Connect with us

LATEST NEWS

ರಾಜ್ಯದಲ್ಲಿ ಸೈಬರ್ ಅಪರಾಧಗಳ ತಡೆಗೆ ಸಹಾಯವಾಣಿ ಜತೆಗೆ ವೆಬ್‍ಬಾಟ್ ಉನ್ನತೀಕರಣ

Published

on

ಬೆಂಗಳೂರು: ಹೆಚ್ಚುತ್ತಿರುವ ಆನ್‍ಲೈನ್ ಹಣಕಾಸು ವಂಚನೆಗಳನ್ನು ತಡೆಯಲು ರಾಜ್ಯದಲ್ಲಿ ಸೈಬರ್ ಅಪರಾಧ ಸಹಾಯವಾಣಿ-1930 ಜತೆಗೆ ‘ವೆಬ್‍ಬಾಟ್’ ಉನ್ನತೀಕರಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.

ಮಂಗಳವಾರ ಬೆಂಗಳೂರಿನ ಎಡಿಜಿಪಿ ಸಿಎಲ್-ಎಂ ಕಾರ್ನರ್ ಹೌಸ್ ಕಚೇರಿಯಲ್ಲಿ ಉನ್ನತೀಕರಿಸಲಾದ ಸೈಬರ್ ಅಪರಾಧ ಸಹಾಯವಾಣಿ-1930 ವೆಬ್ ಬಾಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ 1930 ಸಹಾಯವಾಣಿ ಮೂಲಕ ಸ್ವೀಕರಿಸಿದ ಕರೆಗಳ ಸಂಖ್ಯೆ 2022ರಲ್ಲಿ 1.30 ಲಕ್ಷ ಇದ್ದು, ಬಳಿಕ 2024ರಲ್ಲಿ 8.26ಲಕ್ಷಕ್ಕೆ ಮತ್ತು 2025ರ ಮಾರ್ಚ್ವರೆಗಿನ ಮೊದಲ ತ್ರೈಮಾಸಿಕದಲ್ಲಿ 4.34 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ತುರ್ತು ಸ್ಪಂದನಾ ವ್ಯವಸ್ಥೆಯ ಸಾರ್ವಜನಿಕ ಸುರಕ್ಷತಾ ಪ್ರತ್ಯುತ್ತರ ಕೇಂದ್ರವನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಂಪರ್ಕ, ಸಾರಿಗೆ ಮತ್ತು ಆಧುನೀಕರಣ ಅವರ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿದ್ದು, ಈ 1930 ಸಹಾಯವಾಣಿ ಕೇಂದ್ರದಲ್ಲಿ ಆನ್‍ಲೈನ್ ಹಣಕಾಸು ವಂಚನೆ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟ್‍ಲ್ ಎನ್‍ಸಿಆರ್‌ಪಿ ಮೂಲಕ ದಾಖಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

2022 ರಲ್ಲಿ 20,894 ದೂರುಗಳನ್ನು ಸೈಬರ್ ಕ್ರೈಂ ಸಹಾಯವಾಣಿ-1930 ಮೂಲಕ ಎನ್‍ಸಿಆರ್‌ಪಿ ಯಲ್ಲಿ ದಾಖಲಿಸಲಾಗಿದ್ದು, 2024 ರಲ್ಲಿ 97,929 ದೂರುಗಳನ್ನು ದಾಖಲಿಸಲಾಗಿತ್ತು. 2022 ನೇ ವರ್ಷದಲ್ಲಿ ವರದಿಯಾದ ಒಟ್ಟು ವಂಚನೆಯ ಮೊತ್ತವು 113 ಕೋಟಿ ರೂಪಾಯಿಗಳಾಗಿದ್ದು, 2024 ರಲ್ಲಿ ಅದು 2,396 ಕೋಟಿ ರೂಪಾಯಿಗೇರಿದೆ.

ಸಹಾಯವಾಣಿ-1930 ರ ಮೂಲಕ ಬ್ಯಾಂಕ್‍ಗಳಲ್ಲಿ ತಡೆಹಿಡಿಯಲಾದ ಮೊತ್ತವು 2022 ರಲ್ಲಿ 8 ಕೋಟಿ ರೂಪಾಯಿಗಳಾಗಿದ್ದು, 2024 ರಲ್ಲಿ 226 ಕೋಟಿ ರೂಪಾಯಿ ವಂಚನೆಯ ಹಣವನ್ನು ತಡೆಹಿಡಿಯಲಾಗಿದೆ. ಈ ಮೊತ್ತವು ವಂಚನೆಯ ಮೊತ್ತದ ಶೇಕಡಾ 9 ರಷ್ಟು ಆಗಿರುತ್ತದೆ. ಹೊಸ ವ್ಯವಸ್ಥೆಯ ಪರಿಣಾಮದಿಂದಾಗಿ 2025 ರ ಮೊದಲ ತ್ರೈಮಾಸಿಕದಲ್ಲಿ 38,000 ಪ್ರಕರಣಗಳನ್ನು ಸಹಾಯವಾಣಿ-1930 ಮೂಲಕ ದಾಖಲಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ ಮಾರ್ಚ್ 2025ರ ಅಂತ್ಯಕ್ಕೆ ವಂಚನೆ ಹಣದ ಶೇಕಡಾ 16 ರಷ್ಟು ಮೊತ್ತವನ್ನು ಬ್ಯಾಂಕ್‍ಗಳಲ್ಲಿಯೇ ತಡೆಯುವಲ್ಲಿ ಶ್ರಮವಹಿಸಿದ್ದೇವೆ ಎಂದು ತಿಳಿಸಿದರು.

DAKSHINA KANNADA

ಕಲ್ಲರ್ಪೆಯಲ್ಲಿ ಮತ್ತೊಂದು ಅಪಘಾತ; ಕಾರು ಬೈಕ್ ಮುಖಾಮುಖಿ ಡಿಕ್ಕಿ, ಬೈಕ್‌ ಸವಾರ ಗಂಭೀರ

Published

on

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಕಾರು ಬೈಕ್ ಮುಖಾಮುಖಿ ಡಿಕ್ಕಿಯೂ ಆ ಭಾಗದಲ್ಲಿನ ರಸ್ತೆ ಸುರಕ್ಷ ತಾ ಕ್ರಮಗಳ ವೈಫಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಈ ದುರ್ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರನ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿಯೂ ಇದೇ ಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾಗಿತ್ತು. ಅದೃಷ್ಟವಶಾತ್‌ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಪ್ರಯಾಣಿಸುವವರೇ ಎಚ್ಚರ; ಗದ್ದೆಗೆ ಬಿತ್ತು ಟಿಟಿ

ಇದೀಗ ಮತ್ತೊಂದು ಘಟನೆ ನಡೆದಿದ್ದು, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಲ್ಲರ್ಪೆ ವಲಯವು ಅಪಘಾತಗಳ ಕೇಂದ್ರಬಿಂದುವಾಗಿ ಪರಿವರ್ತನೆಯಾಗುತ್ತಿರುವುದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.

Continue Reading

LATEST NEWS

ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್

Published

on

ಮಂಗಳೂರು/ನವದೆಹಲಿ: ನಕಲಿ ಪ್ರಮಾಣಪತ್ರ ಬಳಸಿ ನಾಗರಿಕ ಸೇವಾ ಪರೀಕ್ಷೆಯ ಲಾಭ ಪಡೆದುಕೊಂಡ ಆರೋಪ ಎದುರಿಸುತ್ತಿರುವ ಮಾಜಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ.

2022ರ ನಾಗರಿಕ ಸೇವೆಗಳ ಪರೀಕ್ಷೆಗೆ ಅರ್ಹತೆ ಪಡೆಯಲು ದಾಖಲೆಗಳನ್ನು ನಕಲಿ ಮಾಡಿದ ಆರೋಪ ಹೊತ್ತಿರುವ ಮಾಜಿ ಐಎಎಸ್ ತರಬೇತಿ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ವಂಚನೆ ಪ್ರಕರಣದ ತನಿಖೆಗೆ ಸಹಕರಿಸುವಂತೆ ಖೇಡ್ಕರ್ ಅವರಿಗೆ ನಿರ್ದೇಶನ ನೀಡಿದೆ. ಆದಾಗ್ಯೂ, ದೆಹಲಿ ಪೊಲೀಸರ ವಕೀಲರು ಖೇಡ್ಕರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡುವುದನ್ನು ತೀವ್ರವಾಗಿ ವಿರೋಧಿಸಿದರು. ತನಿಖೆಯಲ್ಲಿ ಅವರು ಸಹಕರಿಸದಿರುವುದು ಮತ್ತು ಅವರ ವಿರುದ್ಧದ ಆರೋಪಗಳು ಗಂಭೀರವಾಗಿವೆ ಎಂದು ಹೇಳಿದರು.

ಆಕೆ ಮಾದಕ ದ್ರವ್ಯ ವ್ಯಸನಿಯಲ್ಲ..!
ಇದನ್ನು ಆಲಿಸಿದ ಪೀಠ ಖೇಡ್ಕರ್ ಅಂತದ್ದೇನು ಗಂಭೀರ ಅಪರಾಧ ಮಾಡಿದ್ದಾರೆ “ಆಕೆ ಮಾದಕ ದ್ರವ್ಯ ವ್ಯಸನಿಯಲ್ಲ ಅಥವಾ ಭಯೋತ್ಪಾದಕಿ ಅಲ್ಲ. ಆಕೆ ಕೊಲೆ ಮಾಡಿಲ್ಲ. ಆಕೆ ಎನ್‌ಡಿಪಿಎಸ್ ಅಪರಾಧಿಯೂ ಅಲ್ಲ. ನಿಮಗೆ ಒಂದು ವ್ಯವಸ್ಥೆ ಅಥವಾ ಸಾಫ್ಟ್‌ವೇರ್ ಇರಬೇಕು. ನೀವು ತನಿಖೆಯನ್ನು ಪೂರ್ಣಗೊಳಿಸಿ. ಆಕೆ ಎಲ್ಲವನ್ನೂ ಕಳೆದುಕೊಂಡಿದ್ದಾಳೆ ಇನ್ನು ಎಲ್ಲಿಯೂ ಆಕೆಗೆ ಸಿಗುವುದಿಲ್ಲ” ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿದೆ. “ಪ್ರಕರಣದ ವಾಸ್ತವಾಂಶ ಮತ್ತು ಸನ್ನಿವೇಶಗಳನ್ನು ಪರಿಗಣಿಸಿ, ದೆಹಲಿ ಹೈಕೋರ್ಟ್ ಅರ್ಜಿದಾರರಿಗೆ ಜಾಮೀನು ನೀಡಬೇಕಾಗಿದ್ದ ಸೂಕ್ತ ಪ್ರಕರಣ ಇದು ಎಂದು ಪೀಠ ಹೇಳಿದೆ.

ಇದನ್ನೂ ಓದಿ: ಕನ್ನಡ ಮಾತನಾಡುವುದಿಲ್ಲ ಎಂದಿದ್ದ ಬ್ಯಾಂಕ್ ಮ್ಯಾನೇಜರ್ ರಾತ್ರೋರಾತ್ರಿ ಎತ್ತಂಗಡಿ

2023ರ ಬ್ಯಾಚ್‌ನ ಐಎಎಸ್ ಪ್ರೊಬೇಷನರಿ ಅಧಿಕಾರಿಯಾಗಿದ್ದ ಪೂಜಾ ತನ್ನ ಆಯ್ಕೆಗಾಗಿ ಒಬಿಸಿ ಕೋಟಾ ಮತ್ತು ಅಂಗವಿಕಲರ ಕೋಟಾವನ್ನು ದುರುಪಯೋಗಪಡಿಸಿಕೊಂಡು ಸೌಲಭ್ಯಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ.

ಜುಲೈನಲ್ಲಿ ಆಕೆಯ ವಿರುದ್ಧ ದೆಹಲಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಜುಲೈ 31ರಂದು ಆಕೆಯ ನೇಮಕಾತಿ ಆದೇಶವನ್ನು ಯುಪಿಎಸ್‌ಸಿ ರದ್ದುಗೊಳಿಸಿತ್ತು. ಜೊತೆಗೆ ಭವಿಷ್ಯದ ಎಲ್ಲ ಪರೀಕ್ಷೆಗಳು ಮತ್ತು ಆಯ್ಕೆಗಳಿಂದ ಡಿಬಾರ್ ಮಾಡಲಾಗಿದೆ.

 

 

 

Continue Reading

LATEST NEWS

ಗೂಗಲ್ ಮ್ಯಾಪ್ ನಂಬಿ ಪ್ರಯಾಣಿಸುವವರೇ ಎಚ್ಚರ; ಗದ್ದೆಗೆ ಬಿತ್ತು ಟಿಟಿ

Published

on

ಚಿಕ್ಕಮಗಳೂರು: ರಾತ್ರಿ ವೇಳೆ ಗೂಗಲ್ ಮ್ಯಾಪ್ ನೋಡಿಕೊಂಡು ಪ್ರಯಾಣಿಸುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಮ್ಯಾಪ್ ದಾರಿ ತೋರಿಸುತ್ತದೆ ಎಂದು ಅದು ಹೇಳಿದ ದಾರಿಯಲ್ಲಿ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ.

ಇಂತಹದ್ದೇ ಘಟನೆ ಒಂದು ಚಿಕ್ಕಮಗಳೂರಿನ ಆಲ್ದೂರು ಬಳಿ ಬೆಳಕಿಗೆ ಬಂದಿದೆ. ಗೂಗಲ್ ಮ್ಯಾಪ್ ನಂಬಿ ಬಂದಿದ್ದ ಪ್ರವಾಸಿಗರು, ವಾಹನವನ್ನು ಗದ್ದೆಗೆ ಇಳಿಸಿಕೊಂಡು ಪರದಾಡಿದ್ದಾರೆ.

ಹೌದು.. ಬೆಂಗಳೂರು ಮೂಲದ ಪ್ರವಾಸಿಗರು ಬಾಳೆಹೊನ್ನೂರು ಕಡೆಯಿಂದ ಮೂಡಿಗೆರೆಗೆ ತೆರಳುತ್ತಿದ್ದರು. ಈ ವೇಳೆ, ಗೂಗಲ್ ಮ್ಯಾಪ್ ಕೈ ಕೊಟ್ಟಿದ್ದು, ವಾಹನ ಗದ್ದೆ ಬಳಿ ಹೋಗಿ ಸಿಕ್ಕಿ ಹಾಕಿಕೊಂಡಿದೆ. ಇದರಿಂದ ವಾಹನ ವಾಪಸ್ ತೆಗೆಯಲಾಗದೆ ಪ್ರವಾಸಿಗರು ಕೆಲವು ಕಾಲ ಅಲ್ಲೇ ಪರದಾಡಿದ್ದಾರೆ.

ಇದನ್ನೂ ಓದಿ: ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

ಪ್ರವಾಸಿಗರ ಪರದಾಟ ನೋಡಿ, ಸ್ಥಳೀಯರು ಟ್ರ್ಯಾಕ್ಟರ್‌ಗೆ ಟಿಟಿಯನ್ನು ಕಟ್ಟಿ, ರಸ್ತೆಯ ಬಳಿ ತಂದು ಬಿಟ್ಟಿದ್ದಾರೆ. ಬಳಿಕ ಸ್ಥಳಿಯರಿಂದ ರಸ್ತೆಯ ಬಗ್ಗೆ ಮಾಹಿತಿ ಪಡೆದು, ಗೂಗಲ್ ಮ್ಯಾಪ್ ಆಫ್ ಮಾಡಿ ಪ್ರವಾಸಿಗರು ಅಲ್ಲಿಂದ ತೆರಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page