Connect with us

ಮಂಗಳೂರು ಸೇರಿ ದೇಶದ 15 ನಗರಗಳಲ್ಲಿ ವಾಟರ್ ಮೆಟ್ರೋ ಯೋಜನೆ; ಏನಿದರ ವಿಶೇಷತೆ ?

Published

on

ಮಂಗಳೂರು/ಕಾಜೀರಂಗ : ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗುತ್ತಿದೆ. ದೇಶದಲ್ಲಿ ಈಗಾಗಲೇ ವಿದ್ಯುತ್ ಚಾಲಿತ ಬಸ್, ರೈಲು ಸಂಚರಿಸುತ್ತಿದೆ.

ಅದರಲ್ಲೂ ವಿಶೇಷವಾಗಿ ಸೌರ ವಿದ್ಯುತ್ ಅಥವಾ ಹಸಿರು ಇಂಧನವನ್ನು ಬಳಕೆ ಮಾಡಿಕೊಂಡು ಸಂಚರಿಸಲಿವೆ. ಈ ಬಗ್ಗೆ ಅಸ್ಸಾಂನ ಕಾಜೀರಂಗದಲ್ಲಿ ನಡೆದ ಒಳನಾಡು ಜಲಸಾರಿಗೆ ಅಭಿವೃದ್ದಿ ಸಮಿತಿ ಸಭೆಯಲ್ಲಿ ಮಾತನಾಡಿದ ಕೇಂದ್ರ ಬಂದರು ಮತ್ತು ನೌಕಾಯಾನ ಸಚಿವ ಸರ್ವಾನಂದ ಸೋನೋವಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಸ್ಸಾಂನ ಗುವಾಹಟಿ, ಕರ್ನಾಟಕದ ಮಂಗಳೂರು ಸೇರಿದಂತೆ ದೇಶದ 15 ನಗರಗಳಲ್ಲಿ ಕೇರಳದ ಕೊಚ್ಚಿಯಲ್ಲಿ ಅನುಷ್ಠಾನಗೊಳಿಸಲಾಗಿರುವ “ವಾಟರ್ ಮೆಟ್ರೋ” ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತದೆ ಎಂದು ಸೋನೋ ವಾಲ್ ಹೇಳಿದ್ದಾರೆ. ಇದಲ್ಲದೆ ವಿವಿಧ ರಾಜ್ಯಗಳಲ್ಲಿ ಬಂದರುಗಳಲ್ಲಿ 60 ಹೊಸ ಹಡಗುಕಟ್ಟೆಗಳನ್ನು ನಿರ್ಮಿಸಲಾಗುತ್ತದೆ.

ಅಗ್ಗದ ಸರಕು ಸಾಗಣೆಗಾಗಿ ಸರ್ಕಾರವು ಮೂಲಸೌಕರ್ಯ ಅಭಿವೃದ್ದಿಗೆ 50,000 ಕೋಟಿ ರೂ. ಹೂಡಿಕೆ ಮಾಡಲಿದೆ. ಕೇರಳದಲ್ಲಿ ಈಗಾಗಲೇ ಸೌರ ವಿದ್ಯುತ್ ಚಾಲಿತ ಬೋಟ್ ಸೇವೆ ನೀಡುತ್ತಿದೆ.

ಇದನ್ನೂ ಓದಿ: ಶ್ರೀಮಂತನನ್ನು ಬಿಕಾರಿಯನ್ನಾಗಿಸಿತು ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚು !

ಕೇರಳದ ವಾಟರ್ ಮೆಟ್ರೋ ವಿಶೇಷತೆ
10 ದ್ವೀಪಗಳ ಮಧ್ಯೆ ಒಟ್ಟು 38 ಟರ್ಮಿನಲ್​ಗಳನ್ನ ನಿರ್ಮಿಸಲಾಗಿದೆ. ಈ ಎಲ್ಲಾ ಟರ್ಮಿನಲ್​​ಗಳಲ್ಲೂ ವಾಟರ್ ಮೆಟ್ರೋ ಸ್ಟಾಪ್ ಕೊಡುತ್ತದೆ. ಇದೇ ಟರ್ಮಿನಲ್​​ಗಳ ಮೂಲಕ ಜನರು ಮೆಟ್ರೋ ಏರಬಹುದಾಗಿದೆ. ಇನ್ನು ಈ ಟರ್ಮಿನಲ್​ಗಳು ಕೂಡ ಅಷ್ಟೇ, ವಾಟರ್​ ಮೆಟ್ರೋದ ಲೆವೆಲ್​ಗೆ ಇರುತ್ತೆ. ಹೀಗಾಗಿ ಮೆಟ್ರೋ ಹತ್ತುವಾಗ, ಇಳಿಯುವಾಗ ಯಾವುದೇ ರಿಸ್ಕ್​ ಇರೋದಿಲ್ಲ.

ಇನ್ನು ವಾಟರ್​ ಮೆಟ್ರೋ ಸೇವೆಗೆ ಎಲೆಕ್ಟ್ರಿಕ್ ಹೈಬ್ರೀಡ್ ಬೋಟ್​ಗಳನ್ನ ಬಳಕೆ ಮಾಡಲಾಗುತ್ತಿದೆ. ಪರಿಸರ ಸ್ನೇಹಿಯಾಗಿರುವ ಈ ಬೋಟ್​​ ಅಷ್ಟೇ ಸುರಕ್ಷಿತ. ಈ ಬೋಟ್​ನಲ್ಲಿ ಏರ್​ಕಂಡೀಷನ್ ವ್ಯವಸ್ಥೆ ಕೂಡ ಇದೆ. ದೊಡ್ಡದಾದ ಕಿಟಕಿಗಳನ್ನ ಅಳವಡಿಸಲಾಗಿದ್ದು, ಹೀಗಾಗಿ ಕೊಚ್ಚಿನ್​​ ಬ್ಯಾಕ್​ವಾಟರ್​ ಸೌಂದರ್ಯವನ್ನ ಕೂಡ ಕಣ್ತುಂಬಿಕೊಳ್ಳಬಹುದು.

ವಾಟರ್​ ಮೆಟ್ರೋ ಸಂಚಾರದ ಶುಲ್ಕ ಕೂಡ ಬಜೆಟ್ ಫ್ರೆಂಡ್ಲಿಯಾಗಿಯೇ ಇದೆ. ಸಿಂಗಲ್ ಜರ್ನಿ ಟಿಕೆಟ್, ವಾರದ, ತಿಂಗಳ ಮತ್ತು ಮೂರು ತಿಂಗಳಿಗೆ ಪ್ರತ್ಯೇಕ ಪಾಸ್​​ ವ್ಯವಸ್ಥೆ ಕೂಡ ಮಾಡಲಾಗಿದೆ. ಸಿಂಗಲ್​ ಜರ್ನಿಗೆ ಮಿನಿಮಮ್ ಟಿಕೆಟ್ ದರ 20 ರೂಪಾಯಿ. ವಾರದ ಪಾಸ್ ಬೇಕು ಅನ್ನೋದಾದ್ರೆ, ಒಂದು ವಾರದ ಟ್ರಿಪ್​ನಲ್ಲಿ ಒಟ್ಟು 12 ಬಾರಿ ವಾಟರ್​ ಮೆಟ್ರೋದಲ್ಲಿ ಸಂಚರಿಸಬಹುದು. ಇದಕ್ಕೆ 180 ರೂಪಾಯಿ ವೆಚ್ಚವಾಗುತ್ತದೆ. ಇನ್ನು ತಿಂಗಳ ಟ್ರಿಪ್​ ಪಾಸ್​ಗೆ 50 ಬಾರಿ ಓಡಾಡಬಹುದು. ಇದರ ಟಿಕೆಟ್ ದರ 600 ರೂಪಾಯಿ. ಇನ್ನು ಮೂರು ತಿಂಗಳ ಪಾಸ್​ಗೆ 1500 ರೂಪಾಯಿ ಚಾರ್ಜ್ ಮಾಡಲಾಗುತ್ತೆ. 90 ದಿನಗಳ ಕಾಲ 150 ಬಾರಿ ಓಡಾಡಬಹುದು. ಕ್ಯೂ ಆರ್​​ ಕೋಡ್​ ಬಳಸಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬಹುದು.

Advertisement
2 Comments

Leave a Reply

Your email address will not be published. Required fields are marked *

LATEST NEWS

ಕೇಜ್ರಿವಾಲ್ ಸೋಲಿಗೆ ಕಾರಣ ಬಿಚ್ಚಿಟ್ಟ ಅಣ್ಣಾ ಹಜಾರೆ !

Published

on

ಮಂಗಳೂರು/ಮುಂಬೈ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲನುಭವಿಸಿದೆ. 27 ವರ್ಷಗಳ ಬಳಿಕ ಬಿಜೆಪಿಗೆ ಅಧಿಕಾರ ಸಿಗುವಂತಾಗಿದೆ. ಈ ಮೂಲಕ ಆಡಳಿತರೂಢ ಆಮ್ ಆದ್ಮಿ ಪಕ್ಷ ನಿರ್ಗಮಿಸುತ್ತಿದೆ. ದೆಹಲಿ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಾತನಾಡಿದ್ದಾರೆ.

ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ 87ರ ಹರೆಯದ ಅಣ್ಣಾ ಹಜಾರೆ, “ಕೇಜ್ರಿವಾಲ್ ನಾನು ಹೇಳಿದಕ್ಕೆ ಕಿವಿಗೊಡಲಿಲ್ಲ ಮತ್ತು ಮದ್ಯದ ಮೇಲೆ ಮಾತ್ರ ಗಮನಹರಿಸಿದರು. ಅವರು ಹಣದ ದುರಾಸೆಯಲ್ಲಿ ಮುಳುಗಿದರು” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: 27 ವರ್ಷಗಳ ಬಳಿಕ ದೆಹಲಿಯಲ್ಲಿ ಅರಳಿದ ಕಮಲ; ದಿಲ್ಲಿಯ ದಿಲ್ ಗೆದ್ದ ಬಿಜೆಪಿ

“ಅಭ್ಯರ್ಥಿಯ ನಡವಳಿಕೆ ಮತ್ತು ಆಲೋಚನೆಗಳು ಶುದ್ದವಾಗಿರಬೇಕು, ಜೀವನವು ದೋಷರಹಿತವಾಗಿರಬೇಕು ಮತ್ತು ತ್ಯಾಗ ಇರಬೇಕು ಎಂದು ನಾನು ಯಾವಾಗಲೂ ಹೇಳುತ್ತೇನೆ. ಈ ಗುಣಗಳಿದ್ದವರ ಮೇಲೆ ಮತದಾರರು ನಂಬಿಕೆ ಇಡುತ್ತಾರೆ. ಆದರೆ ಅವರು ಮದ್ಯ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಜನರು ಭಾವಿಸಿದ್ದಾರೆ. ರಾಜಕೀಯದಲ್ಲಿ ಆರೋಪಗಳನ್ನು ಮಾಡಲಾಗುತ್ತದೆ. ಆಗ ತಪ್ಪಿತಸ್ಥನಲ್ಲ ಎಂದು ಸಾಬೀತುಪಡಿಸಬೇಕು. ಸತ್ಯವು ಸತ್ಯವಾಗಿ ಉಳಿಯುತ್ತದೆ” ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

 

Continue Reading

LATEST NEWS

ಮದುವೆ ಆಗುವ ಹುಡುಗರೇ ಎಚ್ಚರ; ನಿಮ್ಮ ಸಿಬಿಲ್ ಸ್ಕೋರ್‌ ಅನ್ನು ಒಮ್ಮೆ ನೋಡಿಕೊಳ್ಳಿ..!

Published

on

ಮಹಾರಾಷ್ಟ್ರ: ಇತ್ತೀಚಿನ ದಿನದಲ್ಲಿ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡುತ್ತಾರೆ. ವಧುವಿನ ಕಡೆಯವರು ವರನನ್ನು ಹುಡುಕುವಾಗ ವರನ ಪೂರ್ವಪರ ವಿಚಾರಗಳನ್ನು ನೋಡುವುದುಂಟು. ಮೊದಲು ವರ ಧೂಮಪಾನ, ಮಧ್ಯಪಾನ ಮಾಡುತ್ತಿದ್ದರೆ ಆಕೆಗೆ ಹುಡುಗಿ ಕೊಡುತ್ತಿರಲಿಲ್ಲ. ಆದರೆ ಈಗ ವರನ ಕೆಲಸ, ಗುಣ, ನಡತೆ, ಜಾತಕವನ್ನು ನೋಡಿ ಹುಡುಗಿಯನ್ನು ಕೊಡುವುದುಂಟು. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ.

ಮಹಾರಾಷ್ಟ್ರದ ಮುರ್ಜಿಜಾಪುರದಲ್ಲಿ ಈ ಘಟನೆ ನಡೆದಿದ್ದು, ಮದುವೆ ಮಾತುಕತೆಗೆ ಬಂದ ಎರಡು ಕಡೆಯವರು ಚೆನ್ನಾಗಿಯೇ ಎಲ್ಲಾ ರೀತಿಯ ಮಾತುಕತೆಗಳನ್ನು ಮುಗಿಸಿದ್ದರು. ಕೊನೆಗೆ ನಿಶ್ಚಿತಾರ್ಥದ ದಿನಾಂಕವನ್ನು ನಿಗದಿ ಮಾಡಲೂ ಮುಂದಾಗಿದ್ದರು.

ಬಳಿಕ ಹುಡುಗಿಯ ಅಂಕಲ್ ಒಬ್ಬರು ಅನಿರೀಕ್ಷಿತವಾದ ಬೇಡಿಕೆಯೊಂದನ್ನು ಇಡುತ್ತಾರೆ. ನಾನು ಹುಡುಗನ ಸಿಬಿಲ್ ಸ್ಕೋರ್ ಚೆಕ್ ಮಾಡಬೇಕು ಎನ್ನುತ್ತಾರೆ. ಇದನ್ನು ಕೇಳಿದ ಅಲ್ಲಿದ್ದ ಎಲ್ಲರಿಗೂ ಒಂದು ಕ್ಷಣ ಅಚ್ಚರಿಯಾಗುತ್ತದೆ. ಯಾವಾಗ ಹುಡುಗನ ಸಿಬಿಲ್ ಸ್ಕೋರ್ ಚೆಕ್ ಮಾಡುತ್ತಾರೋ ಹುಡುಗ ಹಲವು ಕಡೆ ಸಾಲ ಮಾಡಿ ಆರ್ಥಿಕವಾಗಿ ಒದ್ದಾಡುತ್ತಿದ್ದಾನೆ ಎಂಬುದು ಕಂಡು ಬರುತ್ತದೆ. ಇದರಿಂದ ನನ್ನ ಮಗಳ ಬದುಕು ಹಾಳಾಗುತ್ತದೆ ಈ ಮದುವೆ ಬೇಡ ಎಂದು ನಿರ್ಧರಿಸಿದ ಹುಡುಗಿಯ ಕುಟುಂಬ ಹುಡುಗನ ಮನೆಯಿಂದ ಎದ್ದು ಬರುತ್ತದೆ.

ಈಗಾಗಲೇ ಸಾಲದಲ್ಲಿ ಮುಳುಗಿ ಹೋಗಿರುವ ಈ ಹುಡುಗನಿಗೆ ಮದುವೆ ಯಾಕೆ ಬೇಕು ? ಎಂದು ಪ್ರಶ್ನಿಸಿದ ಹುಡುಗಿಯ ಅಂಕಲ್​ ವಾದ ಮಾಡುತ್ತಾನೆ. ಉಳಿದವರು ಕೂಡ ಅವರ ಮಾತಿಗೆ ಸಮ್ಮತಿಯನ್ನು ನೀಡಿ ಮದುವೆಯ ಮಾತುಕತೆಯನ್ನು ಅಲ್ಲಿಗೆ ನಿಲ್ಲಿಸಿ ಮನೆಯಿಂದ ಎದ್ದು ಬರುತ್ತಾರೆ.

Continue Reading

LATEST NEWS

ಅಯ್ಯೋ ದೇವಾ..! ಬೆಕ್ಕಿಗಾಗಿ ನಡೆಯಿತು ಎರಡು ಕುಟುಂಬಗಳ ನಡುವೆ ಜಗಳ

Published

on

ಮಂಗಳೂರು/ಹೈದರಾಬಾದ್ : ಹಾಸಿಗೆಯ ಮೇಲೆ ಬೆಕ್ಕೊಂದು ಮಲಗಿದ್ದ ಪ್ರಕರಣ ತೆಲಂಗಾಣದ ನೆಲ್ಗೊಂಡ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ‘ನಮ್ಮದು ಬೆಕ್ಕು, ನಮ್ಮದು ಬೆಕ್ಕು’ ಎಂದು ಹೇಳಿಕೊಂಡು ಎರಡು ಕುಟುಂಬಗಳು ರಸ್ತೆಯಲ್ಲಿ ಜಗಳವಾಡುತ್ತಿದ್ದಾರೆ.

ತೆಲಂಗಾಣದ ನೆಲ್ಗೊಂಡ ಪಟ್ಟಣದ ರಹಮತ್ ನಗರದ ನಿವಾಸಿ ಪುಷ್ಪಲತಾ ಅವರು ಬೆಕ್ಕನ್ನು ಸಾಕಿ ಅದಕ್ಕೆ ‘ಪಫಿ’ ಎಂದು ಹೆಸರಿಟ್ಟಿದ್ದರು. ಕಳೆದ ವರ್ಷ ಜೂನ್‌ನಲ್ಲಿ ಬೆಕ್ಕು ಕಾಣೆಯಾದಾಗ, ಅವರು ಟೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೆಲ್ಲದರ ನಡುವೆ ಪುಷ್ಪಲತಾ ಅವರ ವಠಾರದಲ್ಲಿ ಅಶ್ರಫ್ ಎಂಬುವವರ ಮನೆಯಲ್ಲಿ ಕೂಡ ಪಫಿ ಹೋಲುವಂತಹ ಬೆಕ್ಕು ಕಂಡುಬಂದಿದೆ.

ಈ ಬಗ್ಗೆ ಪುಷ್ಪಲತಾ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರಿನಲ್ಲಿ ಬೆಕ್ಕನ್ನು ಗುರುತಿಸದೆ ಬಣ್ಣ ಬಳಿಯಲಾಗಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಎಟಿಎಂ ದರೋಡೆ ಪ್ರಕರಣ ಬಯಲು ಮಾಡಿತು ಟೀ ಅಂಗಡಿ ಬಳಿ ನಡೆದ ಜಗಳ!

ಅಶ್ರಫ್ ಅವರ ಕುಟುಂಬ ಸದಸ್ಯರನ್ನು ಪೊಲೀಸರು ವಿಚಾರಿಸಿದಾಗ, ಅವರು ಒಬ್ಬ ವ್ಯಕ್ತಿಯಿಂದ 3,500 ರೂ. ಗಳನ್ನು ಕೊಟ್ಟು ಖರೀದಿಸಿರುವುದಾಗಿ ಹೇಳಿದರು. ಮತ್ತೊಂದೆಡೆ ಎರಡು ಕುಟುಂಬಗಳು ಎಸ್‌ಪಿಯವರಿಗೆ ಕರೆಮಾಡಿ ಪಂಚಾಯಿತಿ ನಡೆಸುವಂತೆ ಕೇಳಿಕೊಂಡಿತ್ತು.

ಈ ಪ್ರಕರಣ ಪೊಲೀಸರ ತಲೆನೋವಿಗೆ ಕಾರಣವಾಗಿದ್ದು, ಬೆಕ್ಕಿನ ಕೂದಲಿನ ಮಾದರಿಗಳನ್ನು ಪರೀಕ್ಷೆ ಮಾಡುವಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಬೆಕ್ಕು ಯಾರಿಗೆ ಸೇರಿದ್ದು ಎಂದು ತಿಳಿಯಲಿದೆ. ಪ್ರಸ್ತುತ ಬೆಕ್ಕು ಅಶ್ರಫ್ ಅವರ ಮನೆಯಲ್ಲಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page