Connect with us

LATEST NEWS

ದ.ಕ ದಲ್ಲಿ ಯುವಕರಲ್ಲಿ ಹೆಚ್ಚುತ್ತಿದೆ ಹಾರ್ಟ್ ಅಟ್ಯಾಕ್: ಉಪ್ಪಿನಂಗಡಿ PDO ನಿಧನ

Published

on

ಉಪ್ಪಿನಂಗಡಿ: ಕಳೆದ ಒಂದು ವರ್ಷದಿಂದ ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ಕೂಡಾ ಹೃದಯಾಘಾತದಿಂದಾಗಿ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ಮಂಗಳೂರಿನಲ್ಲಿ ನಡೆದಿದೆ.

34 ನೆಕ್ಕಿಲಾಡಿ ಗ್ರಾ.ಪಂ.ನ ಪ್ರಭಾರ ಪಿಡಿಒ ಕುಮಾರಯ್ಯ (46) ಮೃತಪಟ್ಟ ವ್ಯಕ್ತಿ.


ಬೆಳ್ತಂಗಡಿ ತಾಲೂಕಿನ ಕುದ್ರಡ್ಕ ನಿವಾಸಿಯಾಗಿರುವ ಇವರು ಈ ಹಿಂದೆ ಮಚ್ಚಿನ ಗ್ರಾ.ಪಂನಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿದ್ದು, ಸುಮಾರು ಒಂದೂವರೆ ವರ್ಷಗಳ ಹಿಂದೆ ಪದೋನ್ನತಿಗೊಂಡು 34 ನೆಕ್ಕಿಲಾಡಿ ಗ್ರಾ.ಪಂ. ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಇಲ್ಲಿ ಪಿಡಿಒ ಸ್ಥಾನ ಖಾಲಿ ಇದ್ದುದ್ದರಿಂದ ಪ್ರಭಾರ ಪಿಡಿಒ ಆಗಿಯೂ ನಿಯೋಜನೆಗೊಂಡಿದ್ದರು. ಜ್ವರ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ರಜೆಯಲ್ಲಿದ್ದ ಅವರಿಗೆ ನಿನ್ನೆ ಎದೆನೋವು ಕಾಣಿಸಿಕೊಂಡಿದ್ದು, ಮನೆಯವರು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಹೃದಯಾಘಾತದಿಂದ ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ ಹಾಗೂ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LATEST NEWS

ಕಟಪಾಡಿ ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣ: ಕೋಟ ಶ್ರೀನಿವಾಸ್‌ ಪೂಜಾರಿ

Published

on

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ ಜಿಲ್ಲೆಯ ಕಟಪಾಡಿ ಜಂಕ್ಷನ್ ಬಳಿ ಉಡುಪಿ ಕಿನ್ನಿಮೂಲ್ಕಿ ಮಾದರಿಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಕಳೆದ ಮಾರ್ಚ್‌ನಲ್ಲಿ ಟೆಂಡ‌ರ್ ಪ್ರಕ್ರಿಯೆ ಮುಗಿದಿದ್ದು, 17 ಕೋಟಿ ರೂಪಾಯಿ ವೆಚ್ಚದಲ್ಲಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸ್ಥಳೀಯ ಸಾರ್ವಜನಿಕರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು. ಅಂಡರ್ ಪಾಸ್ ನಿರ್ಮಾಣವು 550 ಮೀಟರ್‌ ಉದ್ದ, 5.5 ಮೀಟರ್‌ ಎತ್ತರ ಇರಲಿದೆ. ನ್ಯಾಷನಲ್ ಇನ್‌ಫ್ರಾ ಪ್ರಾಜೆಕ್ಟ್ ಕಂಪೆನಿ ಕಾಮಗಾರಿ ವಹಿಸಿಕೊಂಡಿದೆ. 10 ಕಡೆ ಸರ್ವಿಸ್ ರಸ್ತೆ ನಿರ್ಮಾಣ, 6 ಕಡೆ ಪಾದಚಾರಿ ಮಾರ್ಗ ನಿರ್ಮಾಣವಾಗಲಿದೆ.

ಇದನ್ನೂ ಓದಿ: ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸಿಎ ಹೃದಯಾಘಾತದಿಂದ ಸಾವು

ಕಾಮಗಾರಿ ಪೂರ್ಣಗೊಳ್ಳಲು 24 ತಿಂಗಳು ಬೇಕಾಗುತ್ತದೆ ಎಂದು ತಿಳಿಸಿದರು. ಕಟಪಾಡಿ ಗ್ರಾಮ ಪಂಚಾಯತ್‌ ಆಡಳಿತ ಸೇರಿದಂತೆ ಅಧಿಕಾರಿಗಳು ಮತ್ತು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಯನ್ನುಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕಟಪಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಪ್ರಭಾ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.

Continue Reading

LATEST NEWS

ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸಿಎ ಹೃದಯಾಘಾತದಿಂದ ಸಾವು

Published

on

ಇಂದೋರ್‌: ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ 29 ವರ್ಷದ ಚಾರ್ಟರ್ಡ್‌ ಅಕೌಂಟೆಂಟ್‌ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಂದೋರ್‌ನ ಸಿಎಟಿ ರಸ್ತೆಯಲ್ಲಿರುವ ಮದುವೆ ಗಾರ್ಡನ್‌ನಲ್ಲಿ ನಡೆದಿದೆ.

ಪುಣೆಯ ಸಂಪತ್‌ಹಿಲ್ಸ್‌ನ ನಿವಾಸಿ ಆಯುಷ್‌ ವ್ಯಾಸ್‌ ಮೃತಪಟ್ಟ ಯುವಕ. ಮದುವೆಯ ಸಂಭ್ರಮಾಚಾರಣೆಯ ವೇಳೆ ಈತನ ಆರೋಗ್ಯ ಹದಗೆಟ್ಟಿದ್ದು, ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪೊಲೀಸರ ಪ್ರಕಾರ ಆಯುಷ್‌ ಶನಿವಾರ ಸಂಜೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ನಂತರ ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದಾಗ ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಗುಂಡ್ಯದಲ್ಲಿ ಮತ್ತೆ ಕೆಎಸ್ಆರ್ಟಿಸಿ ಬಸ್ಸು ಮತ್ತು ಲಾರಿ ಅಪಘಾತ

ವೈದ್ಯಕೀಯ ಪರೀಕ್ಷೆಯಲ್ಲಿ ಅಪರೂಪದ ವಿಷಯ ಬೆಳಕಿಗೆ ಬಂದಿದೆ. ಹೃದಯದ ಅಪಧಮನಿಗಳು ಅಸಾಮಾನ್ಯವಾಗಿ ಗಟ್ಟಿಯಾಗಿದ್ದವು ಎಂದು ಹೇಳಲಾಗಿದೆ. ಇದು ಯುವ ವಯಸ್ಸಿನವರಲ್ಲಿ ಬಹಳ ವಿರಳ ಎನ್ನಲಾಗಿದೆ.

Continue Reading

LATEST NEWS

ಐಪಿಎಲ್‌ ಅಥವಾ ಪಿಎಸ್‌ಎಲ್‌ಗಿಂತ ಹೆತ್ತವರ ಸುರಕ್ಷತೆಯೇ ಮುಖ್ಯವಾಗಿತ್ತು: ಮೊಯಿನ್ ಅಲಿ

Published

on

ಮಂಗಳೂರು/ನವದೆಹಲಿ: ಕೋಲ್ಕತ್ತಾ ನೈಟ್‌ರೈಡರ್ಸ್ ತಂಡದ ಇಂಗ್ಲೆಂಡ್ ಸ್ಪಿನ್ನರ್ ಮೊಯಿನ್ ಅಲಿ 2025ರ ಐಪಿಎಲ್‌ನಿಂದ ಹೊರಹೋಗಲು ಕಾರಣವೇನೆಂದು ಹೇಳಿದ್ದಾರೆ.

ಭಾರತೀಯ ಸೇನೆ ಮತ್ತು ವಾಯುಪಡೆ ಆಪರೇಷನ್ ಸಿಂದೂರ್ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ 9 ಕಡೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ನಿದ್ದೆಗೆಡಿಸಿತು. ಆದರೆ ಈ ದಾಳಿಯ ಸಂದರ್ಭದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಮೊಹಿನ್ ಆಲಿ ಅವರ ಹೆತ್ತವರು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಬಳಿ ಇದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯಾದ ಮೊಹಮ್ಮದ್ ಶಮಿ; ಬಿಜೆಪಿ ಸೆರ್ತಾರಾ ಟೀಮ್‌ ಇಂಡಿಯಾ ವೇಗಿ

ಈ ಬಗ್ಗೆ ಮಾತನಾಡಿದ ಮೊಯಿನ್ ಅಲಿ, “ನನ್ನ ಹೆತ್ತವರಿದ್ದ ಜಾಗಕ್ಕೆ ಸುಮಾರು 30-35 ಕಿ.ಮೀ. ದೂರಕ್ಕೆ ಭಾರತೀಯ ಸೇನೆ ಮಿಸೈಲ್ ದಾಳಿ ನಡೆಸಿತು. ಇದೊಂಥರ ತಲೆ ಕೆಡುವಂಥ ಪರಿಸ್ಥಿತಿ. ಬಳಿಕ, ಹೆತ್ತವರು ಹೇಗೋ ಒಂದು ವಿಮಾನ ಹಿಡಿದು ಅದೇ ದಿನ ಅಲ್ಲಿಂದ ತೆರಳಿದರು. ಅನಂತರ ನನಗೆ ವೈರಲ್ ಜ್ವರ ಕಾಡತೊಡಗಿತು. ಹೀಗಾಗಿ ನನಗೆ ಐಪಿಎಲ್ ಅಥವಾ ಪಿಎಸ್‌ಎಲ್‌ಗಿಂತ ಹೆತ್ತವರ ಸುರಕ್ಷತೆಯೇ ಮುಖ್ಯವಾಗಿತ್ತು. ಆದ್ದರಿಂದ ನಾನು ಬೇಗ ಐಪಿಎಲ್ ತೊರೆಯಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page