Connect with us

DAKSHINA KANNADA

ಬೈಕ್ ಸ್ಕಿಡ್ ಆಗಿ ಬಿದ್ದಾಗ ಬಯಲಾಯ್ತು ಬೈಕ್ ಸವಾರನ ಅಸಲಿಯತ್ತು:ಅದೇನೆಂದು ನೀವೇ ನೋಡಿ..! 

Published

on

ಸುಳ್ಯ:ಬೈಕೊಂದು ಸ್ಕಿಡ್ ಆಗಿ ಬಿದ್ದ ಸಮಯದಲ್ಲಿ ರಕ್ಷಣೆಗೆ ಬಂದ ಸ್ಥಳೀಯರು ಪರಿಶೀಲನೆ ನಡೆಸಿದ ಸಮಯದಲ್ಲಿ ಸವಾರ ಕೊಂಡೊಯ್ಯುತ್ತಿದ್ದ ಮದ್ಯದ ಪ್ಯಾಕೆಟ್ ಗಳು ರಾಶಿಯಾಗಿ ಸಿಕ್ಕಿಬಿದ್ದ ಘಟನೆ ಕೊಲ್ಲಮೊಗ್ರದಿಂದ ವರದಿಯಾಗಿದೆ. ಸುಳ್ಯ ತಾಲೂಕಿನ ಹರಿಹರ- ಕೊಲ್ಲಮೊಗ್ರದ ನಿಲ್ಕೂರು ಬಳಿ ನಿನ್ನೆ ಬೆಳಿಗ್ಗೆ ಬೈಕೊಂದು ಪಲ್ಟಿಯಾಗಿ ಸವಾರ ಬಿದ್ದು ಗಾಯಗೊಂಡಿದ್ದರು. ಈ ಸಮಯದಲ್ಲಿ  ಬೈಕಲ್ಲಿ ಅಕ್ರಮವಾಗಿ ಮದ್ಯದ ಪ್ಯಾಕೆಟ್ ಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಬೈಕಿನ ಬಾಕ್ಸ್ ನಲ್ಲಿ ಮತ್ತು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಮದ್ಯದ ಹಲವಾರು ಪ್ಯಾಕೆಟ್ ಗಳು ಇದ್ದುದು ಕಂಡುಬಂದಿದೆ. ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸುಳ್ಯ ಅಬಕಾರಿ ಪೋಲೀಸರು ಬೈಕ್  ಮತ್ತು ಅಕ್ರಮ ಮದ್ಯವನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.ಆರೋಪಿ ಲೋಕನಾಥ್ ರೈ ಎಂಬವ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಈ ಹಿಂದೆಯೂ ಈ ವ್ಯಕ್ತಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಮಪಂಚಾಯತ್ ಗೆ ಸಾರ್ವಜನಿಕರು ದೂರು ನೀಡಿದ್ದರು ಎನ್ನಲಾಗಿದೆ.

ದಾಳಿಯಲ್ಲಿ ಸುಳ್ಯ ಅಬಕಾರಿ ನಿರೀಕ್ಷಕ ಸಿದ್ದಪ್ಪ ಮೇಠಿ, ಸಿಬ್ಬಂದಿಗಳಾದ ಅಮರೇಶ್,ಅಶೋಕ,ಪ್ರಮೋದ್,ಮಲ್ಲನಗೌಡ ಸೂಳಿಭಾವಿ ಎಂಬವರು ಭಾಗವಹಿಸಿದ್ದರು.

DAKSHINA KANNADA

ಮೂಡುಬಿದಿರೆ : ಪಾಕತಜ್ಞರ ಮನೆಯಲ್ಲಿ ಕಳ್ಳತನ; ಪ್ರಕರಣ ದಾಖಲು

Published

on

ಮೂಡುಬಿದಿರೆ: ಪಾಕತಜ್ಞರ ಮನೆಗೆ ಹಗಲಲ್ಲೇ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ ಮೂರೂವರೆ ಲಕ್ಷ ರೂ. ನಗದು ಹಾಗೂ 20 ಪವನ್ ಚಿನ್ನಾಭರಣವನ್ನು ದೋಚಿದ ಘಟನೆ ಮೂಡುಬಿದಿರೆಯ ಅಳಿಯೂರಿನಲ್ಲಿ ನಿನ್ನೆ (ಫೆ.16) ರವಿವಾರ ನಡೆದಿದೆ. 

ಖ್ಯಾತ ಪಾಕತಜ್ಞರಾಗಿರುವ , ಅಳಿಯೂರಿನ ನೇಲಡೆಯ ನಿವಾಸಿ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಘಟನಾ ಸಂದಭ೯ ಮನೆಯಲ್ಲಿ ಅವರ ಮಗಳ ಹೊರತಾಗಿ ಬೇರಾರೂ ಇರಲಿಲ್ಲ. ಪ್ರಶಾಂತ್ ಮತ್ತು ಅವರ ಮಗ ಮುಲ್ಕಿಯಲ್ಲಿ ಅಡುಗೆಗೆ ಹೋಗಿದ್ದು, ಅವರ ಪತ್ನಿ ಶಿರ್ತಾಡಿಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಇದೇ ಸುಸಂದರ್ಭ ಎಂದು ಭಾವಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ. ಕಪಾಟು ತೆರೆಯುವ ಸದ್ದು ಕೇಳಿ ಪಾಕತಜ್ಞರ ಮಗಳು ಬಂದು ನೋಡಿದಾಗ ಬೊಬ್ಬೆ ಹೊಡೆಯದಂತೆ ಬಾಯಿಗೆ ಒತ್ತಿ ಹಿಡಿದಿದ್ದಾರೆ. ಅಲ್ಲದೆ ಆಕೆಗೆ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ನಗದು ಮತ್ತು ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.

ಬೆಳಿಗ್ಗೆ ಹತ್ತೂವರೆ ಗಂಟೆ ವೇಳೆಗೆ ಈ ಘಟನೆ ಸಂಭವಿಸಿದ್ದು, ಮಧ್ಯಾಹ್ನ 12.30 ವೇಳೆಗೆ ನೆರೆಮನೆಯಲ್ಲಿರುವ ಸಂಬಂಧಿಕ ಮಹಿಳೆ ಬಂದ ನಂತರವೇ ಆಕೆ ಎಚ್ಚರಗೊಂಡು ನಡೆದ ಘಟನೆಯನ್ನು ಅವರಲ್ಲಿ ವಿವರಿಸಿದ್ದಾರೆಳೆ. ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ಶ್ರೀಕಾಂತ್, ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವಾನದಳ, ಪ್ರಾಯೋಗಿಕ ವಿಧಿ ವಿಜ್ಞಾನದವರೂ ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ. ಮನೆಯೊಳಗಡೆ ನುಗ್ಗಿರುವವರು ಇಬ್ಬರು ಮುಸುಕುಧಾರಿಗಳು ಎಂದು ತಿಳಿದುಬಂದಿದ್ದು, ಸ್ಥಳೀಯ ಹಾಗೂ ಈ ಮನೆಯನ್ನು ಬಲ್ಲವರೇ ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Continue Reading

DAKSHINA KANNADA

ವಾಮಂಜೂರು ತಿರುವೈಲುಗುತ್ತು “ಸಂಕಪೂಂಜ-ದೇವುಪೂಂಜ” ಜೋಡುಕೆರೆ ಕಂಬಳ ಕೂಟದ ಫಲಿತಾಂಶ ಪ್ರಕಟ

Published

on

ಮಂಗಳೂರು : ವಾಮಂಜೂರು ತಿರುವೈಲುಗುತ್ತು ಸಂಕಪೂಂಜ – ದೇವುಪೂಂಜ ಜೋಡುಕೆರೆ ಕಂಬಳ ಟ್ರಸ್ಟ್‌ನಿಂದ 13ನೇ ವರ್ಷದ ತುಳುನಾಡಿನ ಕಂಬಳ ತಿರುವೈಲೋತ್ಸವಕ್ಕೆ ನಿನ್ನೆ ಮುಂಜಾನೆ (ಶನಿವಾರ) ಚಾಲನೆ ಸಿಕ್ಕಿದ್ದು, ಇಂದು ಮಧ್ಯಾಹ್ನ ಕೊನೆಗೊಂಡಿದೆ.

ಈ ಬಾರಿಯ ಕಂಬಳ ಕೂಟದಲ್ಲಿ 151 ಜೊತೆ ಕೋಣಗಳು ಭಾಗವಹಿಸಿದ್ದವು. ಕೆನೆ ಹಲಗೆ 8 ಜೊತೆ, ಅಡ್ಡ ಹಲಗೆ ಜೊತೆ 6 ಜೊತೆ, ಹಗ್ಗ ಹಿರಿಯ 23 ಜೊತೆ, ನೇಗಿಲು ಹಿರಿಯ 23 ಜೊತೆ, ಹಗ್ಗ ಕಿರಿಯ 26 ಜೊತೆ,  ನೆಗಿಲು ಕಿರಿಯ 65 ಜೊತೆ ಕೋಣಗಳು ಭಾಗವಹಿಸಿದ್ದವು. ಇದೀಗ ತಿರುವೈಲುಗುತ್ತು  “ಸಂಕುಪೂಂಜ – ದೇವುಪೂಂಜ” ಜೋಡುಕರೆ ಕಂಬಳ ಕೂಟದ ಫಲಿತಾoಶ ಪ್ರಕಟವಾಗಿದೆ.

ಕನೆ ಹಲಗೆ:

( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

 

ವಾಮಂಜೂರು ತಿರುವೈಲು ಗುತ್ತು ನವೀನ್ಚಂದ್ರ ಆಳ್ವ

ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

 

ಅಡ್ಡ ಹಲಗೆ:

 

ಪ್ರಥಮ: ನಾರಾವಿ ಯುವರಾಜ್ ಜೈನ್ (11.10)

ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

 

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ (11.98)

ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್

 

ಹಗ್ಗ ಹಿರಿಯ:

 

ಪ್ರಥಮ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ (11.18)

ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

 

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಬಿ” (11.33)

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

 

ಹಗ್ಗ ಕಿರಿಯ:

 

ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ” (11.33)

ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ

 

ದ್ವಿತೀಯ: ಬೆಳುವಾಯಿ ಉಮನೊಟ್ಟು ಶಿವರಾಮ್ ಹೆಗ್ಡೆ (11.75)

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

 

ನೇಗಿಲು ಹಿರಿಯ:

 

ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (11.18)

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

 

ದ್ವಿತೀಯ: ಮೂಡಾರ್ ಕೊಂಡಿಬೆಟ್ಟು ಶರಣ್ ಪೂಜಾರಿ (11.33)

ಓಡಿಸಿದವರು: ಆದಿ ಉಡುಪಿ ಜಿತೇಶ್

 

ನೇಗಿಲು ಕಿರಿಯ:

 

ಪ್ರಥಮ: ಪಡೀಲು ಕಬತ್ತಾರು ಗುತ್ತು ದಿನಕರ್ ಜಯರಾಜ್ ಶೆಟ್ಟಿ “ಎ”  (11.18)

ಓಡಿಸಿದವರು: ಬಾರಾಡಿ ನತೀಶ್

 

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಬಿ” (11.39)

ಓಡಿಸಿದವರು: ಸೂರಾಲ್ ಪ್ರದೀಪ್

 

Continue Reading

DAKSHINA KANNADA

ಮಂಗಳೂರು : ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಪೊಲೀಸ್ ಚೆಕ್ ಪೋಸ್ಟ್

Published

on

ಮಂಗಳೂರು: ನಗರದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಹೊಸ ಪೊಲೀಸ್ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ನೇತೃತ್ವದಲ್ಲಿ ಉದ್ಘಾಟನೆ ಮಾಡಿದ್ದಾರೆ.

ನಿನ್ನೆ (ಫೆ.16) ಇದರ ಉದ್ಘಾಟನೆ ನೆರವೇರಿದ್ದು, ಮಂಗಳೂರು ನಗರ ಪೊಲೀಸರ ಸಹಯೋಗದೊಂದಿಗೆ ಈ ಚೆಕ್‌ಪೋಸ್ಟ್ ಕಾರ್ಯರಂಭಿಸಿದೆ. ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಈ ಚೆಕ್‌ಪೋಸ್ಟ್ ಹೊಂದಿದೆ. 

ಉತ್ತಮ ತರಬೇತಿ ಪಡೆದ ಸಿಬ್ಬಂದಿ ಚೆಕ್ ಪೋಸ್ಟ್‌ನಲ್ಲಿ ದಿನದ 24 ಗಂಟೆಯೂ ಕಾರ್ಯನಿರತರಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page