Connect with us

DAKSHINA KANNADA

‘ಡ್ರಗ್ಸ್ ಮುಕ್ತ ಮಂಗಳೂರು’ ನಗರ ಮಾಡಲು ನಾಳೆ ವಾಕಥಾನ್‌: ವಿದ್ಯಾರ್ಥಿಗಳಿಗೆ ರೀಲ್ಸ್ ಮೇಕಿಂಗ್ ಸ್ಪರ್ಧೆ

Published

on

ಮಂಗಳೂರು: ನಗರವನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಹಾಗೂ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್‌ ವತಿಯಿಂದ ‘ಡ್ರಗ್‌ ಮುಕ್ತ ಮಂಗಳೂರು’ ವಾಕಥಾನ್‌ ನ.1 ರಂದು ಹಂಪನಕಟ್ಟೆಯಿಂದ ಹೊರಡುವ ವಾಕಥಾನ್‌ ಮಂಗಳಾ ಸ್ಟೇಡಿಯಂವರೆಗೆ ನಡೆಯಲಿದೆ.

ಇದರಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಸಹಿತ ಸಾವಿರಾರು ಮಂದಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಮಂಗಳೂರು ಪೊಲೀಸ್‌ ಕಮೀಷನರ್‌ ಅನುಪಮ್‌ ಅಗರ್‌ವಾಲ್‌ ಮುಂದಾಳತ್ವ ವಹಿಸಲಿದ್ದಾರೆ. ಹಂಪನಕಟ್ಟೆ ಟೌನ್‌ಹಾಲ್‌ ನಿಂದ ಸಂಜೆ 4 ಗಂಟೆಗೆ ಹೊರಡುವ ವಾಕಥಾನ್‌ ಕೆಎಸ್‌ ರಾವ್‌ ರೋಡ್‌, ನವಭಾರತ್‌ ಸರ್ಕಲ್‌, ಪಿವಿಎಸ್‌, ಲಾಲ್‌ ಭಾಗ್‌, ನಾರಾಯಣ ಗುರು ವೃತ್ತದ ಮೂಲಕ ಮಂಗಳಾ ಸ್ಟೇಡಿಯಂಗೆ ತಲುಪಲಿದೆ.

ಡ್ರಗ್‌ ಫ್ರೀ ಮಂಗಳೂರು ಮಾಡುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಡ್ರಗ್‌ ಜಾಗೃತಿ ಸಂಬಂಧಿತ ವಿಷಯವಾಗಿ ಸ್ಪರ್ಧೆ ಆಯೋಜಿಸಲಾಗಿದೆ. ಪೋಸ್ಟರ್‌ ಮೇಕಿಂಗ್‌ ಹಾಗೂ ರೀಲ್ಸ್‌ ಮೇಕಿಂಗ್‌ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ 8 ಸಾವಿರ ಹಾಗೂ ದ್ವಿತೀಯ 5 ಸಾವಿರ ಹಾಗೂ ತೃತೀಯ 3 ಸಾವಿರ ನಗದು ಬಹುಮಾನ ಪಡೆಯಲಿದ್ದಾರೆ.

DAKSHINA KANNADA

ನಾಳೆಯಿಂದ ಎಸ್.ಎಸ್. ಎಲ್‌.ಸಿ. ಪರೀಕ್ಷೆ ಆರಂಭ; ಬಾಲಕರಿಗೂ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ

Published

on

ಮಂಗಳೂರು : ಈ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಯು ನಾಳೆ ಮಾರ್ಚ್ 21 ರಂದು ಆರಂಭವಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 92 ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 29760 ಮಂದಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆ ಸುಸೂತ್ರವಾಗಿ ನಡೆಸಲು ಒಟ್ಟು 2057 ಸಿಬಂದಿಯನ್ನು ನಿಯೋಜಿಸಲಾಗಿದೆ. ಶಾಲೆಗಳ ಮೂಲಕ 14,735 ಬಾಲಕರು ಮತ್ತು 13,711 ಬಾಲಕಿಯರು ಸೇರಿದಂತೆ ಒಟ್ಟು 28,446 ವಿದ್ಯಾರ್ಥಿಗಳು ನೊಂದಾಯಿಸಿದ್ದಾರೆ.

ಈ ಪೈಕಿ 8892 ಸರಕಾರಿ ಶಾಲೆಗಳ ವಿದ್ಯಾರ್ಥಿಗಳು, 7864 ಅನುದಾನಿತ ಹಾಗೂ 11690 ಮಂದಿ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಾಗಿರುತ್ತಾರೆ. ಖಾಸಗಿಯಾಗಿ ಮೊದಲ ಬಾರಿ ಪರೀಕ್ಷೆ ಬರೆಯಲು 579 ಹುಡುಗರು ಮತ್ತು 252 ಹುಡುಗಿಯರ ಸಹಿತ 831 ವಿದ್ಯಾರ್ಥಿಗಳು ನೊಂದಾಯಿಸಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳು 259 ಮಂದಿ ಇದ್ದು,  211 ಬಾಲಕರು ಮತ್ತು 48 ಬಾಲಕಿಯರು ಇದ್ದಾರೆ. ಖಾಸಗಿಯಾಗಿ ಪುನರಾವರ್ತಿತ ವಿದ್ಯಾರ್ಥಿಗಳು 217 ಮಂದಿ ಇದ್ದು, ಇದರಲ್ಲಿ 179 ಹುಡುಗರು ಮತ್ತು 38 ಹುಡುಗಿಯರು ಆಗಿರುತ್ತಾರೆ.

1332 ಪರೀಕ್ಷಾ ಕೊಠಡಿಗಳು, 1678 ಸಿಸಿ ಕ್ಯಾಮರಾ ಆಳವಡಿಸಲಾಗಿದೆ. 184 ಪೊಲೀಸ್‌ ಸಿಬಂದಿ ನಿಯೋಜನೆ ಮಾಡಲಾಗಿದ್ದು, ಪರೀಕ್ಷಾ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಸಾಗಾಟಕ್ಕಾಗಿ 34 ಗಸ್ತು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗುವ ಬಾಲಕರಿಗೂ ಕೆಎಸ್ಆರ್‌ಟಿಸಿ ಬಸ್‌ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಲ್ ಟಿಕೆಟ್‌ ತೋರಿಸಿ ಪ್ರಯಾಣಿಸ ಬಹುದಾಗಿದೆ.

Continue Reading

DAKSHINA KANNADA

ನಿರೂಪಕ ಸಾಯಿಹೀಲ್ ರೈಗೆ ಪಿತೃ ವಿಯೋಗ

Published

on

ಮಂಗಳೂರು : ನಿರೂಪಕ ಸಾಯಿಹೀಲ್ ರೈ ಅವರ ತಂದೆ, ಉದ್ಯಮಿ, ಸಾಯಿ ಭಕ್ತ ಬೋಳಾರ ಮಂಗಳಾದೇವಿ ನಿವಾಸಿ ಬೆಳ್ಳಿಪ್ಪಾಡಿ ಸತೀಶ್ ರೈ ಅಗರಿ (66) ಅವರು ಇಂದು(ಮಾ.20) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತರು ಪತ್ನಿ ಶೋಭಾ ರೈ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಬಿ. ಸಿ. ರೋಡ್, ಸಜೀಪ – ನಾಲ್ ಕೈ ತ್ತಾಯ ದೈವಸ್ಥಾನದ ಸಮೀಪ ಇರುವ “ಅಗರಿ ಮನೆ”  ಯಲ್ಲಿ ಸಂಜೆ 4.30 ರಿಂದ 7 ನಡೆಯಲಿದೆ.

 

Continue Reading

DAKSHINA KANNADA

ಸುಳ್ಯ : ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ; ಕಾರಣ ನಿಗೂಢ

Published

on

ಸುಳ್ಯ : ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಕಾರಣಗಳು ನಿಖರವಾಗಿರುವುದಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲೂ ಅಂತಹದ್ದೇ ಘಟನೆಯೊಂದು ನಡೆದಿದೆ.

ಸುಳ್ಯದ ನಲ್ಲೂರು ಕಮ್ರಾಜೆಯ ಪೊಲ್ಲಾಜೆ ಎಂಬಲ್ಲಿ, ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತಪಟ್ಟ ಮಹಿಳೆಯನ್ನು ರೇವತಿ (51) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page