Connect with us

LATEST NEWS

ಕೇಂದ್ರ ಬಜೆಟ್‌ 2026: ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್‌

Published

on

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಒಂಬತ್ತನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ವೇಳೆ ಮಹಿಳೆಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ.


ಹೌದು, ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ದೇಶದ ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಬಜೆಟ್‌ 2026: ಪ್ರಮುಖ ನಗರಗಳನ್ನು ಜೋಡಿಸಲು 7 ಹೈಸ್ಪೀಡ್ ರೈಲ್ವೆ ಕಾರಿಡಾರ್

ಪ್ರವಾಸೋದ್ಯಮ ಉತ್ತೇಜಿಸಲು 10 ಸಾವಿರ ಗೈಡ್​ಗಳಿಗೆ ತರಬೇತಿ ಕೇಂದ್ರ ಸ್ಥಾಪನೆ, 20 ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಗೈಡ್​ಗಳಿಗೆ ತರಬೇತಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

LATEST NEWS

ಕಾರಿನಲ್ಲಿ ಪತ್ತೆಯಾಯ್ತು ಪ್ರೇಮಿಗಳ ಶ*ವ!

Published

on

ಉತ್ತರ ಪ್ರದೇಶ/ಮಂಗಳೂರು : ಪ್ರೇಮಿಗಳ ದಿನದಂದೇ ದುರಂ*ತವೊಂದು ನಡೆದಿದೆ. ಕಾರಿನಲ್ಲಿ ಪ್ರೇಮಿಗಳ ಶ*ವ ಪತ್ತೆಯಾಗಿದೆ. ಈ ಘಟನೆ ನಡೆದಿರೋದು  ಉತ್ತರ ಪ್ರದೇಶದ ನೋಯ್ಡಾದಲ್ಲಿ. ಶೂಟ್ ಮಾಡಿಕೊಂಡು ಪ್ರೇಮಿಗಳು ಕಾರಿನಲ್ಲೇ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನಿಲ್ಲಿಸಿದ್ದ ಕಾರಿನಲ್ಲಿ ಇಬ್ಬರ ಮೃ*ತದೇಹಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದ್ದು, ಇಬ್ಬರೂ ಗುಂಡು ಹಾ*ರಿಸಿಕೊಂಡು ಮೃ*ತಪಟ್ಟಿರುವುದು ದೃಢವಾಗಿದೆ.

ಇಬ್ಬರಿಗೂ ಗುಂ*ಡೇಟಿನ ಗಾ*ಯಗಳಾಗಿದ್ದು, ಮೃ*ತ ಯುವಕನ ಕೈಯಲ್ಲಿ ಪಿಸ್ತೂಲ್ ಪತ್ತೆಯಾಗಿದೆ. ಯುವಕ ಮೊದಲು ಯುವತಿಗೆ ಗುಂ* ಡು ಹಾ*ರಿಸಿ, ನಂತರ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

 

 

Continue Reading

DAKSHINA KANNADA

ಅಜ್ಜಿ ತಿಥಿಗೆ ಆಮೆ ಸಾರು ಮಾಡಲು ಹೋಗಿ ಸಿಕ್ಕಿ ಬಿದ್ದ ಖದೀಮರು

Published

on

ಬೆಳ್ತಂಗಡಿ : ಅಜ್ಜಿಯ ತಿಥಿಗೆ ಆಮೆಯನ್ನು ಸಾರು ಮಾಡಿ ಬಡಿಸಲು ನದಿಯಲ್ಲಿ ಅ*ಕ್ರಮವಾಗಿ ಆಮೆಗಳನ್ನು ಬೇಟೆಯಾಡಿ ಮಾಂಸ ಮಾಡಲು ಪ್ರಯತ್ನಿಸುತ್ತಿದ್ದ ನಾಲ್ವರನ್ನು  ಆಮೆಗಳ ಸಹಿತ ಬೆಳ್ತಂಗಡಿ ಠಾಣೆಯ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪೆರ್ಡಾಲ ನೀರ್ಚಾಲಿನ ನಿವಾಸಿ ಮಣಿಕಂಠ(42), ಮಂಗಳೂರು ಮೂಲ್ಕಿ ತಾಲೂಕಿನ ನೆಲ್ಲಿಗುಡ್ಡೆ ನಿವಾಸಿ ರಾಜೇಂದ್ರ(54), ಮೂಡಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮದ ಮಕ್ಕಿ ನಿವಾಸಿ ವಿಘ್ನೇಶ್(32), ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದ ನಿವಾಸಿ ಪ್ರಶಾಂತ್(35)  ಬಂಧಿತರು.

ದಾ*ಳಿ ವೇಳೆ ಆರೋಪಿಗಳಿಂದ ನಾಲ್ಕು ಸುಟ್ಟ ಆಮೆಯನ್ನು ಜಪ್ತಿ ಮಾಡಿ ಮುಂದಿನ ತನಿಖೆಗಾಗಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ : ಕೋಟ : ಗೂಗಲ್ ಮ್ಯಾಪ್ ಎಡವಟ್ಟು; ಕೊಲ್ಲೂರಿಗೆ ಹೊರಟವರು ತಲುಪಿದ್ದೆಲ್ಲಿಗೆ ಗೊತ್ತಾ?

ಫೆ.13 ರಂದು ಆರೋಪಿಗಳು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಂಟಿನಿ ನಿವಾಸಿ, ದೇವಮ್ಮ ಎಂಬವರ ಉತ್ತರಕ್ರಿಯೆ ಕಾರ್ಯಕ್ರಮಕ್ಕಾಗಿ ಆಗಮಿಸಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರನ್ನು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

Continue Reading

BIG BOSS

‘ನೀನು ಹೇಳೋವರೆಗೂ ಈ ವಿಷಯ ಯಾರಿಗೂ ಗೊತ್ತಿರಲಿಲ್ಲ’- ರಕ್ಷಿತಾ ಕಾಲೆಳೆದ ಪ್ರಥಮ್!

Published

on

ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಒಳ್ಳೆ ಹುಡುಗ’ ಪ್ರಥಮ್, ಅಶ್ವಿನಿ ಗೌಡ, ಜಾಹ್ನವಿ, ಮತ್ತು ರಕ್ಷಿತಾ ಶೆಟ್ಟಿ ಭಾಗವಹಿಸಿದ್ದರು. ಆ ವೇಳೆ ಪ್ರಥಮ್‌ ರಕ್ಷಿತಾ ಶೆಟ್ಟಿ ಅವರ ಬಗ್ಗೆ ಮಾತನಾಡುತ್ತಾ, ಆಕೆಯ ವೈಯಕ್ತಿಕ ವಿಚಾರವೊಂದನ್ನು ಹಂಚಿಕೊಂಡಾಗ ರಕ್ಷಿತಾ ನಾಚಿಕೊಂಡ ಪ್ರಸಂಗ ನಡೆದಿದೆ.


ವೇದಿಕೆ ಮೇಲೆ ಮಾತನಾಡುತ್ತಿದ್ದ ಪ್ರಥಮ್, ರಕ್ಷಿತಾ ಶೆಟ್ಟಿ ಅವರನ್ನು ‘ಗಿಲ್ಲಿ ನಟನ ತಂಗಿ’ ಎಂದು ಹೇಳುವ ಮೂಲಕ ಕಾಲೆಳೆದರು. ಆಗ ರಕ್ಷಿತಾ, ‘ತಂಗಿ ಅಂತ ಹೇಳಬೇಡಿ, ವಂಶದ ಕುಡಿ ಎಂದು ಹೇಳಿ ಸಾಕು’ ಎಂದು ಹೇಳಿದ್ದಾರೆ. ರಕ್ಷಿತಾ ಅವರ ಮಾತಿನ ಹೊರತಾಗಿಯೂ ಪ್ರಥಮ್ ಕಿಚಾಯಿಸುವುದನ್ನು ಮುಂದುವರಿಸಿದರು, ಇದರಿಂದ ರಕ್ಷಿತಾ ನಾಚಿಕೆಯಿಂದ ಮುಗುಳ್ನಕ್ಕರು.

ಅಂದಹಾಗೆ ರಕ್ಷಿತಾ ಶೆಟ್ಟಿ ಅವರು ತಮಗೆ ಬರುವ ಕನ್ನಡದಲ್ಲೇ ಮಾತನಾಡಿದ್ದಾರೆ. ಆ ವೇದಿಕೆ ಮೇಲೆ ಸ್ವಾಮೀಜಿಗಳು ಕೂಡ ಇದ್ದರು. ಆಗ ಅಶ್ವಿನಿ ಗೌಡ ಅವರು ರಕ್ಷಿತಾಗೆ, ‘ಪೂಜ್ಯ ಗುರುಗಳಿಗೆ ನಮಸ್ಕಾರ ಎಂದು ಹೇಳು’ ಎಂದಿದ್ದಾರೆ. ಆಗ ರಕ್ಷಿತಾ ಅವರು ನಮಸ್ಕಾರ ಎಂದಿದ್ದಾರೆ, ಅದನ್ನು ಕೇಳಿದ ಸ್ವಾಮೀಜಿಗಳು ನಕ್ಕಿದ್ದಾರೆ.‌

ಇದನ್ನೂ ಓದಿ: ಕೋಟ : ಗೂಗಲ್ ಮ್ಯಾಪ್ ಎಡವಟ್ಟು; ಕೊಲ್ಲೂರಿಗೆ ಹೊರಟವರು ತಲುಪಿದ್ದೆಲ್ಲಿಗೆ ಗೊತ್ತಾ?

ಪ್ರಥಮ್‌ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 4 ಶೋ ಗೆದ್ದಿದ್ದಾರೆ ಎಂದು ರಕ್ಷಿತಾ ಹೇಳಿದ್ದಾರೆ. ಆಗ ಪ್ರಥಮ್‌, ‘ನೀನು ಹೇಳಿದಮೇಲೆ ಜನರಿಗೆ ಈ ವಿಷಯ ಗೊತ್ತಾಗಿದೆ, ಅಲ್ಲಿಯವರೆಗೆ ಯಾರಿಗೂ ಗೊತ್ತಿರಲಿಲ್ಲ’ ಎಂದು ರಕ್ಷಿತಾ ಅವರ ಬಗ್ಗೆ ತಮಾಷೆಯಾಗಿ ಕಾಲೆಳೆದಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ಮುಗಿಸಿ ಬಂದಿರುವ ರಕ್ಷಿತಾ ಅವರಿಗೆ ಇದು ಸಾರ್ವಜನಿಕವಾಗಿ ದೊರೆತ ಭರ್ಜರಿ ಸ್ವಾಗತದ ಭಾಗವಾಗಿತ್ತು.

Continue Reading
Advertisement

Trending

Copyright © 2025 Namma Kudla News

You cannot copy content of this page