Connect with us

LATEST NEWS

ಕೇಂದ್ರ ಬಜೆಟ್ 2026 : ಇಲ್ಲಿದೆ ಮುಖ್ಯಾಂಶಗಳು

Published

on

ಕೇಂದ್ರ ಬಜೆಟ್ 2026  : ಇಂದು ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು,  ಕರ್ತವ್ಯ ಭವನದಲ್ಲಿ ಮಂಡಿಸಿದ ಮೊದಲ ಬಜೆಟ್ ಇದಾಗಿದೆ.  

ಮುಖ್ಯಾಂಶಗಳು :

  • ಆರೋಗ್ಯ ಕ್ಷೇತ್ರಕ್ಕೆ ಬಯೋ ಫಾರ್ಮಾ ಶಕ್ತಿ ಯೋಜನೆ
  • 350ಕ್ಕೂ ಹೆಚ್ಚು ಸುಧಾರಣಾ ಕ್ರಮ
  • ದೇಶವನ್ನು ಔಷಧ ತಯಾರಿಕಾ ಹಬ್ ಮಾಡಲು ಕ್ರಮ
  • ಬಯೋ ಫಾರ್ಮಾ ಯೋಜನೆಗೆ 1 ಸಾವಿರ ಕೋಟಿ ಮೀಸಲು
  • ರೇರ್ ಅರ್ಥ್ ಗಣಿಗಾರಿಕೆಗೆ ಪ್ರಾಶಸ್ತ್ಯ
  • ವಿರಳ ಲೋಹಗಳ ಸಂಗ್ರಹಕ್ಕಾಗಿ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದಲ್ಲಿ ಕಾರಿಡಾರ್
  • ಸೆಮಿಕಂಡಕ್ಟರ್ ಮಿಷನ್ 2.0 ಯೋಜನೆ : 40 ಕೋಟಿ ಮೀಸಲು
  • ಟೆಕ್ಸ್ ಟೈಲ್ ಕ್ಷೇತ್ರದ ಅಭಿವೃದ್ಧಿಗಾಗಿ ರಾಷ್ಟ್ರೀಯ ನೀತಿ ಘೋಷಣೆ
  • ಕಂಟೈನರ್ ಯೋಜನೆಗೆ 10 ಸಾವಿರ ಕೋಟಿ ಮೀಸಲು
  • ಖಾದಿ ಗ್ರಾಮೋದ್ಯೋಗ ಯೋಜನೆ
  • ಸಣ್ಣ ಕೈಗಾರಿಕೆಗೆ 10 ಸಾವಿರ ಕೋಟಿ ಮೀಸಲು
  • ಸಣ್ಣ- ಅತಿ ಸಣ್ಣ ಕೈಗಾರಿಕೆಗಳಿಗೆ 2 ಸಾವಿರ ಕೋಟಿ ಫಂಡ್
  • 2026 – 27ರ ಬಂಡವಾಳ ವೆಚ್ಚ 12.2 ಕೋಟಿ  ಕೋಟಿಗೆ ಏರಿಕೆ
  • ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 20 ಜಲಮಾರ್ಗ ನಿರ್ಮಾಣ
  • 2 -3ನೇ ಹಂತದ ನಗರಗಳ ಮೂಲ ಸೌಕರ್ಯಗಳ ಅಭಿವೃದ್ಧಿ
  • ಧಾರ್ಮಿಕ ಹಿನ್ನೆಲೆಯುಳ್ಳ ನಗರಗಳ ಅಭಿವೃದ್ಧಿಗೆ ಆದ್ಯತೆ
  • ನಗರಗಳ ಅಭಿವೃದ್ಧಿಗೆ  5 ಸಾವಿರ ಕೋಟಿ ಮೀಸಲು
  • ಹೊಸ 7 ಹೈಸ್ಪೀಡ್ ರೈಲು ಮಾರ್ಗಗಳ ಘೋಷಣೆ
  • ಬೆಂಗಳೂರು – ಹೈದರಾಬಾದ್, ಬೆಂಗಳೂರು – ಚೆನ್ನೈ ಹೈಸ್ಪೀಡ್ ರೈಲು
  • ಎಐ ತಂತ್ರಜ್ಞಾನದ ಅಭಿವೃದ್ಧಿಗಾಗಿ ಆದ್ಯತೆ
  • ವಿದ್ಯೆಯಿಂದ ಉದ್ಯೋಗ ಸೃಷ್ಟಿಗಾಗಿ ವಿಶೇಷ ಸಮಿತಿ ರಚನೆ
  • ಖಾಸಗಿ ವಲಯದ ಜೊತೆ ಸೇರಿ ದೇಶದಾದ್ಯಂತ 5 ಮೆಡಿಕಲ್ ಹಬ್  ನಿರ್ಮಾಣ
  • ಮೆಡಿಕಲ್ ಟೂರಿಸಂ ಯೋಜನೆ ಉತ್ತೇಜನಕ್ಕೆ ಕ್ರಮ
  • ಆಯುರ್ವೇದಕ್ಕೆ ಹೆಚ್ಚಿನ ಒತ್ತು. 3 ಸಂಸ್ಥೆಗಳ ನಿರ್ಮಾಣ, ಆಯುಷ್ ಫಾರ್ಮಸಿಗಳ ಅಭಿವೃದ್ಧಿ, ಮೆಸಿನ್ ಸೆಂಟರ್ -ರಿಸರ್ಚ್ ಸೆಂಟರ್ ಗಳ ನಿರ್ಮಾಣಕ್ಕೆ ಒತ್ತು
  • ಮುಂಬೈಯಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಲಿಟಿ
  • ಹೊಸ ಕ್ರೀಡಾ ಸಂಕೀರ್ಣ ನಿರ್ಮಾಣ : ಜಾಗತಿಕವಾಗಿ ಸ್ಪರ್ಧೆಗಳಿಗೆ ಕ್ರೀಡಾಪಟುಗಳಿಗೆ ತರಬೇತಿ, ಖೇಲೋ ಇಂಡಿಯಾ ಮಿಷನ್ ಯೋಜನೆ
  • ಕರ್ನಾಟಕ ಕರಾವಳಿಯಲ್ಲಿ ಟ್ರಕ್ಕಿಂಗ್ ಮಾರ್ಗ ಅಭಿವೃದ್ಧಿ
  • ಈಶಾನ್ಯ ಭಾರತದಲ್ಲಿ ಅಭಿವೃದ್ದಿ ಮತ್ತು ಉದ್ಯೋಗ ಸೃಷ್ಠಿಗೆ ಅಗತ್ಯ ಕ್ರಮ
  • ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಒತ್ತು
  • ತೆಂಗಿನಕಾಯಿ ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆಗಾಗಿ ಆದ್ಯತೆ
  • ಹೆಚ್ಚು ಇಳುವರಿಗಾಗಿ ತಳಿಗಳ ಅಭಿವೃದ್ಧಿ
  • ತೆಂಗಿನ ಕಾಯಿ, ಶ್ರೀಗಂಧ, ಗೋಡಂಬಿ ಬೆಳೆಗಳಿಗೆ ಪ್ರೋತ್ಸಾಹ
  • ಕೃಷಿ ಉತ್ಪಾದನೆ ವೃದ್ಧಿಗಾಗಿ ಭಾರತ್ ವಿಸ್ತಾರ್ ಯೋಜನೆ
  • ಮಹಿಳೆಯರಿಗಾಗಿ ಲಕ್ ಪತಿ ದೀದಿ  ಯೋಜನೆಗೆ ಮತ್ತಷ್ಟು ಆದ್ಯತೆ
  • ದಿನಸಿ ಅಂಗಡಿ ಆರಂಭಿಸುವ ಮಹಿಳೆಯರಿಗೆ ವಿಶೇಷ ಸಹಾಯಧನ
  • ಮಹಿಳೆಯರಿಗೆ She Mart ಯೋಜನೆ
  • ದಿವ್ಯಾಂಗರಿಗಾಗಿ ವಿಶೇಷ ಯೋಜನೆ ಘೋಷಿಸಿದ ಕೇಂದ್ರ : ಜನ ಕೌಶಲ್ಯ ಯೋಜನೆ
  • ಪ್ರಮುಖ ನಗರಗಳಿಗೆ 4000 ಎಲೆಕ್ಟ್ರಿಕ್ ಬಸ್‌ಗಳ ವಿತರಣೆ
  • ರಾಂಚಿ, ತೇಜ್ ಪುರದಲ್ಲಿ ಹೊಸ ನಿಮ್ಹಾನ್ಸ್ ಆಸ್ಪತ್ರೆಗೆ ಘೋಷಣೆ
  • 16 ನೇ ಹಣಕಾಸು ಆಯೋಗದಡಿ ರಾಜ್ಯಗಳಿಗೆ ಅನುದಾನ
  • ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ 1.41 ಲಕ್ಷ ಕೋಟಿ
  • ಹೊಸ ಆದಾಯ ತೆರಿಗೆ ಕಾನೂನು ಘೋಷಣೆ
  • ಅಪಘಾತ ವಿಮೆ ಹಣಕ್ಕೆ ತೆರಿಗೆ ಇಲ್ಲ
  • ಸಣ್ಣ ತೆರಿಗೆ ಪಾವತಿದಾರರಿಗೆ ಹೊಸ ನೀತಿ ಘೋಷಣೆ
  • ಎಪ್ರಿಲ್‌ನಿಂದ ಹೊಸ ಆದಾಯ ತೆರಿಗೆ ನೀತಿ ಜಾರಿ
  • ಮಾರ್ಚ್ 31ರ ವರೆಗೆ ತೆರಿಗೆ ಸಲ್ಲಿಸಲು ಅವಕಾಶ
  • ವಿದೇಶದಲ್ಲಿರುವ ಆಸ್ತಿ ಘೋಷಣೆಗೆ 6 ತಿಂಗಳ ಕಾಲಾವಕಾಶ
  • ಆರೋಗ್ಯ ಮತ್ತು ವಿದ್ಯಾಭ್ಯಾಸ ಟಿಡಿಎಸ್ ಶೇ.5 ರಿಂದ ಶೇ.2ಕ್ಕೆ ಇಳಿಕೆ
  • ವಿದೇಶ ಯಾತ್ರೆಗಳ ಟಿಸಿಎಸ್‌ ಶೇ.2ರಷ್ಟು ಕಡಿತ
  • ಹೊಸದಾಗಿ ಹೂಡಿಕೆ ಮಾಡುವ ವಿದೇಶಿ ಕಂಪೆನಿಗಳಿಗೆ ಟ್ಯಾಕ್ಸ್ ಹಾಲಿ ಡೇ
  • ಡೇಟಾ ಸರ್ವೀಸ್ ಸೆಂಟರ್ ಕಂಪೆನಿಗಳಿಗಳಿಗೆ ಟ್ಯಾಕ್ಸ್ ವಿನಾಯಿತಿ
  • ತೆರಿಗೆ ಸಲ್ಲಿಕೆ ತಪ್ಪಿದ್ದಲ್ಲಿ ಇನ್ಮುಂದೆ ಶಿಕ್ಷೆಯಿಲ್ಲ, ಬದಲಿಗೆ ದಂಡ
  • ಶೇ.10 ರಷ್ಟು ದಂಡ ವಿಧಿಸುವ ಬಗ್ಗೆ ಪ್ರಸ್ತಾಪ
  • ವಿಮಾನಗಳ ಬಿಡಿಭಾಗಗಳ ಆಮದು ಸುಂಕ ಇಳಿಕೆ
  • ಚರ್ಮೋತ್ಪನ್ನಗಳ ಮೇಲಿನ ಆಮದು ಸುಂಕ ಇಳಿಕೆ
  • ಮದ್ಯದ ಬೆಲೆಯಲ್ಲಿ ಏರಿಕೆ, ಸಿಗರೇಟ್ ಮೇಲಿನ ಸುಂಕ ಏರಿಕೆ
  • ಅಣುವಿದ್ಯುತ್ ಸ್ಥಾವರ ಪರಿಕರಗಳ ಆಮದು ಸುಂಕ ಇಳಿಕೆ
  • 17 ಕ್ಯಾನ್ಸರ್ ಔಷಧಗಳಿಗೆ ತೆರಿಗೆ ವಿನಾಯಿತಿ
  • ಸೋಲಾರ್ ಬಿಡಿಭಾಗಗಳ ದರ ಇಳಿಕೆ

LATEST NEWS

ಕಾರಿನಲ್ಲಿ ಪತ್ತೆಯಾಯ್ತು ಪ್ರೇಮಿಗಳ ಶ*ವ!

Published

on

ಉತ್ತರ ಪ್ರದೇಶ/ಮಂಗಳೂರು : ಪ್ರೇಮಿಗಳ ದಿನದಂದೇ ದುರಂ*ತವೊಂದು ನಡೆದಿದೆ. ಕಾರಿನಲ್ಲಿ ಪ್ರೇಮಿಗಳ ಶ*ವ ಪತ್ತೆಯಾಗಿದೆ. ಈ ಘಟನೆ ನಡೆದಿರೋದು  ಉತ್ತರ ಪ್ರದೇಶದ ನೋಯ್ಡಾದಲ್ಲಿ. ಶೂಟ್ ಮಾಡಿಕೊಂಡು ಪ್ರೇಮಿಗಳು ಕಾರಿನಲ್ಲೇ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನಿಲ್ಲಿಸಿದ್ದ ಕಾರಿನಲ್ಲಿ ಇಬ್ಬರ ಮೃ*ತದೇಹಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದ್ದು, ಇಬ್ಬರೂ ಗುಂಡು ಹಾ*ರಿಸಿಕೊಂಡು ಮೃ*ತಪಟ್ಟಿರುವುದು ದೃಢವಾಗಿದೆ.

ಇಬ್ಬರಿಗೂ ಗುಂ*ಡೇಟಿನ ಗಾ*ಯಗಳಾಗಿದ್ದು, ಮೃ*ತ ಯುವಕನ ಕೈಯಲ್ಲಿ ಪಿಸ್ತೂಲ್ ಪತ್ತೆಯಾಗಿದೆ. ಯುವಕ ಮೊದಲು ಯುವತಿಗೆ ಗುಂ* ಡು ಹಾ*ರಿಸಿ, ನಂತರ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

 

 

Continue Reading

DAKSHINA KANNADA

ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

Published

on

ಬೆಳ್ತಂಗಡಿ : ಅಜ್ಜಿಯ ತಿಥಿಗೆ ಆಮೆಯನ್ನು ಸಾರು ಮಾಡಿ ಬಡಿಸಲು ನದಿಯಲ್ಲಿ ಅ*ಕ್ರಮವಾಗಿ ಆಮೆಗಳನ್ನು ಬೇಟೆಯಾಡಿ ಮಾಂಸ ಮಾಡಲು ಪ್ರಯತ್ನಿಸುತ್ತಿದ್ದ ನಾಲ್ವರನ್ನು  ಆಮೆಗಳ ಸಹಿತ ಬೆಳ್ತಂಗಡಿ ಠಾಣೆಯ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪೆರ್ಡಾಲ ನೀರ್ಚಾಲಿನ ನಿವಾಸಿ ಮಣಿಕಂಠ(42), ಮಂಗಳೂರು ಮೂಲ್ಕಿ ತಾಲೂಕಿನ ನೆಲ್ಲಿಗುಡ್ಡೆ ನಿವಾಸಿ ರಾಜೇಂದ್ರ(54), ಮೂಡಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮದ ಮಕ್ಕಿ ನಿವಾಸಿ ವಿಘ್ನೇಶ್(32), ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದ ನಿವಾಸಿ ಪ್ರಶಾಂತ್(35)  ಬಂಧಿತರು.

ದಾ*ಳಿ ವೇಳೆ ಆರೋಪಿಗಳಿಂದ ನಾಲ್ಕು ಸುಟ್ಟ ಆಮೆಯನ್ನು ಜಪ್ತಿ ಮಾಡಿ ಮುಂದಿನ ತನಿಖೆಗಾಗಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ : ಕೋಟ : ಗೂಗಲ್ ಮ್ಯಾಪ್ ಎಡವಟ್ಟು; ಕೊಲ್ಲೂರಿಗೆ ಹೊರಟವರು ತಲುಪಿದ್ದೆಲ್ಲಿಗೆ ಗೊತ್ತಾ?

ಫೆ.13 ರಂದು ಆರೋಪಿಗಳು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಂಟಿನಿ ನಿವಾಸಿ, ದೇವಮ್ಮ ಎಂಬವರ ಉತ್ತರಕ್ರಿಯೆ ಕಾರ್ಯಕ್ರಮಕ್ಕಾಗಿ ಆಗಮಿಸಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರನ್ನು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

Continue Reading

BIG BOSS

‘ನೀನು ಹೇಳೋವರೆಗೂ ಈ ವಿಷಯ ಯಾರಿಗೂ ಗೊತ್ತಿರಲಿಲ್ಲ’- ರಕ್ಷಿತಾ ಕಾಲೆಳೆದ ಪ್ರಥಮ್!

Published

on

ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಒಳ್ಳೆ ಹುಡುಗ’ ಪ್ರಥಮ್, ಅಶ್ವಿನಿ ಗೌಡ, ಜಾಹ್ನವಿ, ಮತ್ತು ರಕ್ಷಿತಾ ಶೆಟ್ಟಿ ಭಾಗವಹಿಸಿದ್ದರು. ಆ ವೇಳೆ ಪ್ರಥಮ್‌ ರಕ್ಷಿತಾ ಶೆಟ್ಟಿ ಅವರ ಬಗ್ಗೆ ಮಾತನಾಡುತ್ತಾ, ಆಕೆಯ ವೈಯಕ್ತಿಕ ವಿಚಾರವೊಂದನ್ನು ಹಂಚಿಕೊಂಡಾಗ ರಕ್ಷಿತಾ ನಾಚಿಕೊಂಡ ಪ್ರಸಂಗ ನಡೆದಿದೆ.


ವೇದಿಕೆ ಮೇಲೆ ಮಾತನಾಡುತ್ತಿದ್ದ ಪ್ರಥಮ್, ರಕ್ಷಿತಾ ಶೆಟ್ಟಿ ಅವರನ್ನು ‘ಗಿಲ್ಲಿ ನಟನ ತಂಗಿ’ ಎಂದು ಹೇಳುವ ಮೂಲಕ ಕಾಲೆಳೆದರು. ಆಗ ರಕ್ಷಿತಾ, ‘ತಂಗಿ ಅಂತ ಹೇಳಬೇಡಿ, ವಂಶದ ಕುಡಿ ಎಂದು ಹೇಳಿ ಸಾಕು’ ಎಂದು ಹೇಳಿದ್ದಾರೆ. ರಕ್ಷಿತಾ ಅವರ ಮಾತಿನ ಹೊರತಾಗಿಯೂ ಪ್ರಥಮ್ ಕಿಚಾಯಿಸುವುದನ್ನು ಮುಂದುವರಿಸಿದರು, ಇದರಿಂದ ರಕ್ಷಿತಾ ನಾಚಿಕೆಯಿಂದ ಮುಗುಳ್ನಕ್ಕರು.

ಅಂದಹಾಗೆ ರಕ್ಷಿತಾ ಶೆಟ್ಟಿ ಅವರು ತಮಗೆ ಬರುವ ಕನ್ನಡದಲ್ಲೇ ಮಾತನಾಡಿದ್ದಾರೆ. ಆ ವೇದಿಕೆ ಮೇಲೆ ಸ್ವಾಮೀಜಿಗಳು ಕೂಡ ಇದ್ದರು. ಆಗ ಅಶ್ವಿನಿ ಗೌಡ ಅವರು ರಕ್ಷಿತಾಗೆ, ‘ಪೂಜ್ಯ ಗುರುಗಳಿಗೆ ನಮಸ್ಕಾರ ಎಂದು ಹೇಳು’ ಎಂದಿದ್ದಾರೆ. ಆಗ ರಕ್ಷಿತಾ ಅವರು ನಮಸ್ಕಾರ ಎಂದಿದ್ದಾರೆ, ಅದನ್ನು ಕೇಳಿದ ಸ್ವಾಮೀಜಿಗಳು ನಕ್ಕಿದ್ದಾರೆ.‌

ಇದನ್ನೂ ಓದಿ: ಕೋಟ : ಗೂಗಲ್ ಮ್ಯಾಪ್ ಎಡವಟ್ಟು; ಕೊಲ್ಲೂರಿಗೆ ಹೊರಟವರು ತಲುಪಿದ್ದೆಲ್ಲಿಗೆ ಗೊತ್ತಾ?

ಪ್ರಥಮ್‌ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 4 ಶೋ ಗೆದ್ದಿದ್ದಾರೆ ಎಂದು ರಕ್ಷಿತಾ ಹೇಳಿದ್ದಾರೆ. ಆಗ ಪ್ರಥಮ್‌, ‘ನೀನು ಹೇಳಿದಮೇಲೆ ಜನರಿಗೆ ಈ ವಿಷಯ ಗೊತ್ತಾಗಿದೆ, ಅಲ್ಲಿಯವರೆಗೆ ಯಾರಿಗೂ ಗೊತ್ತಿರಲಿಲ್ಲ’ ಎಂದು ರಕ್ಷಿತಾ ಅವರ ಬಗ್ಗೆ ತಮಾಷೆಯಾಗಿ ಕಾಲೆಳೆದಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ಮುಗಿಸಿ ಬಂದಿರುವ ರಕ್ಷಿತಾ ಅವರಿಗೆ ಇದು ಸಾರ್ವಜನಿಕವಾಗಿ ದೊರೆತ ಭರ್ಜರಿ ಸ್ವಾಗತದ ಭಾಗವಾಗಿತ್ತು.

Continue Reading
Advertisement

Trending

Copyright © 2025 Namma Kudla News

You cannot copy content of this page