Connect with us

LIFE STYLE AND FASHION

ಮನೆಯಲ್ಲಿ ಬಾತ್‌ರೂಮ್‌ನ ಡ್ರೈನ್ನಲ್ಲಿ ಸಿಕ್ಕಿರುವ ಕೂದಲು ತೆಗೆಯಲು ಈ ಸರಳ ಟಿಪ್ಸ್ ಬಳಸಿ…

Published

on

ನಿತ್ಯವೂ ಸ್ನಾನ ಮಾಡುವ ಕಾರಣ ಬಾತ್‌ರೂಮ್ ಬಳಕೆಯಾಗುತ್ತಿರುತ್ತವೆ. ಇದರಿಂದ ಬಾತ್‌ರೂಮ್‌ನ ಡ್ರೈನ್ನಲ್ಲಿ ಕೂದಲು ಸಿಕ್ಕಿ ಸ್ವಚ್ಛ ಮಾಡಲು ಕಷ್ಟವಾಗುತ್ತದೆ. ಹೆಚ್ಚು ಕೂದಲು ಸಿಕ್ಕಂತೆಯೇ ನೀರು ಹೋಗಲು ತೊಂದರೆಯಾಗಿ ಬ್ಲಾಕ್ ಆಗುತ್ತದೆ ಹಾಗೂ ಮತ್ತೊಂದು ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಕೊನೆಗೆ ರಾಸಾಯನಿಕ ವಸ್ತುಗಳು ಅಥವಾ ಸ್ವಚ್ಛ ಮಾಡುವವರ ಸಹಾಯವನ್ನು ಪಡೆಯಬೇಕಾಗುತ್ತದೆ .ಆದರೆ, ಅದರ ಬದಲಾಗಿ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಸ್ವಚ್ಛ ಮಾಡಬಹುದು.

ಸೋಡಾ ಮತ್ತು ವಿನೆಗರ್ :

ಮನೆಯಲ್ಲಿ ಬಾತ್‌ರೂಮ್‌ನ ಡ್ರೈನ್ನಲ್ಲಿ ಸಿಕ್ಕಿರುವ ಕೂದಲು ತೆಗೆಯಲು ಹೆಚ್ಚು ಹಣ ಖರ್ಚು ಮಾಡಬೇಕಾದ ಅವಶ್ಯಕತೆ ಇಲ್ಲ. ಕೇವಲ ಬೇಕಿಂಗ್ ಸೋಡಾ ಮತ್ತು ವಿನೆಗರ್ ಉತ್ತಮ ಸಹಾಯ ಮಾಡುತ್ತದೆ. ಮೊದಲು ಬಾತ್ರೂಮ್ ಡ್ರೈನ್ನಲ್ಲಿ ಬೇಕಿಂಗ್ ಸೋಡಾವನ್ನು ಹಾಕಬೇಕು. ನಂತರ ಅದರ ಮೇಲೆ ವಿನೆಗರ್ ಹಾಕಬೇಕು. ಸ್ವಲ್ಪ ಸಮಯ ಹಾಗೆಯೇ ಬಿಡಬೇಕು. ಸ್ವಲ್ಪ ಸಮಯದ ನಂತರ ಬಿಸಿನೀರನ್ನು ಡ್ರೈನ್ನಲ್ಲಿ ಹಾಕಬೇಕು.

ಬೇಕಿಂಗ್ ಸೋಡಾ ಮತ್ತು ವಿನೆಗರ್ ಸೇರಿ ಒಂದು ರಾಸಾಯನಿಕ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ ಇದರಿಂದ ಸಿಕ್ಕಿರುವ ಕೂದಲು ಸುಲಭವಾಗಿ ಹೊರಟುಹೋಗುತ್ತದೆ. ಮೊದಲು ಮುಚ್ಚಿಹೋಗಿರುವ ಡ್ರೈನ್ನಲ್ಲಿ ಉಪ್ಪನ್ನು ಹಾಕಿಬಿಡಿ. ಉಪ್ಪು ಕೂದಲನ್ನು ಸಡಿಲಗೊಳಿಸುತ್ತದೆ. ಇದರಿಂದ ಕೂದಲನ್ನು ಸುಲಭವಾಗಿ ತೆಗೆಯಬಹುದು. ಅಥವಾ ಕೂದಲು ಸಿಲುಕಿರುವ ಜಾಗದಲ್ಲಿ ಕೋಕಾ ಕೋಲಾ ಹಾಕಬೇಕು. ಇದಲ್ಲಿರುವ ರಾಸಾಯನಿಕಗಳು ಕೂದಲನ್ನು ಸಡಿಲಗೊಳಿಸುತ್ತವೆ. ಇದರಿಂದ ಸುಲಭವಾಗಿ ಕೂದಲು ತೆಗೆಯಬಹುದು.

LIFE STYLE AND FASHION

ಡಿಯರ್ ಗರ್ಲ್ಸ್ … ಮೆಡಿಮೆಕ್ಸ್ ಸೋಪು ನಿಮಗಾಗಿ ಅಲ್ಲ … ಹಾಗಾದರೆ ಮತ್ತೆ ಯಾರಿಗೆ …?

Published

on

‘ಅಹಾ …! ಮೆಡಿಮೆಕ್ಸ್ ಸೋಪಿನ ಪರಿಮಳವೇ …’ ಈ ರೀತಿ ತನ್ನ ಪರಿಮಳದಿಂದಲೇ ಎಂತಹವರನ್ನಾದರೂ ಸೆಳೆಯುವ ಶಕ್ತಿ ಹೊಂದಿರುವ ಮೆಡಿಮೆಕ್ಸ್ ಸೋಪು ಹೆಸರು ಎಲ್ಲರಿಗೂ ಗೊತ್ತು. . ಮಾರುಕಟ್ಟೆಗಳಲ್ಲಿ ಎಷ್ಟೇ ಬಗೆಯ ಸೋಪುಗಳಿದ್ದರೂ ಮೆಡಿಮಿಕ್ಸ್ ಸೋಪಿನ ಬೇಡಿಕೆ ಹಾಗೆಯೇ ಇದೆ. ಕೆಲವು ಹುಡುಗಿಯರಿಗೆ ಈ ಸೋಪ್ ಬಳಕೆ ಮಾಡುವುದು ಬಹಳ ಇಷ್ಟವಾಗುತ್ತದೆ ಹಾಗಾಗಿ ಪ್ರತಿ ದಿನ ಸ್ನಾನಕ್ಕೆ ಅದನ್ನೇ ಬಳಸುತ್ತಾರೆ. ಆದರೆ ಈ ಮೆಡಿಮಿಕ್ಸ್ ಸೋಪ್ ಅನ್ನು ಹೆಣ್ಣು ಮಕ್ಕಳಿಗಾಗಿ ತಯಾರು ಮಾಡಿದ್ದಲ್ಲಾ ಎಂದರೆ ನಂಬುತ್ತೀರಾ? ಹೌದು…ಇದು ನಿಜ. ಯಾಕಂತಿರಾ ? ಇದನ್ನೊಮ್ಮೆ ಓದಿ .

ಮೆಡಿಮೆಕ್ಸ್ ಸೋಪ್ ಅನ್ನು ಮೊದಲಿಗೆ ತಯಾರು ಮಾಡಿದ್ದ ಉದ್ದೇಶವೇ ಬೇರೆ. ಆದರೆ ಅದನ್ನು ತಿಳಿಯದ ಹುಡುಗಿಯರು ತಮಗಾಗಿಯೇ ಈ ಸೋಪು ತಯಾರಾಗಿದೆ ಎಂದು ಬಳಕೆ ಮಾಡುತ್ತಾರೆ. ಇದು ತಪ್ಪಲ್ಲ. ಯಹಾಗೆಯೇ ಬಳಸುವುದರಿಂದ ಯಾವುದೇ ಹಾನಿಯೂ ಆಗುವುದಿಲ್ಲ. ಆದರೆ ಮೆಡಿಮೆಕ್ಸ್ ಸೋಪು ತಯಾರಿಕೆಯ ಉದ್ದೇಶ ತಿಳಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಹಾಗಾದರೆ ಏನದು ಉದ್ದೇಶ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರೈಲ್ವೆ ಕೆಲಸಗಾರರಿಗಾಗಿ ಸೋಪ್ ತಯಾರಿ : 

ಮೆಡಿಮಿಕ್ಸ್ ಸೋಪ್ ಅನ್ನು ರೈಲ್ವೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗಾಗಿ ತಯಾರು ಮಾಡಲಾಗುತ್ತಿತ್ತು. ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ಡಾ. ವಿ. ಪಿ, ಸಿಧನ್ ಎಂಬವರು ರೈಲ್ವೆ ಕೆಲಸಗಾರರಲ್ಲಿ ಪದೇ ಪದೇ ಕಂಡು ಬರುತ್ತಿದ್ದ ಅಲರ್ಜಿ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಿಸಿ ಅಂತಹವರಿಗಾಗಿ ಈ ಸೋಪ್ ಗಳನ್ನು ತಯಾರು ಮಾಡಿದರು. ಆಯುರ್ವೇದದಲ್ಲಿ ಬಳಕೆ ಮಾಡುವ ಗಿಡಮೂಲಿಕೆಗಳನ್ನು ಬಳಸಿಕೊಳ್ಳುವ ಮೂಲಕ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುವ ಸೋಪ್ ಆದ ಮೆಡಿಮೆಕ್ಸ್‌ ಅನ್ನು ತಯಾರು ಮಾಡಿದರು.

ಮೆಡಿಮೆಕ್ಸ್‌ ಸೋಪು ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಪರಿಮಳ ನೀಡುತ್ತಿತ್ತು. ಅದಲ್ಲದೆ ಇದರಲ್ಲಿ ಬಳಕೆಯಾದಂತಹ ವಸ್ತುಗಳು ಚರ್ಮದ ಅಲರ್ಜಿಯನ್ನು ತಡೆಯುತ್ತಿತ್ತು. ಈ ಉಪಾಯ ಅವರಿಗೆ ಬಂದ ಬಳಿಕ, 1969ರ ಸಮಯದಲ್ಲಿ ಈ ಸೋಪ್ ಗಳನ್ನು ಹೆಚ್ಚು ಹೆಚ್ಚು ತಯಾರಿಸಿ ರೈಲ್ವೆ ಕೆಲಸಗಾರರಿಗೆ ತಲುಪುವಂತೆ ಮಾಡುತ್ತಾರೆ. ಇಂದು ಇದೆ ಕಂಪನಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಈ ಸೋಪುಗಳನ್ನು ಪ್ರತಿನಿತ್ಯ ಲಕ್ಷಗಟ್ಟಲೆ ಜನ ಬಳಕೆ ಮಾಡುತ್ತಾರೆ. ಆದರೆ ಇದು ಒಂದು ಸಮಯದಲ್ಲಿ ರೈಲ್ವೆಯಲ್ಲಿ ಕೆಲಸ ಮಾಡುವವರ ಆರೋಗ್ಯ ಕಾಪಾಡುತ್ತಿತ್ತು ಎಂದರೆ ಪ್ರತಿಯೊಬ್ಬರೂ ಕೂಡ ಹೆಮ್ಮೆ ಪಡುವ ವಿಷಯವಾಗಿದೆ. ಈ ವಿಷಯವನ್ನು Freeschool01 ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

Continue Reading

LIFE STYLE AND FASHION

ರಾತ್ರಿ ರೀಲ್ಸ್ ನೋಡ್ತಾ ಮಲಗುವವರೇ ಎಚ್ಚರ ..! ಕಣ್ಣು ಮಾತ್ರವಲ್ಲ ಆರೋಗ್ಯಕ್ಕೂ ಎಫೆಕ್ಟ್ ..!

Published

on

ನೈಟ್ ಮಲಗುವ ಟೈಂನಲ್ಲಿ ಸಾಮಾನ್ಯವಾಗಿ ನಾವು ಮೊಬೈಲ್ ನೋಡುತ್ತೇವೆ. ಲೈಟ್ ಆಫ್ ಮಾಡಿದ ಬಳಿಕವೂ ನಾವು ಮೊಬೈಲ್ ನೋಡುತ್ತೇವೆ. ಇದು ಕಣ್ಣಿಗೆ ಹಾನಿ ಮಾಡುವುದಲ್ಲದೆ ಆರೋಗ್ಯದ ಮೇಲೂ ಕೂಡಾ ದುಷ್ಪರಿಣಾಮ ಬೀರುತ್ತದೆ.

ತಡರಾತ್ರಿಯವರೆಗೂ ಮೊಬೈಲ್ ಸ್ಕ್ರೀನ್ ನೋಡುತ್ತಿದ್ದರೆ ರಕ್ತದೊತ್ತಡದ ಮಟ್ಟ ಕೂಡಾ ಅಧಿಕವಾಗುತ್ತದೆಯಂತೆ. ವಿಶೇಷವಾಗಿ ಒತ್ತಡ, ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆಯಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ನಿದ್ರಾಹೀನತೆಯು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿದೆ.ರಾತ್ರಿ  ರೀಲ್ಸ್ ನೋಡುವ ಅಭ್ಯಾಸ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಪರಿಣಾಮ ಬೀರುತ್ತದೆ. ರಾತ್ರಿ ನಮ್ಮ ಮೆದುಳು ವಿಶ್ರಾಂತಿ ಬಯಸುವಾಗ ರೀಲ್ಸ್ ನೋಡುತ್ತಾ ಸಮಯ ಕಳೆದರೆ ಮೆದುಳು ಗೊಂದಲಕ್ಕೀಡಾಗುತ್ತದೆ.

ಮೊಬೈಲ್‌ನ ನೀಲಿ ಬೆಳಕು ಕಣ್ಣಿಗೆ ಒತ್ತಡವನ್ನು ಉಂಟುಮಾಡುತ್ತದೆ. ಮಲಗಿ ಮೊಬೈಲ್ ಬಳಕೆ ಮಾಡುವುದರಿಂದ ಕುತ್ತಿಗೆ, ಭುಜ ನೋವು ಸಹಿತ ತಲೆನೋವು ಬಾಧಿಸುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದ್ದರಿಂದ ಮಧ್ಯರಾತ್ರಿಯವರೆಗೆ ಮೊಬೈಲ್ ಬಳಕೆ ಮಾಡುವುದನ್ನು ನಿಯಂತ್ರಿಸಿಕೊಂಡರೆ ಒಳ್ಳೆಯದು.

Continue Reading

LATEST NEWS

ಹದಿಹರೆಯದ ಮಗಳ ಜೊತೆ ತಂದೆಯಾದವ ಹೇಗೆ ಇರಬೇಕು ಗೊತ್ತಾ ..?

Published

on

ಮಗಳು ಹದಿಹರೆಯಕ್ಕೆಕಾಲಿಡುತ್ತಿದ್ದಂತೆಯೇ ಅಪ್ಪನಾದವನು ಒಂದು ಅಂತರ ಕಾಯ್ದುಕೊಳ್ಳಲು ಶುರು ಮಾಡುತ್ತಾನೆ. ತಲೆ ಮೇಲೆ ಕೂರಿಸಿಕೊಂಡು ಮೆರೆಯುತ್ತಿದ್ದ ಅಪ್ಪನ ದಿಢೀರಾಗಿ ಬದಲಾಗುವ ನಡವಳಿಕೆಯಿಂದ ಮಗಳು ಕಂಗಾಲಾಗುವ ಸಾಧ್ಯತೆ ಹೆಚ್ಚಿದೆ. ಮಗಳ ಮೇಲೆ ಸುಮ್ಮನೆ ರೇಗುತ್ತಾನೆ. ಅನಗತ್ಯವಾಗಿ ಗಂಭೀರ ವರ್ತನೆ ತೋರುತ್ತಾನೆ. ಅದರ ಬದಲು ಮುದ್ದು ಮರಿಗೆ ಹುಡುಗರ ಬಗ್ಗೆ, ಅವರ ಸ್ವಭಾವ, ಲೈಂಗಿಕತೆ ಬಗ್ಗೆ ಅಪ್ಪನೇ ಅರಿವು ಮೂಡಿಸಿದರೆ ಒಳ್ಳೆಯದಲ್ಲವೇ ? ಹದಿಹರೆಯದ ಮಗಳ ತಂದೆ ಆಗಿದ್ದರೆ ಮುಕ್ತ ಮನಸ್ಸಿಂದ ಮಗಳಿಗೆ ಹೇಳಬೇಕಾದ್ದನ್ನು ಹೇಳಿ ಕೊಟ್ಟರೆ ಒಳ್ಳೆಯದು. ಮಗಳು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ಅಪ್ಪ ಯಾವ ರೀತಿ ಇದ್ದರೆ ಒಳ್ಳೆಯದು ? ಇಲ್ಲಿದೆ ನೋಡಿ.

ಲಿಂಗ ಭೇದ ಮಾಡದೆ ಇರುವುದು :

ಬಹುತೇಕ ಅಪ್ಪಂದಿರು ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳ ಬಗ್ಗೆ ನೆಗೆಟೀವ್ ಒಪಿನಿಯರ್ ಬರೋ ಹಾಗೆ ಏನೇನೋ ಹೇಳುತ್ತಾರೆ. ಹುಡುಗರು ಕೆಟ್ಟವರು, ಅವರೊಂದಿಗೆ ಹೋಗಬೇಡ, ಅವರ ಜೊತೆಗಿನ ಒಡನಾಟ ಕೆಟ್ಟದ್ದು ಅನ್ನುವಂತೆಯೇ ಪಾಠ ಮಾಡುತ್ತಾರೆ. ಅಪ್ಪನೇ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಹೀರೋ. ಇಂಥ ಮಾತುಗಳು ಹರೆಯದ ಮಗಳಿಗೆ ಪುರುಷರ ಬಗ್ಗೆ ಪೂರ್ವಾಗ್ರಹ ಮೂಡಿಸುತ್ತದೆ. ಹುಡುಗರ ಬಗ್ಗೆ ಮಗಳಲ್ಲಿ ಭಯ ಉಂಟಾಗಬಹುದು. ಆಕೆಯ ಸ್ನೇಹಿತರು, ಭವಿಷ್ಯದಲ್ಲಿ ಕಟ್ಟಿಕೊಂಡವನನ್ನೇ ನಂಬಲು ಒದ್ದಾಡುವಂತಾಗುತ್ತದೆ. ಹುಡುಗರ ಬಗ್ಗೆ ಮಗಳಿಗೆ ಯಾವ ಅಭಿಪ್ರಾಯ ಇದೆ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ಹುಡುಗರು ಯಾವುದನ್ನು ಬೇಗ ಗ್ರಹಿಸುತ್ತಾರೆ, ಯಾವುದು ಇಷ್ಟಪಡುವುದಿಲ್ಲ ಹಾಗೂ ಯಾವುದನ್ನು ಇಷ್ಟಪಡುತ್ತಾರ ಎಂಬ ಸ್ಪಷ್ಟ ಅರಿವು ಮೂಡಿಸುತ್ತಾ ಮುಕ್ತವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಲಿಂಗಭೇದ ಮಾಡಬಾರದು.

ಮಾನಸಿಕ, ದೈಹಿಕ ಬದಲಾವಣೆ ಬಗ್ಗೆ ಸ್ಪಷ್ಟತೆ :

ಹದಿಹರೆಯಲ್ಲಿ ಲೈಂಗಿಕ ಆಕರ್ಷಣೆ ಸಹಜ. ಮಗಳು ಹುಡುಗರೆಡೆಗೆ ಆಕರ್ಷಿತರಾಗಬಹುದು. ಪ್ರೀತಿಯಲ್ಲಿ ಬೀಳಬಹುದು. ಈ ವೇಳೆ ಬೇರೆಯವರ ಇಷ್ಟ, ಕಷ್ಟಗಳು ಗಣನೆಗೆ ಬರುವುದಿಲ್ಲ. ಹದಿಹರೆಯದವರಲ್ಲಿ ಆಗುವ ಹಾರ್ಮೋನ್ ಬದಲಾವಣೆಯನ್ನು ಯಾರೂ ತಡೆಯಲು ಆಗುವುದಿಲ್ಲ. ಈ ಬಗ್ಗೆ ಮಗಳಿಗೆ ತಿಳಿದಿರಬೇಕು. ಯಾವಾಗ ಸಂಗಾತಿಯ ಆಯ್ಕೆ ಮಾಡಬೇಕು? ಹೇಗಿರಬೇಕು? ಅದಕ್ಕೂ ಮುನ್ನ ಮನಸ್ಸನ್ನು ಹೇಗೆ ನಿಯಂತ್ರಿಸಬೇಕು ಅನ್ನೋದನ್ನು ಸರಿಯಾಗಿ ಹೇಳಬೇಕು. ಅಷ್ಟೇ ಅಲ್ಲ Opposite Sex ಜೊತೆ ಮಾತನಾಡುವಾಗ Body Language ಹೇಗಿರಬೇಕೆಂಬುದನ್ನು ಅರ್ಥವಾಗುವಂತೆ ಹೇಳಿ ಕೊಡಿ.

ಕೆಟ್ಟ ಸ್ನೇಹಿತರಿಂದ ಅಂತರ ಕಾಯ್ದುಕೊಳ್ಳುವುದು :

ಹದಿಹರೆಯದಲ್ಲಿ ಲೈಂಗಿಕ ಆಕಾಂಕ್ಷೆ ಹೆಚ್ಚು. ಹಾಗಾಗಿ ಸಾಧ್ಯವಾದಷ್ಟು ಕೆಟ್ಟ ಸ್ನೇಹಿತರಿಂದ ಮಗಳನ್ನು ದೂರವಿಡಲು ನೋಡಬೇಕು. ಮಗಳು ಬೇರೆಯವರ ಪ್ರೀತಿ ಅಥವಾ ಭೀತಿಯಿಂದ ದೇಹವನ್ನು ಅರ್ಪಿಸುತ್ತಿದ್ದರೆ ತಪ್ಪೆಂದು ನೇರವಾಗಿ ಹೇಳಬೇಕು. ಪುರುಷರ ವಿಚಾರದಲ್ಲಿ ಸಂಬಂಧ, ಲೈಂಗಿಕತೆ ಬಗ್ಗೆ ತನ್ನ ನಿರ್ಧಾರಗಳನ್ನು ಬಲಪಡಿಸಲು ಹೇಳಬೇಕು. ದೈಹಿಕ ಮತ್ತು ಮಾನಸಿಕವಾಗಿ ಬಲಿಷ್ಠವಾಗುವ ವಯಸ್ಸು ಯಾವುದು ಎಂದು ತಿಳಿಹೇಳಬೇಕು. ಸುತ್ತ ಇರುವ ಕಾಮುಕರ ಎದುರಿಸಲು ಮಾನಸಿಕವಾಗಿ ಹೇಗೆ ಬಲಿಷ್ಠವಾಗಿರಬೇಕು ಮತ್ತು ದೈಹಿಕವಾಗಿ ಯಾವ ರೀತಿ ಬಲಿಷ್ಠವಾಗಿರಬೇಕು ಎಂದು ತಿಳಿಸಬೇಕು. ಮಗಳಿಗೆ ತಂದೆಯಾದವ ಮಾರ್ಗದರ್ಶಕರಾಗಿ ಇರಬೇಕು ಹೊರತು ಆಕೆಯ ಕ್ರಮಕ್ಕೆ ತೀರ್ಪು ನೀಡುವಂತೆ ಇರಬಾರದು. ಮಗಳಿಗೆ ಆತ್ಮರಕ್ಷಣೆ ಮಾಡುವಂತಹ ಯಾವುದಾದರೂ ತರಗತಿಗಳಿಗೆ ಆಕೆಯನ್ನು ಸೇರಿಸುವ ಮುಖಾಂತರ ಯಾರೇ ಎದುರಾದರೂ ಅವರನ್ನು ಎದುರಿಸುವಂತಹ ಧೈರ್ಯ ಮೂಡಿಸಬೇಕು.

ಲೈಂಗಿಕ ಕ್ರಿಯೆಯ ಬಗ್ಗೆ ಸರಿಯಾದ ಮಾಹಿತಿ :

ಲೈಂಗಿಕತೆ ಬಗ್ಗೆ ಮಕ್ಕಳ ಮುಂದೆ ಮಾತನಾಡಲು ಬಹುತೇಕ ಪೋಷಕರು ಹಿಂದು ಮುಂದು ನೋಡುತ್ತಾರೆ. ಆದರೆ, ಯಾರ ಮನೆಯಲ್ಲಿ ಈ ವಿಷಯವನ್ನು ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯ ಇರುತ್ತೋ ಅವರ ಮಕ್ಕಳು ಆತ್ಮವಿಶ್ವಾಸದಿಂದ ಬೆಳೆಯುತ್ತಾರೆ. ತಪ್ಪು ತಿಳಿವಳಿಕೆಯಿಂದ ದೂರವಿದ್ದು, ಒಳ್ಳೇಯದನ್ನೇ ಕಲಿತುಕೊಡುತ್ತಾರೆ. ಇಂಥ ವಿಷಯಗಳು ಬೇರೆ ಕಡೆಯಿಂದ ಕಲಿತುಕೊಂಡರೆ ದುಷ್ಪರಿಣಾಮ ಬೀರಬಹುದು. ಪೋಷಕರೇ ಮಾತನಾಡಿದರೆ ಬಹುತೇಕ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು. ಈ ವಿಷಯಕ್ಕೆ ಸಂಬಂಧಿಸಿದ ಒಳ್ಳೊಳ್ಳೆ ಪುಸ್ತಕಗಳನ್ನು ಓದಲು ಮಕ್ಕಳಿಗೆ ಕೊಡಬೇಕು. ಗರ್ಭಧಾರಣೆ, ಗರ್ಭನಿರೋಧಕ ಮತ್ತು ಹೆರಿಗೆ ಬಗ್ಗೆ ಸ್ವಲ್ಪ ಸ್ವಲ್ಪ ಅರಿವು ಮೂಡಿಸಿದರೆ ಒಳಿತು. ಅದರಲ್ಲಿಯೂ ಅಮ್ಮನಿಲ್ಲದ ಮಕ್ಕಳಿಗಂತೂ ಅಪ್ಪಂದಿರು ಎಷ್ಟು ಹೇಳಿ ಕೊಟ್ಟರೂ ಸಾಲದು.
ಪ್ರಕೃತಿ ಸಹಜವಾದ ಈ ಲೈಂಗಿಕ ಕ್ರಿಯೆ ಬಗ್ಗೆ ಯಾರಿಗೂ ಅಸಹ್ಯ ಇರಬಾರದು. ಪ್ರತಿಯೊಬ್ಬ ಮನುಷ್ಯನಿಗೂ ಇರಲೇಬೇಕಾದ ಸಹಜ ವಾಂಛೆ ಅದು ಎಂಬುವುದು ಸ್ಪಷ್ಟವಾಗಬೇಕು. ಆದರೆ, ಒಂದಡಿ ಮುಂದೆ ಹೆಜ್ಜೆ ಇಡುವಾಗ ಎಷ್ಟರ ಮಟ್ಟಿಗೆ ಹುಷಾರಾಗಿರಬೇಕೆಂದು ಮಕ್ಕಳಿಗೆ ಸ್ಪಷ್ಟವಾಗಿ ತಿಳಿದಿರಬೇಕು. ದೈಹಿಕ ಕ್ರಿಯೆಗೆ ಮಾನಸಿಕ ಹಾಗೂ ದೈಹಿಕವಾಗಿ ತಯಾರಾಗುವ ಪರಿಯನ್ನು ಹೇಳಿ ಕೊಟ್ಟಿರಬೇಕು. ದೈಹಿಕ ಸಂಬಂಧ ಹೊಂದಲು ಹೇಗೆ ಎರಡು ಜೀವಗಳು ಮಾನಸಿಕವಾಗಿ ಸನ್ನದ್ಧರಾಗಬೇಕು ಎಂಬ ಅರಿವು ಮಕ್ಕಳಿಗೆ ಇರಬೇಕು. ಏಕೆಂದರೆ, ಇದು ತಪ್ಪು ನಿರ್ಧಾರಗಳು ಮತ್ತು ಬೇರೆಯವರ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸುತ್ತದೆ. ಇಂಥ ವಿಚಾರಗಳನ್ನು ಪೋಷಕರೇ ಮಗಳಿಗೆ ತಿಳಿಸಿದರೆ ಅತ್ಯುತ್ತಮ. ಈ ರೀತಿ ಉತ್ತಮ ಸ್ನೇಹ ಬಾಂಧವ್ಯ ಅಪ್ಪ ಮಗಳ ಮಧ್ಯೆ ಬೆಳೆಯಬೇಕು.

Continue Reading
Advertisement

Trending

Copyright © 2025 Namma Kudla News

You cannot copy content of this page