Connect with us

LATEST NEWS

ವಿಧಾನಪರಿಷತ್ತು ಚುನಾವಣೆ: ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ ವಿವೇಕ್ ರಾಜ್ ಪೂಜಾರಿ

Published

on

ಮಂಗಳೂರು: ಮುಂಬರುವ ವಿಧಾನ ಪರಿಷತ್ತಿನ ಸ್ಥಾನಕ್ಕೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಪನಮಾ ಕಾರ್ಪೊರೇಷನ್ ಲಿಮಿಟೆಡ್ ಸಿಇಒ, ಚೇರ್‌ಮೆನ್‌ ಹಾಗೂ ಯುವ ನಾಯಕ ವಿವೇಕ್ ರಾಜ್ ಪೂಜಾರಿ ಪಕ್ಷದ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.


ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿಧಾನ ಪರಿಷತ್ತಿನ ಎರಡು ಸ್ಥಾನ ಸ್ಥಳೀಯ ಸಂಸ್ಥೆಯ ಆಡಳಿತಾವಧಿ ಈ ವರ್ಷದ ಡಿಸೆಂಬರ್‌ನಲ್ಲಿ ಮುಗಿಯಲಿದ್ದು, ಹೀಗಾಗಿ ಎರಡು ಸ್ಥಾನಗಳು ಖಾಲಿಯಾಗಲಿದೆ.

ಕಾಂಗ್ರೆಸ್ ಹೈಕಮಾಂಡ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ವಿವೇಕ್ ರಾಜ್ ಪೂಜಾರಿ ಅರ್ಜಿಯನ್ನು ಸಲ್ಲಿಸಿದ್ದಾರೆ.


ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ನಾನು ಇನ್ನಷ್ಟು ಸೇವೆ ಮಾಡಲು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸಿದ್ದು,

ಇಂದು ಕಾಂಗ್ರೆಸ್ ಹೈಕಮಾಂಡ್ ಗೆ ಅರ್ಜಿ ಸಲ್ಲಿಸಿದ್ದೇನೆ. ಆಯ್ಕೆಯ ವಿಚಾರ ಪಕ್ಷಕ್ಕೆ ಹೈಕಮಾಂಡ್ ಗೆ ಬಿಟ್ಟದ್ದು. ಪಕ್ಷ ನನಗೆ ಅವಕಾಶ ಕೊಡಲಿದೆ ಎಂಬ ವಿಶ್ವಾಸ ನನಗಿದೆ.

ಪಕ್ಷ ನನಗೆ ಅವಕಾಶ ಕೊಟ್ಟರೇ ಇನ್ನಷ್ಟು ಸೇವೆ ಮಾಡುವ ಪ್ರತಿಜ್ಞೆಯನ್ನು ನಾನು ಈ ಮೂಲಕ ಮಾಡುತ್ತೇನೆ. ಒಂದು ವೇಳೆ ಪಕ್ಷ ನನಗೆ ಅವಕಾಶ ನೀಡದೆ ಬೇರೆ ಅಧಿಕೃತ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ

ನಾನು ಸಾಮಾನ್ಯ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿ ಅಭ್ಯರ್ಥಿಯ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಕಾಂಗ್ರೆಸ್ ನ ಯುವ ನಾಯಕ ವಿವೇಕ್ ರಾಜ್ ಪೂಜಾರಿ ಹೇಳಿದ್ದಾರೆ. ಇವರು ಕೊರೊನಾ ಸಂದರ್ಭ ಸಾವಿರಾರು ಅಸಹಾಯಕರ, ಬಡವರ ಕಣ್ಣೀರೊರೆಸಿದ್ದಾರೆ.

DAKSHINA KANNADA

ತಲಪಾಡಿ: ಟ್ಯಾಂಕರ್ ಗೆ ಗುದ್ದಿದ ಕಾರು, ತಪಾಸಣೆ ವೇಳೆ ಕಾರಿನಲ್ಲಿ ಸಿಕ್ತು ಲಕ್ಷಾಂತರ ಮೌಲ್ಯದ ಡ್ರಗ್ಸ್..!

Published

on

ಉಳ್ಳಾಲ: ಕಾರೊಂದು ಟ್ಯಾಂಕರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದು ಕಾರಿನೊಳಗೆ ಲಕ್ಷಾಂತರ ರೂ. ಮೌಲ್ಯದ ನಿಷೇಧಿತ ಎಂಡಿಎಂಎ ಪತ್ತೆಯಾದ ಘಟನೆ ಮಂಗಳೂರು ಹೊರ ವಲಯದ ತಲಪಾಡಿಯಲ್ಲಿ ಇಂದು ನಡೆದಿದೆ.

ಮಂಗಳೂರಿನಿಂದ‌ ಉಪ್ಪಳದ ಕಡೆಗೆ ಬರುತ್ತಿದ್ದ ಕಾರು ತಲಪಾಡಿಯ ಆರ್ ಟಿಓ ಚೆಕ್ ಪೋಸ್ಟ್ ಬಳಿ ನಿಂತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ  ಆದಮ್‌ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಅಪಘಾತದ ಬಳಿಕ ಪೊಲೀಸರು ತನಿಖೆಗೆ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ ಸುಮಾರು 78 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಕಾರು ಚಾಲಕ ಸಿದ್ಧೀಕ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಸಿದ್ಧೀಕ್ ಮತ್ತು ಆದಮ್ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಗಳೆಂದು ತಿಳಿದುಬಂದಿದೆ. ಅಪಘಾತದ ಕುರಿತಂತೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

 

Continue Reading

LATEST NEWS

3 ತಿಂಗಳ ಬಳಿಕ ಮತ್ತೆ ಕೈ ಸೇರಿದ ಮೊಬೈಲ್, ಉಡುಪಿ ಪೊಲೀಸರಿಗೆ ಥ್ಯಾಂಕ್ಸ್ ಹೇಳಿದ 60 ಮಂದಿ

Published

on

ಉಡುಪಿ: ಜಿಲ್ಲಾ ನಗರ ಠಾಣೆ ಪೊಲೀಸರಿಂದ ಮೊಬೈಲ್ ಕಳೆದುಕೊಂಡಿದ್ದ 60 ಮಂದಿಗೆ ಮೊಬೈಲ್ ಹಸ್ತಾಂತರ ಮಾಡಲಾಗಿದೆ. 8 ಲಕ್ಷದ 83 ಸಾವಿರದ 400 ರೂ. ಮೌಲ್ಯದ 60 ಮೊಬೈಲ್ ಹಸ್ತಾಂತರ ಮಾಡಲಾಗಿದ್ದು ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಮಂದಹಾಸ ಮೂಡಿದೆ.

ಮೊಬೈಲ್ ಕಳೆದುಕೊಂಡಿದ್ದವರಿಂದ ಸಿಎಐಆರ್ ಪೋರ್ಟಲ್ ನಲ್ಲಿ ದೂರು ದಾಖಲಾಗಿತ್ತು. ಸಿಎಐಆರ್ ನಲ್ಲಿ ದಾಖಲಾಗಿದ್ದ ದೂರನ್ನು ಆಧರಿಸಿ ಮೂರು ತಿಂಗಳಲ್ಲಿ 60 ಮಂದಿಯ ಮೊಬೈಲ್ ಟ್ರೇಸ್ ಮಾಡಲಾಗಿದೆ. ಮೊಬೈಲ್ ವಶಕ್ಕೆ ಪಡೆದು ಸೂಕ್ತ ದಾಖಲೆ ಮೇಲೆ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ.

ಮೂರು ತಿಂಗಳ ಬಳಿಕ ಮೊಬೈಲ್ ಕಂಡು ವಾರೀಸುದಾರರು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಸಲಹೆ ನೀಡಿದ  ಡಿವೈಎಸ್ಪಿ ಡಿ.ಟಿ ಪ್ರಭು ಮೊಬೈಲ್ ಕಳೆದುಕೊಂಡರೆ ಗಾಬರಿಯಾಗದೆ ಸಿಎಐಆರ್ ಪೋರ್ಟಲ್ ನಲ್ಲಿ ದೂರು ದಾಖಲಿಸಿ. ಈ ವರ್ಷ ಸಿಎಐಆರ್ ಪೋರ್ಟಲ್ ನಲ್ಲಿ ಮೊಬೈಲ್ ಕಳವು ದೂರು ಹೆಚ್ಚಾಗಿದೆ ಎಂದು ಹೇಳಿದರು.

Continue Reading

LATEST NEWS

ಸೈಕಲ್ ಆಟವಾಡುತ್ತಾ ಆಯತಪ್ಪಿ ನೀರಿನ ಸಂಪ್ ಗೆ ಬಿದ್ದ ಬಾಲಕ ಸಾವು

Published

on

ಹಾಸನ: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಚಿಕ್ಕ ಮಕ್ಕಳ ಮೇಲೆ ಅದೆಷ್ಟೇ ನಿಗಾ ವಹಿಸಿದರೂ ಕೂಡಾ ದುರ್ಘಟನೆಗಳು ನಡೆಯುತ್ತಿರುತ್ತದೆ. ಇದಕ್ಕೆ ಮತ್ತೊಂದು ರೀತಿಯಾಗಿ ಪೋಷಕರ ಬೇಜವಾಬ್ದಾರಿತನವೂ ಕೂಡಾ ಕಾರಣವಾಗಿರುತ್ತದೆ.

ಸೈಕಲ್‌ನಲ್ಲಿ ಆಟವಾಡುತ್ತಿದ್ದ ವೇಳೆ ಆಯತಪ್ಪಿ ನೀರಿನ ಸಂಪ್‌ಗೆ ಬಿದ್ದು ಪುಟ್ಟ ಬಾಲಕನೋರ್ವ ಮೃತಪಟ್ಟಿರುವ ಘಟನೆ ಹಾಸನದ ಅಣಚಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಎಡನ್ ಸ್ವೀವ್ (4) ಮೃತ ಬಾಲಕ. ಮನೆಯ ಮುಂದೆ ಎಡನ್ ಸ್ವೀವ್ ಆಟವಾಡುತ್ತಿದ್ದ.

ಈ ವೇಳೆ ಪೋಷಕರು ಮನೆಯೊಳಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮನೆಯಿಂದ ಹೊರ ಬಂದ ಪೋಷಕರು ಮಗುವಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ನೀರಿನ ಸಂಪ್ ಬಳಿ ಮಗುವಿನ ಸೈಕಲ್ ಬಿದ್ದಿದ್ದು ಸಂಪ್ ಪರಿಶೀಲಿಸಿದಾಗ ಶವ ನೀರಿನಲ್ಲಿ ತೇಲುತ್ತಿರುವುದು ಕಾಣಿಸಿದೆ.

ಕೂಡಲೇ ಹಾಸನ ನಗರದ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸ್ಥಳಕ್ಕೆ ಹಾಸನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

Continue Reading
Advertisement

Trending

Copyright © 2025 Namma Kudla News

You cannot copy content of this page