ಮಂಗಳೂರು/ಮಧ್ಯಪ್ರದೇಶ : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮಾಲೆಗಳನ್ನು ಮಾರಿದ ಹುಡುಗಿ ಮೊನಾಲಿಸಾ ರಾತ್ರೋರಾತ್ರಿ ಸ್ಟಾರ್ ಆದರು. ಅವರ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿದವು. ಅವರ ಕಣ್ಣುಗಳು ಮತ್ತು ಮುಖದ ಸೌಂದರ್ಯವು ಜನರನ್ನು ಆಕರ್ಷಿಸಿತು. ಆದರೆ ಈಗ ಮೊನಾಲಿಸಾ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಅದರಲ್ಲೂ ಸಿನಿಮಾ ಆಫರ್‌ಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ತಿಳಿದುಕೊಂಡು ಬರೋಣ…

ಮೊನಾಲಿಸಾ ಕುಂಭ ಮೇಳ ಶುರುವಾದ ಕೆಲವೇ ದಿನಗಳಲ್ಲಿ ಪ್ರಸಿದ್ದಿಗೆ ಬಂದ ಹುಡುಗಿ. ಮೊನಾಲಿಸಾ ಸುಂದರ ಕಣ್ಣು ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಜನರು ಮರುಳಾಗಿದ್ದಾರೆ. ಆದ್ರೆ ಅವರ ಪ್ರಸಿದ್ಧಿ ಒಂದ್ಕಡೆ ಮಾಲೆ ವ್ಯಾಪಾರಕ್ಕೆ ಅಡ್ಡಿಯಾಯ್ತು. ಇಡೀ ದಿನ ಒಂದಾದ್ಮೇಲೆ ಒಂದು ಕ್ಯಾಮರಾ, ಸೆಲ್ಫಿಗಾಗಿ ಜನ ಹಿಂದೆ ಬಿದ್ದ ಕಾರಣ, 15 ದಿನಗಳಲ್ಲಿ ಮಹಾಕುಂಭ ಮೇಳ ಬಿಟ್ಟು, ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ತಮ್ಮ ಮನೆಗೆ ವಾಪಸ್ ಆದ್ರು ಮೊನಾಲಿಸಾ. ಆದ್ರೆ ಅವರ ಪ್ರಸಿದ್ಧಿ ಸಿನಿಮಾದಲ್ಲಿ ನಟಿಸುವ ಅವಕಾಶ ತಂದುಕೊಟ್ಟಿದೆ. ಅಷ್ಟೇ ಅಲ್ಲ ಈಗ ಮೋನಾಲಿಸ ಏನ್ ಮಾಡಿದ್ರೂ ಸುದ್ದಿಯಾಗ್ತಿದ್ದಾರೆ.
‘ದಿ ಡೈರಿ ಆಫ್ ಮಣಿಪುರ’ ಚಿತ್ರಕ್ಕೆ ಮೊನಾಲಿಸಾ ಸಹಿ
ಸೋಷಿಯಲ್ ಮೀಡಿಯಾದಲ್ಲಿ ಮೊನಾಲಿಸಾ ಜನಪ್ರಿಯತೆ ನೋಡಿ ನಟಿಯಾಗಬಹುದು ಎನ್ನುತ್ತಿದ್ದ ಅವರು ಅಭಿಮಾನಿಗಳು, ಅದು ಈಗ ನಿಜ ಆಗಲಿದೆ. ಮೊನಾಲಿಸಾ ಅವರಿಗೆ ಆಫರ್ ನೀಡಲು ಬಾಲಿವುಡ್ ನಿರ್ದೇಶಕ ಸನೋಜ್ ಅವರ ಮನೆಗೆ ಹೋಗಿದ್ದರು.
ಸನೋಜ್ ಮಿಶ್ರಾ ಅವರೊಂದಿಗೆ ಚಿತ್ರಕ್ಕೆ ಸಹಿ ಮಾಡಿದ ನಂತರ ಮೊನಾಲಿಸಾ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಲ್ಲಿ ತಾನು ನಟನೆ ಕಲಿಯಲಿದ್ದೇನೆ ಎಂದು ಹೇಳಿದ್ದಾರೆ. ಸನೋಜ್ ಹಾಗೂ ಅವರ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದಲ್ಲದೇ ಲಕ್ಷಗಟ್ಟಲ್ಲೇ ಶುಲ್ಕ ಪಡೆದಿರುವ ಸುದ್ದಿಯನ್ನೂ ಅಲ್ಲಗೆಳೆದಿದ್ದಾರೆ. ಆದರೆ, ಈ ಚಿತ್ರಕ್ಕೆ ಎಷ್ಟು ಹಣ ಪಡೆದಿದ್ದಾರೆ ಎಂಬುವುದನ್ನು ಅವರು ಹೇಳಿಲ್ಲ.

ವಿಡಿಯೋ ಆರಂಭದಲ್ಲಿ ಮೊನಾಲಿಸಾ, ‘ನಾನು ಮೊನಾಲಿಸಾ. ನಾನು ರುದ್ರಾಕ್ಷಿ ಮಾಲೆಗಳನ್ನು ಮಾರಲು ಮಹಾ ಕುಂಭಮೇಳಕ್ಕೆ ಹೋಗಿದ್ದೆ. ಮಹಾದೇವನ ಆಶೀರ್ವಾದ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ನಾನು ರಾತ್ರೋರಾತ್ರಿ ಪ್ರಸಿದ್ಧಿ ಪಡೆದಿದ್ದೇನೆ. ನಿಮಗೆಲ್ಲರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಕಾರಣದಿಂದಾಗಿ, ನನಗೆ ದಿ ಡೈರಿ ಆಫ್ ಮಣಿಪುರ ಎಂಬ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಈ ಸಿನಿಮಾ ನಿರ್ದೇಶಕರು ಸನೋಜ್ ಮಿಶ್ರಾ. ಅವರು ನನ್ನ ಮನೆಗೆ ಬಂದಿದ್ದರು. ಸಿನಿಮಾಕ್ಕೆ ಸಹಿ ಪಡೆದು ಹೋಗಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ: ಸಂಸತ್ತಿನಲ್ಲಿ ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಪ್ರದರ್ಶನ
ಹೀರೋಯಿನ್ ಆಗಬೇಕು ಅನ್ನೋ ಆಸೆ ಈಡೇರುತ್ತೆ. ನೀವೆಲ್ಲರೂ ಆಶೀರ್ವದಿಸಬೇಕು. ನನಗೆ ತುಂಬಾ ಸಂತೋಷವಾಯಿತು. ನೀವೆಲ್ಲರೂ ನನ್ನನ್ನು ಆಶೀರ್ವದಿಸಿ. ನಾನು ಈಗ ನಟನೆಯನ್ನು ಕಲಿತು ನಂತರ ಚಲನಚಿತ್ರಗಳಲ್ಲಿ ಕೆಲಸ ಮಾಡಲಿದ್ದೇನೆ ಎಂದಿದ್ದಾರೆ.
ಮೊದಲ ಸಿನಿಮಾಗೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆದ ಮೊನಾಲಿಸಾ ?
ಮೊನಾಲಿಸಾ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಮೊನಾಲಿಸಾ ಹೇಳಿದ್ದಾರೆ. ಸನೋಜ್ ಮಿಶ್ರಾ ಮನೆಗೆ ಬಂದಿದ್ದು ಸತ್ಯ. ಅವರು ಮುಂಬೈನಿಂದ ನಮ್ಮ ಮನೆಗೆ ಬಂದಿದ್ದರು. ಸಿನಿಮಾದಲ್ಲಿ ನಟಿಸಲು ನನ್ನನ್ನು ಕೇಳಿಕೊಂಡ್ರು. ಇದರಿಂದ ನಾನು ಖುಷಿಯಾಗಿದ್ದೇನೆ ಎಂದು ಮೊನಾಲಿಸಾ ಹೇಳಿದ್ದಾರೆ.
ಯುಟ್ಯೂಬ್ ಚಾನಲ್ ಶುರು ಮಾಡಿದ ಕಪ್ಪು ಕಣ್ಣಿನ ಸುಂದರಿ !
ಮೊನಾಲಿಸಾ ಈಗ ಎನೇ ಮಾಡಿದರೂ ಸುದ್ದಿಯಾಗುತ್ತಿದ್ದಾರೆ. ತನ್ನ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಮೊನಾಲಿಸಾ ಯುಟ್ಯೂಬ್‌ನಲ್ಲಿ ವ್ಲಾಗ್ ಶುರು ಮಾಡಿದ್ದಾರೆ. ಅಡುಗೆ ಮಾಡುವ, ಪಾತ್ರೆ ತೊಳೆಯುವ ಮತ್ತು ಹೊರಗಡೆ ಸುತ್ತಾಡುತ್ತಿರುವ ವೀಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ.

ಇದಕ್ಕೆ ಲಕ್ಷಾಂತರ ವ್ಯೂವ್ಸ್ ಬರುತ್ತಿದೆ. ನೀವು ತುಂಬಾ ಸುಂದರವಾಗಿದ್ದಿರಾ, ಮೇಕಪ್ ಬೇಡ ನೀವು ನ್ಯಾಚ್ಯುರಲ್ ಆಗಿಯೇ ಇರಿ ಎಂದು ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ.
