Connect with us

FILM

ಲೋಕಸಭಾ ಚುನಾವಣೆಗೆ ಟಿಕೆಟ್ ಪಡೆದ ‘ಊರ್ವಶಿ ರೌಟೇಲಾ’..!! ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆಯೇ ನಟಿ…?.?

Published

on

ಸೆಲೆಬ್ರೆಟಿಗಳು ಪೊಲಿಟಿಕ್ಸ್‌ ನತ್ತ ವಾಲುವುದು ಇದೀಗ ಹೆಚ್ಚಾಗಿದೆ. ಅದೊಂದು ಟ್ರೆಂಡ್ ಅಂದ್ರೂ ತಪ್ಪಾಗಲ್ಲ. ಹೌದು, ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ  ಅನೇಕ ನಟನಟಿಯರು ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡುತ್ತಿದ್ದಾರೆ. ಇದೀಗ ಊರ್ವಶಿಗೂ ರಾಜಕೀಯ ನಾಯಕರು ಟಿಕಿಟ್ ನೀಡಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಟಿ ಊರ್ವಶಿ ರೌಟೇಲಾ  ‘ಟಿಕೆಟ್ ಸಿಕ್ಕಿದೆ’ ಎಂದು ಹೇಳಿದ್ದಾರೆ.

urvashi

ಆದರೆ ತಮಗೆ ಯಾವ ಕ್ಷೇತ್ರದಿಂದ, ಯಾವ ಪಕ್ಷದಿಂದ ಈ ಟಿಕೆಟ್ ಸಿಕ್ಕಿದೆ ಎಂಬ ಬಗ್ಗೆ ಅವರು ಏನನ್ನೂ ವಿವರಿಸಿಲ್ಲ. ಚುನಾವಣೆಗೆ ಸ್ಪರ್ಧಿಸುತ್ತೇನೋ ಅಥವಾ ಇಲ್ಲವೋ ಎಂಬುದನ್ನು ಕೂಡಾ ಇನ್ನೂ ಖಚಿತಪಡಿಸಿಲ್ಲ.

‘ನನಗೆ ಟಿಕೆಟ್ ಸಿಕ್ಕಿದೆ. ಆದರೆ ನಾನು ಚುನಾವಣೆಗ ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ನಾನು ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬುವುದನ್ನು ಕಮೆಂಟ್ ಬಾಕ್ಸ್ ನಲ್ಲಿ ಹೇಳಿ’ ಎಂದು ವೀಡಿಯೋ ಒಂದರಲ್ಲಿ ತಿಳಿಸಿದ್ದಾರೆ.  ಈ ಹೇಳಿಕೆಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಹಲವರು ರಾಜಕೀಯಕ್ಕೆ ಬರುವಂತೆ ಸಲಹೆ ನೀಡಿದರೆ, ಇನ್ನೂ ಹಲವರು ನಟನೆಯತ್ತ ಗಮನಹರಿಸುವಂತೆ ಸಲಹೆ ನೀಡಿದ್ದಾರೆ.

ಊರ್ವಶಿ ರಟೌಲ ನಟನೆಗಿಂತ ಹೆಚ್ಚು ತನ್ನ ಐಷಾರಾಮಿ ಜೀವನಶೈಲಿಯಿಂದ ಆಗಾಗ ಸುದ್ದಿ ಆಗುತ್ತಾರೆ. ಕಳೆದ ವರ್ಷ ಅವರು ತಮ್ಮ 24 ಕ್ಯಾರೆಟ್ ಚಿನ್ನದ ಐಫೋನ್ ಕಳೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.

 

DAKSHINA KANNADA

ಶೋಷಣೆಯನ್ನು ಎದುರಿಸಿ ನಿಂತ ವಿದ್ಯಾವಂತ ಮಹಿಳೆಯ ಕಥೆ; ‘ಪಿದಾಯಿ’ ಮೇ 9 ಕ್ಕೆ ತೆರೆಗೆ

Published

on

ಮಂಗಳೂರು : ಸಂಪ್ರದಾಯಸ್ತರ ಮನೆಯಲ್ಲಿ ನಡೆಯುವ ಮಹಿಳಾ ಶೋಷಣೆಯ ವಿರುದ್ಧದ ಹೋರಾಟ ಹಾಗೂ ಮಹಿಳೆಯರ ಘನತೆ ಎತ್ತಿಹಿಡಿಯುವ ಸಂದೇಶ ಹೊಂದಿರುವ ತುಳು ಸಿನೆಮಾ ‘ಪಿದಾಯಿ’. ಈಗಾಗಲೇ ಈ ಚಿತ್ರ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಗಮನ ಸೆಳೆದಿದೆ.  2 ನೇ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದೀಗ ಈ ಚಿತ್ರ ಬೆಳ್ಳಿಪರದೆಯ ಮೇಲೆ ಮೋಡಿ ಮಾಡಲು ಬರುತ್ತಿದ್ದು, ಮೇ 9 ರಂದು ತೆರೆಗೆ ಅಪ್ಪಳಿಸಲಿದೆ.

ಅಂದಹಾಗೆ, ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಸಂತೋಷ್ ಮಾಡ. ಜೀಟಿಗೆ ಚಿತ್ರ ನಿರ್ದೇಶಿಸಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಸಂತೋಷ್ ಮಾಡ ಈ ಬಾರಿ ಮಹಮ್ಮಾಯಿ ಪಾತ್ರಿಯ ಮನೆಯಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರ ಮೇಲಾಗುವ ಶೋಷಣೆಯ ಕುರಿತು ಕಥೆ ಹೇಳಿದ್ದಾರೆ. ನಮ್ಮ ಕನಸು ಬ್ಯಾನರ್ ನಲ್ಲಿ  ಕೆ . ಸುರೇಶ್ ನಿರ್ಮಿಸಿದ್ದಾರೆ.  ಮುಡಿಪು ಹಾಗೂ ಮಂಜೇಶ್ವರ ಪರಿಸರದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ರಮೇಶ್ ಶೆಟ್ಟಿಗಾರ್ ಅವರು ಚಿತ್ರಕತೆ ಬರೆದಿದ್ದು,  ಮಹಾಮಾಹಿ ಪಾತ್ರಿಯಾಗಿ ಖ್ಯಾತ ನಟ ಶರತ್ ಲೋಹಿತಾಶ್ವ ನಟಿಸಿದ್ದಾರೆ.  ಹಲವಾರು ಪ್ರಶಸ್ತಿ ಪಡೆದಿರುವ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಖ್ಯಾತನಾಮರು ಈ ಸಿನೆಮಾದಲ್ಲಿ ಕೆಲಸ ಮಾಡಿದ್ದಾರೆ. ರೂಪಾ ವರ್ಕಾಡಿ, ಇಳಾ ವಿಟ್ಲ, ದೀಪಕ್ ರೈ ಪಾಣಾಜೆ, ದೇವಿ ನಾಯರ್, ಪುಷ್ಪರಾಜ್ ಬೋಳಾರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ ಮೊದಲಾದವರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ : ರನ್ಯಾ ರಾವ್‌ಗೆ ಮತ್ತೆ ಸಂಕಷ್ಟ; ನಟಿ ವಿರುದ್ಧ’ಕಾಫಿಪೋಸಾ’ ಜಾರಿ

ಈ ಸಿನಿಮಾದ ಛಾಯಾಗ್ರಾಹಣ ಹೊಣೆಯನ್ನು ಉಣ್ಣಿ ಮಾಡವೂರ್‌ ಹೊತ್ತಿದ್ದು, ಅಜಯ್ ನಂಬೂದಿರಿ ಸಂಗೀತ ಸಂಯೋಜನೆ ಮಾಡಿದ್ದಾರೆ.

Continue Reading

FILM

ತೆಲುಗು ಸಿನಿಮಾಗೆ ಧ್ವನಿಯಾದ ಸಾನ್ವಿ ಸುದೀಪ್

Published

on

ಸುದೀಪ್ ಮಗಳಿಗೆ ಹಾಡೋದು ಎಂದರೆ ಎಲ್ಲಿಲ್ಲದ ಪ್ರೀತಿ. ಇನ್ನು ಸಾನ್ವಿ ಸುದೀಪ್ ಶಿಕ್ಷಣದ ಜೊತೆಗೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಸಾನ್ವಿ ಅವರ ಧ್ವನಿ ಬೇರೆಯದೇ ರೀತಿ ಇದೆ. ಈಗ ಅವರು ತೆಲುಗು ಸಿನಿಮಾಗೆ ಧ್ವನಿ ಆಗಿದ್ದಾರೆ ಅನ್ನೋದು ವಿಶೇಷ. “ಹಿಟ್ 3” ಟೇಲರ್ನಲ್ಲಿ ಬರೋ ಒಂದು ಆಲಾಪದಲ್ಲಿ ಸಾನ್ವಿ ಧ್ವನಿ ಇದೆ.

“ಹಿಟ್ 3” ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದೆ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಟ್ರೇಲರ್ ಕೊನೆ ಆಗೋ ಸಂದರ್ಭದಲ್ಲಿ ಹಿನ್ನೆಲೆ ಸಂಗೀತದ ಜೊತೆ ಒಂದು ಧ್ವನಿಯ ಆಲಾಪ ಬರುತ್ತದೆ. ಇದು ಯಾರದ್ದು ಎಂಬ ವಿಚಾರ ಅನೇಕರಿಗೆ ಗೊತ್ತಿರಲಿಲ್ಲ. ಈ ವಿಚಾರವನ್ನು ಸ್ವತಃ ನಾನಿ ಅವರೇ ರಿವೀಲ್ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಡ್ರಿಲ್ ಆಗಿದ್ದಾರೆ.

ಅದು ಸಾನ್ವಿ ಅವರದ್ದು ಎಂದಿರೋ ನಾನಿ ಅವರು, ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ನಾನಿ ಹಾಗೂ ಸಾನ್ವಿ ಮಧ್ಯೆ ಪರಿಚಯ ಬೆಳೆಯೋಕ ಕಾರಣ ಆಗಿದ್ದು, ‘ಈಗ’ ಸಿನಿಮಾ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ನಾನಿ ಹೀರೋ ಆಗಿ ಕಾಣಿಸಿಕೊಂಡರೆ, ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಾನಿ ಪರಿಚಯ ಸಾನ್ನಿಗೆ ಆಗಿತ್ತು. ಆ ಬಾಂಡಿಂಗ್ ಈಗಲೂ ಮುಂದುವರಿದಿದೆ.

Continue Reading

FILM

ತಂದೆಗೆ ಕೊಟ್ಟ ಆ ಒಂದು ಮಾತಿನಿಂದ ಶಾರುಖ್ ಇನ್ನೂ ಸಹ ಸರಿಯಗಿ ಕಾಶ್ಮೀರ ನೋಡಿಲ್ವಂತೆ..!?

Published

on

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಜೀವ ಕಳೆದುಕೊಂಡಿದ್ದಾರೆ. ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದವರನ್ನೇ ಟಾರ್ಗೆಟ್ ಮಾಡಿ ಹತ್ಯಾಕಾಂಡ ನಡೆಸಲಾಗಿದೆ. ಉಗ್ರರ ದಾಳಿಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಈ ದಾಳಿಯ ಕುರಿತು ನಟ ಶಾರುಖ್ ಖಾನ್ ಅವರು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಶಾರುಖ್, ‘ಪಹಲ್ಗಾಮ್‌ನಲ್ಲಿ ನಡೆದಿರುವ ವಿಶ್ವಾಸಘಾತುಕ ಕೃತ್ಯ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳು ಸಾಲದು. ಇಂತಹ ಸಮಯದಲ್ಲಿ ನಾವು ದೇವರ ಕಡೆಗೆ ನೋಡಿ, ಸಂತ್ರಸ್ಥ ಕುಟುಂಬಗಳಿಗಾಗಿ ಪ್ರಾರ್ಥಿಸಬಹುದು ಮತ್ತು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಬಹುದು. ಒಂದು ರಾಷ್ಟ್ರವಾಗಿ ಬಲವಾಗಿ ನಿಂತು ಈ ಘೋರ ಕೃತ್ಯದ ವಿರುದ್ದ ನ್ಯಾಯವನ್ನು ಪಡೆಯೋಣ’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದರು.

ಇದರ ಬೆನ್ನಲ್ಲೇ ಶಾರುಖ್ ಖಾನ್ ಅವರು ನಾನು ಕಾಶ್ಮೀರಕ್ಕೆ ಮಾತ್ರ ಹೋಗಲ್ಲ ಎಂದು ಹೇಳಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಹಿಂದೆ ನಟ ಶಾರುಖ್ ಖಾನ್ 2012ರಲ್ಲಿ ‘ಜಬ್ ತಕ್ ಹೈ ಜಾನ್’ ಸಿನಿಮಾದ ಶೂಟಿಂಗ್‌ಗಾಗಿ ಕಾಶ್ಮೀರಕ್ಕೆ ಹೋಗಿದ್ದರು. ಆದಾದ ನಂತರ 11 ವರ್ಷಗಳ ನಂತರ ‘ಡಂಕಿ’ ಸಿನಿಮಾದ ಶೂಟಿಂಗ್ ಸಲುವಾಗಿ ತೆರಳಿದ್ದರು. ಆದರೆ ಎಂಜಾಯ್ ಮಾಡಲು ಕುಟುಂಬಸ್ಥರ ಜೊತೆಗೆ ಅವರು ಒಂದು ಬಾರಿಯೂ ಕಾಶ್ಮೀರಕ್ಕೆ ಭೇಟಿ ಕೊಟ್ಟಿಲ್ಲ. ಇದಕ್ಕೆ ಕಾರಣ ತಂದೆಗೆ ಕೊಟ್ಟ ಮಾತು.

ಇದನ್ನೂ ಓದಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಅನಾಥರಾದ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡ ಸೂರತ್‌ನ ಉದ್ಯಮಿ

ತಂದೆಯ ಮಾತಿಗೆ ತಪ್ಪದ ಶಾರುಖ್
ಈ ಹಿಂದೆ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಶಾರುಖ್ ತಮ್ಮ ದಿವಂಗತ ತಂದೆಗೆ ನೀಡಿದ್ದ ಮಾತಿನಿಂದಾಗಿ ಕಾಶ್ಮೀರಕ್ಕೆ ಭೇಟಿ ನೀಡಿಲ್ಲ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ತನ್ನ ತಂದೆಯೊಂದಿಗೆ ಮಾತಾಡಿದ್ದನ್ನು ನೆನಪಿಸಿಕೊಳ್ಳುತ್ತಾ, ನನ್ನ ತಂದೆಯ ತಾಯಿ ಕಾಶ್ಮೀರಿ. ಜೀವನದಲ್ಲಿ ಈ ಮೂರು ಪ್ರದೇಶಗಳಿಗೆ ಹೋಗಲೇಬೇಕು. ಒಂದು ಇಸ್ತಾಂಬುಲ್, ಇಟಲಿಯ ರೋಮ್ ಮತ್ತು ಕಾಶ್ಮೀರಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು ಎಂದಿದ್ದರಂತೆ. ಇಸ್ತಾಂಬುಲ್, ಇಟಲಿ ರೋಮ್‌ಗೆ ಹೋಗಿಲ್ಲಂದ್ರೂ ಪರವಾಗಿಲ್ಲ. ಆದ್ರೆ ಕಾಶ್ಮೀರ ನೋಡಲೇಬೇಕು ಅಂದಿದ್ದರು. ಆದ್ರೆ ನನ್ನ ತಂದೆ ಬಹಳ ಬೇಗ ನಿಧನರಾದರು. ನಾನು ಇಡೀ ಜಗತ್ತನ್ನು ಸುತ್ತಾಡಿದ್ದೇನೆ. ಆದರೆ ಕಾಶ್ಮೀರಕ್ಕೆ ಮಾತ್ರ ಎಂದಿಗೂ ಹೋಗಿಲ್ಲ. ಅದರಲ್ಲೂ ನನ್ನ ಸ್ನೇಹಿತರು ಪ್ರತಿ ಬಾರಿ ಕರೆಯುತ್ತಾರೆ. ಕುಟುಂಬ ರಜೆಗೆ ಕಾಶ್ಮೀರಕ್ಕೆ ಹೋಗುತ್ತಾರೆ. ಆದರೆ ನಾನು ಎಂದಿಗೂ ಹೋಗಲೇ ಇಲ್ಲ. ಏಕೆಂದರೆ ನನ್ನ ತಂದೆ ಹೇಳಿದ್ದರು ನಾನು ಇಲ್ಲದೇ ಕಾಶ್ಮೀರವನ್ನು ನೋಡಬೇಡ, ಅದನ್ನು ನಿನಗೆ ನಾನು ತೋರಿಸುತ್ತೇನೆ ಎಂದಿದ್ದರು. ಹೀಗಾಗಿ ತಂದೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಟ ಶಾರುಖ್ ಖಾನ್ ಇನ್ನೂ ಸಹ ಸರಿಯಾಗಿ ಕಾಶ್ಮಿರವನ್ನು ನೋಡಿಲ್ವಂತೆ.

Continue Reading
Advertisement

Trending

Copyright © 2025 Namma Kudla News

You cannot copy content of this page