Connect with us

DAKSHINA KANNADA

ದುಡಿದದ್ದು ತನಗೆ : ಬಚ್ಚಿಟ್ಟದ್ದು ಪೊಲೀಸರಿಗೆ -ನೆಲ ಅಗೆಯುವಾಗ ಜೆಸಿಬಿ ಡ್ರೈವರಿಗೆ ಸಿಕ್ತು ದುಡ್ಡಿನ ಗಂಟು..!- ಕಳ್ಳ ಹಮೀದ್ ಅರೆಸ್ಟ್..!

Published

on

ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದ ಹೊರಜಿಲ್ಲೆಗಳಲ್ಲಿ ಸುಮಾರು 35ಕ್ಕೂ ಅಧಿಕ ಕಳ್ಳತನ‌ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಮಂಗಳೂರು ನಗರದ ಜ್ಯೋತಿ ಸರ್ಕಲ್ ಬಳಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಬೆಳ್ತಂಗಡಿ ತಾಲೂಕು ಪಡಂಗಡಿ-ಮದ್ದಡ್ಕ ನಿವಾಸಿ 48 ವರ್ಷದ ಕುಂಞಿಮೋನು ಯಾನೆ ಜಾಫರ್‌ ಯಾನೆ ಹಮೀದ್ ಎಂಬಾತನ ಬಂಧನ ಮಾಡಲಾಗಿದೆ.

ಕದ್ದ ಹಣದೊಂದಿಗೆ ಹಮೀದ್

2022 ನವೆಂಬರ್ 16ರ ತಡರಾತ್ರಿ ನಗರದ ಕೆಎಸ್ ರಾವ್ ರಸ್ತೆಯ ನಲಪಾಡ್ ಅಪ್ಸರಾ ಛೇಂಬರ್ಸ್ ಕಟ್ಟಡದ ನೆಲಮಹಡಿಯಲ್ಲಿನ ಹೂವು ವ್ಯಾಪಾರದ ಹೋಲ್ ಸೇಲ್ ಅಂಗಡಿಯಲ್ಲಿ ಸುಮಾರು 9 ಲಕ್ಷ ರೂ ಕಳವಾಗಿತ್ತು.

ಇದರ ಜೊತೆ ಸಿಸಿ ಕ್ಯಾಮರಾದ ಡಿವಿಆರ್ ಕೂಡಾ ಕಳವು ಮಾಡಲಾಗಿತ್ತು.ಇನ್ನು ಹೂವಿನ ಅಂಗಡಿಯಲ್ಲಿ 9 ಲಕ್ಷ ರೂ ಹಣವನ್ನು ಕಳವು ಮಾಡಿದ್ದ ಆರೋಪಿ ಹಮೀದ್, ಆ ಹಣವನ್ನು ನಗರದಲ್ಲಿ ಒಂದೆಡೆ ಹೂತಿಟ್ಟು ಬಳಿಕ ಪರಾರಿಯಾಗಿದ್ದ.

ಆದರೆ ಆತ ಹಣವನ್ನು ಹೂತಿಟ್ಟಿದ್ದ ಜಾಗದಲ್ಲಿ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿತ್ತು.

ಈ ವೇಳೆ ಜೆಸಿಬಿಯಿಂದ ನೆಲ ಅಗೆಯುವಾಗ ಜೆಸಿಬಿ ಚಾಲಕನಿಗೆ ದುಡ್ಡಿನ ಗಂಟು ಸಿಕ್ಕಿತ್ತು.

ಇದೀಗ ಹಮೀದ್ ಬಂಧನದ ಬಳಿಕ ಆತ ಹಣವನ್ನು ಹೂತಿಟ್ಟ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಬಳಿಕ ಪೊಲೀಸರು ತಪಾಸಣೆ ನಡೆಸಿದ್ದು 5.80 ಲಕ್ಷ ರೂ ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿದ ಮಂಗಳೂರು ಉತ್ತರ ಠಾಣೆ ಪೊಲೀಸರು ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಜ್ಯೋತಿ ಸರ್ಕಲ್ ಬಳಿ ಆರೋಪಿ ಹಮೀದ್ ನನ್ನು ರಾಡ್ ನೊಂದಿಗೆ ಬಂಧಿಸಿದ್ದಾರೆ.

DAKSHINA KANNADA

ಕಲ್ಲರ್ಪೆಯಲ್ಲಿ ಮತ್ತೊಂದು ಅಪಘಾತ; ಕಾರು ಬೈಕ್ ಮುಖಾಮುಖಿ ಡಿಕ್ಕಿ, ಬೈಕ್‌ ಸವಾರ ಗಂಭೀರ

Published

on

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಕಾರು ಬೈಕ್ ಮುಖಾಮುಖಿ ಡಿಕ್ಕಿಯೂ ಆ ಭಾಗದಲ್ಲಿನ ರಸ್ತೆ ಸುರಕ್ಷ ತಾ ಕ್ರಮಗಳ ವೈಫಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಈ ದುರ್ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರನ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿಯೂ ಇದೇ ಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾಗಿತ್ತು. ಅದೃಷ್ಟವಶಾತ್‌ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಪ್ರಯಾಣಿಸುವವರೇ ಎಚ್ಚರ; ಗದ್ದೆಗೆ ಬಿತ್ತು ಟಿಟಿ

ಇದೀಗ ಮತ್ತೊಂದು ಘಟನೆ ನಡೆದಿದ್ದು, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಲ್ಲರ್ಪೆ ವಲಯವು ಅಪಘಾತಗಳ ಕೇಂದ್ರಬಿಂದುವಾಗಿ ಪರಿವರ್ತನೆಯಾಗುತ್ತಿರುವುದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.

Continue Reading

DAKSHINA KANNADA

ಆಕಾಂಕ್ಷ ನಿಗೂಢ ಸಾವು ಪ್ರಕರಣ; ಸಮಗ್ರ ತನಿಖೆ ನಡೆಸುವಂತೆ ಶಾಸಕ ಹರೀಶ್‌ ಪೂಂಜಾ ಒತ್ತಾಯ

Published

on

ಬೆಳ್ತಂಗಡಿ: ಪಂಜಾಬ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬೆಳ್ತಂಗಡಿಯ ವಿದ್ಯಾಥಿಧನಿ ಆಕಾಂಕ್ಷ ಮೃತದೇಹ ಇಂದು ಬೆಳಗ್ಗೆ ಆಕೆಯ ಬೊಳಿಯಾರ್ ಮನೆಗೆ ತಲುಪಿದೆ. ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.

 

ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜಾ, ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸ ಬೇಕು. ಆಕಾಂಕ್ಷಳ ಸಾವಿಗೆ ನ್ಯಾಯ ಸಿಗ ಬೇಕು. ಕರ್ನಾಟಕದ ಗೃಹ ಸಚಿವರಿಗೆ ಆಗ್ರಹ ಮಾಡ್ತೇನೆ ಎಂದರು. ಪ್ರಕರಣದ ಸಮಗ್ರ ತನಿಖೆ ನಡೆಸಿ ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವುದನ್ನು ಪತ್ತೆ ಮಾಡುವಂತೆ ಕರ್ನಾಟಕ ಸರಕಾರವು ಪಂಜಾಬ್ ಸರಕಾರವನ್ನು ಆಗ್ರಹಿಸ ಬೇಕೆಂದು ಒತ್ತಾಯಿಸಿದರು.

 

Continue Reading

DAKSHINA KANNADA

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ರಿಕ್ಷಾ

Published

on

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾದ ಘಟನೆ ಪುತ್ತೂರಿನಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ರಿಕ್ಷಾ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ನಿನ್ನೆ ರಾತ್ರಿ ರಾತ್ರಿ 10.30ರ ವೇಳೆಗೆ ಪರ್ಪುಂಜ ಭಾಗದಿಂದ ಆಗಮಿಸಿದ ರಿಕ್ಷಾ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಪಲ್ಟಿಯಾದ ರಿಕ್ಷಾ, ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಉರುಳಿ ಬಿದ್ದಿದೆ.

ಇದನ್ನೂ ಓದಿ: ಕಂಡೆಕ್ಟರ್ ಜೊತೆಗೂಡಿ ಹೈವೇಯಲ್ಲಿ ನಿಂತ ಸಾರಿಗೆ ಬಸ್ಸನ್ನು ತಳ್ಳಿದ ಮಹಿಳೆಯರು

ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಶಿಸಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಂಬ ಸ್ವಲ್ಪವಾಲಿದೆ. ಅದೃಷ್ಟವಶಾತ್‌ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page