Connect with us

LATEST NEWS

WATCH VIDEO : ಹಾಡಹಗಲೇ ಜುವೆಲ್ಲರಿ ಶಾಪ್‌ನಲ್ಲಿ ದರೋಡೆ; ಸಿನಿಮೀಯ ರೀತಿಯಲ್ಲಿ 25 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ

Published

on

ಮಂಗಳೂರು/ಬಿಹಾರ : ದರೋಡೆಕೋರರ ಗುಂಪೊಂದು ಆಭರಣ ಮಳಿಗೆಗೆ  ನುಗ್ಗಿ ಸಿನಿಮೀಯ ರೀತಿಯಲ್ಲಿ ದರೋಡೆಗೈದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸಿಬ್ಬಂದಿ ಹಾಗೂ ಗ್ರಾಹಕರನ್ನು ಗನ್ ಪಾಯಿಂಟ್‌ನಲ್ಲಿಟ್ಟು 25 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದೆ.

ಹಾಡಹಗಲೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಗನ್ ಹಿಡಿದು ಭದ್ರತಾ ಸಿಬ್ಬಂದಿಯನ್ನು ದೂರ ತಳ್ಳಿ ಮಳಿಗೆ ಒಳಗೆ ನುಗ್ಗಿದ ದರೋಡೆಕೋರರು ಬಳಿಕ ಶಾಪ್‌ನಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಹಕರನ್ನು ಒತ್ತೆಯಾಳಾಗಿರಿಸಿಕೊಂಡು ಕೈಗೆ ಸಿಕ್ಕಿದ್ದೆಲ್ಲವನ್ನೂ ದೋಚಿ ಪರಾರಿಯಾಗಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಏನಿದೆ?

ನಿನ್ನೆ(ಮಾ.10) ಬೆಳಿಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಾಸ್ಕ್ ಧರಿಸಿ ಕೈಯಲ್ಲಿ ಗನ್ ಹಿಡಿದು ಶೋ ರೂಂಗೆ ನುಗ್ಗಿದ ದರೋಡೆಕೋರರು, ಗ್ರಾಹಕರು ಮತ್ತು ಉದ್ಯೋಗಿಗಳನ್ನು ಕೈ ಮೇಲೆತ್ತಿ ಶರಣಾಗುವಂತೆ ಹೇಳಿದ್ದಾರೆ. ಕದಲಿದಲ್ಲಿ ಗುಂಡು ಹಾರಿಸುವುದಾಗಿ ಬೆದರಿಸಿದ್ದಾರೆ. ಶಾಪ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮನೋಜ್ ಕುಮಾರ್ ಎಂಬುವವರಿಂದ ಬಂದೂಕು ಕಸಿದ ದರೋಡೆಕೋರರು, ಜ್ಯುವೆಲ್ಲರಿ ಶಾಪ್‌ನಲ್ಲಿ ಆಭರಣ ಇಡುವಂತಹ ರ್ಯಾಕ್‌ಗಳ ಬಳಿ ಹೋಗಿ ಕೈಗೆ ಸಿಕ್ಕಿದ್ದೆಲ್ಲವನ್ನು ದೋಚಿದ್ದಾರೆ. ಮೊದಲೇ ಯೋಜನೆ ರೂಪಿಸಿ ಈ ದರೋಡೆ ಮಾಡಿರುವ ಅನುಮಾನವಿದೆ.

ತುರ್ತು ಕರೆ ಸ್ವೀಕರಿಸದ ಪೊಲೀಸರು :

ದರೋಡೆ ವೇಳೆ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಪದೇ ಪದೇ ಕರೆ ಮಾಡಿ ಸಹಾಯ ಪಡೆಯಲು ಯತ್ನಿಸಿದರು. ಕೇವಲ 600 ಮೀಟರ್ ದೂರದಲ್ಲಿರುವ ಹತ್ತಿರದ ಪೊಲೀಸ್ ಠಾಣೆಗೆ ಪದೇ ಪದೇ ಕರೆ ಮಾಡಿದರು. ಆದರೆ 25-30 ಬಾರಿ ತುರ್ತು ಕರೆಗಳನ್ನು ಮಾಡಿದರೂ, ಯಾವುದೇ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರಲಿಲ್ಲ. ಇದರಿಂದಾಗಿ ದರೋಡೆಕೋರರು ಸಿಕ್ಕಿಬೀಳದೆ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ತಿಳಿದು ಬಂದಿದೆ. ಸದ್ಯ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

FILM

ನಟಿ ಮೇಲೆ ಲೈಂ*ಗಿಕ ದೌರ್ಜ*ನ್ಯ ಪ್ರಕರಣ : ನಟ ದಿಲೀಪ್ ಖುಲಾಸೆ

Published

on

ಮಂಗಳೂರು/ಕೊಚ್ಚಿ : ಬಹುಭಾಷಾ ನಟಿಗೆ ಲೈಂ*ಗಿಕ ಕಿರುಕು*ಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್‌ರನ್ನು ಕೇರಳ ಹೈಕೋರ್ಟ್ ಖುಲಾಸೆಗೊಳಿಸಿದೆ. ಹಾಗೆಯೇ, ಸುನೀಲ್ ಎನ್.ಎಸ್. ಅಲಿಯಾಸ್ ಪಲ್ಸರ್ ಸುನಿ ಸೇರಿದಂತೆ 6 ಮಂದಿಯನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದೆ.

2017 ರಲ್ಲಿ ನಟಿಯನ್ನು ಅಪಹರಿಸಿ ಲೈಂ*ಗಿಕ ದೌರ್ಜ*ನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಸುದೀರ್ಘ ವಿಚಾರಣೆ ನಡೆಸಿದ ಎರ್ನಾಕುಲಂ ಪ್ರಿನ್ಸಿಪಾಲ್ ಸೆಷನ್ಸ್ ನ್ಯಾಯಾಲಯ ಇಂದು(ಡಿ.08) ಮಹತ್ವದ ತೀರ್ಪು ಪ್ರಕಟಿಸಿದ್ದು, ನಟ ದಿಲೀಪ್‌ರನ್ನು ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ ಎನ್.ಎಸ್.ಸುನಿಲ್ ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಬಿ.ಮಣಿಕಂದನ್, ವಿ.ಪಿ.ವಿಜೀಶ್, ಎಚ್. ಸಲೀಂ(ವಡಿವಲ್ ಸಲೀಂ) ಮತ್ತು ಪ್ರದೀಪ್ ಅವರನ್ನು ತಪ್ಪಿತಸ್ಥರೆಂದು ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ ವರ್ಗೀಸ್ ಘೋಷಿಸಿದರು.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಯಲ್ಲಿ ನಟಿಸಿದ್ದ ನಟಿಯೊಬ್ಬರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು 2017ರಲ್ಲಿ ದೂರು ನೀಡಲಾಗಿತ್ತು. ನಟ ದಿಲೀಪ್ ಸೇರಿದಂತೆ 10 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಕೃತ್ಯದಲ್ಲಿ ನೇರವಾಗಿ ಭಾಗವಹಿಸದಿದ್ದರೂ ಘಟನೆಯ ಮುಖ್ಯ ಸೂತ್ರಧಾರ ನಟ ದಿಲೀಪ್‌ ಕುಮಾರ್‌ ಎಂಬುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಸಂತ್ರಸ್ತ ನಟಿಯ ಮೇಲಿನ ವೈಯಕ್ತಿಕ ದ್ವೇಷದಿಂದ ಅತ್ಯಾ*ಚಾರಕ್ಕೆ ಸುಪಾರಿ ನೀಡಿದ್ದರು ಎಂದು ದಿಲೀಪ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಆದರೆ, ದಿಲೀಪ್ ಇದನ್ನು ಅಲ್ಲಗಳೆದಿದ್ದು, ತಾನೇನು ತಪ್ಪು ಮಾಡಿಲ್ಲವೆಂದು ವಾದಿಸಿದ್ದರು.

Continue Reading

LATEST NEWS

ಬೆಟ್ಟ ಹತ್ತುವಾಗ ಕಾಲು ಜಾರಿ ಬಿ*ದ್ದು ವೃದ್ಧ ಸಾ*ವು

Published

on

ಮಂಗಳೂರು/ರಾಮನಗರ : ಬೆಟ್ಟ ಹತ್ತುವಾಗ ಕಾಲು ಜಾ*ರಿ ಬಿ*ದ್ದು ವೃದ್ಧ ಸಾ*ವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ರೇವಣಸಿದ್ದೇಶ್ವರ ಬೆಟ್ಟದಲ್ಲಿ ನಡೆದಿದೆ. ಬಿಡದಿ ಹೋಬಳಿಯ ಕೆಂಪನಹಳ್ಳಿ ನಿವಾಸಿ, 65 ವರ್ಷದ ರೇವಣ್ಣ ಮೃ*ತ ದು*ರ್ದೈವಿ.

ಕುಟುಂಬ ಸಮೇತ ರೇವಣಸಿದ್ದೇಶ್ವರ ಬೆಟ್ಟಕ್ಕೆ ಬಂದಿದ್ದ ರೇವಣ್ಣ ದೇವರ ದರ್ಶನ ಮಾಡಲು ಬೆಟ್ಟ ಹತ್ತುವಾಗ ಕಾಲು ಜಾ*ರಿ ಕಂದಕಕ್ಕೆ ಬಿ*ದ್ದು, ಸ್ಥಳದಲ್ಲೇ ಕೊನೆಯು*ಸಿರೆಳೆದಿದ್ದಾರೆ.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ವಿಷಯ ತಿಳಿದು ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರೇವಣ್ಣ ಶ*ವ ಮೇಲಕ್ಕೆತ್ತಿದ್ದಾರೆ. ಘಟನೆ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ : ಡಿಸ್ಕಸ್ ಥ್ರೋನಲ್ಲಿ ಮಂಗಳೂರಿನ ಕೃತಿ ಎನ್.ಪಿ ಪ್ರಥಮ

Published

on

ಮಂಗಳೂರು/ಬೆಂಗಳೂರು : ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ 17 ವರ್ಷದ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ 2025-2026 ನಡೆಯಿತು.

ಡಿಸ್ಕಸ್ ಥ್ರೋ ವಿಭಾಗದಲ್ಲಿ ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಮಾಣಿಯ ವಿದ್ಯಾರ್ಥಿನಿ  ಕೃತಿ. ಎನ್.ಪಿ ಪ್ರಥಮ ಸ್ಥಾನ ಪಡೆದಿದ್ದು,  ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾಳೆ.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ಕೃತಿ ಗೋಳ್ತಮಜಲು ಗ್ರಾಮದ ನಿವಾಸಿ ದಿನೇಶ್.ಬಿ ಮತ್ತು ತೇಜಾಕ್ಷಿ ದಂಪತಿ ಪುತ್ರಿ.

Continue Reading
Advertisement

Trending

Copyright © 2025 Namma Kudla News

You cannot copy content of this page