಸಿಕೊಂಡಿದ್ದಾನೆ. ಈ ವೇಳೆ ಲಾರಿಯೊಂದು ಬಂದಿದ್ದು ನೋಡಿ ಆನೆ ಅತ್ತ ತಿರುಗುವ ದೃಶ್ಯ ಈ ವಿಡಿಯೋದಲ್ಲಿ ದಾಖಲಾಗಿದೆ. ಮೈ ಜುಂ ಎನಿಸುವ ಈ ವಿಡಿಯೋ ಈಗ  ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತಿದ್ದು ಸದ್ಯ ಎಲ್ಲರಿಗೂ ಪ್ರವಾಸಿ ತಾಣದಲ್ಲಿ ಸ್ವಲ್ಪ ಯಾಮಾರಿದ್ರೂ ಏನಾಗೊತ್ತೆ ಎಂಬ ಪಾಠ ನೀಡುತ್ತಿದೆ. ,

LATEST NEWS

ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಹೊಸ ಟೋಲ್ ರೇಟ್ ..! ಎಷ್ಟು ಹೆಚ್ಚಾಗಲಿದೆ ಗೊತ್ತಾ ?

Published

on

ಮಂಗಳೂರು/ನವದೆಹಲಿ : ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ  ಸರ್ಕಾರ ಮತ್ತೊಂದು ಶಾ*ಕ್ ಕೊಟ್ಟಿದೆ. ಟೋಲ್ ದರದಲ್ಲಿ ಏರಿಕೆ ಮಾಡುವ ಬಗ್ಗೆ ಪರಿಷ್ಕರಣೆ ನಡೆಸಲಾಗಿದೆ. ಏಪ್ರಿಲ್ 1 ರಿಂದ ಈ ಹೊಸ ದರ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.

ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆ ಇದಾಗಿದ್ದು, ಕನಿಷ್ಠ ಶೇ.3 ರಿಂದ ಗರಿಷ್ಠ 5 ರಷ್ಟು ಏರಿಕೆಯಾಗಲಿವೆ.

ಎಲ್ಲೆಲ್ಲಿ ಹೆಚ್ಚಳ ?

ಕರ್ನಾಟಕದಲ್ಲಿ ಒಟ್ಟು 66 ಟೋಲ್ ಪ್ಲಾಜಾಗಳಿವೆ. ಬೆಂಗಳೂರು – ಮೈಸೂರು ಮಾರ್ಗದ ಕನಮಿಣಿಕೆ ಮತ್ತು ಶೇಷಗಿರಿಹಳ್ಳಿ, ಬೆಂಗಳೂರು – ತಿರುಪತಿ ಮಾರ್ಗದ ನಂಗ್ಲಿ, ಬೆಂಗಳೂರು-ಹೈದರಾಬಾದ್ ಮಾರ್ಗದ ಬಾಗೇಪಲ್ಲಿ, ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ, ಮತ್ತು ಹುಲಿಕುಂಟೆ ಹಾಗೂ ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರೋಡ್) ಟೋಲ್ ಪ್ಲಾಜಾಗಳಲ್ಲಿ ದರಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ : ಅಮೆರಿಕದ ಮಿಲಿಟರಿಯಲ್ಲೇ ಭಾರಿ ದೊಡ್ಡ ಭದ್ರತಾ ಲೋಪ!

ದೇಶದಾದ್ಯಂತ ಒಟ್ಟು 323 ರಾಜ್ಯ ಹೆದ್ದಾರಿ ಟೋಲ್ ಫ್ಲಾಜಾ ಸೇರಿದಂತೆ, ದೇಶದಲ್ಲಿ ಒಟ್ಟು 1,181 ಟೋಲ್ ಗಳಿವೆ. 2023-24 ರಲ್ಲಿ 42,196 ಕೋಟಿ ರೂ, 2024-25 ರಲ್ಲಿ 64,809 ಕೋಟಿ ರೂ. ಟೋಲ್‌ ಸಂಗ್ರಹವಾಗಿದೆ. 2019-20 ರಲ್ಲಿ ಟೋಲ್ ಶುಲ್ಕ ಸಂಗ್ರಹವು 27,503 ಕೋಟಿ ರೂ.ಗಳಷ್ಟಿತ್ತು. ಈ ವರ್ಷ 1 ಲಕ್ಷ ಕೋಟಿಗೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ.  ಕರ್ನಾಟಕದಲ್ಲಿ 66 ಟೋಲ್ ಫ್ಲಾಜಾಗಳಿದ್ದು, ಕಳೆದ 5 ವರ್ಷಗಳಲ್ಲಿ ಈ ಟೋಲ್‌ಗಳಿಂದ 13,702 ಕೋಟಿ ಸಂಗ್ರಹವಾಗಿದೆ.

 

Continue Reading

BANTWAL

ಎರಡನೇ ವರ್ಷದ ಮೂಳೂರು-ಅಡ್ಡೂರು ಕಂಬಳದ ಆಹ್ವಾನ ಪತ್ರಿಕೆ ಬಿಡುಗಡೆ

Published

on

ಮಂಗಳೂರು: ಎರಡನೇ ವರ್ಷದ ಮೂಳೂರು-ಅಡ್ಡೂರು ಜೋಡು ಕರೆ ಕಂಬಳ ಎಪ್ರಿಲ್ 12 ರ ಶನಿವಾರ ನಡೆಯಲಿದೆ.


ಸಮಾಜ ಸೇವಕ ಹಾಗೂ ರಾಜಕೀಯ ನಾಯಕ ಇನಾಯತ್ ಅಲಿಯವರ ನೇತೃತ್ವದಲ್ಲಿ ಈ ಕಂಬಳ ಆಯೋಜನೆಯಾಗಿದೆ. ವಿಜೃಂಭಣೆಯಿಂದ ನಡೆಯುವ ಮೂಳುರು-ಅಡ್ಡೂರು ಜೋಡುಕರೆ ಕಂಬಳದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ.

ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮಕ್ಷಮದಲ್ಲಿ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ. ಎರಡನೇ ವರ್ಷದ ಕಂಬಳವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾಡಲಿದ್ದಾರೆ.

ಇದನ್ನೂ ಓದಿ: ಈ ದಿನದಂದು ನಿಮ್ಮ ಖಾತೆಗೆ ಸೇರಲಿದೆ 2 ತಿಂಗಳ ಗೃಹಲಕ್ಷ್ಮೀ ಹಣ 

ಸರ್ವ ಧರ್ಮಗಳ ಪ್ರಮುಖರ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸ್ಪೀಕರ್ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್ ಅವರು ಭಾಗವಹಿಸಲಿದ್ದಾರೆ. ಹಲವಾರು ಚಲನ ಚಿತ್ರ ನಟ ನಟಿಯರು ಕೂಡಾ ಸಂಜೆಯ ಸಭಾ ಕಾರ್ಯಕ್ರಮಕ್ಕೆ ಆಗಮಿಸಲಿರುವುದಾಗಿ ಕಂಬಳ ಸಮಿತಿಯ ಅಧ್ಯಕ್ಷ ಇನಾಯತ್ ಅಲಿ ಮಾಹಿತಿ ನೀಡಿದ್ದಾರೆ.

Continue Reading

LATEST NEWS

ಆಟವಾಡುತ್ತಿದ್ದಾಗ ಟ್ರ್ಯಾಕ್ಟರ್‌ ಹರಿದು 5 ವರ್ಷದ ಮಗು ಸಾವು

Published

on

ತುಮಕೂರು: ಮನೆ ಮುಂದೆ ಆಟವಾಡುತ್ತಿದ್ದ‌ 5 ವರ್ಷದ ಬಾಲಕನ ಮೇಲೆ ಮಣ್ಣು ತುಂಬಿದ ಟ್ರ್ಯಾಕ್ಟರ್‌ ಹರಿದು 5 ವರ್ಷದ ಮಗು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವರುಣ್ (5) ಸಾವನ್ನಪ್ಪಿದ ಮಗು ಎಂದು ಗುರುತಿಸಲಾಗಿದೆ.

ಮನೆಯ ಎದುರುಗಡೆ ಮಗು ಆಟವಾಡುತ್ತಿತ್ತು. ಆಗ ಮಣ್ಣು ತುಂಬಿದ ಟ್ರ್ಯಾಕ್ಟರ್ ಒಂದು ವೇಗವಾಗಿ ಬಂದು ಮಗುವಿನ ಮೇಲೆ ಹರಿದು ಹೋಗಿದೆ. ಪರಿಣಾಮ ಮಗು ಸಾವನ್ನಪ್ಪಿದೆ. ವೈಎನ್ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page