Connect with us

DAKSHINA KANNADA

ಉಪ್ಪಿನಂಗಡಿ ಬಸ್‌ನಡಿಗೆ ತಾಯಿ-ಮಗಳು ಬಿದ್ದು ಸಾವು ಪ್ರಕರಣ: ಕಮೆಂಟ್‌ ಮಾಡಿದವನ ವಿರುದ್ಧ ದೂರು

Published

on

ಉಪ್ಪಿನಂಗಡಿ: ಇಲ್ಲಿನ ಬಸ್‍ ನಿಲ್ದಾಣದಲ್ಲಿ ಬಸ್ ಢಿಕ್ಕಿ ಹೊಡೆದು ತಾಯಿ, ಮಗು ಮೃತಪಟ್ಟ ಘಟನೆಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಕೃತವಾಗಿ ಕಮೆಂಟ್ ಹಾಕಿ ಸಂಭ್ರಮಿಸಿದ ವ್ಯಕ್ತಿಯ ವಿರುದ್ಧ ಎಸ್‍ಡಿಪಿಐ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದೆ.


ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಮಂಗಳವಾರ ಕೆಎಸ್ಸಾರ್ಟಿಸಿ ಬಸ್ ಹರಿದು ಸಾಹಿದಾ ಹಾಗೂ ಅವರ ಒಂದು ವರ್ಷದ ಪುತ್ರ ಸಾಹಿಲ್ ದಾರುಣವಾಗಿ ಮೃತಪಟ್ಟಿದ್ದರು.

ಈ ಬಗ್ಗೆ ಆನಂದ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ‘ಕೆಎಸ್‌ಆರ್‌ಟಿಸಿ ಗೆ ಜಯವಾಗಲಿ’ ಎಂದು ಕಮೆಂಟ್‌ ವಿಕೃತವಾಗಿ ಕಮೆಂಟ್ ಹಾಕಿದ್ದ. ಸ್ವತಃ ಈತನೂ ಡ್ರೈವರ್‌ ಆಗಿದ್ದಾನೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

DAKSHINA KANNADA

ಜಪ್ಪಿನಮೊಗರುವಿನಲ್ಲಿ 16ನೇ ವರ್ಷದ ಜಯ ವಿಜಯ ಕಂಬಳಕ್ಕೆ ಚಾಲನೆ

Published

on

ಮಂಗಳೂರು :  ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ 16 ನೇ ವರ್ಷದ ಹೊನಲು ಬೆಳಕಿನ ಜಯ ವಿಜಯ ಜೋಡುಕರೆ ಕಂಬಳಕ್ಕೆ ಇಂದು(ಫೆ.14) ಬೆಳಗ್ಗೆ ಚಾಲನೆ ದೊರೆತಿದೆ.

ಕೀರ್ತಿಶೇಷ ಜೆ. ಜಯಗಂಗಾಧರ ಶೆಟ್ಟಿ ಮೆನ್ನು ತೋಟಗುತ್ತು ಮತ್ತು ನಾಡಾಜೆಗುತ್ತು ಸ್ಮರಣಾರ್ಥಈ ಕಂಬಳ ನಡೆಯುತ್ತಿದೆ. ಕರಾವಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಗಣೇಶ್ ರಾವ್‌ ಅಧ್ಯಕ್ಷತೆಯಲ್ಲಿ ದೇರೆಬೈಲ್ ವಿಠಲದಾಸ ತಂತ್ರಿ ಅವರು 15 ನೇ ವರ್ಷದ ಜಯ ವಿಜಯ ಜೋಡುಕರೆ ಕಂಬಳವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಗೌರವ ಅಧ್ಯಕ್ಷ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕಂಬಳ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ತನ್ನಿಂದ ಸಾಧ್ಯವಿರುವ ಎಲ್ಲಾ ಸಹಕಾರ ನೀಡುತ್ತೇನೆ ಎಂದರು.

ಇದನ್ನೂ ಓದಿ : ಫೆ.21 ರಂದು ಕುದ್ರೋಳಿ ಕ್ಷೇತ್ರ ತೀರ್ಥಾಟನೆ

ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಜೆ. ಅನಿಲ್ ಶೆಟ್ಟಿ ಮನ್ನುತೋಟ, ಮಾರ್ಗದರ್ಶಕ ಸುಧಾಕರ ಶೆಟ್ಟಿ, ಕಟೀಲು ಕ್ಷೇತ್ರದ ಅನಂತಪದ್ಮನಾಭ ಆಸ್ರಣ್ಣ, ಬಿಜೆಪಿ ನಾಯಕ ಮೋನಪ್ಪ ಭಂಡಾರಿ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌, ಪ್ರವೀಣ್‌ಚಂದ್ರ ಆಳ್ವ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Continue Reading

DAKSHINA KANNADA

ಫೆ.21 ರಂದು ಕುದ್ರೋಳಿ ಕ್ಷೇತ್ರ ತೀರ್ಥಾಟನೆ

Published

on

ಮಂಗಳೂರು : 114 ವರ್ಷಗಳ ಹಿಂದೆ 1912 ರ ಫೆ.21 ರಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಶಿವ ಲಿಂಗ ಪ್ರತಿಷ್ಠಾಪನೆ ಮಾಡಿ ಅವಕಾಶ ವಂಚಿತ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಹೊಸ ದಿಕ್ಕನ್ನು ತೋರಿಸಿದ ಪುಣ್ಯ ಕ್ಷಣದ ಸ್ಮರಣಾರ್ಥ ಇದೇ ಫೆ.21 ರಂದು ಮಂಗಳೂರಿನಲ್ಲಿ ‘ಗುರುವಿನೆಡೆಗೆ ನಮ್ಮ ನಡಿಗೆ… ಸಮಾಜದ ಬೆಳಕಿನೆಡೆಗೆ ನಮ್ಮ ಪಯಣ’ ಎಂಬ ಸಂಕಲ್ಪದೊಂದಿಗೆ ಶ್ರೀ ಕುದ್ರೋಳಿ ಕ್ಷೇತ್ರ ತೀರ್ಥಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ನಾರಾಯಣ ಗುರುಗಳು ನೀಡಿದ ಸಂದೇಶದ ಅನುಷ್ಠಾನ ಈ ಕಾರ್ಯಕ್ರಮದ ಉದ್ದೇಶ. ತೀರ್ಥಾಟನೆಯ ಪಾದಯಾತ್ರೆಯು ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟು ನೆಹರು ಮೈದಾನಕ್ಕೆ ಹಾಗೂ ಅಲ್ಲಿಂದ ಮುಂದುವರಿದು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಕುದ್ರೋಳಿ ಕ್ಷೇತ್ರಕ್ಕೆ ತಲುಪಲಿದೆ. ಸುಮಾರು 10 ಸಾವಿರ ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಶ್ರೀ ಗುರುಗಳ ಜ್ಞಾನದ ಸಂಕೇತವಾದ ಹಳದಿ ವಸ್ತ್ರ ಧಾರಣೆಯೊಂದಿಗೆ ‘ಓಂ ಶ್ರೀ ನಾರಾಯಣ ಪರಮ ಗುರುವೇ ನಮ:’ ಎಂಬ ಮಂತ್ರೋಚ್ಛಾರಣೆಯೊಂದಿಗೆ ನಡೆಯುವ ಈ ಯಾತ್ರೆ ಕೇವಲ ಪಾದಯಾತ್ರೆಯಲ್ಲ. ಅದು ಆತ್ಮ ಶುದ್ಧಿಯ ಪಥ, ಸಮಾಜ ಜಾಗೃತಿಯ ಸಂಕಲ್ಪ ಎಂದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಸಮಿತಿ, ಅಭಿವೃದ್ಧಿ ಸಮಿತಿ, ಎಲ್ಲಾ ಶ್ರೀ ನಾರಾಯಣಗುರು ಅನುಯಾಯಿ ಸಂಘಗಳು, ಗರೋಡಿಗಳು ಮತ್ತು ಸಮಾಜದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ತೀರ್ಥಾಟನೆಯನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ವರ್ಷಗಳಲ್ಲಿ ವರ್ಷಾವಧಿ ಜಾತ್ರೆಯ ಸಂದರ್ಭ ಇಂತಹ ತೀರ್ಥಾಟನೆಯನ್ನು ನಡೆಸುವ ಉದ್ದೇಶವಿದೆ ಎಂದು ಪದ್ಮರಾಜ್  ಆರ್. ತಿಳಿಸಿದರು.

ಇದನ್ನೂ ಓದಿ :ಸಾವಿನಲ್ಲೂ ಸಾರ್ಥಕತೆ ಮೆರೆದ ಪುಟ್ಟ ಕಂದಮ್ಮ: ದೇಶದ ಅತಿಕಿರಿಯ ಅಂಗಾಂಗ ದಾನಿ ಆಲಿನ್ ಶೆರಿನ್

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

 

Continue Reading

DAKSHINA KANNADA

ಲಕ್ಷಾಂತರ ಮೌಲ್ಯದ ಎಂಡಿಎಂಎ ಮಾರಾಟ ಯತ್ನ; ಮೂವರ ಬಂಧನ

Published

on

ಮಂಗಳೂರು : ಬೆಂಗಳೂರು ನಗರದಿಂದ ಎಂಡಿಎಂಎ ಮಾ*ದಕ ವಸ್ತುವನ್ನು ಖರೀದಿಸಿಕೊಂಡು ಬಂದು ಮಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 11 ಲಕ್ಷದ 90 ಸಾವಿರ ರೂಪಾಯಿ ಮೌಲ್ಯದ 118.13 ಗ್ರಾಂ ತೂಕದ ಎಂಡಿಎಂಎ, ನಾಲ್ಕು ಮೊಬೈಲ್ ಫೋನ್ ಮತ್ತು ಒಂದು ಸ್ವಿಫ್ಟ್‌ ಕಾರು ಸಹಿತ ಒಟ್ಟು 17 ಲಕ್ಷದ 95 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಉಳ್ಳಾಲದ ಬಸ್ತಿಪಡ್ಪು ನಿವಾಸಿ 34 ವರ್ಷದ ಮುಸ್ತಫಾ ಸೀದಿಯಬ್ಬ, ಉಳ್ಳಾಲ ಮಾಸ್ತಿಕಟ್ಟೆಯ ನಿವಾಸಿ 28 ವರ್ಷದ ಮೈಯದ್ದಿ ಮತ್ತು ಮುಕ್ಕಚ್ಚೇರಿಯ 28 ವರ್ಷದ ಮೊಹಮ್ಮದ್ ಶಿಫಾನ್ ಬಂಧಿತ ಆರೋಪಿಗಳು. ಈ ಮೂವರು ಸೇರಿಕೊಂಡು ಕಾರಿನಲ್ಲಿ ಉಳ್ಳಾಲ ತಾಲೂಕಿನ ತಲಪಾಡಿಯ ಪರಿಸರದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ : ತ್ರಿಕೋನ ಪ್ರೇಮಕಥೆ… ಮುಖಕ್ಕೆ ಗುಂ*ಡು ಹಾ*ರಿಸಿ ಯುವತಿಯ ಕೊ*ಲೆ!

ಆರೋಪಿ ಮುಸ್ತಫಾ ಸೀದಿಯಬ್ಬನ ಮೇಲೆ ಈ ಹಿಂದೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನ ಪ್ರಕರಣ ಮತ್ತು ಮೈಯದ್ದಿ ಎಂಬಾತನ ಮೇಲೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ಈ ಮಾ*ದಕ ವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಈ ಬಗ್ಗೆ  ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page