Connect with us

FILM

ಮಲಯಾಳಂನ ಜನಪ್ರಿಯ ನಟ ಇನ್ನೋಸೆಂಟ್ ನಿಧನ

Published

on

ಮಲಯಾಳಂನ ಜನಪ್ರಿಯ ನಟ ಹಾಗೂ ಮಾಜಿ ಲೋಕಸಭಾ ಸದಸ್ಯ ಇನ್ನೋಸೆಂಟ್ ಭಾನುವಾರ ತಡರಾತ್ರಿ ಕೊಚ್ಚಿಯ ಆಸ್ಪತ್ರೆಯಲ್ಲಿ ನಿಧನರಾದರು
ಕೊಚ್ಚಿ: ಮಲಯಾಳಂನ ಜನಪ್ರಿಯ ನಟ ಹಾಗೂ ಮಾಜಿ ಲೋಕಸಭಾ ಸದಸ್ಯ ಇನ್ನೋಸೆಂಟ್ ಭಾನುವಾರ ತಡರಾತ್ರಿ ಕೊಚ್ಚಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಇನ್ನೋಸೆಂಟ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸುಮಾರು 500ಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ಹಾಸ್ಯ ನಟನಾಗಿ ನಟಿಸಿರುವ ಇನ್ನೋಸೆಂಟ್, ಎಡಪಕ್ಷಗಳ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ನಂತರ 2014 ರಿಂದ 2019 ರವರೆಗೆ ಕೇರಳದ ಚಾಲಕ್ಕುಡಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಕಾರ್ಯನಿರ್ವಹಿಸಿದ್ದರು.

ಅವರು ಹಲವಾರು ವರ್ಷಗಳ ಕಾಲ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

2012 ರಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಬದುಕುಳಿದಿದ್ದರು. ಆದರೆ, ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 3 ರಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

FILM

ವಸತಿ ಕಟ್ಟಡದ ಮೇಲೆ ಫೈ*ರಿಂಗ್ ; ಬಾಲಿವುಡ್ ನಟನ ಬಂಧನ

Published

on

ಮುಂಬೈ/ ಮಂಗಳೂರು : ಮುಂಬೈನ ವಸತಿ ಕಟ್ಟಡವೊಂದರ ಮೇಲೆ ಫೈರಿಂಗ್ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟನನ್ನು ಬಂಧಿಸಲಾಗಿದೆ. ಜ.18 ರಂದು ನಡೆದ ಪ್ರಕರಣ ಇದಾಗಿದೆ. ಅಂಧೇರಿಯಲ್ಲಿರುವ ವಸತಿ ಕಟ್ಟಡವೊಂದರ ಮೇಲೆ ಗುಂ*ಡು ಹಾರಿಸಲಾಗಿದೆ.  ಅಲ್ಲಿನ ನಿವಾಸಿಗಳು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ಬಾಲಿವುಡ್ ನಟ ಕಮಾಲ್ ರಶೀದ್ ಖಾನ್ ಗುಂಡು ಹಾರಿಸಿರುವುದು ಗೊತ್ತಾಗಿದೆ.

ಕಮಾಲ್ ರಶೀದ್ ಖಾನ್‌ರನ್ನು  ಅವರ ಸ್ಟುಡಿಯೋದಿಂದ ಇಂದು(ಜ.24) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 ಗುಂ*ಡು ಹಾರಿಸಿದ್ಯಾಕೆ?

ಕಮಾಲ್ ರಶೀದ್ ಖಾನ್ ಗುಂ*ಡು ಹಾರಿಸಿದ್ದರ ಕಾರಣವನ್ನು ಪೊಲೀಸರಲ್ಲಿ ತಿಳಿಸಿದ್ದಾರೆ.  ನಾನು ಯಾರನ್ನೂ ಕೊಲ್ಲುವ ಅಥವಾ ಯಾವುದಕ್ಕೂ ಹಾನಿ ಮಾಡುವ ಉದ್ದೇಶ ಹೊಂದಿರಲಿಲ್ಲ. ಬಂದೂಕನ್ನು ಸ್ವಚ್ಛಗೊಳಿಸುತ್ತಿದ್ದೆ. ಅದು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಲು ಗುಂ*ಡು ಹಾ*ರಿಸಿದೆ ಎಂದಿದ್ದಾರೆ.

ಮನೆಯ ಮುಂದಿರುವ ಮ್ಯಾಂಗ್ರೋವ್ ಕಾಡಿನತ್ತ ಗುಂ*ಡು ಹಾರಿಸಿದರೆ ಸುರಕ್ಷಿತ ಎಂದು ಭಾವಿಸಿದ್ದೆ.  ಆದರೆ ಬಲವಾದ ಗಾಳಿ ಬೀಸುತ್ತಿದ್ದ ಕಾರಣ ಗುಂಡು ದಿಕ್ಕು ಬದಲಿಸಿ ಓಶಿವಾರ ಪ್ರದೇಶದ ಕಟ್ಟಡಕ್ಕೆ ತಗುಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಮದುವೆ ಮನೆಯಲ್ಲಿ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದ ಪಲಾಶ್ ಮುಚ್ಚಲ್..!‌?

ಅಂದಹಾಗೆ. ಕೆಆರ್‌ಕೆ ಗುಂ*ಡು ಹಾ*ರಿಸಿದ ಕಟ್ಟಡದ ಎರಡನೇ ಮಹಡಿಯಲ್ಲಿ ಬಾಲಿವುಡ್ ಬರಹಗಾರ ಮತ್ತು ನಿರ್ದೇಶಕ ನೀರಜ್ ಕುಮಾರ್ ಮಿಶ್ರಾ ನೆಲೆಸಿದ್ದಾರೆ. ನಾಲ್ಕನೇ ಮಹಡಿಯಲ್ಲಿ ಮಾಡೆಲ್ ಪ್ರತೀಕ್ ಬೈದ್ ವಾಸಿಸುತ್ತಿದ್ದಾರೆ. ಸದ್ಯ ಕೆಆರ್‌ಕೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.

Continue Reading

BIG BOSS

ಎಂತ ಗೊತ್ತುಂಟಾ…ಇನ್ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡ ರಕ್ಷಿತಾ ಶೆಟ್ಟಿ!

Published

on

ಬೆಂಗಳೂರು/ಉಡುಪಿ : ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಕನ್ನಡದ ಬಹುತೇಕ ವೀಕ್ಷಕರ ನೆಚ್ಚಿನ ಸ್ಪರ್ಧಿಯಾಗಿದ್ದವರು. ಗಿಲ್ಲಿ ವಿನ್ನರ್ ಆದ್ರೆ, ರಕ್ಷಿತಾ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ಇದೀಗ ರಕ್ಷಿತಾ ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.  ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಎಂತಗೊತ್ತುಂಟಾ….ರಕ್ಷಿತಾ ಏನಂದ್ರು?

ಬಿಗ್‌ಬಾಸ್‌ ಮನೆಯಲ್ಲಿರುವಾಗ ನೀವೆಲ್ಲ ಇಷ್ಟು ಪ್ರೀತಿ, ಸಪೋರ್ಟ್ ಮಾಡ್ತಿದೀರಾ ಅಂತ ಗೊತ್ತಿರಲಿಲ್ಲ. ನಾನು ಅಂದುಕೊಂಡಿರಲಿಲ್ಲ. ಮನೆಯಿಂದ ಆಚೆ ಬಂದ ಮೇಲೆ ಇದನ್ನೆಲ್ಲ ನೋಡಿದರೆ ಕನಸಾ? ಅಥವಾ ಸತ್ಯಾನಾ? ಅಂತ ಅನಿಸುತ್ತೆ. ಅಷ್ಟು ಪ್ರೀತಿ ನೀವೆಲ್ಲ ಕೊಟ್ಟಿದೀರಿ. ನಿಮ್ಮ ಆಶೀರ್ವಾದ, ಪ್ರೀತಿಯಿಂದ ನಾನು ರನ್ನರ್ ಅಪ್ ಆಗಿದೀನಿ. ನನಗೋಸ್ಕರ ಸಮಯ ಕೊಟ್ಟು ಇಷ್ಟೊಂದು ವೋಟ್ ಹಾಕಿದ್ದಕ್ಕೆ ತುಂಬು ಹೃದಯದ ಧನ್ಯವಾದ. ಎಲ್ಲ ಕನ್ನಡಿಗರಿಗೂ, ಬೇರೆ ರಾಜ್ಯದಲ್ಲಿರುವ, ಮುಂಬೈನಲ್ಲಿರುವ, ಬೇರೆ ದೇಶದಲ್ಲಿರುವ, ಇಡೀ ಪ್ರಪಂಚದಲ್ಲಿರುವ ಎಲ್ಲ ಕನ್ನಡಿಗರಿಗೂ ಥ್ಯಾಂಕ್ಯೂ ಎಂದಿದ್ದಾರೆ.

ನೆಗೆಟಿವ್ ಕಮೆಂಟ್ಸ್ ಇಲ್ಲ

ಈ ಮೊದಲು ನಾನು ವಿಡಿಯೋ ಮಾಡಿದಾಗ ನನ್ನ ಬಗ್ಗೆ ತುಂಬಾ ನೆಗೆಟಿವ್ ಕಮೆಂಟ್ಸ್ ಬರುತ್ತಿತ್ತು. ತುಂಬಾ ಟ್ರೋಲ್ ಮಾಡ್ತಾ ಇದ್ರು, ಆದರೆ ಈಗ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಕಾಮೆಂಟ್‌ ನೋಡಲೇ ಇಲ್ಲ, ಎಲ್ಲರೂ ನನಗೆ ಕೇವಲ ಪ್ರೀತಿಯನ್ನೇ ಕೊಡ್ತಾ ಇದ್ದಾರೆ ಎಂದು ರಕ್ಷಿತಾ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.

ಟ್ರೋಲ್ ಮೀಮ್ಸ್ ಮಾಡಿದವರಿಗೆ ಥ್ಯಾಂಕ್ಸ್, ಎಲ್ಲ ಯೂಟೂಬರ್ಸ್, ಇನ್‌ಫ್ಲೂಯೆನ್ಸರ್ಸ್‌ ಎಲ್ಲರೂ ತುಂಬಾ ಸಪೋರ್ಟ್ ಮಾಡಿದ್ದಾರೆ. ಇಲ್ಲಿ ತನಕ ಬರುವವರೆಗೂ ನನ್ನ ಶ್ರಮ ಎಷ್ಟಿತ್ತೋ, ನಿಮ್ಮದು ಕೂಡ ಅಷ್ಟೇ ಶ್ರಮ ಇದೆ ಎಂದಿದ್ದಾರೆ.

ಇದನ್ನೂ ಓದಿ : ʼನಾನು ಗೆದ್ದಿರುವ ಖುಷಿ ಅವಳ ಕಣ್ಣಲ್ಲಿ ಕಾಣಿಸುತ್ತಿತ್ತುʼ ರಕ್ಷಿತಾ ಬಗ್ಗೆ ಗಿಲ್ಲಿ ಏನಂದ್ರು ?

ನನ್ನ ಗೆಲುವಿಗೆ ಇಡೀ ಕರ್ನಾಟಕ ಕಾರಣ. ನಾನು ಸಾಯುವವರೆಗೂ ಮರೆಯಲ್ಲ. ನಾನು ಎಲ್ಲವನ್ನೂ ಪದಗಳಲ್ಲಿ ಹೇಳೋಕೆ ಆಗಲ್ಲ. ಇಷ್ಟು ದಿನ ವೀಡಿಯೋ ಮಾಡೋಕೆ ಆಗಲಿಲ್ಲ. ಈ ಮೂಲಕ ನಿಮ್ಮ ಜೊತೆ ಮಾತನಾಡುವ ಅವಕಾಶ ಸಿಕ್ಕಿತು, ಹೀಗೆ ಪ್ರೀತಿ ಮಾಡ್ತ ಇರಿ. ಮನೆಮಗಳು ತರ ನೋಡಿದ್ದೀರಿ, ಇದಕ್ಕಿಂತ ದೊಡ್ಡದೇನು ಬೇಕಿಲ್ಲ ಎಂದು ನುಡಿದಿದ್ದಾರೆ.

 

Continue Reading

BIG BOSS

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ, ಬಿಗ್ ಬಾಸ್ ಮಾಜಿ ಸ್ಪರ್ಧಿ ಉಗ್ರಂ ಮಂಜು

Published

on

ಮಂಗಳೂರು : ನಟ, ಬಿಗ್ ಬಾಸ್ ಮಾಜಿ ಸ್ಪರ್ಧಿ ಉಗ್ರಂ ಮಂಜು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಇಂದು(ಜ.23) ಸಂಧ್ಯಾರೊಂದಿಗೆ ಧರ್ಮಸ್ಥಳದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಇತ್ತೀಚೆಗಷ್ಟೆ ಉಗ್ರಂ ಮಂಜು ಹಾಗೂ ಸಂಧ್ಯಾ ಖುಷಿಯವರ ನಿಶ್ಚಿತಾರ್ಥ ನಡೆದಿತ್ತು. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಲಗ್ಗೆ ಇಟ್ಟಿದ್ದಾರೆ.

ಉಗ್ರಂ ಮಂಜು ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಜ.21 ರಂದು ಅರಶಿಣ ಶಾಸ್ತ್ರ ಹಾಗೂ ಮೆಹೆಂದಿ ಕಾರ್ಯಕ್ರಮ ನಡೆದಿತ್ತು.

ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಭಾಗಿಯಾಗಿ ದಂಪತಿಗೆ ಶುಭ ಹಾರೈಸಿದ್ದಾರೆ. ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.

ಕೋಲಾರದವರಾದ ಮಂಜುನಾಥ ಗೌಡ, ಉಗ್ರಂ ಮಂಜು ಎಂದೇ ಖ್ಯಾತರಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದ ಮಂಜು, ನಂತರದ  ದಿನಗಳಲ್ಲಿ ಉಗ್ರಂ ಮಂಜು ಆದರು. ಮ್ಯಾಕ್ಸ್‌ ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮ್ಯಾಕ್ಸ್ ಮಂಜು ಎಂಬುದಾಗಿ ಹೆಸರು ಬದಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ರೀಲ್ಸ್‌ ಸ್ಟಾರ್‌ ಆಶಾ ಪಂಡಿತ್‌ ನಿಧನ

ಸಂಧ್ಯಾ ಬಗ್ಗೆ…

ಉಗ್ರಂ ಮಂಜು ಮದುವೆಯಾಗಿರುವ ಹುಡುಗಿ ಸಂಧ್ಯಾ ಖುಷಿ ಆಸ್ಪತ್ರೆಯೊಂದರಲ್ಲಿ ಅಡ್ಮಿನ್ ಡಿಪಾರ್ಟ್ಮೆಂಟ್‌ನಲ್ಲಿದ್ದಾರೆಂದು ತಿಳಿದುಬಂದಿದೆ. ಅವರ ಇನ್ಸ್ಟಾಗ್ರಾಂ ಬಯೋನಲ್ಲಿ ಟ್ರಾನ್ಸ್‌ಪ್ಲಾಂಟ್ ಕಾರ್ಡಿನೇಟರ್ ಎಂದು ಬರೆದುಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page