Connect with us

LIFE STYLE AND FASHION

ಈ ಸುಡು ಬೇಸಿಗೆಯಲ್ಲಿ ಕೂದಲಿನ ಆರೈಕೆಗಾಗಿ ಈ ಟಿಪ್ಸ್ ಬಳಸಿಕೊಳ್ಳಿ…!

Published

on

ಉದ್ದವಾದ, ಕಾಂತಿಯುತ ಮತ್ತು ಬಲಿಷ್ಠವಾದ ಆರೋಗ್ಯಕರ ಕೂದಲು ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಈ ಸುಡು ಬಿಸಿಲು ಹೇಗಿದೆಯೆಂದರೆ ಚರ್ಮದ ಮೇಲೆ ಮಾತ್ರವಲ್ಲ, ನಮ್ಮ ಕೂದಲಿನ ಮೇಲೂ ಸಹ ಕೆಟ್ಟ ಪರಿಣಾಮ ಬೀರುತ್ತದೆ. ಸುಡುವ ಬಿಸಿಲಿನಿಂದ ಕೂದಲು ನಿರ್ಜೀವವಾಗುತ್ತದೆ, ಹಾಗಾಗಿ ಬೆಸಿಗೆಯಲ್ಲಿ ಉತ್ತಮವಾಗಿ ಕೂದಲಿನ ಆರೈಕೆ ಮಾಡುವುದು ಬಹಳ ಮುಖ್ಯ. ಯಾವ ರೀತಿಯಾಗಿ ಸರಳವಾಗಿ ಕೂದಲಿನ ಆರೈಕೆ ಮಾಡಬಹುದು ಎಂಬ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.

ಸೂರ್ಯನ ಬೆಳಕು, ಮಾಲಿನ್ಯ, ಧೂಳು, ಕೊಳಕು ಮತ್ತು ಕಳಪೆ ಆಹಾರ ಪದ್ಧತಿಯಿಂದ ಕೂದಲು ನಿರ್ಜೀವವಾಗುತ್ತದೆ. ಬೇಸಿಗೆಯಲ್ಲಿ ತೀವ್ರವಾದ ಸೂರ್ಯನ ಬೆಳಕಿನಿಂದ ಕೂದಲಿಗೆ ಹಾನಿಯಾಗುವುದನ್ನು ತಡೆಯಲು, ಕೂದಲನ್ನು ಟೋಪಿ, ಕರವಸ್ತ್ರ ಅಥವಾ ಸ್ಟೋಲ್‌ನಿಂದ ಮುಚ್ಚಬೇಕು.

LATEST NEWS

ತುಳಸಿ ಗಿಡದ ಮುಂದೆ ಹಚ್ಚುವ ದೀಪದ ಹಿನ್ನಲೆ ಏನು ಗೊತ್ತಾ ?

Published

on

ತುಳಸಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನ ಮಾನವಿದೆ. ತುಳಸಿ ಗಿಡಕ್ಕೆ ಕಟ್ಟೆ ಕಟ್ಟಿ ಬೆಳಿಗ್ಗೆ ಮತ್ತು ಸಂಜೆ ದೀಪ ಹಚ್ಚಲಾಗುತ್ತದೆ. ಇದರಿಂದ ಮನೆಗೆ ಶುಭ ಮತ್ತು ಆದ್ಯಾತ್ಮಿಕ ಶಕ್ತಿ ಒದಗಿ ಬರುತ್ತದೆ ಎಂದು ನಂಬಲಾಗುತ್ತದೆ. ತುಳಸಿ ಕಟ್ಟೆಯ ಎದುರು ಹಚ್ಚುವ ದೀಪವು ಮನೆಯಿಂದ ಕೆಟ್ಟ ಶಕ್ತಿಗಳನ್ನು ತೆಗೆದುಹಾಕುತ್ತದೆ. ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ದೀಪವನ್ನು ಬೆಳಗಿಸಿದಾಗ, ಬೆಳಕು ಮತ್ತು ಸುವಾಸನೆಯು ಸಹ ಶುಭ ಪರಿಣಾಮವನ್ನು ಬೀರುತ್ತದೆ.

ತುಳಸಿ ಸಸ್ಯವು ಅನೇಕ ಆರೋಗ್ಯ ಪ್ರಯೋಜನಗಳನ್ನು ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದು ಗಾಳಿಯನ್ನು ಶುದ್ಧವಾಗಿಡುವುದಲ್ಲದೆ, ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ದೇಹಕ್ಕೆ ಆರೋಗ್ಯ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ.

ತುಪ್ಪದ ದೀಪ :

ತುಪ್ಪದಿಂದ ಬೆಳಗಿಸಿದ ದೀಪವು ಶುದ್ಧತೆಯನ್ನು ಸಂಕೇತಿಸುತ್ತದೆ. ದಂತಕಥೆಗಳು ಹೇಳುವಂತೆ ಇದು ಮನೆಗೆ ಸಂಪತ್ತನ್ನು ತರುತ್ತದೆ. ತುಪ್ಪದಿಂದ ದೀಪ ಹಚ್ಚುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ದೊರೆಯುತ್ತದೆ. ಮನೆಯಲ್ಲಿ ಗರಿಷ್ಠ ಸಮಸ್ಯೆಗಳು ಮತ್ತು ಅಡೆತಡೆಗಳು ಕಡಿಮೆಯಾಗುತ್ತವೆ. ಕೆಲವರು ತುಳಸಿ ಗಿಡದ ಬಳಿ ಹಿಟ್ಟಿನಿಂದ ಮಾಡಿದ ದೀಪವನ್ನು ಹಚ್ಚುತ್ತಾರೆ. ಇದನ್ನು ಬಹಳ ಶುಭ ಕಾರ್ಯವೆಂದು ಸಹ ಪರಿಗಣಿಸಲಾಗಿದೆ. ಇದು ಮನೆಗೆ ಮಹಾಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ ಎಂಬುವುದಾಗಿ ನಂಬಲಾಗುತ್ತದೆ.

ಮನೆಯಲ್ಲಿ ಆಗಾಗ್ಗೆ ಜಗಳಗಳು, ವಾದಗಳು ಮತ್ತು ಘರ್ಷಣೆಗಳು ನಡೆಯುತ್ತಿದ್ದರೆ, ತುಳಸಿ ಗಿಡದ ಬಳಿ ದೀಪ ಹಚ್ಚುವುದು ಒಳಿತು. ಏಕೆಂದರೆ ಇದರಿಂದ ಶಾಂತಿ ಸಿಗುತ್ತದೆ. ದೀಪ ಹಚ್ಚಿದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ. ಕುಟುಂಬ ಸದಸ್ಯರ ನಡುವಿನ ಪ್ರೀತಿ ಹೆಚ್ಚಾಗುತ್ತದೆ. ಮುಸ್ಸಂಜೆ ಸಮಯದಲ್ಲಿ ತುಳಸಿ ಗಿಡದ ಬಳಿ ದೀಪ ಹಚ್ಚುವುದರಿಂದ ಮನೆಯಲ್ಲಿರುವ ದುರದೃಷ್ಟ ದೂರವಾಗುತ್ತದೆ. ಸಂಜೆ ಹಚ್ಚುವ ದೀಪದ ಬೆಳಕು ಮನೆಗೆ ಮಂಗಳ, ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ತರುತ್ತದೆ.

Continue Reading

LIFE STYLE AND FASHION

ಡಿಯರ್ ಗರ್ಲ್ಸ್ … ಮೆಡಿಮೆಕ್ಸ್ ಸೋಪು ನಿಮಗಾಗಿ ಅಲ್ಲ … ಹಾಗಾದರೆ ಮತ್ತೆ ಯಾರಿಗೆ …?

Published

on

‘ಅಹಾ …! ಮೆಡಿಮೆಕ್ಸ್ ಸೋಪಿನ ಪರಿಮಳವೇ …’ ಈ ರೀತಿ ತನ್ನ ಪರಿಮಳದಿಂದಲೇ ಎಂತಹವರನ್ನಾದರೂ ಸೆಳೆಯುವ ಶಕ್ತಿ ಹೊಂದಿರುವ ಮೆಡಿಮೆಕ್ಸ್ ಸೋಪು ಹೆಸರು ಎಲ್ಲರಿಗೂ ಗೊತ್ತು. . ಮಾರುಕಟ್ಟೆಗಳಲ್ಲಿ ಎಷ್ಟೇ ಬಗೆಯ ಸೋಪುಗಳಿದ್ದರೂ ಮೆಡಿಮಿಕ್ಸ್ ಸೋಪಿನ ಬೇಡಿಕೆ ಹಾಗೆಯೇ ಇದೆ. ಕೆಲವು ಹುಡುಗಿಯರಿಗೆ ಈ ಸೋಪ್ ಬಳಕೆ ಮಾಡುವುದು ಬಹಳ ಇಷ್ಟವಾಗುತ್ತದೆ ಹಾಗಾಗಿ ಪ್ರತಿ ದಿನ ಸ್ನಾನಕ್ಕೆ ಅದನ್ನೇ ಬಳಸುತ್ತಾರೆ. ಆದರೆ ಈ ಮೆಡಿಮಿಕ್ಸ್ ಸೋಪ್ ಅನ್ನು ಹೆಣ್ಣು ಮಕ್ಕಳಿಗಾಗಿ ತಯಾರು ಮಾಡಿದ್ದಲ್ಲಾ ಎಂದರೆ ನಂಬುತ್ತೀರಾ? ಹೌದು…ಇದು ನಿಜ. ಯಾಕಂತಿರಾ ? ಇದನ್ನೊಮ್ಮೆ ಓದಿ .

ಮೆಡಿಮೆಕ್ಸ್ ಸೋಪ್ ಅನ್ನು ಮೊದಲಿಗೆ ತಯಾರು ಮಾಡಿದ್ದ ಉದ್ದೇಶವೇ ಬೇರೆ. ಆದರೆ ಅದನ್ನು ತಿಳಿಯದ ಹುಡುಗಿಯರು ತಮಗಾಗಿಯೇ ಈ ಸೋಪು ತಯಾರಾಗಿದೆ ಎಂದು ಬಳಕೆ ಮಾಡುತ್ತಾರೆ. ಇದು ತಪ್ಪಲ್ಲ. ಯಹಾಗೆಯೇ ಬಳಸುವುದರಿಂದ ಯಾವುದೇ ಹಾನಿಯೂ ಆಗುವುದಿಲ್ಲ. ಆದರೆ ಮೆಡಿಮೆಕ್ಸ್ ಸೋಪು ತಯಾರಿಕೆಯ ಉದ್ದೇಶ ತಿಳಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಹಾಗಾದರೆ ಏನದು ಉದ್ದೇಶ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರೈಲ್ವೆ ಕೆಲಸಗಾರರಿಗಾಗಿ ಸೋಪ್ ತಯಾರಿ : 

ಮೆಡಿಮಿಕ್ಸ್ ಸೋಪ್ ಅನ್ನು ರೈಲ್ವೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗಾಗಿ ತಯಾರು ಮಾಡಲಾಗುತ್ತಿತ್ತು. ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ಡಾ. ವಿ. ಪಿ, ಸಿಧನ್ ಎಂಬವರು ರೈಲ್ವೆ ಕೆಲಸಗಾರರಲ್ಲಿ ಪದೇ ಪದೇ ಕಂಡು ಬರುತ್ತಿದ್ದ ಅಲರ್ಜಿ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಿಸಿ ಅಂತಹವರಿಗಾಗಿ ಈ ಸೋಪ್ ಗಳನ್ನು ತಯಾರು ಮಾಡಿದರು. ಆಯುರ್ವೇದದಲ್ಲಿ ಬಳಕೆ ಮಾಡುವ ಗಿಡಮೂಲಿಕೆಗಳನ್ನು ಬಳಸಿಕೊಳ್ಳುವ ಮೂಲಕ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುವ ಸೋಪ್ ಆದ ಮೆಡಿಮೆಕ್ಸ್‌ ಅನ್ನು ತಯಾರು ಮಾಡಿದರು.

ಮೆಡಿಮೆಕ್ಸ್‌ ಸೋಪು ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಪರಿಮಳ ನೀಡುತ್ತಿತ್ತು. ಅದಲ್ಲದೆ ಇದರಲ್ಲಿ ಬಳಕೆಯಾದಂತಹ ವಸ್ತುಗಳು ಚರ್ಮದ ಅಲರ್ಜಿಯನ್ನು ತಡೆಯುತ್ತಿತ್ತು. ಈ ಉಪಾಯ ಅವರಿಗೆ ಬಂದ ಬಳಿಕ, 1969ರ ಸಮಯದಲ್ಲಿ ಈ ಸೋಪ್ ಗಳನ್ನು ಹೆಚ್ಚು ಹೆಚ್ಚು ತಯಾರಿಸಿ ರೈಲ್ವೆ ಕೆಲಸಗಾರರಿಗೆ ತಲುಪುವಂತೆ ಮಾಡುತ್ತಾರೆ. ಇಂದು ಇದೆ ಕಂಪನಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಈ ಸೋಪುಗಳನ್ನು ಪ್ರತಿನಿತ್ಯ ಲಕ್ಷಗಟ್ಟಲೆ ಜನ ಬಳಕೆ ಮಾಡುತ್ತಾರೆ. ಆದರೆ ಇದು ಒಂದು ಸಮಯದಲ್ಲಿ ರೈಲ್ವೆಯಲ್ಲಿ ಕೆಲಸ ಮಾಡುವವರ ಆರೋಗ್ಯ ಕಾಪಾಡುತ್ತಿತ್ತು ಎಂದರೆ ಪ್ರತಿಯೊಬ್ಬರೂ ಕೂಡ ಹೆಮ್ಮೆ ಪಡುವ ವಿಷಯವಾಗಿದೆ. ಈ ವಿಷಯವನ್ನು Freeschool01 ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

Continue Reading

LIFE STYLE AND FASHION

ರಾತ್ರಿ ರೀಲ್ಸ್ ನೋಡ್ತಾ ಮಲಗುವವರೇ ಎಚ್ಚರ ..! ಕಣ್ಣು ಮಾತ್ರವಲ್ಲ ಆರೋಗ್ಯಕ್ಕೂ ಎಫೆಕ್ಟ್ ..!

Published

on

ನೈಟ್ ಮಲಗುವ ಟೈಂನಲ್ಲಿ ಸಾಮಾನ್ಯವಾಗಿ ನಾವು ಮೊಬೈಲ್ ನೋಡುತ್ತೇವೆ. ಲೈಟ್ ಆಫ್ ಮಾಡಿದ ಬಳಿಕವೂ ನಾವು ಮೊಬೈಲ್ ನೋಡುತ್ತೇವೆ. ಇದು ಕಣ್ಣಿಗೆ ಹಾನಿ ಮಾಡುವುದಲ್ಲದೆ ಆರೋಗ್ಯದ ಮೇಲೂ ಕೂಡಾ ದುಷ್ಪರಿಣಾಮ ಬೀರುತ್ತದೆ.

ತಡರಾತ್ರಿಯವರೆಗೂ ಮೊಬೈಲ್ ಸ್ಕ್ರೀನ್ ನೋಡುತ್ತಿದ್ದರೆ ರಕ್ತದೊತ್ತಡದ ಮಟ್ಟ ಕೂಡಾ ಅಧಿಕವಾಗುತ್ತದೆಯಂತೆ. ವಿಶೇಷವಾಗಿ ಒತ್ತಡ, ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆಯಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ನಿದ್ರಾಹೀನತೆಯು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿದೆ.ರಾತ್ರಿ  ರೀಲ್ಸ್ ನೋಡುವ ಅಭ್ಯಾಸ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಪರಿಣಾಮ ಬೀರುತ್ತದೆ. ರಾತ್ರಿ ನಮ್ಮ ಮೆದುಳು ವಿಶ್ರಾಂತಿ ಬಯಸುವಾಗ ರೀಲ್ಸ್ ನೋಡುತ್ತಾ ಸಮಯ ಕಳೆದರೆ ಮೆದುಳು ಗೊಂದಲಕ್ಕೀಡಾಗುತ್ತದೆ.

ಮೊಬೈಲ್‌ನ ನೀಲಿ ಬೆಳಕು ಕಣ್ಣಿಗೆ ಒತ್ತಡವನ್ನು ಉಂಟುಮಾಡುತ್ತದೆ. ಮಲಗಿ ಮೊಬೈಲ್ ಬಳಕೆ ಮಾಡುವುದರಿಂದ ಕುತ್ತಿಗೆ, ಭುಜ ನೋವು ಸಹಿತ ತಲೆನೋವು ಬಾಧಿಸುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದ್ದರಿಂದ ಮಧ್ಯರಾತ್ರಿಯವರೆಗೆ ಮೊಬೈಲ್ ಬಳಕೆ ಮಾಡುವುದನ್ನು ನಿಯಂತ್ರಿಸಿಕೊಂಡರೆ ಒಳ್ಳೆಯದು.

Continue Reading
Advertisement

Trending

Copyright © 2025 Namma Kudla News

You cannot copy content of this page