Connect with us

BIG BOSS

WATCH VIDEO : ದೊಡ್ಮನೆಯಿಂದ ಬಂದ ಜಾಹ್ನವಿಗೆ ಹೇಗಿತ್ತು ಸ್ವಾಗತ?

Published

on

BBK12: ಬಿಗ್ ಬಾಸ್ ಸೀಸನ್ 12 ಆರಂಭವಾಗಿ 65 ದಿನಗಳು ಕಳೆದಿವೆ. ಕಳೆದ ಭಾನುವಾರ ಬಿಗ್ ಬಾಸ್ ಮನೆಯಿಂದ ಜಾಹ್ನವಿ ಎಲಿಮಿನೇಟ್ ಆಗಿದ್ದರು. ದೊಡ್ಮನೆಯಿಂದ ಹೊರ ಬಂದ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.

63 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಜಾಹ್ನವಿ ಎಲಿಮಿನೇಟ್ ಆಗುತ್ತಿದ್ದಂತೆ ಕಣ್ಣೀರು ಹಾಕಿದ್ದರು. ಮುಖ್ಯದ್ವಾರದ ಮೂಲಕ ಆಚೆ ಬಂದು ಶೋ ನಿರೂಪಕ ಸುದೀಪ್‌ರನ್ನು ಭೇಟಿಯಾಗಿದ್ದರು. ಇದೀಗ ಅವರು ತಮ್ಮ ಮನೆಗೆ ಆಗಮಿಸಿದ್ದಾರೆ.

ಮನೆಗೆ ಬಂದ ಜಾಹ್ನವಿಯನ್ನು ಕುಟುಂಬಸ್ಥರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ  ಅವರು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದ್ದಷ್ಟು ದಿನ ಪ್ರಬಲವಾಗಿ ಆಡಿ, ಎಲ್ಲಾ ಏಳು-ಬೀಳುಗಳನ್ನು ದಾಟಿ, ನಗು-ನಗುತ್ತಲೇ ಮರಳಿ ತನ್ನ ಗೂಡಿಗೆ ಸೇರಿದ ಜಾನುಗೆ ಸಿಕ್ಕಿತು. ಮನೆಯವರಿಂದ ಅಕ್ಕರೆಯ ಸ್ವಾಗತ ಎಂದು ಬರದುಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದವನ್ನೂ ತಿಳಿಸಿದ್ದಾರೆ.

BIG BOSS

BBK12: ಟಾಪ್‌ 6ನಲ್ಲಿ ಕಾವ್ಯಾ ಇರಬಾರದಿತ್ತು: ಹೀಗ್ಯಾಕಂದ್ರು ರಕ್ಷಿತಾ..?

Published

on

BBK12: ಟಾಪ್‌-06ನಲ್ಲಿ ಕಾವ್ಯಾ ಅವರು ಇರೋದಕ್ಕೆ ಅರ್ಹರಲ್ಲ ಎಂದು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ ಹೇಳಿದ್ದಾರೆ.


ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ರನ್ನರ್‌ ಅಪ್‌ ಆಗಿ ರಕ್ಷಿತಾ ಶೆಟ್ಟಿ ಹೊರ ಹೊಮ್ಮಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಇದ್ದಾಗ ಕಾವ್ಯಾ ಶೈವ ಅವರ ಜೊತೆ ರಕ್ಷಿತಾ ಶೆಟ್ಟಿ ಅವರಿಗೆ ಅಷ್ಟೊಂದು ಒಡನಾಟವಿರಲಿಲ್ಲ.

ನಾಮಿನೇಶನ್‌ ವಿಚಾರದಲ್ಲೂ ಕಾವ್ಯಾ ಮತ್ತು ರಕ್ಷಿತಾ ಅವರಿಗೆ ಆಗ್ಗಾಗೇ ಜಗಳವಾಗುತ್ತಿತ್ತು. ಅಲ್ಲದೆ ಗಿಲ್ಲಿ ಕಾವ್ಯಾ ಫ್ರೆಂಡ್‌ಶಿಪ್ ಕುರಿತು ರಕ್ಷಿತಾ ಅವರಿಗೆ ಅಸಮಾಧಾನವಿದೆ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು. ಕಾವ್ಯಾ ಅವರ ಜೊತೆ ಇರುವ ಮುನಿಸು ರಕ್ಷಿತಾ ಅವರಿಗೆ ಕಡಿಮೆಯಾಗಿಲ್ಲ ಎನ್ನಬಹುದು.

ಇದನ್ನೂ ಓದಿ: ರಕ್ಷಿತಾ ಕ್ಷಮಾಪಣೆ ಪತ್ರದ ಬಗ್ಗೆ ಧ್ರುವಂತ್ ಪೋಸ್ಟ್: ನಮ್ಮಿಬ್ಬರದ್ದು ಒಂದೇ ರಾಶಿ-ನಕ್ಷತ್ರ!

ಇದೀಗ ಸಂದರ್ಶನವೊಂದರಲ್ಲಿ ಕಾವ್ಯಾ ಅವರು ಟಾಪ್‌ 6ನಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ, ಅವರ ಬದಲಿಗೆ ಜಾನ್ವಿ ಅವರು ಇರಬೇಕಿತ್ತು. ಮಾಲು ಅಣ್ಣ ಇರಬಹುದಿತ್ತು. ಮಾಲು ಅವರು ಮಾತನಾಡುವುದು ಕಡಿಮೆ. ಆದರೆ ಅವರದ್ದು ಒಳ್ಳೆಯ ವ್ಯಕ್ತಿತ್ವ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

Continue Reading

BIG BOSS

ರಕ್ಷಿತಾ ಕ್ಷಮಾಪಣೆ ಪತ್ರದ ಬಗ್ಗೆ ಧ್ರುವಂತ್ ಪೋಸ್ಟ್: ನಮ್ಮಿಬ್ಬರದ್ದು ಒಂದೇ ರಾಶಿ-ನಕ್ಷತ್ರ!

Published

on

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಮನೆಯಲ್ಲಿ ಹಾವು ಮುಂಗುಸಿಯಂತೆ ಆಡ್ತಿದ್ದ ಜೋಡಿ ಎಂದರೆ ಅದು ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್‌. ಬಿಗ್‌ಬಾಸ್‌ ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಮಲ್ಲಮ್ಮ ಮನೆಯಿಂದ ಹೊರ ಗೋಗುತ್ತಿದ್ದಂತಯೇ ಇಬ್ಬರು ಬದಲಾಗಿದ್ದಾರೆ. ಧ್ರುವಂತ್‌ ಏನೇ ಮಾಡಿದ್ರೂ ರಕ್ಷಿತಾಗೆ ಇಷ್ಟ ಆಗುತ್ತಿರಲಿಲ್ಲ.


ಬಿಗ್‌ಬಾಸ್‌ ಮನೆಯ ಸಿಕ್ರೇಟ್‌ ರೂಂ ವೀಕ್ಷಕರಿಗೆ ಮನರಂಜನೆ ನೀಡಿದ್ದು ಸುಳ್ಳಲ್ಲ. ಬಿಗ್‌ಬಾಸ್‌ ಮನೆಯಲ್ಲಿ ಯಾವುದೇ ಟಾಸ್ಕ್‌ ಕೊಟ್ಟರೆ ಮೊದಲು ಇವರ ಮಧ್ಯೆ ದೊಡ್ಡ ಜಗಳವೇ  ಆಗುತ್ತಿತ್ತು. ಕೊನೆಗೆ ರಕ್ಷಿತಾ ಮಾತಿಗೆ ಧ್ರುವಂತ್‌ ಒಪ್ಪಿಗೆ ಕೊಡುತ್ತಿದ್ದರು. ಸಿಕ್ರೇಟ್‌ ರೂಮ್‌ನಲ್ಲಿ ಇಬ್ಬರು ಇರುತ್ತಿದ್ದ ದಿನಗಳೇ ವಿಕ್ಷಕರಿಗೆ ಸಖತ್‌ ಮಜಾ ನೀಡುತ್ತಿತ್ತು. ಬಿಗ್‌ಬಾಸ್‌ ಮನೆಯಲ್ಲಿ ಅತೀಯಾಗಿ ಜಗಳ ಆಡುತ್ತಿದ್ದ ಧ್ರುವಂತ್‌-ರಕ್ಷಿತಾ ಇಬ್ಬರದ್ದೂ ಮಿಥುನ ರಾಶಿ, ಆರ್ದ್ರಾ ನಕ್ಷತ್ರ ಅಂತೆ. ಒಂದೇ ರಾಶಿ-ನಕ್ಷತ್ರವಾಗಿದ್ದರಿಂದ ಇಬ್ಬರೂ ಬಿಟ್ಟು ಕೊಡುವ ಸ್ವಭಾವ ಹೊಂದಿಲ್ಲ ಎಂದು ಹೇಳಿದರೂ ತಪ್ಪಾಗದು.

ಇದೀಗ ಬಿಗ್‌ಬಾಸ್‌ ಮನೆಯಿಂದ ಹೊರ ಬಂದ್ಮೇಲೆ ಧ್ರುವಂತ್‌ ಬಿಗ್‌ಬಾಸ್‌ ವೀಡಿಯೋಗಳನ್ನು ನೋಡಿ ಎಂಜಾಯ್‌ ಮಾಡ್ತಿದ್ದಾರೆ. ಎಷ್ಟೇ ಗಲಾಟೆ ಮಾಡಿದ್ರೂ ಮುಗ್ಧ ಸ್ವಭಾವ ಹೊಂದಿರುವ ರಕ್ಷಿತಾ, ಧ್ರುವಂತ್ ಎಲಿಮಿನೇಟ್ ಆದಾಗ ಅವರ ಸೂಟ್ ಕೇಸ್‌ನಲ್ಲಿ ಕ್ಷಮೆ ಕೇಳಿ ಒಂದು ಪತ್ರ ಇಟ್ಟಿದ್ದರು. ಅದನ್ನು ಈಗ ಧ್ರುವಂತ್ ಸೋಶಿಯಾಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಕ್ಷಿತಾ ಕ್ಷಮಾಪಣೆ ಪತ್ರದಲ್ಲಿ ಏನಿದೆ?

‘ನಿಮಗೆ ಹರ್ಟ್ ಆಗಿದ್ರೆ ನನ್ನನ್ನು ಕ್ಷಮಿಸಿ. ಹ್ಯಾಪಿ ಮೆಮೊರಿಸಿ, ಬಿಬಿಕೆ 12 ರಕ್ಷಿತಾ ಅಂತ, ರಕ್ಷಿತಾ ಲೆಟರ್ ನಲ್ಲಿ ಬರೆದಿದ್ದಾರೆ. ಒಂದು ಸ್ಮೈಲ್ ಎಮೋಜಿ ಬಿಡಿಸಿದ್ದಾರೆ’ ಈ ರೀತಿ ರಕ್ಷಿತಾ ಶೆಟ್ಟಿ ಬರೆದಿರುವ ಕ್ಷಮಾಪಣೆ ಪತ್ರವನ್ನು ಧ್ರುವಂತ್‌ ಪೋಸ್ಟ್‌ ಮಾಡಿದ್ದಾರೆ. ಗಲಾಟೆ ಇಲ್ಲಿಗೆ ಮುಗಿದಿದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್‌ ಮುಗಿದ ಬಳಿಕವೂ ಆರೋಪ ಮುಂದುವರೆಸಿದ ಅಶ್ವಿನಿ ಗೌಡ! ಗಿಲ್ಲಿ ಏನಂದ್ರು?

ಇವರಿಬ್ಬರ ಜಗಳದ ಬಗ್ಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ರಕ್ಷಿತಾ ಶೆಟ್ಟಿ ಕೂಡ ಪ್ರತಿಕ್ರಿಯಿಸಿದ್ದಾರೆ. ‘ಅವರು ನನ್ನ ಹಾಗೆಯೇ. ನಮ್ಮಿಬ್ಬರದ್ದು ಒಂದೇ ರಾಶಿ, ನಕ್ಷತ್ರ. ಇಬ್ಬರೂ ಹಠ ಬಿಡುವವರಲ್ಲ. ಆದ್ರೆ ಕೊನೆಯಲ್ಲಿ ಧ್ರುವಂತ್ ಹೊಂದಿಕೊಂಡ್ರು. ಇದು ಒಂದು ಒಳ್ಳೆ ನೆನಪು’ ಎಂದು ರಕ್ಷಿತಾ ಹೇಳಿದ್ದಾರೆ.

Continue Reading

BIG BOSS

ಬಿಗ್‌ಬಾಸ್‌ ಮುಗಿದ ಬಳಿಕವೂ ಆರೋಪ ಮುಂದುವರೆಸಿದ ಅಶ್ವಿನಿ ಗೌಡ! ಗಿಲ್ಲಿ ಏನಂದ್ರು?

Published

on

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಮುಗಿದ ಮೇಲೆ ವಿನ್ನರ್‌ ಗಿಲ್ಲಿ ನಟ ತಮ್ಮ ಊರಲ್ಲಿ ರ್ಯಾಲಿ ನಡೆಸಿದ್ದಾರೆ. ಗಿಲ್ಲಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಇದೀಗ ಅಶ್ವಿನಿ ಗೌಡ ಬಿಗ್‌ಬಾಸ್‌ನಿಂದ ಹೊರ ಬಂದ ಬಳಿಕವೂ ಗಿಲ್ಲಿ ವಿರುದ್ಧ ಆರೋಪ ಮುಂದುವರೆಸಿದ್ದಾರೆ. ಆದರೆ ಗಿಲ್ಲಿ, ಅಶ್ವಿನಿ ಗೌಡ ಹಾಗೆ ಹೇಳಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ.


ಬಿಗ್‌ಬಾಸ್‌ ಮುಗಿಯುತ್ತಿದ್ದಂತೆ ಅಶ್ವಿನಿ ಗೌಡ, ‘ಸರಿಯಾದ ವ್ಯಕ್ತಿಗೆ ಗೆಲುವು ಸಿಕ್ಕಿದೆ’ ಎಂದು ಹೇಳಿದ್ದವರು ಈಗ ಮಾತು ಬದಲಾಯಿಸಿದ್ದಾರೆ. ‘ಬಡವರ ಮಕ್ಕಳು ಬೆಳೆಯಬೇಕು ಎಂದು ಡಾಲಿ ಧನಂಜಯ್‌ ಹೇಳಿದ್ದಾರೆ. ಅದು ನಿಜಕ್ಕೂ ಸತ್ಯ. ಬಡವರ ಮಕ್ಕಳು ಬೆಳೆಯಬೇಕು. ಆದರೆ, ಬಡವರ ಮಕ್ಕಳ ರೀತಿ ನಾಟಕ ಆಡುವವರು ಗೆದ್ದರೆ? ಅದು ಸರಿ ಅಲ್ಲ ಎಂದು ನನಗೆ ಅನಿಸುತ್ತದೆ’ ಎಂದು ಗಿಲ್ಲಿಗೆ ದಕ್ಕಿದ ವಿಜಯದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ರಕ್ಷಿತಾ ಶೆಟ್ಟಿ ಬಗ್ಗೆ ಹೇಳಿದ್ದ ‘S’ ಕ್ಯಾಟಗರಿ ಪದದ ಅರ್ಥ ಬಿಚ್ಚಿಟ್ಟ ಅಶ್ವಿನಿ ಗೌಡ!

ಈ ಬಗ್ಗೆ ಗಿಲ್ಲಿ ನಟ, ‘ನಾವು ತೀರ ಬಡವರು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಅಶ್ವಿನಿ ಹೊರಗೆ ಬಂದ ಮೇಲೆ ಮಾತನಾಡಿದ್ರಾ? ಅವರು ಸಾಮಾನ್ಯವಾಗಿ ಹೀಗೆಲ್ಲ ಹೇಳಲ್ಲ’ ಎಂದರು. ಗಿಲ್ಲಿಯ ಈ ರೀತಿಯ ಒಳ್ಳೆ ಗುಣ ಅನೇಕರಿಗೆ ಇಷ್ಟ ಆಗಿದೆ. ಗಿಲ್ಲಿನಟ ಈ ರೀತಿಯ ಗುಣ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page