Connect with us

FILM

ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

Published

on

ಮಂಗಳೂರು/ನವದೆಹಲಿ: ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಭಾರತೀಯ ಚಲನಚಿತ್ರೋದ್ಯಮದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಗರಿ ಲಭಿಸಿದೆ. ಭಾರತೀಯ ಚಿತ್ರರಂಗದಲ್ಲಿ ಅವರ ಪ್ರಯಾಣ ಹಾಗೂ ಸಿನಿ ರಂಗಕ್ಕೆ ನೀಡಿದ ಕೊಡುಗೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಅ.8 ರಂದು ಪ್ರಶಸ್ತಿ ಪ್ರದಾನ:

ಈ ಸಂಬಂಧ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ರೈಲ್ವೆ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಮಿಥುನ್ ಚಕ್ರವರ್ತಿ ಅವರ ಗಮನಾರ್ಹ ಸಿನಿ ಜರ್ನಿ ಈಗಿನ ಮತ್ತು ಬರುವ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆ ಗಮನಿಸಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ತೀರ್ಪುಗಾರರ ಆಯ್ಕೆ ಸಮಿತಿಯು ಅವರ ಹೆಸರನ್ನು ಆಯ್ಕೆ ಮಾಡಿದ್ದಾರೆ.

ಈ ಗೌರವವನ್ನು ಅಕ್ಟೋಬರ್ 8 ರಂದು ನಡೆಯುವ ನ್ಯಾಷನಲ್ ಫಿಲಂ ಅವಾರ್ಡ್​ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಉಡುಪಿ : ಪೊಲೀಸ್ ಠಾಣೆ ಪಕ್ಕದಲ್ಲೇ ಸರಣಿ ಕಳ್ಳತನ; ಆರು ಮನೆಯ ಬೀಗ ಒಡೆದು ಕನ್ನ

ಮಿಥುನ್ ಚಕ್ರವರ್ತಿ 1976ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ‘ಮೃಗಯಾ’ ಅವರ ನಟನೆಯ ಮೊದಲ ಸಿನಿಮಾ. ಈ ಸಿನಿಮಾದ ಅವರ ಅದ್ಭುತ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ನಟನಾಗಿ ಮಾತ್ರವಲ್ಲದೇ, ಟಿವಿ ನಿರೂಪಕ, ನಿರ್ಮಾಪಕ, ರಾಜಕಾರಣಿ ಆಗಿ ಖ್ಯಾತಿ ಗಳಿಸಿದ್ದಾರೆ.

FILM

ಆಸೆ ಧಾರಾವಾಹಿಯಿಂದ ಹೊರನಡೆದ ಜನಪ್ರಿಯ ನಟಿ; ಯಾಕೆ?

Published

on

ಮಂಗಳೂರು/ಬೆಂಗಳೂರು : ಬಹಳಷ್ಟು ಮಂದಿ ಧಾರಾವಾಹಿಗಳನ್ನು ವೀಕ್ಷಿಸುತ್ತಾರೆ. ಸಂಜೆ ಆಯ್ತು ಅಂದ್ರೆ ಟಿವಿ ಮುಂದೆ ಕೂತು ಸೀರಿಯಲ್ ಲೋಕದಲ್ಲಿ ಮುಳುಗುವ ಅನೇಕ ಮಂದಿ ಇದ್ದಾರೆ. ನೂರಾರು ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದು, ಅದರಲ್ಲಿ ‘ಆಸೆ’ ಕೂಡ ಒಂದು. ಕೌಟುಂಬಿಕ ಕಥಾಹಂದರವುಳ್ಳ ಆಸೆ ಆರಂಭದಿಂದ ಇಂದಿನ ವರೆಗೆ ಜನಮನ ಗೆಲ್ಲುತ್ತಾ ಸಾಗುತ್ತಿದೆ. ಉತ್ತಮ ಕಥೆ, ಸಂಭಾಷಣೆ, ಪಾತ್ರವರ್ಗ ಹೊಂದಿರುವ ಈ ಧಾರಾವಾಹಿಯಿಂದ ಜನಪ್ರಿಯ ನಟಿಯೊಬ್ಬರು ಹೊರ ನಡೆದಿದ್ದಾರೆ.

ಹೊರಬಂದ ‘ಪೌಡ್ರಮ್ಮ’ : 

ಕುಲವಧು ಧಾರಾವಾಹಿ ಮೂಲಕ ಜನ ಮನ ಗೆದ್ದಿದ್ದ ಕಲಾವಿದೆ ಅಮೃತಾ ರಾಮಮೂರ್ತಿ ಆಸೆಯಲ್ಲಿ ನಟಿಸಿ ತನ್ನ ಅದ್ಭುತ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಇದೀಗ ಈ ಧಾರಾವಾಹಿಯಿಂದ ಹೊರನಡೆದಿದ್ದಾರೆ. ಆರಂಭದಲ್ಲಿ ಇದು ಗಾಸಿಪ್ ಇರಬಹುದು ಎನ್ನಲಾಗುತ್ತಿತ್ತು. ಆದ್ರೆ, ಈಗ ಸ್ವತಃ ಅಮೃತಾ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಆಸೆ’ ಧಾರಾವಾಹಿಯಲ್ಲಿ ನಟಿ ಅಮೃತಾ ರಾಮಮೂರ್ತಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ರೋಹಿಣಿಯಾಗಿ, ಪೌಡ್ರಮ್ಮ ಆಗಿ ಗಮನ ಸೆಳೆದಿದ್ದರು.  ಹೀಗಿರುವಾಗ ಅಮೃತಾ ದಿಢೀರ್‌ ಸೀರಿಯಲ್‌ನಿಂದ ಹೊರಬಂದಿರುವ ಸುದ್ದಿ ವೀಕ್ಷಕರಿಗೆ ಶಾ*ಕ್ ಕೊಟ್ಟಿದೆ. ಈ ಬಗ್ಗೆ ವೀಡಿಯೋ ಹಂಚಿಕೊಂಡಿರುವ ನಟಿ ಧಾರಾವಾಹಿಯಿಂದ ಹೊರ ನಡೆದಿರುವ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಕಾರಣವೇನು?

ಆಸೆ ಧಾರಾವಾಹಿಯಲ್ಲಿ ರೋಹಿಣಿಯಾಗಿ ಜನಪ್ರಿಯರಾಗಿರುವ ಅಮೃತಾ ಧಾರಾವಾಹಿ ತೊರೆದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನಮಸ್ಕಾರ ಎಲ್ಲರಿಗೂ, ನಿಮಗೆಲ್ಲ ಒಂದು ವಿಷಯ ತಿಳಿಸೋಣ ಅಂತ ಈ ವೀಡಿಯೋ ಮಾಡುತ್ತಿದ್ದೇನೆ. ನಾನು ಆಸೆ ಸೀರಿಯಲ್‌ನಲ್ಲಿ ನಟಿಸುತ್ತಿರುವುದು ನಿಮಗೆಲ್ಲ ಗೊತ್ತಿದೆ. ಸಾಕಷ್ಟು ಕಾರಣಗಳಿಂದ ನಾನು ಈ ಧಾರಾವಾಹಿಯಿಂದ ಹೊರನಡೆಯುತ್ತಿದ್ದೇನೆ. ನೀವೆಲ್ಲರೂ ಆಸೆ ಸೀರಿಯಲ್‌ ಮೇಲೆ ತುಂಬಾ ಪ್ರೀತಿ ತೋರಿಸಿದ್ದೀರಿ. ಹಾಗೇ ನನ್ನ ಮೇಲೂ ತುಂಬಾ ಪ್ರೀತಿ ತೋರಿಸಿದ್ದೀರ, ಈ ಪ್ರೀತಿ ಸದಾ ಹೀಗೇ ಇರಲಿ.

ಇದನ್ನೂ ಓದಿ : ತಾಯಿಯಾದ ಸಂಭ್ರಮದಲ್ಲಿ ರಾಮಾಚಾರಿ ನಟಿ…ಇದು ಡಬಲ್ ಸಂಭ್ರಮ!

ನಾನು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತೀನಿ. ಒಂದು ಚಿಕ್ಕ ಬ್ರೇಕ್‌ ಪಡೆದು ಮತ್ತೆ ತೆರೆ ಮೇಲೆ ಬರ್ತೀನಿ. ಅಲ್ಲಿವರೆಗೂ ನನಗೆ ಇಷ್ಟೆಲ್ಲ ಸಪೋರ್ಟ್‌ ಮಾಡಿದ ನಿಮಗೆಲ್ಲ ತುಂಬು ಹೃದಯದ ಧನ್ಯವಾದಗಳು ಎಂದು ಅಮೃತಾ ಹೇಳಿಕೊಂಡಿದ್ದಾರೆ.

Continue Reading

FILM

ತಾಯಿಯಾದ ಸಂಭ್ರಮದಲ್ಲಿ ರಾಮಾಚಾರಿ ನಟಿ…ಇದು ಡಬಲ್ ಸಂಭ್ರಮ!

Published

on

ಮಂಗಳೂರು/ಬೆಂಗಳೂರು : ಹಿರಿತೆರೆ ಹಾಗೂ ಕಿರುತೆರೆಯರ ಹಲವು ತಾರೆಯರು ಈ ವರ್ಷ ಹಸೆಮಣೆ ಏರಿದ್ದಾರೆ. ಇನ್ನು ಕೆಲವರು ತಂದೆ – ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಸಿನಿಮಾ ತಾರೆಯರು ಅಂದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ವೀವ್ ಇರುತ್ತಾರೆ. ಜೊತೆಗೆ ತಮ್ಮ ಬದುಕಿನ ಪ್ರತಿಯೊಂದು ವಿಚಾರಗಳ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಾರಾ ದಂಪತಿಯೊಂದು ತಮ್ಮ ಬದುಕಿನ ಸಂಭ್ರಮದ ವಿಚಾರದ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ.

ಹೌದು, ರಾಮಾಚಾರಿ ಖ್ಯಾತಿಯ ನಟಿ ಐಶ್ವರ್ಯಾ ಸಾಲೀಮಠ ಹಾಗೂ ನಟ ವಿನಯ್ ಯುಜೆ ದಂಪತಿ ಮನೆಗೆ ಹೊಸ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ದೇವರು ಒಂದು ಕೇಳಿದ್ರೆ ಎರಡು ಕೊಟ್ಟು ಆಶೀರ್ವದಿಸಿದ್ದಾನೆಂದು ದಂಪತಿ ಹೇಳಿದ್ದಾರೆ. ಯಾಕೆಂದ್ರೆ, ಐಶ್ವರ್ಯಾ ಅವಳಿ – ಜವಳಿ ಗಂಡು ಮಕ್ಕಳಿಗೆ ಜನ್ಮವಿತ್ತಿದ್ದಾರೆ.

ನಾವು ಪಾಲಕರಾಗುತ್ತಿದ್ದೇವೆ. ದೇವರು ನಾವು ಕೇಳಿದ್ದಕ್ಕಿಂತ ಹೆಚ್ಚಿನದನ್ನು ಕೊಟ್ಟು ಆಶೀರ್ವದಿಸಿದ್ದಾನೆ. ನಮ್ಮ ಕುಟುಂಬವು ಬೆಳೆಯುತ್ತಿದೆ. ದೃಷ್ಟಿ ಹಾಕಬೇಡಿ ಎಂದು ಸಿಹಿಸುದ್ದಿಯನ್ನು ವೀಡಿಯೋ ಮುಖಾಂತರ ಅಭಿಮಾನಿಗಳಿಗೆ ದಂಪತಿ ತಿಳಿಸಿದ್ದಾರೆ.

ಇದನ್ನೂ ಓದಿ : ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚ!?

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ತನು ಪಾತ್ರದ ಮೂಲಕ ಗಮನ ಸೆಳೆದಿದ್ದ ಐಶ್ವರ್ಯಾ ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖ ಎಂಬ ನೆಗೆಟೀವ್ ರೋಲ್‌ನಲ್ಲಿ ಮಿಂಚಿದ್ದರು. ಇನ್ನು ವಿನಯ್, ಮಹಾಸತಿ, ಜೀವನದಿ, ಮಹಾದೇವಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲೂ ನಟಿಸಿರುವ ಅವರು, ಶಾಖಾಹಾರಿ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.

 

 

Continue Reading

FILM

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಕಿಚ್ಚ!?

Published

on

ಮಂಗಳೂರು/ಬೆಂಗಳೂರು : ಸಿನಿಮಾ ತಾರೆಯರು  ರಾಜಕೀಯಕ್ಕೆ ಎಂಟ್ರಿ ಕೊಡೋದು ಹೊಸತಲ್ಲ. ಅದೆಷ್ಟೋ ಸಿನಿಮಾ ನಟಿ, ನಟಿಯರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೆಲವರು ಪಾಸಾಗಿದ್ದು, ಇನ್ನು ಕೆಲವರು ಫೇಲಾಗಿದ್ದಾರೆ. ಸ್ಟಾರ್ ನಟ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡುವ ವಿಚಾರ ಸದಾ ಸದ್ದು ಮಾಡುತ್ತಿರುತ್ತದೆ. ಕಿಚ್ಚ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ? ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ಸೌಂಡ್ ಮಾಡ್ಕೊಂಡೇ ಬರ್ತೀನಿ :

ಖಾಸಗಿ ವಾಹಿನಿಯ ನಡೆಸಿದ ಸಂದರ್ಶನದಲ್ಲಿ ಕಿಚ್ಚ ಸುದೀಪ್ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ಬಂದಾಗ ಹೇಳ್ತೀನಿ. ಬಂದಾಗ ಎಲ್ಲರಿಗೂ ಗೊತ್ತಾಗುತ್ತದೆ. ಬರೋಕ್ಕಿಂತ ಮೊದಲು ಹೇಳ್ತೀನೋ, ಬಿಡ್ತೀನೋ ಗೊತ್ತಿಲ್ಲ. ನನಗೆ ಸಿನಿಮಾ ಬಿಟ್ಟರೆ ಬೇರೆ ಯಾವುದರ ಮೇಲೂ ಒಲವು ಇಲ್ಲ. ನನಗೆ ಸಮಾಜ ಸೇವೆ ಮಾಡಲು ರಾಜಕೀಯ ಬೇಕಾಗಿಲ್ಲ.

ರಾಜಕೀಯದಲ್ಲಿರೋರು ಸಮಾಜಸೇವೆ ಮಾಡಲು ಬಂದೆ ಅಂದರೆ ತಪ್ಪಾಗುತ್ತದೆ. ಸಮಾಜ ಸೇವೆ ಮಾಡೋಕೆ ಪವರ್ ಬೇಕಾಗಿಲ್ಲ. ಕನ್ನಡ ಚಿತ್ರರಂಗ ಚೆನ್ನಾಗಿದ್ದು, ಬೇಡಿಕೆಯಿದ್ದು, ಇನ್ನಷ್ಟು ಸಿನಿಮಾ ನಿರೀಕ್ಷೆ ಮಾಡ್ತಿದ್ದಾರೆ ಅಂದರೆ ನನಗೆ ಎರಡೆರಡು ಕಡೆ ಕಾಲಿಡಲು ನನಗೆ ಇಷ್ಟ ಇಲ್ಲ. ಬರೋ ಟೈಮ್​ಗೆ ಬರ್ತೀವಿ. ಬಂದಾಗ ಸೌಂಡ್ ಆಗಿಯೇ ಆಗುತ್ತದೆ ಎಂದಿದ್ದಾರೆ.

ಸದ್ಯ ಕಿಚ್ಚ ಮಾರ್ಕ್ ಚಿತ್ರದ ಯಶಸ್ಸಿನತ್ತ ಚಿತ್ತ ನೆಟ್ಟಿದ್ದಾರೆ. ಮಾರ್ಕ್ ಚಿತ್ರವನ್ನು ಸತ್ಯ ಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ. ಅಂದಹಾಗೆ, ಮಾರ್ಕ್ ಕಿಚ್ಚ ನಟನೆಯ 47ನೇ ಸಿನಿಮಾ. ಚಿತ್ರದಲ್ಲಿ ಕಿಚ್ಚ ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು,  ಮ್ಯಾಕ್ಸ್ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಮಾರ್ಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.

ಇದನ್ನೂ ಓದಿ : ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ ಬ್ರಹ್ಮಗಂಟು ನಟಿ

ದೀಪ್ಶಿಕಾ, ಗುರು ಸೋಮಸುಂದರಂ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಶೇಖರ್ ಚಂದ್ರ ಛಾಯಾಗ್ರಹಣವಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page