Connect with us

LATEST NEWS

ಅನ್ ‌ಲಾಕ್‌-4.0 : ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ…!

Published

on

ಅನ್ ‌ಲಾಕ್‌-4.0 : ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ…!

ನವದೆಹಲಿ : ಮಹಾಮಾರಿ ಕೊರೋನಾ ಸೋಂಕು ಸಾಮೂಹಿಕ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಇಡೀ ದೇಶದ ಮೇಲೆ ಮಾರ್ಚ್.25 ರಂದು ಲಾಕ್‌ಡೌನ್ ಹೇರಿತ್ತು. 

ಆದರೂ, ಈ ಸೋಂಕನ್ನು ನಿಯಂತ್ರಿಸುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕಳೆದ ಮೂರು ತಿಂಗಳಿನಿಂದ ಹಂತ ಹಂತವಾಗಿ ಅನ್‌ಲಾಕ್‌ ಪ್ರಕ್ರಿಯೆ ಆರಂಭಿಸಿದೆ.

ಇದೀಗ ನಾಲ್ಕನೇ ಹಂತದ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿದ್ದು, ಇಂದು ಕೇಂದ್ರ 4.0 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಏನುಂಟು – ಏನಿಲ್ಲ ಇಲ್ಲಿದೆ ಡಿಟೇಲ್ಸ್…

ಅನ್‌ಲಾಕ್‌ -4.0 ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ:

1.ಹೊಸ ಮಾರ್ಸೂಚಿಯಲ್ಲಿ ಅನೇಕ ವಿಷಯಗಳಿಗೆ ರಿಯಾಯಿತಿ

2. ಶಾಲೆ ಕಾಲೇಜುಗಳನ್ನು ತೆರೆಯಲು ಮಾರ್ಗಸೂಚಿಯಲ್ಲಿ ಅವಕಾಶ.
3. ಶೇಕಡಾ 50% ಭೋಧಕ ಮತ್ತು ಭೋದಕೇತರ ಸಿಬ್ಬಂದಿಗಳನ್ನು ಬಳಸಿಕೊಂಡು ತರಗತಿಗಳನ್ನು ನಡೆಸಬಹುದು.
4. 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆಗೆ ಭೇಟಿ ನೀಡಬಹುದು.
5. ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗೆ ಭೇಟಿ ನೀಡಬಹುದು.
6. ಕಂಟೈನ್ಮೆಂಟ್ ಝೋನ್ ಹೊರೆತಾದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
7. ಕೌಶಲ್ಯ ಅಥಾವ ಉದ್ಯೋಗ ತರಬೇತಿಗಳಿಗೆ ಅನುಮತಿ.
8. 1 ರಿಂದ 9ರ ವರೆಗಿನ ಶಾಲೆಗಳಿಗೆ ಸೆಪ್ಟೆಂಬರ್ 30 ವರೆಗೂ ನಿರ್ಬಂಧ.
9. ಆನ್‌ಲೈನ್ ತರಗತಿಗಳನ್ನು ಮುಂದುವರಿಸಬಹುದು.
10. ಸಂಶೋಧನೆ ( ಪಿಎಚ್ ಡಿ ) ತಾಂತ್ರಿಕ ಮತ್ತು ವೃತ್ತಿಪರ ಸ್ನಾತಕೋತ್ತರ ಕೋರ್ಸ್ ಗಳು ನಡೆಸಲು ಒಪ್ಪಿಗೆ.
11. ಇದಕ್ಕೆ ಶಿಕ್ಷಣ ಇಲಾಖೆ ಮತ್ತು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ.
12. ಸೆಪ್ಟೆಂಬರ್ 07 ರಿಂದ ಮೆಟ್ರೋ ಸಂಚಾರ ಆರಂಭ.
13. ಅಂತರರಾಜ್ಯ ಮತ್ತು ರಾಜ್ಯದೊಳಿಗೆ ಸಂಚಾರಿಸಲು ಮುಕ್ತ ಅವಕಾಶ.
14. ಇನ್ನು ಮುಂದೆ ಯಾವುದೇ ಇ ಪಾಸ್ ಗಳ ಅವಶ್ಯಕತೆ ಇಲ್ಲ

ಹೊಸ ಮಾರ್ಸೂಚಿ ಪ್ರಕಾರ ಏನೇನು ಇರುವುದಿಲ್ಲ?

1. ಸಿನಿಮಾ ಹಾಲ್, ಈಜುಕೊಳಗಳಿಗೆ ಅವಕಾಶ ಇಲ್ಲ.
2. ಮನೋರಂಜನಾ ಪಾರ್ಕ್ ಗಳಿಗೆ ಅವಕಾಶ ಇಲ್ಲ.
3. ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ ಇಲ್ಲ,
4. ಕೇವಲ ಒಂದೇ ಭಾರತ್ ಮಿಷನ್ ಅಡಿಯಲ್ಲಿ ಮಾತ್ರ ಅವಕಾಶ
5. ಸೆಪ್ಟೆಂಬರ್ 30 ವರೆಗೂ ಕಂಟೈನ್ಮೆಂಟ್ ಝೋನ್ ಗಳಲ್ಲಿ ಲಾಕ್‌ಡೌನ್ ವಿಸ್ತರಣೆ ಮೂಲಭೂತ ಅವಶ್ಯಕತೆಗಳಿಗೆ ಮಾತ್ರ ಅವಕಾಶ.
6. ಕಂಟೈನ್ಮೆಂಟ್ ಝೋನ್ ಹೊರೆತಾದ ಪ್ರದೇಶದಲ್ಲಿ ರಾಜ್ಯಸರ್ಕಾರ ಲಾಕ್‌ಡೌನ್ ಮಾಡುವಂತಿಲ್ಲ.
7. ಒಂದು ವೇಳೆ ಮಾಡಬೇಕಾದರೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಮಾಡಬೇಕು.

Advertisement
Click to comment

Leave a Reply

Your email address will not be published. Required fields are marked *

LATEST NEWS

ಸುಳ್ಯ: ಲೋ ಬಿಪಿ, ಕುಸಿದು ಬಿದ್ದು ಕಾಲೇಜು ಉಪನ್ಯಾಸಕ ನಿಧನ

Published

on

ಸುಳ್ಯ: ಎಂದಿನಂತೆ ಕಾಲೇಜಿಗೆ ಹಾಜರಾಗಿ ಮಧ್ಯಾಹ್ನದವರೆಗೆ ತರಗತಿಗಳನ್ನುನಡೆಸಿದ ಉಪನ್ಯಾಸಕರೋರ್ವರು ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಂದು ಸುಳ್ಯದಲ್ಲಿ ನಡೆದಿದೆ. ಡಿಗ್ರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಮಂಜು ಪಿ. (42) ಮೃತ ಉಪನ್ಯಾಸಕ. ಲೋ ಬಿಪಿ ಅಥವಾ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಮೃತರು ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಬೇರ್ಯ ನಿವಾಸಿಯಾಗಿದ್ದರು. ಗುರುವಾರ ಎಂದಿನಂತೆ ಕಾಲೇಜಿಗೆ ಹಾಜರಾಗಿ ಮಧ್ಯಾಹ್ನದವರೆಗೆ ತರಗತಿಗಳನ್ನು ನಡೆಸಿದ್ದರು. ನಂತರ ಅಸೌಖ್ಯ ಕಾಣಿಸಿಕೊಂಡಿತ್ತು. ವಿದ್ಯಾರ್ಥಿಯೊಬ್ಬರ ಸಹಾಯದಿಂದ ತಮ್ಮ ಕೊಠಡಿಗೆ ತೆರಳಿ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಔಷಧ ಪಡೆಯಲು ಮೆಡಿಕಲ್ ಶಾಪ್‌ಗೆ ಬಂದಾಗ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮಂಜು ಅವರು ಇವರು ಕಳೆದ 10 ವರ್ಷಗಳ ಕಾಲ ಕೆ.ಆರ್. ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 2024ರಲ್ಲಿ ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉಪನ್ಯಾಸಕರಾಗಿ ನೇಮಕಗೊಂಡು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

 

Continue Reading

LATEST NEWS

ಕಡಬ: ತೋಟಕ್ಕೆ ಬಂದ ಜಾನುವಾರುಗಳನ್ನು ಓಡಿಸಲು ಹೋಗಿ ಬಿದ್ದು ಮಹಿಳೆ ಸಾವು

Published

on

ಕಡಬ: ತೋಟಕ್ಕೆ ಮೇಯಲು ಬಂದ ಜಾನುವಾರುಗಳನ್ನು ಓಡಿಸಲು ಹೋದಾಗ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದ ಪಾತೃವಾಡಿಯಲ್ಲಿ ನಡೆದಿದೆ. ಕೊಣಾಲು ಗ್ರಾಮದ ನಿವಾಸಿ ಲೀಲಾವತಿ ಶೆಟ್ಟಿ (64) ಮೃತಪಟ್ಟ ದುರ್ದೈವಿ.

ಮಗನೊಂದಿಗೆ ವಾಸವಿದ್ದ ಮೃತ ಲೀಲಾವತಿ ಅವರು ಜಾನುವಾರುಗಳನ್ನು ಓಡಿಸಲು ಹೋದಾಗ ಈ ದುರ್ಘಟನೆ ನಡೆದಿದೆ. ಇವರ ಮಗ ಹರೀಶ್ ಲಾರಿ ಚಾಲಕರಾಗಿದ್ದು, ರಾತ್ರಿ ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಆದರೆ ತಾಯಿ ಮನೆಯಲ್ಲಿ ಇರಲಿಲ್ಲ. ಗಾಬರಿಗೊಂಡ ಹರೀಶ್ ಅವರು ನೆರೆಮನೆಯವರ ಸಹಾಯದೊಂದಿಗೆ ಹುಡುಕಾಟ ನಡೆಸಿದಾಗ, ತೋಟದಲ್ಲಿ ಲೀಲಾವತಿ ಅವರು ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೃತದೇಹ ಪತ್ತೆಯಾದಾಗ ಅವರ ಒಂದು ಕೈಯಲ್ಲಿ ಕಲ್ಲು ಹಾಗೂ ಇನ್ನೊಂದು ಕೈಯಲ್ಲಿ ದೊಣ್ಣೆ ಇತ್ತು ಎಂದು ತಿಳಿದುಬಂದಿದೆ. ತೋಟಕ್ಕೆ ನುಗ್ಗಿದ ಜಾನುವಾರುಗಳನ್ನು ಓಡಿಸಲು ಹೋದ ಸಂದರ್ಭದಲ್ಲಿ ಅವರು ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ. ಈ ವೇಳೆ ಕೈಯಲ್ಲಿದ್ದ ಕಲ್ಲೇ ಅವರ ಹಣೆಗೆ ಬಲವಾಗಿ ತಗುಲಿ ಗಂಭೀರ ಗಾಯಗೊಂಡಿದ್ದರಿಂದ ಅವರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕೊಣಾಲು ಗ್ರಾಮದ ತಿರ್ಲೆ ಪರಿಸರದಲ್ಲಿ ಜಾನುವಾರುಗಳ ಹಾವಳಿ ಮಿತಿಮೀರಿದೆ ಎಂಬ ಆರೋಪ ಕೇಳಿಬಂದಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಾನುವಾರುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

 

Continue Reading

LATEST NEWS

ಕೃಷ್ಣ ಮಠಕ್ಕಿಲ್ಲ ಗ್ಯಾಸ್ ಸಿಲಿಂಡರ್ ಟೆನ್ಶನ್; ದಿವಾನರು ಹೇಳಿದ್ದೇನು?

Published

on

ಉಡುಪಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣದಿಂದ ರಾಜ್ಯದಲ್ಲಿ ಎಲ್ ಪಿಜಿ ಸಿಲಿಂಡರ್ ಕೊರತೆ ಕಾಡುತ್ತಿದೆ ಎನ್ನಲಾಗ್ತಿದೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪ್ರತಿದಿನ ಸಾವಿರಾರು ಜನ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಅಡುಗೆ ಅನಿಲ ಬಳಸಿಕೊಂಡು ಇಲ್ಲಿ ಊಟಕ್ಕೆ ತಯಾರಿ ಮಾಡಲಾಗುತ್ತೆ. ಆದರೆ ಕಟ್ಟಿಗೆ ಬಳಸಿ ಅಡುಗೆ ಮಾಡುವುದು ಇಲ್ಲಿನ ಸಂಪ್ರದಾಯ.

ಸದ್ಯಕ್ಕೆ ಯಾವುದೇ ಅಡ್ಡಿ ಆಗಿಲ್ಲ ಆದರೂ, ಎಷ್ಟೇ ಸಾವಿರ ಜನ ಬಂದರೂ ಕಟ್ಟಿಗೆ ಬಳಕೆ ಮಾಡಿ ಅಡುಗೆ ತಯಾರಿಸಲಾಗುವುದು. ಉಡುಪಿ ಮಠದಲ್ಲಿ ಅಡುಗೆಗೆ ಕಟ್ಟಿಗೆ ಬಳಕೆಗೆಂದೇ ಕಾಡು ಬೆಳೆಸಲಾಗುತ್ತಿದೆ. 36 ವರ್ಷಕ್ಕೊಮ್ಮೆ ಕಾಡಿನಿಂದ ಕಟ್ಟಿಗೆ ಲಭ್ಯವಾಗುತ್ತದೆ. ಭಕ್ತರು ನಿರಾತಂಕವಾಗಿ ಕೃಷ್ಣ ದರ್ಶನ ಮಾಡಿ ಊಟಕ್ಕೆ ಬರಬಹುದು ಎಂದು ದಿವಾನರಾದ ಡಾ.ಉದಯ್ ಕುಮಾರ್ ಸರಳತ್ತಾಯ ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page