Connect with us

DAKSHINA KANNADA

ಉಳ್ಳಾಲ ಕೆ.ಎಸ್‌ ಹೆಗ್ಡೆ ಆಸ್ಪತ್ರೆ ವೈದ್ಯ ಡಾ.ಜಯರಾಮ ಶೆಟ್ಟಿ ಹೃದಯಾಘಾತದಿಂದ ನಿಧನ..!

Published

on

ಉಳ್ಳಾಲ: ದೇರಳಕಟ್ಟೆ ಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ರೇಡಿಯೇಷನ್‌ ಆಂಕಾಲಜಿ ಕ್ಯಾನ್ಸರ್ ವಿಭಾಗದ ತಜ್ಞ ವೈದ್ಯರಾದ ಗುರುಪುರ ಪರಾರಿ ದೋಟ ಕೊಳಕೆಬೈಲು ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿರುವ ಡಾ. ಜಯರಾಮ ಶೆಟ್ಟಿ(53) ಹೈದಯಾಘಾತದಿಂದ ಜ.,11ರಂದು ಬುಧವಾರ ನಿಧನ ಹೊಂದಿದರು.


ಮಂಗಳೂರಿನ ಕೆ.ಎಂಸಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಉನ್ನತ ಶಿಕ್ಷಣ ಪಡೆದ ಬಳಿಕ ಸುಮಾರು ಒಂದು ದಶಕಗಳಿಗಿಂತ ಹೆಚ್ಚು ಕಾಲ ರೇಡಿಯೇಷನ್‌ ಆಂಕಾಲಜಿ ಚಿಕಿತ್ಸಾ ವಿಭಾಗದಲ್ಲಿ ಸೇವೆ ಸಲ್ಲಿಸಿ ಕಳೆದ 11 ವರುಷಗಳಿಂದ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ರೇಡಿಯೇಷನ್ ಅಂಕೋಲಾಜಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಬುಧವಾರ ಸಂಜೆಯವರೆಗೆ ಕಾರ್ಯ ನಿರ್ವಹಿಸಿ ಮನೆಗೆ ತೆರಳಿ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ.

ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದ ಅವರು ಅನೇಕ ಬಡ ರೋಗಿಗಳ ಚಿಕಿತ್ಸೆಗೆ ಸಹಾಯಹಸ್ತ ನೀಡುತ್ತಿದ್ದರು.

ಡಾ. ಜಯರಾಮ ಶೆಟ್ಟಿ ನಿಧನಕ್ಕೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ, ಆಡಳಿತ ಮಂಡಳಿ, ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಇವರು ಪತ್ನಿ ಜ್ಯೋತಿ, ಪುತ್ರಿ ವೀಕ್ಷಣಾ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

BELTHANGADY

ಇಂದಿನಿಂದ ಬೆಳ್ತಂಗಡಿಯ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ

Published

on

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಳ್ತಂಗಡಿಯ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

 

ಜಮಲಾಬಾದ್ ಗಡ (ಗಡಾಯಿಕಲ್ಲು), ಬಂಡಾಜೆ, ಬೊಳ್ಳೆ, ದಿಡುಪೆ ಜಲಪಾತ ಪ್ರವಾಸಿ ತಾಣಗಳಿಗೆ ಜೂ.16ರಿಂದ ಮುಂದಿನ ಆದೇಶದವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

READ IN ENGLISH : https://www.nammakudlaenglish.com/entry-to-tourist-spots-in-belthangady-banned-from-today/

ಇದನ್ನೂ ಓದಿ: ಉಡುಪಿ: ಮಲಗಿದ್ದಾತನ ಮೇಲೆ ಕತ್ತಿಯಿಂದ ಹ*ಲ್ಲೆ ನಡೆಸಿದ ದುಷ್ಕರ್ಮಿ

Continue Reading

DAKSHINA KANNADA

ಸುರತ್ಕಲ್-ನಂತೂರು ಜಂಕ್ಷನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿ ನಿಗದಿ

Published

on

ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಸುರತ್ಕಲ್-ನಂತೂರು ಜಂಕ್ಷನ್‌ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿಯನ್ನು ಗಂಟೆಗೆ 50 ಕಿಲೋ ಮೀಟರ್‌ ಗೆ ನಿಗದಿಪಡಿಸಲಾಗಿದೆ. ಈ ಮಿತಿ ಸಪ್ಟೆಂಬರ್‌ ಅಂತ್ಯದ ವರೆಗೆ ಚಾಲ್ತಿಯಲ್ಲಿ ಇರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಅತಿವೃಷ್ಟಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳು ಕೆಟ್ಟು ಹೋಗಿವೆ. ಹಾಗಾಗಿ ಅಂತಹ ಭಾಗಗಳು ಅತಿ ವೇಗದ ಚಾಲನೆಗೆ ಸುರಕ್ಷಿತವಾಗಿಲ್ಲ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಸಾಧ್ಯವಾದಷ್ಟು ಎಲ್ಲೆಲ್ಲಿ ಸರ್ವೀಸ್‌ ರಸ್ತೆಗಳಿವೆಯೋ ಅಲ್ಲಿ ಅದನ್ನೇ ಬಳಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.

READ IN ENGLISH : https://www.nammakudlaenglish.com/speed-limit-imposed-on-surathkal-nanthur-junction-national-highway/

ಇದನ್ನೂ ಓದಿ: ಭಾರೀ ಮಳೆಗೆ ಕದ್ರಿ ಕೈಬಟ್ಟಲ್ ಪರಿಸರದಲ್ಲಿ ಮನೆ ಮೇಲೆ ಗುಡ್ಡ ಕುಸಿತ

ಸುರತ್ಕಲ್‌- ನಂತೂರು ನಡುವಣ ಹೆದ್ದಾರಿ ಕೆಟ್ಟು ಹೋಗಿದ್ದು, ಘನ ವಾಹನ, ಲಘುವಾಹನ, ದ್ವಿಚಕ್ರ, ತ್ರಿಚಕ್ರ ಸೇರಿದಂತೆ ಎಲ್ಲಾ ವಾಹನಗಳು ಈ ಹೆದ್ದಾರಿಯನ್ನೇ ಬಳಸುತ್ತಿವೆ. ಕೆಲವೊಮ್ಮೆ ಹೊಂಡ ತಪ್ಪಿಸಲು ವಾಹನಗಳು ಅಡ್ಡಾದಿಡ್ಡಿ ಸಂಚರಿಸಿ ಅಪಘಾತಕ್ಕೆ ಕಾರಣವಾಗುತ್ತಿವೆ.

ಈ ಕಾರಣಕ್ಕಾಗಿ ಸರ್ವೀಸ್‌ ರಸ್ತೆ ಇರುವ ಪಣಂಬೂರು, ಸುರತ್ಕಲ್‌, ಬೈಕಂಪಾಡಿ, ಕೂಳೂರು ಭಾಗಗಳಲ್ಲಿ ಈ ಸರ್ವೀಸ್‌ ರಸ್ತೆಯನ್ನೇ ಬಳಸಿ ದ್ವಿಚಕ್ರ ವಾಹನಗಳು ಸಂಚರಿಸುವುದು ಸೂಕ್ತ ಎಂದು ಎನ್ಎಚ್ಎಐ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

DAKSHINA KANNADA

ಭಾರೀ ಮಳೆಗೆ ಕದ್ರಿ ಕೈಬಟ್ಟಲ್ ಪರಿಸರದಲ್ಲಿ ಮನೆ ಮೇಲೆ ಗುಡ್ಡ ಕುಸಿತ

Published

on

ಮಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಹಲವು ಕಡೆಗಳಲ್ಲಿ ಅಪಾರ ಹಾನಿಗೂ ಕಾರಣವಾಗಿದೆ. ನಗರದ ಕದ್ರಿ ಕೈಬಟ್ಟಲ್ ಎಂಬಲ್ಲಿ ಮನೆಯ ಒಂದು ಭಾಗ ಕುಸಿತಕ್ಕೊಳಗಾಗಿದೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ: ಅಡುಗೆ ಎಣ್ಣೆ ಬೆಲೆ 3-4ರೂ. ದಿಢೀರ್ ಹೆಚ್ಚಳ

ಉಷಾ ಅಶೋಕ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಯ ಅಡುಗೆ ಕೋಣೆಯಲ್ಲಿ ಗೋಡೆ ಕುಸಿತಕ್ಕೊಳಗಾಗಿದೆ. ಮನೆಯ ಹಲವು ಸಾಮಾಗ್ರಿಗೆ ಹಾನಿ ಉಂಟಾಗಿದೆ.

ಮನೆಯಲ್ಲಿ ಜನರಿದ್ದ ವೇಳೆ ಅಡುಗೆ ಕೋಣೆಯಲ್ಲಿ ಗೋಡೆ ಕುಸಿತವಾಗಿದ್ದರೂ ಮನೆ ಮಂದಿ ಪ್ರಾಣಾಪಾಯದಿಂದ ಪಾರು ಆಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page