Connect with us

FILM

ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೈಷ್ಣವಿ ಗೌಡ; ಮದುವೆ ಸಂಭ್ರಮದ ಫೋಟೋಗಳು ಇಲ್ಲಿವೆ

Published

on

ಮಂಗಳೂರು/ಬೆಂಗಳೂರು: ‘ಅಗ್ನಿಸಾಕ್ಷಿ’ ಖ್ಯಾತಿಯ, ಕಿರುತೆರೆ ನಟಿ ವೈಷ್ಣವಿ ಗೌಡ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆ ಬಳಿಕ ವೈಷ್ಣವಿ ಗೌಡ ಅವರು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹೌದು, ಅಗ್ನಿಸಾಕ್ಷಿ ಧಾರಾವಾಹಿಯಿಂದಲೇ ಖ್ಯಾತಿ ಪಡೆದ ನಟಿ ವೈಷ್ಣವಿ ಗೌಡ ಅವರು ಸನ್ನಿಧಿ ಎಂಬ ಹೆಸರಿನಿಂದಲೇ ಜನರಿಗೆ ಪರಿಚಯ. ಕನ್ನಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿಯೂ ಈ ನಟಿಯು ಎಲ್ಲರ ಗಮನ ಸೆಳೆದಂತವರು. ಸೀತಾರಾಮ ಧಾರವಾಹಿಯಲ್ಲೂ ಮುಖ್ಯ ಪಾತ್ರದಲ್ಲಿ ಮಿಂಚಿರುವ ವೈಷ್ಣವಿ ಗೌಡ ಇದೀಗ ಸಪ್ತಪದಿ ತುಳಿದಿದ್ದಾರೆ.

ವೈಷ್ಣವಿ ಗೌಡ ಅವರು ಮದುವೆ ಆಗಿರುವ ಹುಡುಗನ ಹೆಸರು ಅನುಕೂಲ್ ಮಿಶ್ರಾ. ಏರ್​ಫೋರ್ಸ್​ ಆಫೀಸರ್ ಆಗಿ ಅವರು ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಮಿಶ್ರಾ ಮತ್ತು ವೈಷ್ಣವಿ ಗೌಡ ಅವರದ್ದು ಲವ್ ಮ್ಯಾರೇಜ್ ಅಲ್ಲ, ಅಪ್ಪಟ ಅರೇಂಜ್ ಮ್ಯಾರೇಜ್. ಒಕ್ಕಲಿಗ ಹಾಗೂ ಉತ್ತರ ಭಾರತದ ಶೈಲಿಯಲ್ಲಿ ಮದುವೆ ಕಾರ್ಯಕ್ರಮ ನೆರವೇರಿದೆ.

ಇದನ್ನೂ ಓದಿ: 300 ಮದುವೆ ಪ್ರಸ್ತಾಪಗಳನ್ನು ರಿಜೆಕ್ಟ್ ಮಾಡಿದ್ದ ವೈಷ್ಣವಿ ಗೌಡ.. ಅಕಾಯ್ ಬಲೆಗೆ ಬಿದ್ದಿದ್ದು ಹೇಗೆ..!

ಈ ಸಮಾರಂಭದಲ್ಲಿ ಎರಡೂ ಕುಟುಂಬದ ಆತ್ಮೀಯರ ಜತೆಗೆ ನಟಿ ಅಮೂಲ್ಯ, ಅನುಪಮಾ ಗೌಡ, ನಿವೇದಿತಾ ಗೌಡ, ನಟಿ ಇಶಿತಾ, ನೇಹಾ ಗೌಡ, ನಿರಂಜನ್ ದೇಶಪಾಂಡೆ ದಂಪತಿ ಭಾಗಿಯಾಗಿದ್ದರು.
ಮದುವೆ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದು, Officially Mr and Mrs ಅಂತ ಕ್ಯಾಪ್ಷನ್‌ ಕೊಟ್ಟಿದ್ದಾರೆ.

FILM

ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ “ಲಕುಮಿ” ಧಾರವಾಹಿ ಖ್ಯಾತಿಯ ಸುಷ್ಮಾ ಶೇಖರ್

Published

on

ಕನ್ನಡದ ಲಕುಮಿ ಧಾರವಾಹಿ ಮೂಲಕ ಖ್ಯಾತಿ ಗಳಿಸಿದ್ದ ನಟಿ ಸುಷ್ಮಾ ಶೇಖರ್ ಅವರು ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಲಕುಮಿ.

ಹೌದು, ಕೆಲದಿನಗಳ ಹಿಂದೆ ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಸುಷ್ಮಾ ಶೇಖರ್.

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, He asked, I said yes—and just like that, my forever began” Grateful for a love that feels like home… ಎಂದು ಬರೆದುಕೊಂಡಿದ್ದಾರೆ. ಆದರೆ ಹುಡುಗನ ಕುರಿತು ಯಾವುದೇ ಮಾಹಿತಿ ಇಲ್ಲ.

‘ವೆಂಕಟೇಶ್ವರ ಮಹಿಮೆ’ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸುಷ್ಮಾ ಶೇಖರ್. ನಂತರ ‘ಕುಸುಮಾಂಜಲಿ’ , ‘ಲಕುಮಿ’, ‘ಕನಕ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಸುಷ್ಮಾ, ಓದಿನ ಕಡೆಗೆ ಗಮನ ಹರಿಸಿದ್ದರು. ಸುಷ್ಮಾ ಬಿಬಿಎ ಪದವಿಧರೆಯಾಗಿದ್ದಾರೆ.

ಇದನ್ನೂ ಓದಿ: BK12: ಕಳೆದ ವಾರ ಸೇಫ್ ಆದ ಸ್ಪರ್ಧಿ ಈ ವಾರ ಔಟ್‌!?

ಇನ್ನೂ ಮೂವರು ಸಹೋದರಿಯರ ಪೈಕಿ ಸುಷ್ಮಾ ಕೊನೆಯವರು. ಮೂವರು ಸಹೋದರಿಯರು ಅಭಿನಯಲ್ಲಿ ತೊಡಗಿಸಿಕೊಂಡವ್ರೇ. ಆದರೆ ಹೆಚ್ಚು ಪ್ರಚಲಿತದಲ್ಲಿರೋದು ಸುಷ್ಮಾ ಶೇಖರ್​.

Continue Reading

FILM

 ‘ಜೈ’ ಅಂದ್ರು ಪ್ರೇಕ್ಷಕರು…ತುಳು ಚಿತ್ರರಂಗದಲ್ಲಿ ಹೊಸ ದಾಖಲೆ!

Published

on

ಮಂಗಳೂರು : ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ತುಳು ಚಲನ ಚಿತ್ರ ‘ಜೈ’  ಸದ್ಯ ಥಿಯೇಟರ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಮಾತ್ರವಲ್ಲ, ಸಿನಿಮಾ ತುಳು ಚಿತ್ರರಂಗದಲ್ಲೇ ಹೊಸ ರೆಕಾರ್ಡ್ ಕೂಡ ಮಾಡಿದೆ. ಬಿಡುಗಡೆಯಾದ ಮೊದಲ ದಿನ ಅತಿ ಹೆಚ್ಚು ವೀಕ್ಷಣೆ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ. ಅಂದಹಾಗೆ, ಮೊದಲ ದಿನ ಜೈ ಚಿತ್ರ ನೋಡಿದವರ ಸಂಖ್ಯೆ 15,160ಕ್ಕೂ ಅಧಿಕ.

ವಿಶ್ವದಾದ್ಯಂತ ನವೆಂಬರ್ 14 ರಂದು ತೆರೆಗೆ ಬಂದಿರುವ ಜೈ ಸಿನಿಮಾ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರೂಪೇಶ್ ಶೆಟ್ಟಿ ನಟನೆ, ನಿರ್ದೇಶನ ಎರಡರಲ್ಲೂ ಗೆದ್ದಿದ್ದಾರೆ.  ಅದ್ವಿತಿ ಶೆಟ್ಟಿ ಮುದ್ದಾಗಿ ಕಾಣಿಸಿಕೊಂಡಿದ್ದು, ನಟನೆಯ ಮೂಲಕವೂ ಗಮನ  ಸೆಳೆಯುತ್ತಾರೆ. ಜೊತೆಗೆ ಸಿನಿಮಾದಲ್ಲಿ ಮನೋರಂಜನಾ ರಸದೌತಣವೇ ಇದೆ. ನಿರೀಕ್ಷೆಯಂತೆಯೇ ಬಾಲಿವುಡ್ ನಟ ಸುನೀಲ್ ಶೆಟ್ಟಿ ಜಬರ್ದಸ್ತ್ ಎಂಟ್ರಿ ಕೊಟ್ಟಿದ್ದಾರೆ.

ಅಂದಹಾಗೆ, ಜೈ ಬಿಗ್ ಬಜೆಟ್‌ನ  ಚಿತ್ರ. ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ.  ಗಿರಿಗಿಟ್, ಗಮ್ಜಾಲ್ ಮತ್ತು ಸರ್ಕಸ್ ಚಿತ್ರದ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ‘ಜೈ’  ಚಿತ್ರವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ.  ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್ ಹಾಗೂ ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಆ್ಯಕ್ಷನ್, ಡ್ರಾಮಾ ಮತ್ತು ಎಮೋಷನ್‌ಗಳ ಸಮನ್ವಯವಿದೆ.

ಇದನ್ನೂ ಓದಿ : ಮಾವನ ಚಿತ್ರಕ್ಕೆ ಶುಭಹಾರೈಸಿದ ಅಳಿಯ…! ಜೈ ಅಂದ್ರು ಕೆ.ಎಲ್.ರಾಹುಲ್

ಚಿತ್ರದ ಕಥೆ ಹಾಗೂ ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಕ್ಯಾಮೆರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ್ಹಾ, ಸಂಕಲನ ರಾಹುಲ್ ವಸಿಷ್ಠ ಅವರದ್ದು. ಅರವಿಂದ್ ಬೋಳಾರ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್ ಮುಂತಾದವರು ನಟಿಸಿದ್ದಾರೆ.

 

Continue Reading

FILM

ಇಂದಿನಿಂದ ಥಿಯೇಟರ್ ಅಂಗಳದಲ್ಲಿ ‘ಜೈ’ಕಾರ; ಅದ್ದೂರಿಯಾಗಿ ತೆರೆಗೆ ಬಂತು ರೂಪೇಶ್ ಶೆಟ್ಟಿ ಸಿನಿಮಾ

Published

on

ಮಂಗಳೂರು : ಆರ್ ಎಸ್ ಸಿನೆಮಾಸ್, ಶೂಲಿನ್ ಫಿಲಂಸ್ ಮತ್ತು ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಜೈ ತುಳು ಕನ್ನಡ ಸಿನೆಮಾ ಇಂದು ರಾಜ್ಯಾದ್ಯಂತ ಅದ್ದೂರಿ ಬಿಡುಗಡೆ ಕಂಡಿದೆ.

 

ಮಂಗಳೂರಿನ ಭಾರತ್ ಸಿನೆಮಾಸ್‌ನಲ್ಲಿ ಜೈ ಸಿನೆಮಾ ಬಿಡುಗಡೆ ಸಮಾರಂಭ ನಡೆಯಿತು. ಅದಕ್ಕೂ ಮೊದಲೂ ನೆಹರೂ ಮೈದಾನದಿಂದ ಸಂಭ್ರಮದ ಮೆರವಣಿಗೆ ನಡೆಯಿತು. ಚಿತ್ರ ತಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.

 

 

ಭಾರತ್ ಸಿನೆಮಾಸ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆದಿದ್ದು, ನಟ ರೂಪೇಶ್ ಎಲ್ಲರನ್ನೂ ಸ್ವಾಗತಿಸಿದರು. ಕಲಾವಿದ ಭೋಜರಾಜ್ ವಾಮಂಜೂರು ದೀಪ ಬೆಳಗಿಸಿ ಶುಭ ಹಾರೈಸಿದರು. ನಾಡಿನ ಜನ ಕಾಂತಾರಾ ಚಿತ್ರ ಬರಲು ಹೇಗೆ ಕಾಯುತ್ತಿದ್ದರೋ ಅದೇ ರೀತಿ ರೂಪೇಶ್ ಶೆಟ್ಟಿ ಜೈ ಸಿನೆಮಾ ಬರಲು ಕಾಯುತ್ತಿದ್ದಾರೆ ಎಂದರು.

 

ಇದನ್ನೂ ಓದಿ: ಮಾವನ ಚಿತ್ರಕ್ಕೆ ಶುಭಹಾರೈಸಿದ ಅಳಿಯ…! ಜೈ ಅಂದ್ರು ಕೆ.ಎಲ್.ರಾಹುಲ್

ನಟ, ನಿರ್ದೇಶಕ ಡಾ. ದೇವದಾಸ್ ಕಾಪಿಕಾಡ್ ಈ ಚಿತ್ರವನ್ನು ಗೆಲ್ಲಿಸಿ ಕೊಡಿ ಎಂದು ಕರೆ ನೀಡಿದರು. ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಅಸ್ತ್ರ ಗ್ರೂಪ್ ಮುಖ್ಯಸ್ಥ ಲಂಚುಲಾಲ್, ನಟ ಅರ್ಜುನ್ ಕಾಪಿಕಾಡ್ ಚಿತ್ರಕ್ಕೆ ಶುಭಹಾರೈಸಿದರು. ಚಿತ್ರದ ಕಲಾವಿದರು, ತಂತ್ರಜ್ಞರು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸಿನಿಮಾ ಕುರಿತು :

ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಚಿತ್ರಕತೆ ರೂಪೇಶ್ ಶೆಟ್ಟಿ ಮತ್ತು ವೇಣು ಹಸ್ರಳ್ಳಿ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್.
ಜೈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮನೋಜ್ ಚೇತನ್ ಡಿ ಸೋಜ, ಇನ್ನಿತರರು ಅಭಿನಯಿಸಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಬಣ್ಣಹಚ್ಚಿದ್ದಾರೆ.

ಜೈ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್, ಭಾರತ್ ಸಿನಿಮಾಸ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ದೇರಳಕಟ್ಟೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾ್ ನಲ್ಲಿ ಸ ತೆರೆ ಕಂಡಿದೆ. ಸಿನಿಮಾ ಸಂಪೂರ್ಣ ಮನರಂಜನೆಯ ಚಿತ್ರವಾಗಿದ್ದು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page