Connect with us

DAKSHINA KANNADA

ಉಳ್ಳಾಲದಲ್ಲಿ ಬೈಕ್ ಅಪಘಾತ:1 ಸಾವು ಇಬ್ಬರು ಗಂಭೀರ..!

Published

on

ಉಳ್ಳಾಲದಲ್ಲಿ ಬೈಕ್ ಅಪಘಾತ:1 ಸಾವು ಇಬ್ಬರು ಗಂಭೀರ..!

ಮಂಗಳೂರು : ಉಳ್ಳಾಲದಲ್ಲಿ ಮಿತಿಮೀರಿದ ವೇಗದ ಬೈಕ್ ಚಾಲನೆಗೆ ಓರ್ವ ಸತ್ತು- ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಅಮಿತ ವೇಗದಲ್ಲಿ ಧಾವಿಸಿದ ಬೈಕ್ ಪಾದಚಾರಿಗೆ ಢಿಕ್ಕಿ ಹೊಡೆದು ರಸ್ತೆ ವಿಭಾಜಗಕ್ಕೆ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಘಟನೆಯಲ್ಲಿ ಬೈಕ್ ಹಿಂಬದಿ ಸವಾರ 17ರ ಹರೆಯದ ಯುವಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಬೈಕ್ ಸವಾರ ಮತ್ತು ಪಾದಚಾರಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರು ಸಂಕೊಳಿಗೆ ಬಳಿ ಗುರುವಾರ ಸಂಜೆ ಸಂಭವಿಸಿದೆ.

ಮಂಜೇಶ್ವರ ಹೊಸಂಗಡಿ ಅಂಗಡಿಪದವಿನ ಅನಂತ ಗ್ಯಾಸ್ ಏಜೆನ್ಸಿ ಮಾಲಕ ಗೋಪಾಲ-ಶೋಭಾ ದಂಪತಿ ಪುತ್ರ ಪಿಯುಸಿ ವಿದ್ಯಾರ್ಥಿ ಅಶ್ವಿತ್(16) ಮೃತಪಟ್ಟಿದ್ದು, ಇನ್ನೋರ್ವ ಪುತ್ರಬೈಕ್ ಸವಾರ ಅಶ್ವಿನ್ (21) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾದಚಾರಿ ಹೆಸರು ತಿಳಿದುಬಂದಿಲ್ಲ. ಮಂಜೇಶ್ವರ ಕಡೆಯಿಂದ ಮಂಗಳೂರು ಕಡೆಗೆ ಅಮಿತ ವೇಗದಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ರಾ.ಹೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಢಿಕ್ಕಿ ಹೊಡೆದಿದೆ.

ಈ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ರಸ್ತೆ ವಿಭಾಜಗಕ್ಕೆ ಢಿಕ್ಕಿ ಹೊಡೆದು ನಂತರ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಬೈಕ್ ಅಪ್ಪಳಿಸಿದೆ.

ಘಟನಾ ಸ್ಥಳಕ್ಕೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

DAKSHINA KANNADA

ಎಜೆ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ಸು

Published

on

ಮಂಗಳೂರು: ಎಂಡೋಮೆಟ್ರಿಯೊಸಿಸ್ ಜಾಗೃತಿ ಮಾಸದ ಅಂಗವಾಗಿ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಎಂಡೋಮೆಟ್ರಿಯೊಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ಮಹಿಳೆಯರಿಗೆ ಅಪರೂಪದ ಮಿನಿಮಲ್ ಇನ್ವೇಸಿವ್ (ಲ್ಯಾಪರೋಸ್ಕೋಪಿಕ್) ಸಂತಾನೋತ್ಪತ್ತಿ ಸಾಮರ್ಥ್ಯ ಉಳಿಸುವ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಎಂಡೋಮೆಟ್ರಿಯೊಸಿಸ್ ಮತ್ತು ಅಡೆನೊಮಯೋಸಿಸ್ ಮಹಿಳೆಯರಲ್ಲಿ ಸಾಮಾನ್ಯವಾಗಿದ್ದರೂ ಹಲವು ಬಾರಿ ಸರಿಯಾದ ಸಮಯದಲ್ಲಿ ಗುರುತಿಸಲಾಗದೆ ತೀವ್ರ ಹೊಟ್ಟೆ ಕೆಳಭಾಗದ ನೋವು, ನೋವಿನೊಂದಿಗೆ ಮುಟ್ಟು ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗುತ್ತದೆ

36 ವರ್ಷದ ಮಹಿಳೆ ಸುಮಾರು 10 ವರ್ಷಗಳಿಂದ ತೀವ್ರ ಹೊಟ್ಟೆ ನೋವು, ಮುಟ್ಟಿನ ಸಮಯದಲ್ಲಿ  ರಕ್ತಸ್ರಾವ ಮತ್ತು ತೀವ್ರ ಮಾಸಿಕ ನೋವಿನಿಂದ ಬಳಲುತ್ತಿದ್ದರು. ಪರೀಕ್ಷೆಯಲ್ಲಿ ಅವರಿಗೆ ಐಲಿಯೋಕೋಲಿಕ್ ಭಾಗವನ್ನು ಒಳಗೊಂಡ ಸ್ಟೇಜ್ IV ಎಂಡೋಮೆಟ್ರಿಯೊಸಿಸ್ ಇರುವುದಾಗಿ ಪತ್ತೆಯಾಯಿತು. ಅವರಿಗೆ ಲ್ಯಾಪರೋಸ್ಕೋಪಿಕ್ ಎಂಡೋಮೆಟ್ರಿಯೊಸಿಸ್ ಎಕ್ಸಿಷನ್ ಶಸ್ತ್ರಚಿಕಿತ್ಸೆ ಹಾಗೂ ಐಲಿಯೋಕೋಲಿಕ್ ನೊಡ್ಯೂಲ್ ತೆಗೆದುಹಾಕುವ ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು.

ಮತ್ತೊಂದು ಪ್ರಕರಣದಲ್ಲಿ, 34 ವರ್ಷದ ಮಹಿಳೆಗೆ ಡಿಫ್ಯೂಸ್ ಪೋಸ್ಟೀರಿಯರ್ ವಾಲ್ ಅಡೆನೊಮಯೋಸಿಸ್ ಜೊತೆಗೆ ಸ್ಟೇಜ್ IV ಎಂಡೋಮೆಟ್ರಿಯೊಸಿಸ್ ಪತ್ತೆಯಾಯಿತು. ಅವರಿಗೆ ಲ್ಯಾಪರೋಸ್ಕೋಪಿಕ್ ಎಂಡೋಮೆಟ್ರಿಯೊಸಿಸ್ ಎಕ್ಸಿಷನ್ ಶಸ್ತ್ರಚಿಕಿತ್ಸೆ ನಡೆಸಿ ನಂತರ ಮೈಕ್ರೋವೇವ್ ಅಬ್ಲೇಷನ್ ಮೂಲಕ ಚಿಕಿತ್ಸೆ ನೀಡಲಾಯಿತು. ಇದರಿಂದ ನೋವು ಕಡಿಮೆಯಾಗುವ ಜೊತೆಗೆ ಭವಿಷ್ಯದಲ್ಲಿ ಗರ್ಭಧಾರಣೆಯ ಅವಕಾಶವನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ

ಈ ಶಸ್ತ್ರಚಿಕಿತ್ಸಾ ತಂಡದ ನೇತೃತ್ವವನ್ನು ಡಾ. ಅರ್ಥಿಕಾ ಶೆಟ್ಟಿ ವಹಿಸಿದ್ದರು. ತಂಡದಲ್ಲಿ ಡಾ. ಟಿ.ವಿ. ತಂತ್ರಿ (ಅನಸ್ಥೀಷಿಯಾ), ಡಾ. ಭರತ್ ಶೆಟ್ಟಿ (ರೇಡಿಯಾಲಜಿ) ಹಾಗೂ ಡಾ. ರೋಹನ್ ಶೆಟ್ಟಿ (ಆಂತ್ರ ಶಸ್ತ್ರಚಿಕಿತ್ಸೆ) ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅರ್ಥಿಕಾ ಶೆಟ್ಟಿ, ಎಂಡೋಮೆಟ್ರಿಯೊಸಿಸ್ ಲಕ್ಷಣಗಳು ಇತರ ಸಾಮಾನ್ಯ ಸಮಸ್ಯೆಗಳೊಂದಿಗೆ ಹೊಂದಿಕೆಯಾಗುವುದರಿಂದ ಹಲವಾರು ಮಹಿಳೆಯರಿಗೆ ಸರಿಯಾದ ನಿರ್ಣಯ ತಡವಾಗುತ್ತದೆ ಎಂದರು. ಎಕ್ಸಿಷನ್ ಶಸ್ತ್ರಚಿಕಿತ್ಸೆ ಎಂಡೋಮೆಟ್ರಿಯೊಸಿಸ್‌ಗೆ ಅತ್ಯುತ್ತಮ ಚಿಕಿತ್ಸೆ ವಿಧಾನವಾಗಿದ್ದು, ಸಮಯೋಚಿತ ನಿರ್ಣಯ ಮತ್ತು ಮಿನಿಮಲ್ ಇನ್ವೇಸಿವ್ ಶಸ್ತ್ರಚಿಕಿತ್ಸೆಯಿಂದ ನೋವು ಕಡಿಮೆಯಾಗುವುದರ ಜೊತೆಗೆ ಸಂತಾನೋತ್ಪತ್ತಿ ಸಾಧ್ಯತೆಗಳನ್ನು ಹೆಚ್ಚಿಸಬಹುದು ಎಂದರು.

ಇದನ್ನೂ ಓದಿ : ತನ್ನ ಉದ್ಯೋಗಿಗಳಿಗೆ ‘ಮನೆಯಿಂದಲೇ ಊಟದ ಬಾಕ್ಸ್’ ತರುವಂತೆ ಸೂಚಿಸಿದ ಇನ್ಫೋಸಿಸ್!

ಸಂಕೀರ್ಣ ಸ್ತ್ರೀರೋಗ ಸಮಸ್ಯೆಗಳಿಗೆ ಸಂತಾನೋತ್ಪತ್ತಿ ಸಾಮರ್ಥ್ಯ ಉಳಿಸುವ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡುವಲ್ಲಿ ಎಜೆ ಆಸ್ಪತ್ರೆ ಮುಂದುವರಿದಿದೆ ಎಂದು ಆಸ್ಪತ್ರೆ ತಿಳಿಸಿದೆ.

 

Continue Reading

DAKSHINA KANNADA

ಉಳ್ಳಾಲ : ಗಾಂ*ಜಾ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರ ಬಂಧನ, ಓರ್ವ ಪರಾರಿ

Published

on

ಉಳ್ಳಾಲ : ಗಾಂ*ಜಾ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 51,500 ರೂಪಾಯಿ ಬೆಲೆ ಬಾಳುವ ಒಂದು ಕೆ.ಜಿ. 110 ಗ್ರಾಂ ತೂಕದ ಗಾಂಜಾ ಮತ್ತು ನಗದು 520  ರೂಪಾಯಿ, ಎರಡು ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ಕಾಸರಗೋಡಿನ  ಮಂಜೇಶ್ವರ ತಾಲೂಕಿನ ಉಪ್ಪಳದ  ಶೇಕ್ ಅರ್ಬಾಜ್ ಮತ್ತು ರಶೀದ್ ಆಲ್ವಿನ್ ಬಂಧಿತ ಅರೋಪಿಗಳು. ಇನ್ನೋರ್ವ ಆರೋಪಿ ಮಂಜೇಶ್ವರದ ಅಲ್ತಾಫ್ ಪರಾರಿಯಾಗಿದ್ದಾನೆ. ಗುರುವಾರ(ಮಾ.12) ಉಳ್ಳಾಲ ತಾಲೂಕು ಕೋಟೆಕಾರ್ ಗ್ರಾಮದ ಬಗಂಬಿಲ ಸಮೀಪದ ಗ್ರೌಂಡ್ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಮೂವರು ವ್ಯಕ್ತಿಗಳು ಗಾಂ*ಜಾವನ್ನು ತಂದು ಗಿರಾಕಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿ ಮತ್ತು  ಸಿಬ್ಬಂದಿಯನ್ನು ಒಳಗೊಂಡ  ತಂಡವು ದಾ*ಳಿ ನಡೆಸಿದೆ.

ಈ ವೇಳೆ  ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಗಾಂ*ಜಾ ಮತ್ತು ಇತರ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಕಳೆದ ಎಂಟು ವರ್ಷಗಳಿಂದ ಮೌನವಾಗಿದ್ದೆ…ಇನ್ನು ಸಾಧ್ಯವಿಲ್ಲ…ಬ್ರೇಕಪ್ ಆಡಿಯೋ ವೈರಲ್ ಬಗ್ಗೆ ರಶ್ಮಿಕಾ ಮಂದಣ್ಣ ಪೋಸ್ಟ್!

ಈ ಸಂದರ್ಭದಲ್ಲಿ ಆರೋಪಿ ಅಲ್ತಾಫ್ ಎಂಬಾತ ಸ್ಕೂಟರ್ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Continue Reading

DAKSHINA KANNADA

ಗೇರು ಸಂಶೋಧನಾ ನಿರ್ದೇಶನಾಲಯದಿಂದ ರಾಧಾಕೃಷ್ಣ ಇಟ್ಟಿಗುಂಡಿರಿಗೆ ಸನ್ಮಾನ

Published

on

ಪುತ್ತೂರು : ಭಾ.ಕೃ.ಸಂ.ಪ – ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು  ಕೃಷಿಕ ರಾಧಾಕೃಷ್ಣ ಇಟ್ಟಿಗುಂಡಿಯವರ ಸಾಧನೆ ಗುರುತಿಸಿ ಸನ್ಮಾನಿಸಿದೆ.

ಗೇರು ಬೆಳೆಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ಕೊಡುಗೆಗಾಗಿ ಮತ್ತು ಅವುಗಳ ವಿಸ್ತರಣೆಯಲ್ಲಿ  ರಾಧಾಕೃಷ್ಣ ಇಟ್ಟಿಗುಂಡಿ ಗಮನಾರ್ಹ ಪಾತ್ರವಹಿಸಿದ್ದಾರೆ. ಅವರ ಕೊಡುಗೆಯನ್ನು ಗುರುತಿಸಿ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯವು ಉತ್ತಮ ಗೇರು ಉದ್ಯಮಿ ಎಂಬುದಾಗಿ ಸನ್ಮಾನಿಸಿದೆ.

ಇದನ್ನೂ ಓದಿ : 50 ಅಡಿ ಎತ್ತರದಿಂದ ಬಿದ್ದ ಲಾರಿ; ಮನೆ ಜಸ್ಟ್ ಮಿಸ್…ತಪ್ಪಿದ ಭಾರೀ ಅನಾಹುತ!

ಇನ್ನೂ ಹೆಚ್ಚಿನ ಸಾಧನೆಗೈದು ಗೇರು ಬೆಳೆಯ ಅಭಿವೃದ್ಧಿಗೆ ಕಾರಣರಾಗಲಿ ಎಂಬ ಹಾರೈಕೆಯೊಂದಿಗೆ  ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page