ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಇಂದು ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ.
ಮಂಗಳೂರು : ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಇಂದು ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ.
ಅದಕ್ಕೂ ಮುನ್ನ ಅವರು ಬೆಳಿಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ತೆರಳಿ ಗೋಕರ್ಣನಾಥೇಶ್ವರ ಸನ್ನಿಧಿಯಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದರು.
ಬಳಿಕ ಮನುಕುಲಕ್ಕೆ ಸಮಾನತೆಯ ಏಕತೆಯನ್ನು ಬೋಧಿಸಿದ ಬ್ರಹ್ಮಶ್ರೀ ನಾರಾಯಣ ಗುರು ಅವರ ಪುತ್ಥಳಿ ಬಳಿ ತೆರಳಿ ಪ್ರಾರ್ಥನೆ ಮಾಡಿದರು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅಭ್ಯರ್ಥಿ ವೇದವ್ಯಾಸ್‌ಗೆ ಸಾಥ್ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರು,ಮೋನಪ್ಪ ಭಂಡಾರಿ, ಜಗದೀಶ್ ಶೇಣವ, ಜಯಾನಂದ ಅಂಚನ್, ಪರಿವಾರ ಸಂಘಟನೆ ನಾಯಕರಾದ ಶರಣ್ ಪಂಪ್ವೆಲ್ ಸೇರಿದಂತೆ ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಮತ್ತು ಇತರರು ಉಪಸ್ಥಿತರಿದ್ದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರು, ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರನ್ನು ಕುದ್ರೋಳಿ ಕ್ಷೇತ್ರದಿಂದ ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಬಳಿಕ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಲಾಯಿತು. ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವೇದವ್ಯಾಸ ಕಾಮತ್, ತನ್ನನ್ನು ಎರಡನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷದ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು.
ಇದಕ್ಕೂ ಮುನ್ನ ನಗರದ ಕದ್ರಿ , ಮಂಗಳಾದೇವಿ , ಕಾರ್ ಸ್ಟ್ರೀಟ್ ದೇವಸ್ಥಾನಗಳನ್ನು ಸಂದರ್ಶಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯಾಧ್ಯಕ್ಷರೂ, ನೆಚ್ಚಿನ ಸಂಸದರಾದ ನಳಿನ್ ಕುಮಾರ್ ಕಟೀಲು ಅವರು ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿ ವಿಜಯ ಯಾತ್ರೆಗೆ ಶುಭ ಕೋರಿದ್ದಾರೆ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಸೇರಿರುವುದಕ್ಕೆ ಸರ್ವರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ಡಿ ವೇದವ್ಯಾಸ ಕಾಮತ್ ಹೇಳಿದರು.
ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದರು. ಪುಷ್ಪಗಳಿಂದ ಸಿಂಗರಿಸಿದ ಜೀಪಿನಲ್ಲಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರನ್ನು ಕುದ್ರೋಳಿಯಿಂದ ಲಾಲ್ ಭಾಗ್ ತನಕ ಕರೆದೊಯ್ಯಲಾಯಿತು. ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರು ನಗರ ದಕ್ಷಿಣದಲ್ಲಿ ವೇದವ್ಯಾಸ ಕಾಮತ್ ಮಾಡಿರುವ ಅಭಿವೃದ್ಧಿಯನ್ನು ಜನಮೆಚ್ಚಿಕೊಂಡಿದ್ದಾರೆ. ಅವರ ಗೆಲುವು ಇಲ್ಲಿಂದಲೇ ಮುಂದುವರೆಯಲಿದೆ. ಕೇಂದ್ರ, ರಾಜ್ಯ ಸರಕಾರ ಭರಪೂರ ಅನುದಾನ ನೀಡಿ ಮಂಗಳೂರು ದಕ್ಷಿಣದ ಅಭಿವೃದ್ಧಿಗೆ ತುಂಬಾ ಸಹಕಾರ ನೀಡಿದೆ. ನಿತ್ಯ ಜನರ ನಡುವೆ ಇರುವ ನಾಯಕನಾಗಿ ವೇದವ್ಯಾಸ ಕಾಮತ್ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಪರ ವಾತಾವರಣ ಇದ್ದು, ಎಲ್ಲಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ರಾಜ್ಯದಲ್ಲಿ ನಮ್ಮ ಸರಕಾರ ನಿಚ್ಚಳ ಬಹುಮತ ಗಳಿಸಲಿದೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಚೆಂಡೆ ವಾದನ, ಕಲ್ಲಡ್ಕ ಬೊಂಬೆಗಳು, ಹಾಡುಗಳು ಕಾರ್ಯಕರ್ತರ ಖುಷಿಯನ್ನು ಹೆಚ್ಚಿಸಿದವು. ವೇದವ್ಯಾಸ ಕಾಮತ್ ಅವರನ್ನು ಮೆಚ್ಚಿ ರಚಿಸಲಾದ ವಿಶೇಷ ಹಾಡಿಗೆ ಕಾರ್ಯಕರ್ತರು ಹೆಜ್ಜೆ ಹಾಕುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಅಲ್ಲಲ್ಲಿ ಉಚಿತವಾಗಿ ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಬೆಳ್ತಂಗಡಿ: ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಬೆಳ್ತಂಗಡಿಯ ಮಾಲಾಡಿ ಗ್ರಾಮದ ಭೂತದ ಮನೆಯಲ್ಲಿ ಸದ್ಯ ನೀರವ ಮೌನ ಆವರಿಸಿದೆ. ಕಳೆದ ಮೂರು ತಿಂಗಳಿನಿಂದ ಭೂತದ ಉಪಟಳದಿಂದ ಬಳಲಿ ಬೆಂಡಾಗಿರುವ ಕುಟುಂಬ ಮನೆಯನ್ನೇ ಖಾಲಿ ಮಾಡಿ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಸಲಿಗೆ ಕಳೆದೆರಡು ದಿನಗಳಿಂದ ಈ ಮನೆಯಲ್ಲಿನ ಭೂತದ ಉಪಟಳ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಈ ಮನೆಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ನೂರಾರು ಜನ ಬಂದು ಭೂತದ ಹುಡುಕಾಟ ನಡೆಸಿದ್ದರು. ಭೂತದ ಇರುವಿಕೆಯ ವಿಚಾರವಾಗಿ ಪರ ವಿರೋಧದ ಚರ್ಚೆಗಳು ಆರಂಭವಾಗಿ ಹಲವರು ಮನೆಯವರ ಕಥೆಯೇ ಸುಳ್ಳು ಎಂದು ಅನುಮಾನ ವ್ಯಕ್ತಪಡಿಸಿದ್ದರು.
ನಮ್ಮ ಕುಡ್ಲ ವಾಹಿನಿ ಈ ಬಗ್ಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಿದಾಗಲೂ ಇದು ಭೂತದ ಕಾಟ ಇರಲಾರದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಖ್ಯಾತ ಮನೋರೋಗ ತಜ್ಞರು ಹಾಗೂ ಪವಾಡ ರಹಸ್ಯ ಬಯಲು ತಜ್ಞ ಡಾ. ಹುಲಿಕಲ್ ನಟರಾಜ್ ಅವರೂ ಕೂಡಾ ಮನೆಯವರ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ಹೇಳಿದ್ದರು.
ಇದೀಗ ಉಮೇಶ್ ಶೆಟ್ಟಿ ಅವರ ಇಡೀ ಕುಟುಂಬ ಭೂತದ ಭಯದಿಂದ ಮನೆಯನ್ನು ಬಿಟ್ಟು ಹೋಗಿದ್ದು, ಸಂಬಂಧಿಕರ ಮನೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ಮಂಗಳೂರು : ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಉರ್ವ ಮಾರಿಯಮ್ಮ ಕ್ಷೇತ್ರದಲ್ಲಿ ಫೆ.7 ರಿಂದ ಜಾತ್ರೋತ್ಸವದ ಕಾರ್ಯಕ್ರಮಗಳು ಆರಂಭವಾಗಿವೆ. ಫ್ರೆ.18 ರಂದು ದರ್ಶನ ಬಲಿ ಹಾಗೂ ವಿಶೇಷವಾಗಿ ನಡೆಯುವ ರಾಶಿ ಪೂಜೆಯೊಂದಿಗೆ ಜಾತ್ರೋತ್ಸವ ನಡೆಯಲಿದೆ.
ಇಂದು ಕ್ಷೇತ್ರದಲ್ಲಿ ಮಾರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಮೆರವಣಿಗೆ ಮೂಲಕ ತೆರಳಿ ನಾಲ್ಕು ದಿಕ್ಕಿಗೆ ಪ್ರಸಾದ ಹಾರಿಸುವ ಧಾರ್ಮಿಕ ವಿಧಿಯ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿದೆ. ಉರ್ವ ಮೈದಾನದಲ್ಲಿ ಹಾಗೂ ಮೂರು ಮಾರ್ಗ ಸೇರುವ ಜಾಗದಲ್ಲಿ ಈ ಪ್ರಸಾದ ಹಾರಿಸುವ ಧಾರ್ಮಿಕ ವಿಧಿ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಹಾಜರಿದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿದೆ. ಫೆ.14 ರಂದು ಪರ್ಸಿನ್ ಮೀನುಗಾರರ ಸಂಘದಿಂದ ಕ್ಷೇತ್ರದಲ್ಲಿ ಚಂಡಿಕಾ ಯಾಗ ನಡೆಯಲಿದ್ದು, 17 ರಂದು ಹಾಲು ಉಕ್ಕಿಸುವ ಕಾರ್ಯಕ್ರಮ ನಡೆಯಲಿದೆ. ಮಡೆಸ್ನಾನ, ದರ್ಶನ ಬಲಿ ಸೇವೆ, ರಾಶಿ ಪೂಜೆಗಳು ಫೆ.18 ರಂದು ನಡೆಯಲಿದ್ದು ಫೆ. 22 ರಂದು ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಇಂದು ನಡೆದ ಪ್ರಸಾದ ಹಾರಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂಗಳೂರು ಏಳು ಪಟ್ನ ಮೊಗವೀರ ಸಂಯುಕ್ತ ಸಭಾದ ಕುದ್ರೋಳಿ 3 ನೇ ಗ್ರಾಮ ಅಧ್ಯಕ್ಷ ಲೋಕೇಶ್ ಸುವರ್ಣ, ದೇವಸ್ಥಾನದ ಮೊಕ್ತೇಸರ ಕುದ್ರೋಳಿ ಒಂದನೇ ಗ್ರಾಮದ ಮಾಧವ ಪುತ್ರನ್ ಗುರಿಕಾರ, 2 ನೇ ಗ್ರಾಮದ ಯಾದವ ಸುವರ್ಣ, 3 ನೇ ಗ್ರಾಮದ ಯಾದವ ಸಾಲ್ಯಾನ್, ಪುರುಷೋತ್ತಮ ಕೋಟ್ಯಾನ್ ಬೊಕ್ಕಪಟ್ನ, ಯಶವಂತ ಪಿ. ಮೆಂಡನ್ ಬೋಳೂರು, ರಂಜನ್ ಕಾಂಚನ್ ಬೋಳೂರು, ವಾಸುದೇವ ಸಾಲ್ಯಾನ್ ಬೈಕಂಪಾಡಿ, ಸುರೇಶ್ ಕುಂದರ್ ಕೂಳೂರು, ಅಮರನಾಥ ಸುವರ್ಣ ಗುರಿಕಾರ ಪಣಂಬೂರು ಮತ್ತು ಗ್ರಾಮದ ಭಕ್ತರು ಉಪ್ಥಿತರಿದ್ದರು.
ಮಂಗಳೂರು : ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ-ಮಳಿಗೆಗಳಿಗೆ ಮೇಯರ್ ಮನೋಜ್ ಕುಮಾರ್ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಿತು.
ಮಂಗಳುರಿನ ಫಿಝಾ ಬೈ ನೆಕ್ಸ್ ಮಾಲ್ ಹಾಗೂ ಟೋಕಿಯಾ ಮಾರ್ಕೇಟ್‌ಗಳಿಗೆ ಮೇಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಕೆಲವೊಂದು ಅಂಗಡಿಗಳು ಟ್ರೇಡ್‌ಲೈನ್ಸನ್ ನವೀಕರಿಸದ ಹಿನ್ನಲೆಯಲ್ಲಿ ಬೀಗ ಜಡಿದರು. ಮಾತ್ರವಲ್ಲದೇ ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ ಮಾಲಕಕರಿಗೆ ಮೇಯರ್ ವಾರ್ನಿಂಗ್ ನೀಡಿದ್ದಾರೆ.
ಈ ಸಂದರ್ಭ ಮಾತನಾಡಿದ ಮೇಯರ್, “ಹಲವಾರು ಮಂದಿಯ ದೂರಿನ ಮೇರಿಗೆ ದಾಳಿ ಮಾಡಲಾಗಿದೆ. ಕೆಲವೊಂದು ಅಂಗಡಿಗಳಲ್ಲಿ ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಹಿನ್ನಲೆಯಲ್ಲಿ ಅವರಿಗೆ ನೋಟೀಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಲಾಗುವುದು” ಎಂದು ಹೇಳಿದರು. ಈ ವೇಳೆ ಉಪಮೇಯರ್ ಭಾನುಮತಿ, ಪಾಲಿಕೆ ಸದಸ್ಯೆ ಸುಮಿತ್ರಾ ಕರಿಯ,ಕಂದಾಯ ಅಧಿಕಾರಿ ವಿಜಯ್,ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥತರಿದ್ದರು.