Connect with us

LATEST NEWS

IND vs NZ: ಏಕದಿನ ಸರಣಿಯಿಂದ ವಾಷಿಂಗ್ಟನ್ ಸುಂದರ್‌ ಹೊರಕ್ಕೆ; ಬಿಸಿಸಿಐಯಿಂದ ಅಚ್ಚರಿಯ ಆಯ್ಕೆ!

Published

on

ನವದೆಹಲಿ: ನ್ಯೂಜಿಲೆಂಡ್‌ ವಿರುದ್ದ ನಡೆಯುತ್ತಿರುವ ಏಕದಿನ ಸರಣಿಯಿಂದ ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಹೊರಬಿದ್ದಿದ್ದಾರೆ. ಸುಂದರ್‌ ಗಾಯಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಅಚ್ಚರಿಯ ಆಯ್ಕೆ ನಡೆಸಿದೆ.


ಹೌದು, ಭಾನುವಾರ ವಡೋದರದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ವಾಷಿಂಗ್ಟನ್‌ ಸುಂದರ್‌ ಗಾಯಗೊಂಡಿದ್ದರು. ಅವರ ಪಕ್ಕೆಲುಬಿಗೆ ಗಾಯವಾಗಿತ್ತು. ಈ ಕಾರಣದಿಂದ ಅವರಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ನ್ಯೂಝಿಲೆಂಡ್‌ ವಿಜರುದ್ದದ ಮುಂದಿನ ಎರಡು ಪಂದ್ಯಗಳಲ್ಲಿ ಸುಂದರ್‌ ಕಾಣಿಸಿಕೊಳ್ಳುವುದಿಲ್ಲ.

ಸುಂದರ್‌ ಅವರ ಬದಲಿಗೆ ದೆಹಲಿ ಮತ್ತು ಎಲ್‌ಎಸ್‌ಜಿ ಆಟಗಾರ ಆಯುಷ್‌ ಬಡೋನಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಬುಧವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಬಡೋನಿ ರಾಜ್‌ಕೋಟ್‌ನಲ್ಲಿ ತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ದೆಹಲಿ ಮೂಲದ 26ರ ಹರೆಯದ ಬಡೋನಿ ಬಲಗೈ ಬ್ಯಾಟರ್‌ ಆಗಿದ್ದು, ಆಫ್‌ ಸ್ಪಿನ್‌ ಬೌಲಿಂಗ್‌ ಮಾಡುವ ಸಾಮಾರ್ಥ್ಯವನ್ನು ಹೊಂದಿದ್ದಾರೆ.

ಕುತೂಹಲಕಾರಿ ವಿಚಾರವೆಂದರೆ, 2022ರ ಐಪಿಎಲ್‌ನಲ್ಲಿ LSG ಯಲ್ಲಿ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿಯೇ ಆಯುಷ್ ಬದೋನಿ ಅವರಿಗೆ ಫಿನಿಷರ್ ಆಗಿ ಅವಕಾಶ ಸಿಕ್ಕಿತು. ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿ ಗಮನಾರ್ಹ ಅರ್ಧಶತಕ ಗಳಿಸಿದರು ಮತ್ತು ಅಂದಿನಿಂದ LSG ನಿರಂತರವಾಗಿ ಅವರನ್ನು ನಂಬಿದೆ. ಕಳೆದ ವರ್ಷ ಬದೋನಿ ಅವರಿಗೆ ಅತ್ಯುತ್ತಮ ಐಪಿಎಲ್ ಅಭಿಯಾನವಾಗಿತ್ತು. ಅವರು 32.90 ಸರಾಸರಿಯಲ್ಲಿ ಮತ್ತು 148.19 ಸ್ಟ್ರೈಕ್ ರೇಟ್‌ನಲ್ಲಿ 329 ರನ್‌ಗಳನ್ನು ಗಳಿಸಿದರು.

ಇದನ್ನೂ ಓದಿ: ʼಧೋನಿ ವಿಚಾರದಲ್ಲೂ ಇದೆ ರೀತಿ ಆಗಿದೆʼ ಅಭಿಮಾನಿಗಳ ವರ್ತನೆಗೆ ಅಸಮಾಧಾನ ಹೊರಹಾಕಿದ ವಿರಾಟ್‌ ಕೊಹ್ಲಿ!

ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ಆಯುಷ್ ಬದೋನಿ.

DAKSHINA KANNADA

ಬಂಟ್ವಾಳ : ಹುಲ್ಲಿನಿಂದಾವೃತ ಜಾಗದಲ್ಲಿ ಆಕಸ್ಮಿಕ ಬೆಂ*ಕಿ

Published

on

ಬಂಟ್ವಾಳ : ಹುಲ್ಲಿನಿಂದಾವೃತವಾದ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಖಾಸಗಿ  ಜಾಗವೊಂದರಲ್ಲಿ ಅ*ಗ್ನಿ ಆಕಸ್ಮಿಕ ಸಂಭವಿಸಿದ್ದು, ಸಮೀಪದ ಸಂಚಯಗಿರಿಯವರೆಗೂ ವ್ಯಾಪಿಸಿತು.

ಹುಲ್ಲಿನಿಂದಾವೃತ ಜಾಗದಲ್ಲಿ ಬೆಂ*ಕಿ ಕಾಣಿಸಿಕೊಂಡಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಕೂಡಲೇ ಸ್ಥಳೀಯರು ಬಂಟ್ವಾಳದ ಅ*ಗ್ನಿಶಾಮಕದಳಕ್ಕೆ ಕರೆ ಮಾಡಿದ್ದು, ಈ ವೇಳೆ ಬಂಟ್ವಾಳದಲ್ಲಿದ್ದ ಏಕೈಕ ಅ*ಗ್ನಿಶಾಮಕ ವಾಹನ ಮಂಚಿಗೆ ಕರೆಯೊಂದರ ಮೇಲೆ ತೆರಳಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ವಾಹನ ಆಗಮಿಸಿದ್ದು, ಅಷ್ಟರಲ್ಲಾಗಲೇ ಸ್ಥಳೀಯರು ನಂದಿಸುವ ಕಾರ್ಯ ಆರಂಭಿಸಿದ್ದರು.

ಈ ಜಾಗದ ಹಿಂಭಾಗ ಸಂಚಯಗಿರಿ ಬಡಾವಣೆ ಇದ್ದು, ಇಲ್ಲಿಯೂ ಕೆಲ ಭಾಗಕ್ಕೆ ಬೆಂ*ಕಿ ವ್ಯಾಪಿಸಿತ್ತು. ಗ್ರಾಮ ಆಡಳಿತಾಧಿಕಾರಿ ಯಶ್ವಿತಾ, ಸಿಬ್ಬಂದಿ ಸದಾಶಿವ ಕೈಕಂಬ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

ಜಾಗ ಖರೀದಿಸಿ ಖಾಲಿ ಬಿಟ್ಟುಬಿಡುವವರು ಜಾಗದಲ್ಲಿ ಹುಲ್ಲು ಬೆಳೆದು ಸಮೀಪದವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ, ಅಗ್ನಿ ಆಕಸ್ಮಿಕದ ಸಂದರ್ಭ ಸ್ಥಳೀಯರು ಹರಸಾಹಸಪಡಬೇಕಾಗುತ್ತದೆ. ಈ ಕುರಿತು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಈ ಸಂದರ್ಭ ಒತ್ತಾಯಿಸಿದರು.

Continue Reading

LATEST NEWS

ಮಗನೇ ಹೋದ ಮೇಲೆ ಕಾರು ಯಾಕೆ? 6 ಕೋಟಿಯ BMW ಸಮಾಧಿ ಮಾಡಿದ ತಂದೆ!

Published

on

ಮಾಸ್ಕೋ: ಮಗನ ಅಗಲಿಕೆಯ ದುಃಖವನ್ನು ತಾಳಲಾರದೆ, ಅಹಮದಾಬಾದ್‌ನ ತಂದೆಯೊಬ್ಬರು ಮಗನ ನೆನಪಿಗಾಗಿ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ BMW ಕಾರನ್ನು ಸಮಾಧಿ ಮಾಡಿದ್ದಾರೆ.


ತಂದೆಯು ಮಗನ ಹುಟ್ಟುಹಬ್ಬದ ಅಂಗವಾಗಿ ಈ ಐಷಾರಾಮಿ BMW ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಕಾರು ಖರೀದಿಸಿದ ಕೆಲವೇ ದಿನಗಳಲ್ಲಿ ಮಗ ಅಕಾಲಿಕ ಮರಣಕ್ಕೀಡಾದನು. ಇದರ ಪರಿಣಾಮ ಮಗ ಸಮಾಧಿ ಪಕ್ಕದಲ್ಲೇ ಹೊಸ BMW ಕಾರನ್ನು ಸಮಾಧಿ ಮಾಡಿದ ವೀಡಿಯೋ ವೈರಲ್‌ ಆಗುತ್ತಿದೆ.

ಮಗನೇ ಇಲ್ಲದ ಮೇಲೆ ಈ ಕಾರು ಏಕೆ ಎಂದು ನೊಂದ ತಂದೆ, ಅದನ್ನು ಗುಂಡಿ ತೋಡಿ ಸಮಾಧಿ ಮಾಡುವ ನಿರ್ಧಾರ ಮಾಡಿದರು. ಜೆಸಿಬಿ ಮೂಲಕ ಗುಂಡಿ ತೋಡಿ, ಬೆಲೆಬಾಳುವ ಕಾರನ್ನು ಮಗನ ಸಮಾಧಿಯ ಪಕ್ಕದಲ್ಲೇ ಹೂಳುತ್ತಿರುವ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಪತ್ನಿ ತವರು ಮನೆಯಿಂದ ಬಂದಿಲ್ಲ ಎಂದು ಮಾವನನ್ನೇ ಕೊಂದ ಅಳಿಯ!

ಈ ಘಟನೆಗೆ ಸಂಬಂಧಿಸಿದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಇದು ತಂದೆಯ ಪ್ರೀತಿಯ ಸಂಕೇತ ಎಂದರೆ, ಮತ್ತೆ ಕೆಲವರು ಹಣವನ್ನು ದಾನ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Continue Reading

LATEST NEWS

ಕಾರಿನಲ್ಲಿ ಪತ್ತೆಯಾಯ್ತು ಪ್ರೇಮಿಗಳ ಶ*ವ!

Published

on

ಉತ್ತರ ಪ್ರದೇಶ/ಮಂಗಳೂರು : ಪ್ರೇಮಿಗಳ ದಿನದಂದೇ ದುರಂ*ತವೊಂದು ನಡೆದಿದೆ. ಕಾರಿನಲ್ಲಿ ಪ್ರೇಮಿಗಳ ಶ*ವ ಪತ್ತೆಯಾಗಿದೆ. ಈ ಘಟನೆ ನಡೆದಿರೋದು  ಉತ್ತರ ಪ್ರದೇಶದ ನೋಯ್ಡಾದಲ್ಲಿ. ಶೂಟ್ ಮಾಡಿಕೊಂಡು ಪ್ರೇಮಿಗಳು ಕಾರಿನಲ್ಲೇ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನಿಲ್ಲಿಸಿದ್ದ ಕಾರಿನಲ್ಲಿ ಇಬ್ಬರ ಮೃ*ತದೇಹಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದ್ದು, ಇಬ್ಬರೂ ಗುಂಡು ಹಾ*ರಿಸಿಕೊಂಡು ಮೃ*ತಪಟ್ಟಿರುವುದು ದೃಢವಾಗಿದೆ.

ಇಬ್ಬರಿಗೂ ಗುಂ*ಡೇಟಿನ ಗಾ*ಯಗಳಾಗಿದ್ದು, ಮೃ*ತ ಯುವಕನ ಕೈಯಲ್ಲಿ ಪಿಸ್ತೂಲ್ ಪತ್ತೆಯಾಗಿದೆ. ಯುವಕ ಮೊದಲು ಯುವತಿಗೆ ಗುಂ* ಡು ಹಾ*ರಿಸಿ, ನಂತರ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page