Connect with us

STATE

ಯೂಟ್ಯೂಬ್ ನೋಡಿ ಆಪರೇಷನ್…ಮಹಿಳೆ ಸಾವು!

Published

on

ಬಾರಾಬಂಕಿ: ಯೂಟ್ಯೂಬ್ ವೀಡಿಯೋಗಳನ್ನು ನೋಡಿ ಶಸ್ತ್ರ ಚಿಕಿತ್ಸೆ ನಡೆಸಿದ ನಕಲಿ ವೈದ್ಯನ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ(ಡಿ.6) ನಡೆದಿದೆ. ಮುನಿಶಾರ(25) ಮೃತಪಟ್ಟ ಮಹಿಳೆ.


ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮುನಿಶಾರ, ಜ್ಞಾನಪ್ರಕಾಶ್ ಮಿಶ್ರಾ(48) ನಡೆಸುತ್ತಿದ್ದ ಕ್ಲಿನಿಕ್ಗೆ ಭೆಟಿ ನೀಡಿದಾಗ, ಪಿತ್ತ ಕೋಶದಲ್ಲಿ ಕಲ್ಲುಗಳು ಹೆಚ್ಚಿವೆ, ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯ ಎಂದು ಆತ ವೈದ್ಯನಂತೆ ಹೇಳಿದ್ದಾನೆ ಎಂದು ಕುಟುಂಬದವರು ದೂರು ನೀಡಿದ್ದಾರೆ.

ಮಿಶ್ರಾ ಮೊದಲು ಇನ್ನೊಬ್ಬ ವೈದ್ಯರು ಶಸ್ತ್ರಚಿಕಿತ್ಸೆಗೆ ಬರುತ್ತಾರೆ ಎಂದು ಹೇಳಿದ್ದರೂ, ಕೊನೆಗೆ ಯಾರೂ ಬರಲಿಲ್ಲ. ಬಳಿಕ ನಾನು ಯೂಟ್ಯೂಬ್ ನೋಡಿದರೆ ಸಾಕು, ವಿಧಾನ ಗೊತ್ತಿದೆ ಎಂದು ಹೇಳಿ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾನೆ ಎಂದು ಮುನಿಶಾರ ಪತಿ ತೇಜ್ ಬಹದ್ದೂರು ರಾವತ್ ಅರೋಪಿಸಿದ್ದಾರೆ.

ಪ್ರಕ್ರಿಯೆ ತಪ್ಪಾಗಿದ್ದರಿಂದ ಮರುದಿನ ಮುನಿಶಾರ ಸ್ಥಿತಿ ಗಂಭೀರಗೊಂಡಿದ್ದು, ಪತಿ ಕ್ಲಿನಿಕ್ ಬರುವಷ್ಟರಲ್ಲಿ ಮಹಿಳೆ ಪ್ರಾಣ ಬಿಟ್ಟಿದ್ದರು. ಘಟನೆಯ ಬಳಿಕ ವೈದ್ಯಕೀಯ ತಂಡ ನಡೆಸಿದ ಪರಿಶೀಲನೆಯಲ್ಲಿ ಅವನ ಕ್ಲಿನಿಕ್ ಕೂಡ ಆರೋಗ್ಯ ಇಲಾಖೆಯಲ್ಲಿ ನೋಂದಾಯಿಸಿರಲಿಲ್ಲ ಎಂದು ಬಾರಾಬಂಕಿ ಎಸ್ಪಿ ಅರ್ಪಿತ್ ವಿಜಯವರ್ಗೀಯ ತಿಳಿಸಿದ್ದಾರೆ.

ಇದನ್ನೂ ಓದಿ: ಎಚ್.ಎಂ ರೇವಣ್ಣ ಪುತ್ರನ ಕಾರು ಡಿ*ಕ್ಕಿ; ಬೈಕ್ ಸವಾರ ಸಾ*ವು

ಶಸ್ತ್ರಚಿಕಿತ್ಸೆ ವೇಳೆ ಸಹಾಯ ಮಾಡಿದ ಆರೋಪಿಯ ಸೋದರಳಿಯನೂ ಪರಾರಿಯಾಗಿದ್ದು, ಇಬ್ಬರನ್ನು ಪತ್ತೆಹಚ್ಚಲು ತಂಡಗಳನ್ನು ರಚಿಸಲಾಗಿದೆ. ಘಟನೆ ತಿಳಿದ ಗ್ರಾಮಸ್ಥರು ಹಾಗೂ ಮೃತರ ಬಂಧುಗಳು ಕ್ಲಿನಿಕ್ ಎದುರು ಪ್ರತಿಭಟನೆ ನಡೆಸಿದರು. ನಂತರ ಹಿರಿಯ ಅಧಿಕಾರಿಗಳು ತ್ವರಿತ ಕ್ರಮಕ್ಕೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಕೋಥಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

LATEST NEWS

ಅತ್ಯಾಚಾರ ಪ್ರಕರಣಕ್ಕೆ ಸುಂದರ ಹುಡುಗಿಯರೇ ಕಾರಣ-ಕಾಂಗ್ರೆಸ್ ಶಾಸಕನ ಹೇಳಿಕೆಗೆ ವ್ಯಾಪಕ ಆಕ್ರೋಶ

Published

on

ಇಂದೋರ್‌: ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಸುಂದರ ಹುಡುಗಿಯರೇ ಕಾರಣ ಎಂದು ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಫೂಲ್ ಸಿಂಗ್ ಬರೈಯ್ಯಾ ಹೇಳಿಕೆಯೊಂದನ್ನು ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಸಂಘಟನೆಗಳಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ಮಾತನಾಡಿರುವ ಬರೈಯ್ಯಾ, ಯಾವುದೇ ಒಬ್ಬ ಪುರುಷ ರಸ್ತೆಯಲ್ಲಿ ಹೋಗುವಾಗ ಸೌಂದರ್ಯ ಹೆಚ್ಚಿರುವ ಹುಡುಗಿಯನ್ನ ನೋಡಿದ್ರೆ ಅವನ ಮನಸ್ಸು ಚಂಚಲಗೊಳ್ಳುತ್ತದೆ, ಇದರಿಂದ ಅವನು ಹಳಿ ತಪ್ಪುತ್ತಾನೆ. ಅಲ್ಲದೇ ಈ ಚಂಚಲತೆ ಅತ್ಯಾಚಾರಕ್ಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ .

ರುದ್ರಾಮಯಲ್ ತಂತ್ರ ಪುಸ್ತಕದ ವಿವರಣೆಯನ್ನು ಉಲ್ಲೇಖಿಸಿ ಮಾತನಾಡಿದ ಶಾಸಕ, ಕೆಲ ಸಮುದಾಯದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವು ತಮಗೆ ತೀರ್ಥಯಾತ್ರೆಗೆ ಸಮಾನವಾದ ಆಧ್ಯಾತ್ಮಿಕ ಅರ್ಹತೆ ತರುತ್ತದೆ ಎಂದು ಅಪರಾಧಿಗಳು ನಂಬುತ್ತಾರೆ. ಅಲ್ಲದೇ ಅತ್ಯಾಚಾರವನ್ನ ವ್ಯಕ್ತಿಗಳಿಗಿಂತ ಗುಂಪುಗಳು ಹೆಚ್ಚಾಗಿ ಮಾಡುತ್ತವೆ. ಇಂತಹ ಅಪರಾಧಗಳು ವಿಕೃತ ಮನಸ್ಥಿತಿಯಿಂದ ಉಂಟಾಗುತ್ತವೆ.

ಮಹಿಳೆಯೊಂದಿಗೆ ಸಂಭೋಗಿಸಿದರೆ, ನೀವು ತೀರ್ಥಯಾತ್ರೆಯ ಪ್ರತಿಫಲ ಪಡೆಯುತ್ತೀರಿ ಎಂದು ಧರ್ಮಗ್ರಂಥದಲ್ಲಿ ಬರೆಯಲಾಗಿದೆ. ತೀರ್ಥಯಾತ್ರೆಗೆ ಹೋಗಲು ಸಾಧ್ಯವಾಗದವರು ಈ ರೀತಿ ಅತ್ಯಾಚಾರ ಎಸಗುತ್ತಿದ್ದಾರೆ. ಇದು ಮಕ್ಕಳ ಮೇಲೂ ನಡೆಯುತ್ತಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

ಸೇರಿದಂತೆ ವಿವಿಧ ಸಂಘಟನೆಗಳು ಇವರ ಮಾತನ್ನು ತೀವ್ರವಾಗಿ ಖಂಡಿಸಿವೆ. ಶಾಸಕರ ಹೇಳಿಕೆ ಕ್ರಿಮಿನಲ್‌ ಮತ್ತು ವಿಕೃತ ಮನಸ್ಥಿತಿಯ ಪ್ರತಿಬಿಂಬ. ಮಹಿಳೆಯರನ್ನ ಅಂದದಲ್ಲಿ ತೂಗುವುದು, ದಲಿತ ಮತ್ತು ಬುಡಕಟ್ಟು ಮಹಿಳೆಯರ ಮೇಲಿನ ಘೋರ ಅಪರಾಧಗಳನ್ನ ಪವಿತ್ರ ಕಾರ್ಯವೆಂದು ಬಣ್ಣಿಸುವುದು ಸ್ತ್ರೀದ್ವೇಷಿ ಹಾಗೂ ದಲಿತ ವಿರೋಧಿ ಚಿಂತನೆ ಆಗಿದೆ ಎಂದು ಕಿಡಿಕಾರಿದೆ. ಅಲ್ಲದೇ ಬರೈಯ್ಯಾರನ್ನ ತಕ್ಷಣವೇ ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದೆ.

 

Continue Reading

LATEST NEWS

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ- ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

Published

on

ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದ ಸಿರವಾರ ಕ್ರಾಸ್ ಬಳಿ ನಡೆದಿದೆ.

ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಶಾಂತಪ್ಪ (26) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ಶಾಂತಪ್ಪ ಕಾರು ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡ ಹಿನ್ನೆಲೆ ಕಾರು ಪಲ್ಟಿ ಹೊಡೆದು ಮೃತಪಟ್ಟಿದ್ದಾರೆ.

ಮಾರೆಪ್ಪ, ಶಿನು ಪವಾರ್ ಎಂಬವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವದುರ್ಗದ ಮರಗಮದಿಬ್ಬಿ ತಾಂಡದವರಾದ ಮೂವರು ಅರಕೇರಾದಿಂದ ಸಿರವಾರಕ್ಕೆ ಹೊರಟಿದ್ದ ವೇಳೆ ಕಾರು ಪಲ್ಟಿಯಾಗಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

 

Continue Reading

LATEST NEWS

ನಿಂತಿದ್ದ ಪಿಕ್‌-ಅಪ್‌ಗೆ ಡಿಕ್ಕಿ ಹೊಡೆದ ಶಾಲಾ ಮಕ್ಕಳಿದ್ದ ವಾಹನ; ನಾಲ್ಕು ಮಕ್ಕಳು ಗಂಭೀರ ಗಾಯ

Published

on

ಕಾರವಾರ: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಬೊಲೆರೊ ಓಮಿನಿ ನಿಂತಿದ್ದ ಪಿಕ್‌-ಅಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹಳೆ ಬಸ್‌ ನಿಲ್ದಾಣದ ಬಳಿ ಸಂಭಿವಿಸಿದೆ.


ತನಿಷ್ಕ (15), ಅದ್ವಿತ್ (12), ಅರ್ಜುನ್ (13), ಆಯಿರಾ (10) ಗಂಭೀರ ಗಾಯಗೊಂಡ ಮಕ್ಕಳು. ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕೆಎಸ್ಆರ್‌ಟಿಸಿ ಬಸ್‌-ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕನ ಜೀವ ಉಳಿದಿದ್ದೇ ಒಂದು ಪವಾಡ

ಈ ಘಟನೆ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುವಾಗ ನಡೆದಿದೆ. ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page