Connect with us

LATEST NEWS

‘ವರಾಹ ರೂಪಂ’…ಹಾಡು ಕದ್ದ ಆರೋಪ : ನಮಗೆ ‘ಇಷ್ಟು’ ಕೊಟ್ಟರೆ ಸಾಕು ಎಂದ ಥೈಕುಡಂ ಬ್ರಿಜ್‌..!?

Published

on

ಬೆಂಗಳೂರು : ಸೂಪರ್ ಹಿಟ್ ಫಿಲ್ಮ್ ಕಾಂತಾರ ಚಿತ್ರದ ಸೂಪರ್ ಹಿಟ್ ಹಾಡು ವರಾಹ ರೂಪಂ… ತನ್ನ ನವರಸಂ ಹಾಡಿನ ನಕಲು ಎಂದು ಆರೋಪಿಸಿದ್ದ ಕೇರಳದ ಥೈಕುಡಂ ಬ್ರಿಜ್‌ ಮ್ಯೂಸಿಕ್‌ ಬ್ಯಾಂಡ್‌ ಇದೀಗ ಚಿತ್ರದ ನಿರ್ಮಾಪಕರ ಎದುರು ಬೇಡಿಕೆಯನ್ನು ಮುಂದಿಟ್ಟಿದೆ.

ಥೈಕುಡಂ ಬಿಜ್‌ನ ದೂರಿನ ಹಿನ್ನೆಲೆಯಲ್ಲಿ ಕೇರಳದ ನ್ಯಾಯಾಲಯ ಈ ಹಾಡನ್ನು ಪ್ರಸಾರ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ.

ನ್ಯಾಯಾಲಯದ ಆದೇಶ ಪ್ರತಿ ಕೈಸೇರಿದ ಬಳಿಕ ಈ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ಹೊಂಬಾಳೆ ಫಿಲ್ಮ್ಸ್‌ ಹೇಳಿತ್ತು. ಈ ನಡುವೆ ಥೈಕುಡಂ ಬ್ರಿಜ್‌ ತನ್ನ ಬೇಡಿಕೆಯನ್ನು ತಿಳಿಸಿದೆ.

ಹಣಕ್ಕಾಗಿ ಇಷ್ಟೆಲ್ಲ ಮಾಡುತ್ತಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ. ಆದರೆ ನಮಗೆ ಹಣ ಮುಖ್ಯವಲ್ಲ ಎಂಬುದು ಥೈಕುಡಂ ಬ್ರಿಜ್‌
ಸ್ಪಷ್ಟಪಡಿಸಿದೆ.

ಕೋರ್ಟ್​ನ ಆದೇಶದ ಪ್ರತಿ ಕೈ ಸೇರಿದ ನಂತರ ಕಾಂತಾರ ತಂಡದವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ತುಂಬ ಮುಖ್ಯ. ನಮಗೆ ಕ್ರೆಡಿಟ್ ಕೊಟ್ಟರೆ ಈ ಹಾಡನ್ನು ಅವರು ಪ್ಲೇ ಮಾಡಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಥೈಕುಡಂ ಬ್ರಿಜ್‌ ಬ್ಯಾಂಡ್​ನ ವಿಯಾನ್ ಫರ್ನಾಂಡಿಸ್ ಹೇಳಿದ್ದಾರೆ.

ದೊಡ್ಡ ನಿರ್ಮಾಣ ಸಂಸ್ಥೆ ವಿರುದ್ಧ ಸ್ವತಂತ್ರ ಬ್ಯಾಂಡ್​ ಹೋರಾಡುತ್ತಿರುವುದು ಇದೇ ಮೊದಲು. ತಮ್ಮಲ್ಲಿರುವ ಹಣ, ಅಧಿಕಾರದಿಂದ ಪಾರಾಗಬಹುದು ಎಂದು ಅವರು ಭಾವಿಸಿರಬಹುದು.

ಸಂಗೀತ ಲೋಕಕ್ಕೆ ಮಾದರಿ ಆಗಬೇಕು ಎಂಬುದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಏನೇ ಆದರೂ ನಮಗೆ ಖುಷಿಯಿದೆ. ನಾವು ಸುಮ್ಮನೆ ಕೂತಿಲ್ಲ, ದಿಟ್ಟ ಹೆಜ್ಜೆ ತೆಗೆದುಕೊಂಡೆವು ಎಂಬ ತೃಪ್ತಿ ನಮ್ಮಲ್ಲಿರುತ್ತದೆ ಎಂದಿದ್ದಾರೆ.

DAKSHINA KANNADA

ರಾಘವ ಅತ್ತಾವರ ವಿಧಿವಶ ; ಕದ್ರಿ ನವನೀತ ಶೆಟ್ಟಿ ಸಂತಾಪ

Published

on

ಮಂಗಳೂರು : ಕೆಲವೊಂದು ಸಾವುಗಳು ನಮ್ಮನ್ನು ಮೌನವಾಗಿಸುತ್ತವೆ. ವ್ಯಕ್ತಿ ಅಳಿದರೂ  ಆತನ ನೆನಪುಗಳು ಸದಾ ಹಸಿರಾಗುತ್ತದೆ. ಆತನ ಸಾಧನೆಗಳು ಎಂದಿಗೂ ಮರೆಯದಂತೆ ಇರುತ್ತದೆ. ಇದೀಗ ಅಂತಹದ್ದೇ ಸಾಧಕನೊಬ್ಬ ನಮ್ಮನ್ನಗಲಿದ್ದಾರೆ. ಮಂಗಳೂರಿನ ಬಹುಮುಖ ಪ್ರತಿಭೆ ಕದ್ರಿ ನವನೀತ ಶೆಟ್ಟಿ ಮೃತರ ಕುರಿತು ಬರೆದ ಲೇಖನವು ಮನಮುಟ್ಟುವಂತಿದೆ.

ಹಿರಿಯ ನಾಟಕ ನಿರ್ದೇಶಕ, ಒಂದು ಕಾಲದ ಪ್ರಸಿದ್ದ ಸ್ತ್ರೀ ವೇಷ ಧಾರಿ  ರಾಘವ ಅತ್ತಾವರ ವಿಧಿವಶ ರಾಗಿ 5 ದಿನ ಕಳೆಯಿತು…ವೃತ್ತಿ ಯಲ್ಲಿ ನುರಿತ ಮೋಟಾರ್ ಎಲೆಕ್ಟ್ರಿಶನ್. ಪ್ರವೃತ್ತಿ..ರಂಗ ಭೂಮಿ…ಸುಮಾರು ನಾಲ್ಕು ದಶಕಗಳ ಕಾಲ ನಾಟಕ ಕ್ಷೇತ್ರ ದಲ್ಲಿ ಮಂಗಳೂರು ಹಾಗೂ ಗ್ರಾಮಾಂತರ ಪ್ರದೇಶ ಗಳಲ್ಲಿ ನೂರಾರು ನಾಟಕ ಗಳನ್ನು ನಿರ್ದೇಶಿಸಿದವರು. ಧನ ಅಪೇಕ್ಷೆ ಇಲ್ಲದೆ, ತನ್ನ ಸ್ಕೂಟರ್ ನಲ್ಲಿ ಪಯಣಿಸಿ, ತಿಂಗಳು ಗಟ್ಟಲೆ ರಂಗ ಅಭ್ಯಾಸ ಮಾಡಿಸಿ ನಾಟಕ ದ ಯಶಸ್ವಿ ಪ್ರದರ್ಶನ  ನೋಡಿ ಸಂಭ್ರಮ ಪಡುತಿದ್ದ ಕಲಾರಾಧಕ.

ಹಲವಾರು ಮಹಿಳಾ ಮಂಡಳಿ ಗಳು, ಯುವಕ ಮಂಡಳಿ ಗಳ ಗದ್ದೆ ಯ ಪರದೆ ನಾಟಕ ಗಳಿಗೆ ಜೀವ ತುಂಬಿ ಹುರಿದುಂಬಿಸಿ ನೂರಾರು ಕಲಾವಿದರನ್ನು ಸೃಷ್ಟಿ ಸಿ ಬೆಳೆಸಿದ ರಂಗ ಸಾಧಕ…ತಾರುಣ್ಯ ದಲ್ಲಿ ಸ್ತ್ರೀ ವೇಷ ಧಾರಿ ಯಾಗಿ   ಮರ್ಲೆದಿ, ಮಾಜಂದಿ ಬರವು, ಗಂಗಾರಾಮ್, ಬಯ್ಯ ಮಲ್ಲಿಗೆ, ಸರಸ್ವತಿ, ಮುತ್ತು ಮಾನಿಕ ಮೊದಲಾದ ನಾಟಕ ಗಳಲ್ಲಿ ಮನೋಜ್ಞ ಅಭಿನಯ ನೀಡುತಿದ್ದ ಅಗ್ರ ಪಂಕ್ತಿ ಯ ಕಲಾವಿದ….ಶೋಭಾ ಯಾತ್ರೆ ಗಳ, ಮಂಗಳಾದೇವಿ ರಥೋತ್ಸವ ದ ಟ್ಯಾಬ್ಲೋ ಗಳಲ್ಲಿ ಹಲವು ವರ್ಷ ಶ್ರದ್ದೆ, ಭಕ್ತಿ ಯಿಂದ ಪಾತ್ರ ನಿರ್ವಹಿಸಿದ್ದ ನಿಷ್ಠಾವಂತ ಕಲೋಪಾಸಕ…ರಾಘವ ಅತ್ತಾವರ ಅವರ ನಿರ್ದೇಶನ ದಲ್ಲಿ ನಾನು ಹಲವಾರು ಸಾಮಾಜಿಕ, ಚಾರಿತ್ರಿಕ, ಜಾನಪದ, ಪೌರಾಣಿಕ ನಾಟಕ ಗಳಲ್ಲಿ  ಅಭಿನಯ ಮಾಡಿದ್ದೇನೆ.

ನಮ್ಮ ಕದ್ರಿ ಕಂಬಳ ಮಿತ್ರ ವೃಂದ, ಸೌರಭ ಕಲಾವಿದರು ಕದ್ರಿ, ಬಲ್ಮಠ ಟ್ರೈನಿಂಗ್ ಶಾಲೆ ಯ ಹಲವಾರು ನಾಟಕ ಗಳಲ್ಲಿ ಸುಮಾರು ಎರಡು ದಶಕ ಗಳ ಕಾಲ ಅವರು ಹಲವಾರು ನಾಟಕ ಗಳನ್ನು ನಿರ್ದೇಶಿ ಸಿದ್ದಾರೆ. ಚಿತ್ರ ನಿರ್ದೇಶಕರಾದ ಸಾಯಿ ಕೃಷ್ಣ, ಆರ್. ಎಸ್. ಸುರೇಶ, ಚಿತ್ರ ನಟರಾದ ಸುಂದರ ಹೆಗ್ಡೆ, ಸುಧೀರ್ ಬಲ್ಮಠ, ನಿರೂಪಕಿ ಸೌಜನ್ಯಹೆಗ್ಡೆ    ಮೊದಲಾದ ಪ್ರತಿಭೆಗಳ ಆರಂಭದ ಗುರು ಅತ್ತಾವರ ಮಾಸ್ಟ್ರು.ನಾನು ರಚಿಸಿದ ಮೊದಲ ಹತ್ತು ನಾಟಕ ಗಳನ್ನು ಅತ್ತಾವರ ಅವರು ನಿರ್ದೇಶನ ಮಾಡಿದ್ದಾರೆ… ಮೂರು ದಶಕ ಗಳ ಹಿಂದೆ ರಚಿಸಿ, ಇಂದೂ ಪ್ರದರ್ಶನ ಕಾಣುತ್ತಿರುವ “ಕಾರ್ನಿಕದ ಶಿವ ಮಂತ್ರ ” ನಾಟಕ ದ ಮೊದಲ ಗುರು ಇವರೇ. ಸಾಮಾಜಿಕ ನಾಟಕ ಗಳಲ್ಲಿ ಅಭಿನಯ ಮಾಡುವಾಗ ಇಣುಕು ತಿದ್ದ  ಯಕ್ಷಗಾನ ದ ಛಾಯೆ ಯನ್ನು ಬೈದು, ತಿದ್ದಿ ತೀಡಿ,ನೇರ್ಪು ಗೊಳಿಸಿದ್ದ ದಿನಗಳನ್ನು ಮರೆಯಲಾಗುವುದಿಲ್ಲ.

ಅವರ ನಿರ್ದೇಶನ ದ ನಾಟಕ ದ ಅಂಕ ದ ಪರದೆ  ತೆರೆಯುವ ಹಾಗೂ ಹಾಕುವ  ಕಾಯಕ ವನ್ನು ಸ್ವತಃ ಅವರೇ ಮಾಡುತಿದ್ದರು. ಚೌಕಿ ಪೂಜೆ ಮಾಡಿ, ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಮಾಡಿ ಅಂಕದ ಪರದೆ ಸರಿಸಿ ಬಿಡುತ್ತಿದ್ದ ರಾಘವ ಅತ್ತಾವರ ನನಗೆ ಇಂದೂ ನನ್ನ ನಾಟಕ ಪ್ರದರ್ಶನ ಕಾಲ ದಲ್ಲಿ ನೆನಪಾಗುತ್ತಾರೆ. ಸ್ವಾಭಿಮಾನಿ, ಮಿತ ಭಾಷಿ, ಛಲವಾದಿ, ಅಭ್ಯಾಸ ಕಾಲದಲ್ಲಿ ಶೀಘ್ರ ಕೋಪಿ… ರಂಗ ವೇದಿಕೆ ಯನ್ನು ಆರಾಧನಾ ಮಂದಿರದಂತೆ ಕಾಣುತಿದ್ದವರು… ನಾಟಕದ ಅಂಕದ ಪರದೆ ಯನ್ನು  ನಾಟಕ ಮುಗಿದಾಗ ಅವರೇ ಎಳೆಯು ತಿದ್ದದ್ದು ಸ್ವಾಭಿಮಾನಿ ನಿರ್ದೇಶಕನಾಗಿ…ಅವರ ನಿಧನ ವಾರ್ತೆ ಯನ್ನು ಇಂದು ಅವರ ಮಮತೆಯ ಪುತ್ರಿ ತಿಳಿಸಿದಾಗ ನನಗೆ ಅನಿಸಿದ್ದು…”ಬದುಕಿನ ಅಂಕದ ಪರದೆ ಯನ್ನೂ ಅವರೇ ಎಳೆದು ಬಿಟ್ಟ ರಲ್ಲಾ… ಜೀವನ ನಾಟಕ ಸಹಜ ಮುಕ್ತಾಯ ಕಾಣುವ ಮುನ್ನ.!!”

ಬರಹ : ಕದ್ರಿ ನವನೀತ ಶೆಟ್ಟಿ

Continue Reading

DAKSHINA KANNADA

ಮಂಗಳೂರು : ಕೂಳೂರು ಸೇತುವೆ ಬಳಿ ದರ್ಪ ; ಪೊಲೀಸರಿಂದ ಸ್ಪಷ್ಟನೆ

Published

on

ಮಂಗಳೂರು : ಮಾ.21ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಕೂಳೂರು ಸೇತುವೆ ಬಳಿ ದರ್ಪ ಮೆರೆದ ಸಂಚಾರ ಪೊಲೀಸರು” ಎಂಬ ವೀಡಿಯೊ 2024ರ ಡಿ.23ರಂದು ಕುದುರೆಮುಖ ಜಂಕ್ಷನ್‌ ನಲ್ಲಿ ನಡೆದಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕುರಿತು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

ಪಾನಮತ್ತನಾದ ಓರ್ವ ವ್ಯಕ್ತಿ ಕುದುರೆಮುಖ ಜಂಕ್ಷನ್ ನಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿದ್ದು, ಸಾರ್ವಜನಿಕರ ಸಹಾಯದೊಂದಿಗೆ ಪೊಲೀಸರು ಆ ವ್ಯಕ್ತಿಯನ್ನು ಬದಿಗೆ ಕಳುಹಿಸಿದರೂ ಆತ ಮತ್ತೆ ಪದೇ ಪದೇ ರಸ್ತೆಗೆ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ ಸಮಯ ತುಂಬಾ ಕುಡಿದಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದು ಆತನಿಗೆ ಮೂಗಿನಲ್ಲಿ ರಕ್ತ ಬಂದಿರುತ್ತದೆ.

ಈ ವೇಳೆ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಆ ವ್ಯಕ್ತಿಯನ್ನು ಮೇಲಕ್ಕೆತ್ತಿ ಉಪಚರಿಸಿ ಆಸ್ಪತ್ರೆಗೆ ಸಾಗಿಸಲು ವಾಹನದ ಬಳಿ ಕರೆದುಕೊಂಡು ಬರುತ್ತಿರುವಾಗ ಯಾರೋ ಸಾರ್ವಜನಿಕರು ತಪ್ಪಾಗಿ ತಿಳಿದುಕೊಂಡು ವೀಡಿಯೊ ಮಾಡಿ ವೈರಲ್‌ ಮಾಡಿದ್ದಾರೆ ಎಂದು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

Continue Reading

LATEST NEWS

ವಿಶ್ವದ ಅತ್ಯಂತ ಸಂತೋಷದಾಯಕ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ?

Published

on

ಮಂಗಳೂರು: ವಿಶ್ವದ ಅತ್ಯಂತ ಸಂತೋಷದಾಯಕ ದೇಶ ಯಾವುದು? ಅಮೆರಿಕ, ಚೀನಾ ಅಥವಾ ರಷ್ಯಾ ಅಲ್ಲ. 2025 ರ ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳ ಸೂಚ್ಯಂಕ ಪಟ್ಟಿ ಬಿಡುಗಡೆ ಮಾಡಿದೆ.


ವಲ್ಡ್ ಹ್ಯಾಪಿನೆಸ್ ರಿಪೋರ್ಟ್ 2025 ರ ಪ್ರಕಾರ ಫಿನ್‌ಲ್ಯಾಂಡ್ ಸತತ ಎಂಟನೇ ವರ್ಷವೂ ವಿಶ್ವದ ಅತ್ಯಂತ ಸಂತೋಷದಾಯಕ ದೇಶ ಎಂಬ ಕೀರ್ತಿ ಗಳಿಸಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಯೋಗಕ್ಷೇಮ ಕೇಂದ್ರವು ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ 10 ದೇಶಗಳು ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿವೆ.

ಫಿನ್‌ಲ್ಯಾಂಡ್ ಮೊದಲ ಸ್ಥಾನವನ್ನು ಹೊಂದಿದೆ. ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ನಂತರದ ಸ್ಥಾನವನ್ನು ಹೊಂದಿದೆ. ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ನಂತರದ ಸ್ಥಾನಗಳಲ್ಲಿವೆ. ಮತ್ತೊಂದೆಡೆ ಭೀಕರ ಅಂತರ್ಯುದ್ಧದಲ್ಲಿ ಕಾದಾಡುತ್ತಿರುವ ಅಫ್ಘಾನಿಸ್ತಾನ ಮತ್ತೊಮ್ಮೆ ಸಂತೋಷದ ರಾಷ್ಟ್ರಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಸೇರಿದ್ದು, 147ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ (146) ಮತ್ತು ಲೆಬನಾನ್ (145) ಹಿಂದಿನ ಸ್ಥಾನದಲ್ಲಿದೆ.

ವಿಚಿತ್ರ ಎಂಬಂತೆ ಹಮಾಸ್ ಜೊತೆ ಭೀಕರ ಯುದ್ದ ನಡೆಸಿದ ಇಸ್ರೇಲ್ ದೇಶವು ಎಂಟನೇ ಸ್ಥಾನದಲ್ಲಿದೆ. ಕೋಸ್ಟಾ ರಿಕಾ ಮತ್ತು ಮೆಕ್ಸಿಕೊ ಕೂಡ ಮೊದಲ ಬಾರಿಗೆ ಅಗ್ರ ಹತ್ತು ಸ್ಥಾನಗಳಲ್ಲಿದ್ದು, ಈ ದೇಶಗಳು ಕ್ರಮವಾಗಿ 6 ​​ಮತ್ತು 10ನೇ ಶ್ರೇಯಾಂಕದಲ್ಲಿವೆ.

ಇದನ್ನೂ ಓದಿ:  ಐಪಿಎಲ್ 2025: ಕೆಕೆಆರ್-ಆರ್ಸಿಬಿ ಉದ್ಘಾಟನಾ ಪಂದ್ಯವೇ ರದ್ದಾಗುವ ಸಾಧ್ಯತೆ?

ದೇಶ ಪ್ರತಿಯಿಂದ ಒಂದರಿಂದ ಮೂರು ಸಾವಿರ ಜನರ ಮಾದರಿ ಗಾತ್ರವನ್ನು ಆಯ್ಕೆ ಮಾಡಲಾಗಿದೆ. ಕೇಳಲಾದ ಪ್ರಶ್ನೆಗಳ ಆಧಾರದ ಮೇಲೆ ಅವರಿಗೆ ರಚಿಸಲಾಗಿದೆ. ಈ ಪ್ರಶ್ನೆಗಳಿಗೆ 0 ರಿಂದ 10 ರ ರೇಟಿಂಗ್‌ನಲ್ಲಿ ಉತ್ತರಿಸಬೇಕು. 0 ಎಂದರೆ ಕೆಟ್ಟದು, 10 ಎಂದರೆ ಅತ್ಯುತ್ತಮ ಅನುಭವ. ಸಂಪತ್ತು ಮತ್ತು ಅಭಿವೃದ್ಧಿ, ಸಂಬಂಧಗಳು, ಜನರ ನಡುವಿನ ನಂಬಿಕೆ, ಆತ್ಮತೃಪ್ತಿ, ಸಾಮಾಜಿಕ ಬೆಂಬಲ, ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರ ಎಲ್ಲಾ ಈ ಅಂಶಗಳನ್ನು ಪರಿಗಣಿಸಿ ದೇಶಗಳಿಗೆ ಸ್ಥಾನ ನಿಗದಿಪಡಿಸಲಾಗಿದೆ.

ಅಗ್ರ 10 ಅಗ್ರ ಸ್ಥಾನದಲ್ಲಿರುವ ದೇಶಗಳು
1. ಫಿನ್ಲ್ಯಾಂಡ್

2. ಡೆನ್ಮಾರ್ಕ್

3. ಐಸ್ಲ್ಯಾಂಡ್

4. ಸ್ವೀಡನ್

5. ನೆದರ್ಲ್ಯಾಂಡ್

6. ಕೋಸ್ಟಾ ರಿಕಾ

7. ನಾರ್ವೆ

8. ಇಸ್ರೇಲ್

9. ಲಕ್ಷಂಬರ್ಗ್

೧೦. ಮೆಕ್ಸಿಕೋ

ಭಾರತಕ್ಕೆ ಎಷ್ಟನೇ ಸ್ಥಾನ?
2025ರ ಸಂತೋಷದ ವರದಿಯಲ್ಲಿ 147 ದೇಶಗಳನ್ನು ಪರಿಗಣಿಸಿ ವರದಿ ಸಿದ್ದಪಡಿಸಲಾಗಿದೆ. ಇದರಲ್ಲಿ ಭಾರತವು 118ನೇ ಸ್ಥಾನವನ್ನು ಹೊಂದಿದೆ. ಕಳೆದ ವರ್ಷಕ್ಕಿಂತ ಕೊಂಚ ಸುಧಾರಿಸಿದೆ ಎಂದು ಹೇಳಬಹುದು. ಏಕೆಂದರೆ 2024ರ ಹ್ಯಾಪಿನೆಸ್ ರಿಪೋರ್ಟ್‌ನಲ್ಲಿ ಭಾರತವು 126ನೇ ಸ್ಥಾನದಲ್ಲಿತ್ತು. ಆದರೆ 2025ರಲ್ಲಿ ಭಾರತವು 8 ಸ್ಥಾನ ಮೇಲಕ್ಕೇರಿದೆ.

ಶ್ರೇಯಾಂಕದಲ್ಲಿ ಕುಸಿತಕಂಡ ಅಮೆರಿಕ
ಸಂತೋಷ ಸೂಚ್ಯಂಕ ವರದಿಯಲ್ಲಿ ಕಳೆದ ವರ್ಷ 23ನೇ ಸ್ಥಾನದಲ್ಲಿದ್ದ ಅಮೆರಿಕ ಈ ಬಾರಿ ಒಂದು ಸ್ಥಾನ ಕುಸಿದಿದೆ. 2012ರಲ್ಲಿ 11ನೇ ಸ್ಥಾನದಲ್ಲಿದ್ದ ಅಮೆರಿಕ ಈಗ 24ನೇ ಸ್ಥಾನಕ್ಕೆ ಕುಸಿದಿರುವುದು ಗಮನಾರ್ಹ.

Continue Reading
Advertisement

Trending

Copyright © 2025 Namma Kudla News

You cannot copy content of this page