ಮಂಗಳೂರು/ಬೆಂಗಳೂರು : ನಟಿ ರಶ್ಮಿಕಾ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ , ನಟ ವಿಜಯ್ ದೇವರಕೊಂಡ ಜೊತೆ ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದರು. ಇದರ ಬೆನ್ನಲ್ಲೆ ಅವರ ತಾಯಿ ಸುಮನ್‌ರದ್ದು ಎನ್ನಲಾದ ಹಳೇ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿ, ವಿವಾದಕ್ಕೆ ಕಾರಣವಾಗಿದೆ. ಇದೀಗ ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದಾರೆ.

ಸುಳ್ಳು ಮಾಹಿತಿ, ಕಿರುಕುಳ, ದಾ*ಳಿ…
ನನ್ನ ಸಿನಿಮಾ ರಂಗದ ಈ ಅದ್ಭುತ ಪಯಣದಲ್ಲಿ ಇಲ್ಲಿಯವರೆಗೆ ನನ್ನ ಜೊತೆಗಿರುವ ನನ್ನ ಪ್ರೀತಿಯ ಜನರಿಗೆ, ಇದಕ್ಕೆ ಸಂಬಂಧಪಟ್ಟ ಉಳಿದವರಿಗೂ ನಮಸ್ಕಾರಗಳು. ಕಳೆದ 8 ವರ್ಷಗಳಿಂದ ಮಾಧ್ಯಮದ ಒಂದು ವರ್ಗ, ಕೆಲವು ವ್ಯಕ್ತಿಗಳಿಂದ ನನ್ನ ವಿರುದ್ಧ ಸುಳ್ಳು ಮಾಹಿತಿ, ಕಿರುಕುಳ ಆಗುತ್ತಿದೆ, ದಾಳಿ ಮಾಡುತ್ತಿದ್ದಾರೆ.

ನಾನು ಹೇಳಿದ ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸುವುದಿಲ್ಲ, ಬದಲಾಗಿ ತಿರುಚಲಾಗಿದೆ. ನಾನು ಆಡದ ಮಾತುಗಳನ್ನು ಸುಳ್ಳು ಕಥೆಗಳನ್ನಾಗಿ ಸೃಷ್ಟಿ ಮಾಡಲಾಗಿದೆ. ಕೇವಲ ವ್ಯೂಸ್‌ಗಾಗಿ ಎಂಗೇಜ್‌ಗಾಗಿ ದ್ವೇಷ ಹರಡುವುದನ್ನು ನಾನು ಗಮನಿಸಿದ್ದೇನೆ. ಇವೆಲ್ಲ ನನಗೆ ನೋವು ಕೊಟ್ಟಿದೆ. ಆದರೂ ನಾನು ತಾಳ್ಮೆಯಿಂದ, ಮೌನದಿಂದ ಇದ್ದೆ.
ಪಬ್ಲಿಕ್‌ನಲ್ಲಿದ್ದಾಗ ಕೆಲವೊಮ್ಮೆ ಇಂತಹ ಅನ್ಯಾಯದ ಟೀಕೆಗಳು ಬರುತ್ತವೆ ಎಂದು ನಾನು ಒಪ್ಪಿಕೊಂಡಿದ್ದೆ. ನಾನು ಪ್ರಾಮಾಣಿಕವಾಗಿದ್ದು, ಸುತ್ತ ಮುತ್ತ ಇರುವವರಿಗೆ ಸಂತೋಷದಿಂದ ಇದ್ದರೆ ಎಲ್ಲವೂ ಸರಿಯಾಗುತ್ತದೆ ಎಂದು ನಂಬಿದ್ದೆ. ಕಳೆದ 24 ಗಂಟೆಗಳಲ್ಲಿ ನಡೆದಿರುವುದು ಮಿತಿ ಮೀರಿದೆ, ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ವಿವಾದ ಸೃಷ್ಟಿಸಲು ಆಡಿಯೋ ಬಳಕೆ :
ಸುಮಾರು 8 ವರ್ಷಗಳ ಹಿಂದಿನ ಹಳೆಯ ಖಾಸಗಿ ಸಂಭಾಷಣೆಯನ್ನು, ಸಂಬಂಧಪಟ್ಟವರ ಅರಿವಿಲ್ಲದೆ ಅಥವಾ ಅನುಮತಿಯಿಲ್ಲದೆ ರೆಕಾರ್ಡ್ ಮಾಡಿ ರಿಲೀಸ್ ಮಾಡಲಾಗಿದೆ. ಆ ಸಂಭಾಷಣೆಯ ಒಂದು ಸಣ್ಣ ಭಾಗವನ್ನು ಉದ್ದೇಶಪೂರ್ವಕವಾಗಿ ಸಂದರ್ಭಕ್ಕೆ ತಕ್ಕಂತೆ ಬಳಸದೆ, ಮತ್ತೊಂದು ವಿವಾದವನ್ನು ಸೃಷ್ಟಿಸಲು ಬಳಸಿಕೊಳ್ಳಲಾಗಿದೆ. ನನ್ನ ವೈಯಕ್ತಿಕ ಜೀವನದ ಇತ್ತೀಚಿನ ಬೆಳವಣಿಗೆ ಜೊತೆಯಲ್ಲೇ ಇದೆಲ್ಲ ನಡೆದಿದೆ.

ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲರು? ಹೀಗೆ ಮಾಡಿ ನನ್ನ ಕುಟುಂಬವನ್ನು, ಈ ವಿಷಯಕ್ಕೆ ಸಂಬಂಧವಿಲ್ಲದವರನ್ನು ಅನಗತ್ಯವಾಗಿ ಮುಜುಗರಕ್ಕೆ ದೂಡಿದ್ದಾರೆ. ಇದು ಗೌಪ್ಯತೆಯ ಗಂಭೀರ ಉಲ್ಲಂಘನೆ, ದಾರಿ ತಪ್ಪಿಸುವ, ಮಾನಹಾನಿಕರ ವಿಷಯಗಳ ಪ್ರಸಾರವಾಗಿದೆ.
ಕಳೆದ ಎಂಟು ವರ್ಷಗಳಿಂದ ಮೌನವಾಗಿದ್ದೆ…ಇನ್ನು ಸಾಧ್ಯವಿಲ್ಲ…
ನಾವು ಜೀವನದಲ್ಲಿ ಮುಂದೆ ಸಾಗುತ್ತ, ಬೆಳೆಯುತ್ತ, ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತ ಪಾಸಿಟಿವಿಟಿ ಹರಡುತ್ತಿರುವಾಗ, ಕೆಲವರು ಇನ್ನೊಬ್ಬರ ಘನತೆ, ಶಾಂತಿಯ ವೆಚ್ಚದಲ್ಲಿ ದ್ವೇಷ, ವಿವಾದಗಳನ್ನು ಸೃಷ್ಟಿಸುತ್ತಿರುವುದು ದುರದೃಷ್ಟಕರ. ಕಳೆದ ಎಂಟು ವರ್ಷಗಳಿಂದ ನನ್ನ ಮೇಲೆ ದಾಳಿ ಮಾಡಿದಾಗ ನಾನು ಮೌನವಾಗಿದ್ದೆ. ಆದರೆ ಇಂದು ಬೇರೆಯವರನ್ನು ಇದಕ್ಕೆ ಎಳೆದು ತಂದಾಗ, ನಾನು ಸುಮ್ಮನಿರಲು ಸಾಧ್ಯವಿಲ್ಲ.

ಇದನ್ನೂ ಓದಿ : ಬಿಗ್ ಬಾಸ್ ವಿನ್ನರ್‌ಗೆ ಕೈ ಸೇರದ ವಿನ್ನಿಂಗ್ ಅಮೌಂಟ್! ಕಾರಣವೇನು?
ಇಲ್ಲಿ ತನಕ ನನಗೆ ತುಂಬಾ ಜನ ಪ್ರೀತಿಯಿಂದ ಸಪೋರ್ಟ್ ಮಾಡಿದ್ದೀರಿ. ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಒಂದ್ ಮಾತು ಈ ಸಮಯದಲ್ಲಿ ಹೇಳಲೇಬೇಕು ಅನ್ನಿಸ್ತಿದೆ. ಬೇಕಂತ ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್ ಮಾತನಾಡೋ ಜನ, ಒಂದ್ ಅರ್ಥ ಮಾಡ್ಕೊಬೇಕು, ಅವರೆಲ್ಲ ನನ್ನ ಜೀವನ ಹೇಗಿರಬೇಕು ಅಂತ ನಿರ್ಧಾರ ಮಾಡಕ್ಕಾಗತ್ತಾ? ನಮ್ ಜೀವನ ನಮ್ಗಲ್ವಾ? ನಮ್ ನಿರ್ಧಾರ ನಾವೇ ತೊಗೋಬೇಕು ಮತ್ತೆ ತೊಗೋತೀವಿ ಕೂಡ ಎಂದು ಖಾರವಾಗಿಯೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿದ್ದಾರೆ.


