Connect with us

DAKSHINA KANNADA

ಉಳ್ಳಾಲ : ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ಸಾಗಾಟ – ಇಬ್ಬರ ಬಂಧನ

Published

on

ಉಳ್ಳಾಲ: ನಿಷೇಧಿತ ಎಂಡಿಎಂಎ ಸಾಗಾಟ ನಡೆಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಉಚ್ಚಿಲ ರಿಲಾಯನ್ಸ್ ಪೆಟ್ರೋಲ್ ಪಂಪ್ ನಲ್ಲಿ ಅಡ್ಡಗಟ್ಟಿ ಬಂಧಿಸಿದ್ದಾರೆ. ಬಂಧಿತರಿಂದ 95,000 ರೂ. ಬೆಲೆಯ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಳ್ಳಾಲದ ಆಝಾದನಗರ 1 ನೇ ಕ್ರಾಸ್ ನ ಮೊಹಮ್ಮದ್ ಖಾಲಿದ್(39), ಹಾಗೂ ಮಂಜೇಶ್ವರದ ಲಿಖಿತ್ (21) ಬಂಧಿತರು.

ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಸೋಮೇಶ್ವರ ಗ್ರಾಮದ ಉಚ್ಚಿಲ ರಿಲಾಯನ್ಸ್ ಪೆಟ್ರೋಲ್ ಪಂಪ್ ನಲ್ಲಿ ನಡೆದಿದೆ.

ಇಬ್ಬರು ಯುವಕರು ಡಿಯೊ ಸ್ಕೋಟರನಲ್ಲಿ ತಲಪಾಡಿಯಿಂದ ಉಚ್ಚಿಲ ರಿಲಯನ್ಸ್ ಪೆಟ್ರೋಲ್ ಪಂಪ ಕಡೆಗೆ MDMA ಹೊಂದಿರುವ ಪಾಕೆಟ್ ಸಮೆತ ಸ್ಕೋಟರನಲ್ಲಿ ಹೊಗುತ್ತಿದ್ದ ಸಮಯದಲ್ಲಿ ಉಳ್ಳಾಲ ಪೊಲೀಸರು ಸ್ಕೊಟರನ್ನು ಅಡ್ಡಗಟ್ಟಿ ಹಿಡಿಯುವ ಸಮಯ ಇಬ್ಬರು ಆರೋಪಿಗಳು ಸಿಕ್ಕಿದ್ದಾರೆ.

ಇವರಿಂದ ರೂ.20,000 ಮೌಲ್ಯದ 10 ಗ್ರಾಂ ರೂ. 50,000 ಬೆಲೆಬಾಳುವ ಸ್ಕೂಟರ್ ಹಾಗೂ ರೂ. 25,000 ಬೆಲೆಬಾಳುವ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಬಂಧಿತರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಗಾಂಜಾ ಮಾರಾಟದ ಪ್ರಕರಣಗಳಿವೆ.

ಉಳ್ಳಾಲ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್ ರವರ ಮಾರ್ಗದರ್ಶನದಲ್ಲಿ ಪಿಎಸ್ ಐಗಳಾದ ರೇವಣ್ ಣಸಿದ್ದಪ್ಪ, ಪ್ರದೀಪ್ ಟಿ,ಆರ್, ಶಿವಕುಮಾರ್ ಹಾಗು ಸಿಬ್ಬಂದಿಗಳಾದ ರಂಜಿತ್, ಅಶೋಕ,ಅಕ್ಬರ್, ಸಾಗರ, ವಾಸುದೇವ,ಸತೀಶ್, ಚಿದಾನಂದ,ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

DAKSHINA KANNADA

ಫೆ.14ರಂದು 16ನೇ ವರ್ಷದ ಜಯ-ವಿಜಯ ಜೋಡುಕರೆ ಕಂಬಳ; ಆಮಂತ್ರಣ ಪತ್ರಿಕೆ ಬಿಡುಗಡೆ

Published

on

ಮಂಗಳೂರು: ಜಯ-ವಿಜಯ ಜೋಡುಕರೆ ಕಂಬಳ ಸಮಿತಿ (ರಿ) ಜಪ್ಪಿನಮೊಗರು ಮಂಗಳೂರು ಇವರ ನೇತೃತ್ವದಲ್ಲಿ ಮನ್ಕು ತೋಟಗುತ್ತು ಮತ್ತು ನಾಡಾಜೆಗುತ್ತು ಕೀರ್ತಿಶೇಷ ಜೆ. ಜಯಗಂಗಾಧರ ಶೆಟ್ಟಿಯವರ ಸ್ಮರಣಾರ್ಥ 16ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಫೆ.14 ಮತ್ತು 15ರಂದು ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ನಡೆಯಲಿದೆ.

ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದು ನಗರದ ಓಷಿಯನ್ ಪರ್ಲ್ ಹೊಟೇಲ್ ನಲ್ಲಿ ನಡೆಯಿತು. ಸುತೇಜ್ ಎಂಟರ್ ಪ್ರೈಸಸ್ ಮುಂಬಯಿ ಇದರ ಎಂಡಿ, ಹಾಗೂ ಕಂಬಳದ ಮಾರ್ಗದರ್ಶಕ ಎಚ್. ಸುಧಾಕರ್ ಶೆಟ್ಟಿ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಮುಂದಾಳತ್ವದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು.

ನಂತರ ಈ ಬಗ್ಗೆ ಸುಧಾಕರ್ ಶೆಟ್ಟಿ ಮಾತನಾಡಿ ಜಪ್ಪಿನಮೊಗರುವಿನಲ್ಲಿ ನಡೆಯುತ್ತಿರುವ ಕಂಬಳ ಅತ್ಯಂತ ವಿಶೇಷವಾದದ್ದು. ಯಾಕಂದ್ರೆ ಶಾಸಕ ವೇದವ್ಯಾಸ್ ಕಾಮತ್ ಅವರ ಸಹಕಾರದಿಂದ ವ್ಯವಸ್ಥಿತವಾಗಿ ಈಗ ನಡೆಯುತ್ತಿದೆ. ಕಂಬಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸ್ತಾರೆ. ಕಂಬಳವನ್ನು ನಾಡಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: 33ನೇ ವರ್ಷದ ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

ಗೌರವಾಧ್ಯಕ್ಷ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ ಶ್ರೀ ಅನಂತಪದ್ಮನಾಭ ಅಸ್ರಣ್ಣರ ಆಶೀರ್ವಚನದೊಂದಿಗೆ ವೇದಮೂರ್ತಿ ಬ್ರಹ್ಮ ಶ್ರೀ ವಿಠಲದಾಸ್ ತಂತ್ರಿವರ್ಯರಿಂದ ಕಂಬಳವು ಉದ್ಘಾಟನೆಗೊಳ್ಳಲಿದೆ. ಉದ್ಯಮಿಗಳು ಸೇರಿದಂತೆ ಸಿನಿಮಾ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ. ಕಂಬಳದಲ್ಲಿ 150ಕ್ಕೂ ಹೆಚ್ಚಿನ ಸಂಖ್ಯೆಯ ಕೋಣಗಳು ಭಾಗವಹಿಸಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಯ ವಿಜಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ, ಕಾರ್ಯಾಧ್ಯಕ್ಷೆ ವೀಣಾಮಂಗಳ, ಮತ್ತೋರ್ವ ಕಾರ್ಯಾಧ್ಯಕ್ಷ ಪ್ರವೀಣ್ ಚಂದ್ರ ಆಳ್ವ ತಿರುವೈಲುಗುತ್ತು, ಸಂದೀಪ್ ಶೆಟ್ಟಿ ಎಕ್ಕೂರು ಮತ್ತಿತ್ತರರು ಉಪಸ್ಥಿತರಿದ್ದರು.

Continue Reading

DAKSHINA KANNADA

ಕಾಂಗ್ರೆಸ್ ನಲ್ಲಿರುವ ಹಿಂದೂಗಳಿಗೆ ರಾಮ ದೇವರಲ್ಲವೇ: ಕಾಂಗ್ರೆಸ್ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ವಾಗ್ದಾಳಿ

Published

on

ಮಂಗಳೂರು: ರಾಮನ ಹೆಸರಿಟ್ಟರೆ ಕಾಂಗ್ರೆಸಿಗರಿಗೆ ಹೊಟ್ಟೆ ಉರಿ ಏಕೆ? ಕಾಂಗ್ರೆಸ್ ನಲ್ಲಿರುವ ಹಿಂದೂಗಳಿಗೆ ರಾಮ ದೇವರಲ್ಲವೇ ಎಂದು ಶಾಸಕ ವೇದವ್ಯಾಸ ಕಾಮತ್‌ ಕೇಂದ್ರ ಸರಕಾರದ ವಿಬಿ- ಜಿ- ರಾಮ್‌- ಜಿ- ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿ ರಾಮನ ಹೆಸರು ಬಂತು ಎಂದಾಗ ಕಾಂಗ್ರೆಸಿಗರು ಅಲರ್ಜಿ ತರ ಮಾತನಾಡುವುದೇಕೆ? ಮನ್ ರೇಗಾ ಹೆಸರನ್ನು ನರೇಗಾ ಎಂದು ಬದಲಿಸಿದ್ದು ಕಾಂಗ್ರೆಸ್ ಅಲ್ಲವೇ ಎಂದರು.

ವೋಟ್‌ ಬ್ಯಾಂಕಿಗಾಗಿ ಕಾಂಗ್ರೆಸ್‌ ಮಾಡುತ್ತಿರುವ ರಾಜಕಾರಣ ಈಗ ಜನರಿಗೆ ಅರ್ಥವಾಗಿದೆ. ದೇಶದ ಬೆರಳೆಣಿಕೆಯ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಆಡಳಿತವಿದೆ. ಕಾಂಗ್ರೆಸಿಗರಿಗೆ ರಾಮನ ಶಾಪ ಇದೆ, ಇದನ್ನು ಸರಿ ಮಾಡಲು ಮೊದಲು ಕಲಿಯಿರಿ ಎಂದವರು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ದೇವಸ್ಥಾನದ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಾಕಬಾರದೆಂಬ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ ಮಾಜಿ ಸಚಿವ ಬಿ ರಮಾನಾಥ ರೈ

ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಕೆಲಸವಿಲ್ಲ. ರಾಜ್ಯದಲ್ಲಿ ಅವರದೇ ಸರಕಾರವಿದೆ. ಆವರ ಆಡಳಿತ ವೈಫಲ್ಯಗಳನ್ನು ಸರಿಪಡಿಸುವ ಸಾಮರ್ಥ್ಯ ಅವರಿಗಿಲ್ಲ. ಮಂಗಳೂರಿನಲ್ಲಿ ಈ- ಖಾತಾ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಜೈಲಿನ ಜಾಮರ್ ಸಮಸ್ಯೆ ನಿವಾರಣೆ ಮಾಡುವ ಸಾಮರ್ಥ್ಯ ಇಲ್ಲ. ಮೂಡಾ, ತಾಲೂಕು ಕಚೇರಿಗಳು ಸಮಸ್ಯೆಗಳ ಆಗರವಾಗಿವೆ ಎಂದು ಟೀಕಿಸಿದರು.

Continue Reading

DAKSHINA KANNADA

33ನೇ ವರ್ಷದ ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

Published

on

ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯುತ್ತಿರುವ 33ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಇಂದು ಬೆಳಿಗ್ಗೆ ಆರಂಭಗೊಂಡಿದೆ.

ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟನೆ ನರೆವೇರಿಸಿದರು.

ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ನಗರಸಭೆ ಮುಖ್ಯಾಧಿಕಾರಿ ವಿದ್ಯಾ ಕಾಳೆ, ಪದ್ಮನಾಭ ಶೆಟ್ಟಿ, ಜಯಂತ್ ನಡುಬೈಲು, ಸುಂದರ ಗೌಡ, ಉದ್ಯಮಿ ದಿವ್ಯಾ ಶೆಟ್ಟಿ, ಡಾ ಶರತ್‌ ಶೆಟ್ಟಿ, ಬಾಬು ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಅಡ್ವೆ ನಂದಿಕೂರು 33ನೇ ವರ್ಷದ “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟ; ಇಲ್ಲಿದೆ ಫಲಿತಾಂಶ

ನೇಗಿಲು ಹಿರಿಯ, ನೇಗಿಲು ಕಿರಿಯ, ಕನೆಹಲಗೆ, ಅಡ್ಡ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ ವಿಭಾಗಗಳಲ್ಲಿ ಕಂಬಳ ನಡೆಯಿತು. ಕಳೆದ ವರ್ಷ ಪುತ್ತೂರು ಕಂಬಳದಲ್ಲಿ ಕರೆಯಲ್ಲೆ ರಾಜ್ಯಮಟ್ಟದ ಕೆಸರು ಗದ್ದೆ ಓಟ ಸ್ಪರ್ಧೆ ಏರ್ಪಡಿಸಲಾಗಿತ್ತು . ಈ ವರ್ಷ ಇದರ ಜೊತೆಗೆ ಮೊದಲ ಬಾರಿ ರಿಲೇ ಸ್ಪರ್ಧೆ ಏರ್ಪಡಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page