Connect with us

DAKSHINA KANNADA

ಹಾವು ಮನೆಯೊಳಗೆ ಬಂದರೆ ಶುಭ ಸೂಚಕವೇ..?

Published

on

ಮಂಗಳೂರು: ಹಾವು.. ಆ ಶಬ್ಧ ಕೇಳಿದೊಡನೆ ಒಮ್ಮೆ ಭಯ ಹುಟ್ಟಿಸುತ್ತದೆ. ಇನ್ನು ಎದುರಿಗೆ ಹಾವು ನೋಡಿದರೆ ಹೃದಯದ ಬಡಿತವೇ ನಿಂತು ಹೋದಂತೆ ಆಗುತ್ತದೆ. ಹಾಗೆಯೇ ಒಂದು ವೇಳೆ ನಿಮ್ಮ ಮನೆಯೊಳಗೆ ಹಾವು ಬಂದರೆ ನಿಮಗೆ ಹೇಗಾಗಬಹುದು. ಕೆಲವೊಮ್ಮೆ ಎಷ್ಟೋ ಜನರ ಮನೆಯೊಳಗೆ ಹಾವು ಬಂದಿರುತ್ತದೆ. ಹಾಗೋ ಹೀಗೋ ಹಾವು ಹಿಡಿಯುವರನ್ನು ಕರೆದು ಹಾವನ್ನು ಹೊರಗೆ ಕಳಿಸುವ ಸಾಹಸ ಮಾಡಿದ ನಂತರವೂ ಕೆಲವು ದಿನಗಳವರೆಗೂ ಆ ಭಯ ಇದ್ದೇ ಇರುತ್ತದೆ.

ಆದರೆ ಹಾವು ಮನೆಯೊಳಗೆ ಬಂದರೆ ಅದನ್ನು ಕೆಲವರು ಶುಭವೆಂದೂ ಇನ್ನೂ ಕೆಲವರು ಸಮಸ್ಯೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆಹಾವು ಮನೆಗೆ ಬಂದರೆ ಏನು ಅರ್ಥ? ಅದರಿಂದ ಏನಾದರೂ ಸಮಸ್ಯೆ ಇದೆಯೇ ತಿಳಿಯೋಣ.

ಮನೆಯೊಳಗೆ ಹಾವು ಬರುವುದು ಶುಭ ಸೂಚಕ ಎಂದು ಹೇಳುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಹಾವನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಆದಿಶೇಷ ಸರ್ಪಗಳ ರಾಜ, ಶಿವನು ಕೂಡಾ ಹಾವನ್ನು ತನ್ನ ಕತ್ತಿನಲ್ಲಿ ಸುತ್ತಿಕೊಂಡಿದ್ದಾನೆ. ಆದ್ದರಿಂದ ದೇವರ ಸ್ವರೂಪವಾಗಿರುವುದರಿಂದ ಮನೆಯೊಳಗೆ ಹಾವು ಬಂದರೆ ಅದು ಖಂಡಿತ ಏನೋ ಶುಭ ಮುನ್ಸೂಚನೆ ಎಂದು ನಂಬಲಾಗಿದೆ.

ಮನೆಯೊಳಗೆ ಒಂದು ವೇಳೆ ಕಪ್ಪು ಹಾವು ಬಂದರೆ ಅದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮಗೆ ಶಿವನ ಕೃಪೆ ದೊರೆಯಲಿದ್ದು ಕೆಲವೇ ದಿನಗಳಲ್ಲಿ ನಿಮ್ಮ ಜೀವನ ಬದಲಾಗಲಿದೆ, ನೀವು ಸಂತೋಷ ಜೀವನವನ್ನು ಗಳಿಸಲಿದ್ದೀರಿ ಎಂಬ ಅರ್ಥವನ್ನು ನೀಡುತ್ತದೆ.

ಹಾವಿನ ಮರಿ ಮನೆಯೊಳಗೆ ಬಂದರೆ ನೀವು ಕೆಲವು ದಿನಗಳಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳುತ್ತವೆ ಎಂದು ಅರ್ಥ. ಹಾವು ಮನೆಯನ್ನು ಪ್ರವೇಶಿಸಿದರೆ ಲಕ್ಷ್ಮೀ ಆಶೀರ್ವಾದ ಕೂಡಾ ನಿಮ್ಮ ಮೇಲಿದೆ ಎಂದು ಅರ್ಥ. ಇದುವರೆಗೂ ನೀವು ಎದುರಿಸುತ್ತಿದ್ದ ನಿಮ್ಮ ಆರ್ಥಿಕ ಸಮಸ್ಯೆ ಕೊನೆಗೊಳ್ಳುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳುವುದು ಖಚಿತ.

ಒಂದು ವೇಳೆ ನಿಮ್ಮ ಮನೆಗೆ ಬಿಳಿ ಬಣ್ಣದ ಹಾವು ಪ್ರವೇಶಿಸಿದರೆ ಇದು ಇನ್ನಷ್ಟು ಮಂಗಳಕರ ಎನ್ನಲಾಗಿದೆ. ಇದು ಮನೆಯಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸುವಂತೆ ಮಾಡುತ್ತದೆ. ಇದ್ದಕ್ಕಿದ್ದಂತೆ ನಿಮ್ಮ ಮನೆಗೆ ಹಸಿರು ಹಾವು ಬಂದರೆ ಅದೂ ಕೂಡಾ ಶುಭವೇ. ಶೀಘ್ರದಲ್ಲೇ ನೀವು ಶುಭ ಸುದ್ದಿ ಕೇಳಲಿದ್ದೀರಿ, ನಿಮ್ಮ ಕಷ್ಟನಷ್ಟಗಳು ಕೊನೆಗೊಳ್ಳುತ್ತವೆ.

ಹಳದಿ ಬಣ್ಣದ ಹಾವು ಮನೆಗೆ ಬಂದರೆ ನೀವು ಅತಿ ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ಜೀವನದಲ್ಲಿ ಪ್ರಗತಿ ಹೊಂದಲಿದ್ದೀರಿ ಎಂದು ಅರ್ಥ. ಅಷ್ಟೇ ಅಲ್ಲ, ಮನೆಗೆ ಹಾವು ಬಂದರೆ ಪತಿ ಪತ್ನಿ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ. ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಜೀವನ ಸುಂದರವಾಗಿರುತ್ತದೆ.

DAKSHINA KANNADA

ಮುಂದಿನ 5 ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

Published

on

ಬೆಂಗಳೂರು: ಬಿಸಿಲ ಧಗೆಯಿಂದ ತತ್ತರಿಸಿ ಹೋಗಿದ್ದ ಜನರಿಗೆ ಇದೀಗ ಮಳೆಯ ಮುನ್ಸೂಚನೆ ಆಗಿದೆ. ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ, ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿ ಭಾರೀ ಮಳೆಯಾಗಲಿದೆ. ಅಲ್ಲದೇ ಗಾಳಿಯ ವೇಗವು ಗಂಟೆಗೆ 30-40 ಕಿಮೀ ತಲುಪುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಉಷ್ಣ ಅಲೆ ಇರಲಿದೆ.

Continue Reading

DAKSHINA KANNADA

ರಸ್ತೆ ಅಪಘಾತದಿಂದ ಗಾಯಗೊಂಡಿದ್ದ ಯುವ ವಕೀಲ ಸಾವು

Published

on

ಮಂಗಳೂರು : ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಕಳೆದ ವಾರ ಅಪಘಾತವೊಂದು ಸಂಭವಿಸಿದ ಪರಿಣಾಮ ಕೈಕುಂಜೆ ನಿವಾಸಿ  ಯುವ ವಕೀಲ ಪ್ರಥಮ್ ಬಂಗೇರ (27) ನಿನ್ನೆ (ಮಾ.17) ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದು ಬಿ.ಸಿ.ರೋಡಿನ ವಕೀಲ ಕೆ. ವೆಂಕಟ್ರಮಣ ಶೆಣೈಯವರ ಬಳಿ ವಕೀಲ ವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದ ಪ್ರಥಮ್ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚುರುಕಾಗಿದ್ದು, ಒಳ್ಳೆಯ ನೃತ್ಯಪಟುವಾಗಿದ್ದರು.

ಕಳೆದ ನವೆಂಬರ್ ತಿಂಗಳಿನಲ್ಲಿ ಇವರ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೃತರ ಎರಡು ಕಣ್ಣು, ಎರಡು ಕಿಡ್ನಿ, ಲಿವರ್ ಮತ್ತು ಕರುಳಿನ ಭಾಗವನ್ನು ದಾನವಾಗಿ ನೀಡಿ ಮನೆಯವರು ಮಾನವೀಯತೆ ತೋರಿದ್ದಾರೆ. ಮೃತರು ತಂದೆ ಮತ್ತು ಸಹೋದರನನ್ನು ಅಗಲಿದ್ದಾರೆ.

Continue Reading

DAKSHINA KANNADA

ಫೇಸ್‌ಬುಕ್ ಖಾತೆಯಿಂದ ಬಂದ ಆ ಮೆಸೇಜ್ ನಂಬಿ ಮೋಸ ಹೋದ ಮಹಿಳೆ

Published

on

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬರುವ ಮೆಸೇಜ್‌ಗಳನ್ನು ನಂಬಿ ಮೋಸ ಹೋಗುವವರು ಸಾಕಷ್ಟು ಜನ ಇದ್ದಾರೆ. ಎಷ್ಟೇ ಎಚ್ಚರಿಕೆ ನೀಡಿದರೂ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದೀಗ ಅಂತಹದ್ದೇ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದ್ದು, ಮಹಿಳೆಯೊಬ್ಬಳು ಫೇಸ್‌ಬುಕ್ ಖಾತೆಯೊಂದರಿಂದ ಬಂದ ಸಂದೇಶವನ್ನು ನಂಬಿ 7.10 ಲಕ್ಷ ರೂ.ಕಳೆದುಕೊಂಡು ವಂಚನೆಗೊಳಗಾದ ಘಟನೆ ನಗರದಲ್ಲಿ ನಡೆದಿದೆ.

“ಡಾ. ತುಷಾರ್ ಪಾಟೀಲ್ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಹಾಯ್ ಎನ್ನುವ ಮೆಸೇಜ್ ತನಗೆ ಬಂತು. ಅಲ್ಲದೆ ತಾನು ಯು ಹೆಲ್ತ್ ಮಿಯಾಮಿ ಫ್ಲೋರಿಡಾದಲ್ಲಿ ನ್ಯೂರೋರಜಿಸ್ಟ್ ಆಗಿದ್ದು, ಮದುವೆ ಅಗಿ ವಿಚ್ಛೇದನವಾಗಿದೆ. ಒಂದು ಮಗು ಕೂಡ ಇದೆ ಎಂದು ಹೇಳಿದ್ದಾನೆ. ಬಳಿಕ ತನ್ನ ವಾಟ್ಸ್‌ಆ್ಯಪ್ ಸಂಖ್ಯೆ ಪಡೆದು ಅದಕ್ಕೆ ಮೆಸೇಜ್ ಮಾಡಿ, ನಿಮ್ಮ ಸ್ನೇಹಕ್ಕಾಗಿ ಗಿಫ್ಟ್ ಆಗಿ ಪ್ಲಾಟಿನಂ ವಾಚ್, ಡೈಮಂಡ್, ಲ್ಯಾಪ್‌ಟಾಪ್, ಐಫೋನ್, 90 ಸಾವಿರ ಯುಎಸ್ ಡಾಲರ್ ಹಾಗೂ ಬಂಗಾರ ಕಳುಹಿಸಿಕೊಡುತ್ತೇನೆ. ವಿಮಾನ ನಿಲ್ದಾಣದಿಂದ ಕರೆ ಬರಲಿದೆ” ಎಂದು ಹೇಳಿದ್ದಾನೆ.

“ಮರುದಿನ ನನಗೆ ಬಂದ ಫೋನ್ ಕರೆಯೊಂದು ಬಂದಿದ್ದು, ‘ಡಾ. ತುಷಾರ್ ಪಾಟೀಲ್‌ರಿಂದ ಗಿಫ್ಟ್ ಬಂದಿದೆ. ಸೆಕ್ಯೂರಿಟಿ ಡಿಪಾಸಿಟ್ ಹಾಗೂ ಲಾಂಡರಿಂಗ್ ಕ್ಲಿಯರೆನ್ಸ್‌ಗಾಗಿ ಹಣ ಕಳುಹಿಸಿ’ ಎಂದು ತಿಳಿಸಿದ್ದಾನೆ. ಅದನ್ನು ನಂಬಿ ನಾನು ವಿವಿಧ ಖಾತೆಗಳಿಗೆ 7.10 ಲಕ್ಷ ರೂ. ವರ್ಗಾವಣೆ ಮಾಡಿದ್ದೇನೆ. ಬಳಿಕ ಗಿಫ್ಟ್ ನೀಡದೆ ವಂಚನೆ ಮಾಡಿದ್ದಾರೆ” ಎಂಬುವುದಾಗಿ ಮಹಿಳೆ ದುರು ನೀಡಿದ್ದಾಳೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page