Connect with us

DAKSHINA KANNADA

ಉಳ್ಳಾಲ ಕೊಲ್ಯ ಭೀಕರ ಕಾರು ಅಪಘಾತದ ಮತ್ತೋರ್ವ ಗಾಯಾಳು ಮೃತ್ಯು..!

Published

on

ಉಳ್ಳಾಲ : ಮಂಗಳೂರು ಹೊರವಲಯದ ಉಳ್ಳಾಲ ರಾ.ಹೆ.66ರ ಕೊಲ್ಯ -ಅಡ್ಕ ನಡುವೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ವ್ಯಕ್ತಿ ಅಪರಾಹ್ನ ಚಿಕಿತ್ಸೆ ಫಲಕಾರಿಯಾಗದೆ ಖಾಸಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಉಪ್ಪಳ ಹಿದಾಯತ್ ನಗರದ ಬಾಷರ್ ಅಹಮ್ಮದ್ (22) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಅಪಘಾತ ನಡೆದ ಸ್ಥಳದಲ್ಲಿಯೇ ಕಾರು ಚಲಾಯಿಸುತ್ತಿದ್ದ ಸಹೋದರ ಅಬ್ದುಲ್ ರಿಫಾಯಿ ನಿನ್ನೆಯೇ ಮೃತಪಟ್ಟಿದ್ದರು.

ಬಾಷರ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದರು. ಜ.28 ರಂದು ಗಲ್ಫ್ ನಿಂದ ಆಗಮಿಸಿದ್ದ ಮಹಮ್ಮದ್ ರಿಫಾಯಿ ತಂದೆಯ ಸಹೋದರನ ಪುತ್ರ ಬಾಷರ್ ಅಹಮ್ಮದ್ ಸೇರಿದಂತೆ ಆತನ ಸಹಪಾಠಿಗಳಾದ ಫಾತಿಮ ಹಾಗೂ ರೇವತಿ ಮಂಗಳೂರಿನಿಂದ ತಲಪಾಡಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.

ಕೊಲ್ಯ ಸಮೀಪ ಕಾರು ಚಾಲಕನ ನಿಯಂತ್ರಣ ಕಳೆದು ಡಿವೈಡರ್ ಏರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿತ್ತು.
ಮೃತ ಅಬ್ದುಲ್ ರಿಫಾಯಿ ಕಟ್ಟಡ ಗುತ್ತಿಗೆದಾರ ಸಯ್ಯದ್ ಎಂಬವರ ಪುತ್ರನಾಗಿದ್ದರು.

ಮೃತರು ತಾಯಿ, ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.

ಮೃತ ಬಾಷರ್ ಅಹಮ್ಮದ್ ಸಹೋದರ ರಿಫಾಯಿ ವಿದೇಶದಿಂದ ಬಂದ ಹಿನ್ನೆಲೆಯಲ್ಲಿ ಸಹಪಾಠಿಗಳ ಜೊತೆಗೆ ಒಟ್ಟಾಗಿದ್ದರು.

ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರಾದ ರೇವತಿ ಹಾಗೂ ಫಾತಿಮ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.

DAKSHINA KANNADA

ಸ್ಕೂಟರ್‌ಗೆ ಅಡ್ಡ ಬಂದ ಕಾಡುಹಂದಿ; ರಸ್ತೆಗೆಸೆಯಲ್ಪಟ್ಟು ಹಿಂಬದಿ ಸವಾರೆ ಸಾ*ವು

Published

on

ಉಳ್ಳಾಲ : ವ್ಯಕ್ತಿಯ ಸ್ಕೂಟರ್‌ಗೆ ಕಾಡು ಹಂದಿಯೊಂದು ದಿಢೀರನೆ ಅಡ್ಡ ಬಂದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಹಿಂಬದಿ ಸವಾರೆ ಮೃ*ತಪಟ್ಟ ಘಟನೆ ಹರೇಕಳ ಗ್ರಾಮದ ಖಂಡಿಗ ಎಂಬಲ್ಲಿ ಸಂಭವಿಸಿದೆ. ಹರೇಕಳ ಗ್ರಾಮದ ಪೊಲ್ಕೆ ಮೇಗಿನಮನೆ ನಿವಾಸಿ ದೇವಕಿ ಮಾಣೈ(72) ಮೃತ ಹಿಂಬದಿ ಸವಾರೆ.

ಶನಿವಾರ ರಾತ್ರಿ(ಮಾ.15) ವರದರಾಜ್ ಮಾಣೈ ತನ್ನ ತಾಯಿ ದೇವಕಿ ಮಾಣೈ ಅವರ ಜೊತೆ ಬಜಾಲಿನ ಸಂಬಂಧಿಕರ ಮನೆಯಿಂದ ಸ್ಕೂಟರಲ್ಲಿ ಅಡ್ಯಾರು-ಪಾವೂರು ಮಾರ್ಗವಾಗಿ ಹರೇಕಳದ ಮನೆಗೆ ಮರಳುತ್ತಿದ್ದರು. ಈ  ವೇಳೆ ದಾರಿ ಮಧ್ಯೆ ಖಂಡಿಗ ಎಂಬಲ್ಲಿನ ಹಳೇ ಪಂಚಾಯತ್ ಕಚೇರಿ ಕಟ್ಟಡದ ಬಳಿಯ ಗುಡ್ಡಕಾಡು ಪ್ರದೇಶದಿಂದ ಕಾಡು ಹಂದಿಯೊಂದು ದಿಢೀರನೆ ರಸ್ತೆ ಕಡೆ ಧಾವಿಸಿದೆ.

ಈ ವೇಳೆ ಸ್ಕೂಟರ್ ಚಲಾಯಿಸುತ್ತಿದ್ದ ವರದರಾಜ್ ಅವರು ವಿಚಲಿತರಾಗಿ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ತಾಯಿ ಮತ್ತು ಮಗ ರಸ್ತೆಗೆಸೆಯಲ್ಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ದೇವಕಿ ಅವರಿಗೆ ಹರೇಕಳದ ಕ್ಲಿನಿಕ್ ಒಂದರಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾ*ವನ್ನಪ್ಪಿದ್ದಾರೆ.

ಇದನ್ನೂ ಓದಿ  : ಒಂದೇ ವಾರದಲ್ಲಿ ಶನಿಗ್ರಹದ 124 ಹೊಸ ಉಪಗ್ರಹ ಪತ್ತೆ; ಮಾ.23 ರಂದು ನಡೆಯಲಿದೆ ವಿಸ್ಮಯ

ಮೃತ ದೇವಕಿ ಅವರ ಪತಿ ಭೋಜ ಮಾಣೈ ಅವರು ಕಳೆದ ಆರು ತಿಂಗಳ ಹಿಂದಷ್ಟೇ ಅಲ್ಪ ಕಾಲದ ಅನಾರೋಗ್ಯದಿಂದ ಮೃ*ತಪಟ್ಟಿದ್ದರು. ದೇವಕಿ ಅವರು ಓರ್ವ ಪುತ್ರ, ಇಬ್ಬರು ಪುತ್ರಿಯರು ಮತ್ತು ಮೊಮ್ಮಕ್ಕಳನ್ನ ಅಗಲಿದ್ದಾರೆ.

ಘಟನೆ ಕುರಿತು ದೇವಕಿ ಮಾಣೈ ಅವರ ಅಳಿಯ(ಮಗಳ ಗಂಡ) ರವೀಂದ್ರ ಭಂಡಾರಿ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

DAKSHINA KANNADA

ಮಲೀನವಾದ ನೇತ್ರಾವತಿಯ ಸ್ವಚ್ಚತಾ ಕಾರ್ಯ..! ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ ನೇತೃತ್ವ..!

Published

on

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ಧ.ಮಂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಶ್ರೀ ಧ.ಮಂ. ಸ್ಪೋಟ್ಸ್ ಕ್ಲಬ್ ಉಜಿರೆ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ (ರಿ.) ಬೆಳ್ತಂಗಡಿ ಇದರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಆರಕ್ಷಕ ಠಾಣ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಸುಮಾರು 650 ಮಂದಿಯಿಂದ ‘ವಂದೇ ಮಾತರಂ’ ನನ್ನ ಸೇವೆಗಾಗಿ.. ನೇತ್ರಾವತಿ ನದಿ ಸಂವತ್ಸರ ಕಾರ್ಯಕ್ರಮ ಮಾ.16ರಂದು ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಆರಂಭಗೊಂಡಿತು.


ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ದೀಪ ಬೆಳಗಿಸಿ ಧರ್ಮಸ್ಥಳದ ನೇತ್ರಾವತಿ ನದಿ ಪ್ರವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನೇತ್ರಾವತಿ ಪುಣ್ಯ ನದಿಯಲ್ಲಿ ತಮ್ಮ ಪಾಪವನ್ನು ಕಳೆಯಲು ಸ್ನಾನ ಮಾಡುತ್ತಾರೆ. ಆದರೆ ಬಟ್ಟೆ ಬರೆಗಳನ್ನು ನದಿಗೆ ಎಸೆದು ಅಂಧಾನುಕರಣೆ ಮಾಡುತ್ತಾರೆ. ಇದು ಸರಿಯಲ್ಲ. ಬದುಕು ಕಟ್ಟೋಣ ಬನ್ನಿ ತಂಡ ಕಾಯ೯ಕ್ರಮ ಸಮಾಜಕ್ಕೆ ಮಾದರಿ ಹೇಳಿದರು.

ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ನ ಅಧ್ಯಕ್ಷ. ಕೆ. ಧನಂಜಯ ರಾವ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಬಿ.ಜಿ. ಸುಬ್ಬಾಪುರ ಮಠ, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅರ್ಜುನ್, ಧರ್ಮಸ್ಥಳ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಕಿಶೋರ್ ಪಿ. ವೇಣೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಶೈಲಾ ಡಿ. ಮುರುಗೋಡು, ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಏಣಿಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಉಜಿರೆಯ ಎಸ್.ಡಿ.ಎಂ. ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಕೆ. ಭಾಗವಹಿಸಿ ಶುಭ ಕೋರಿದರು. ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶಗಳನ್ನು ಪ್ರಕಟಿಸಿದರು.

ಉಜಿರೆ ಶ್ರೀ ಧ.ಮಂ. ಕಾಲೇಜಿನ ರಾ.ಸೇ.ಯೋ. ಘಟಕದ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿದರು. ಎಸ್.ಕೆ.ಡಿ.ಆರ್.ಡಿ.ಪಿ. ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ವಂದಿಸಿದರು.

Continue Reading

DAKSHINA KANNADA

ಓವರ್ ಟೇಕ್ ಮಾಡುವ ಭರದಲ್ಲಿ ಒಮ್ನಿಗೆ ಗುದ್ದಿದ ಬೈಕ್ ; ಸಹೋದರರಿಬ್ಬರು ಗಂಭೀರ

Published

on

ಉಳ್ಳಾಲ : ಬೈಕ್ ಸವಾರನ ನಿರ್ಲಕ್ಷ್ಯ ಚಾಲನೆ ಉಳ್ಳಾಲ ತಾಲೂಕಿನ ಹರೆಕಳ ಸಮೀಪದ ಬಾವಲಿಗುಳಿ ಎಂಬಲ್ಲಿ ಭೀಕರ ಅಪಘಾತದಲ್ಲಿ ಸಹೋದರರಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಈ ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಎದ್ದು ಕಂಡಿದೆ. ನಿಧಾನವಾಗಿ ಹೋಗುತ್ತಿದ್ದ ಅಂಬ್ಯುಲೆನ್ಸ್ ಒಂದನ್ನು ತಿರುವಿನಲ್ಲಿ ಬೈಕ್ ಸವಾರ ಓವರ್ ಟೇಕ್ ಮಾಡಿದ್ದಾನೆ. ಈ ವೇಳೆ ಎದುರಿನಿಂದ ಮಾರುತಿ ಒಮ್ನಿ ವಾಹನ ಬಂದಿದ್ದು, ಅದನ್ನು ತಪ್ಪಿಸಲು ರಸ್ತೆಯ ಬದಿಗೆ ಬೈಕ್ ಚಲಾಯಿಸಿದ್ದಾರೆ.

ಆದ್ರೆ ಈ ವೇಳೆ ಮಾರುತಿ ಒಮ್ನಿ ವಾಹನ ಚಾಲಕ ಕೂಡಾ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನವನ್ನು ರಸ್ತೆಯ ಬದಿಗೆ ಚಲಾಯಿಸಿದ್ದಾನೆ. ಈ ವೇಳೆ ಬೈಕ್ ಹಾಗೂ ಮಾರುತಿ ಓಮ್ನಿ ವಾಹನ ಮುಖಾ ಮುಖಿ ಡಿಕ್ಕಿಯಾಗಿದೆ. ಬೈಕ್ ಸವಾರ ಹಾಗೂ ಸಹ ಸವಾರನಾಗಿದ್ದ ಆತನ ಸಹೋದರ ಇಬ್ಬರೂ ಹೆಲ್ಮೆಟ್ ಕೂಡಾ ಧರಿಸಿಲ್ಲದ ಕಾರಣ ಇಬ್ಬರಿಗೂ ತೀವೃ ಸ್ವರೂಪದ ಗಾಯಗಳಾಗಿದೆ. ಅಪಘಾತ ನಡೆದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page