Connect with us

LATEST NEWS

ಉಡುಪಿ: ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ

Published

on

ಉಡುಪಿ : ಕೆಲವರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗವು ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ಮಚ್ಚೀಂದ್ರ ಅವರಿಗೆ ಮನವಿ ಸಲ್ಲಿಸಿತು.

ಬೆಂಗಳೂರು ಇದರ ಅಧೀನ ಸಂಸ್ಥೆಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುಮಾರು 170 ಮಂದಿ ಸದಸ್ಯರು ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಿ ಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಜಿಲ್ಲೆಯಲ್ಲಿ ಕೆಲವು ವ್ಯಕ್ತಿಗಳು ಪತ್ರಕರ್ತರ ಸಂಘ ಮತ್ತು ಪತ್ರಕರ್ತರ ಹೆಸರು ಹೇಳಿ ಹಣ ಸಂಗ್ರಹಿಸುವ, ವಸೂಲಿ ಮಾಡುವ ಹಾಗೂ ಬೆದರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವುದು ಸಂಘದ ಗಮನಕ್ಕೆ ಬಂದಿದೆ.

ಯಾವುದೇ ಪತ್ರಿಕೆ ಹಾಗೂ ಟಿವಿಯಲ್ಲಿ ಸುದ್ದಿ ಪ್ರಕಟಿಸಲು ಅಥವಾ ಪ್ರಸಾರ ಮಾಡಲು ಹಣ ನೀಡಬೇಕಾದ ಅಗತ್ಯ ಇರುವುದಿಲ್ಲ. ಆದರೂ ಕೆಲವು ನಕಲಿ ಪತ್ರಕರ್ತರು ಸುದ್ದಿಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿರುವ ಬಗ್ಗೆ ಸಂಘಕ್ಕೆ ದೂರುಗಳು ಬಂದಿವೆ. ಈ ರೀತಿ ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿಗೆ ಇಳಿಯುವ ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅದೇ ರೀತಿ ಪ್ರಸ್ತುತ ಚುನಾವಣೆ ಪ್ರಯುಕ್ತ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ಕಾರ್ಯದಲ್ಲಿ ತೊಡಗಿದ್ದು, ಈ ಹಿನ್ನೆಲೆಯಲ್ಲಿ ಕೆಲವು ವ್ಯಕಿತಿಗಳು ತಮ್ಮ ವಾಹನಗಳಿಗೆ ಮಿಡಿಯಾ, ಪ್ರೆಸ್ ಸ್ಟಿಕ್ಕರ್ ಹಾಕಿಕೊಂಡು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಸಂಘಕ್ಕೆ ದೂರುಗಳು ಬಂದಿವೆ. ಈ ರೀತಿಯ ವಾಹನಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ತಪಾಸಣೆ ಮಾಡಬೇಕು ಮತ್ತು ಅದರಲ್ಲಿ ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದರೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

‘ನಮ್ಮ ಸಂಘದಿಂದ ನಮ್ಮ ಸದಸ್ಯರುಗಳಿಗೆ ಗುರುತಿನ ಚೀಟಿ ಮತ್ತು ವಾಹನ ಗಳಿಗೆ ಅಧಿಕೃತ ಮಿಡಿಯಾ ಸ್ಟಿಕ್ಕರನ್ನು ನೀಡಲಾಗಿದೆ. ಪತ್ರಕರ್ತರ ಹೆಸರಿನಲ್ಲಿ ಯಾರೇ ಹಣ ವಸೂಲಿಗೆ ಬಂದರೆ ಅಂತಹವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಿಗೆ ದೂರು ನೀಡಬೇಕು ಮತ್ತು ನಮ್ಮ ಸಂಘದ ಗಮನಕ್ಕೂ ತರಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ತಿಳಿಸಿದ್ದಾರೆ.

ನಿಯೋಗದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಜತೆ ಕಾರ್ಯದರ್ಶಿಗಳಾದ ರಹೀಂ ಉಜಿರೆ, ಪ್ರಮೋದ್ ಸುವರ್ಣ, ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಪುಂಡಲೀಕ ಮರಾಠೆ, ಜಿಲ್ಲಾ ಸಮಿತಿ ಸದಸ್ಯರಾದ ಮೈಕಲ್ ರೋಡಿಗ್ರಸ್, ಹರೀಶ್ ಬಲಾಯಿಪಾದೆ, ಸಂಘದ ಸದಸ್ಯರಾದ ಶಶಿಧರ ಮಾಸ್ತಿಬೈಲು, ದೀಪಕ್ ಜೈನ್, ದಿನೇಶ್ ಎಂ.ಎಚ್., ಚೇತನ್ ಮಟಪಾಡಿ, ಅಶ್ವತ್ ಆಚಾರ್ಯ, ಜಸ್ಟಿನ್ ಡಿಸಿಲ್ವ, ಗೋಪಾಲಕೃಷ್ಣ ಪಾದೂರು, ರಕ್ಷಿತ್ ಬೆಳಪು, ನಾಗರಾಜ ರಾವ್, ಬಾಲಚಂದ್ರ ಎಚ್. ಮೊದಲಾದವರು ಉಪಸ್ಥಿತರಿದ್ದರು

LATEST NEWS

ಈ ದೇಶದಲ್ಲಿ ಪ್ರೇಮಿಗಳ ದಿನದಂದು ಹುಡುಗಿಯರು ಹುಡುಗರಿಗೆ ಉಡುಗೊರೆಗಳನ್ನು ನೀಡುತ್ತಾರೆ !

Published

on

ಪ್ರಪಂಚದಾದ್ಯಂತ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಅನೇಕ ಜನರು ಈ ದಿನ ತಮ್ಮ ಪ್ರೀತಿಯ ಸಂದೇಶಗಳೊಂದಿಗೆ ಕಾರ್ಡ್‌ಗಳು, ಹೂವುಗಳು ಅಥವಾ ಚಾಕೊಲೇಟ್‌ಗಳನ್ನು ಕಳುಹಿಸುವ ಮೂಲಕ ಇನ್ನೊಬ್ಬರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಈ ಒಂದು ದೇಶದಲ್ಲಿ ಹುಡುಗಿಯರು ಹುಡುಗರಿಗೆ ಉಡುಗೊರೆಗಳನ್ನು ನೀಡುತ್ತಾರೆ.

ವ್ಯಾಲೆಂಟೆನ್ಸ್ ಡೇ ಬಹಳ ಜನಪ್ರಿಯವಾದ ದಿನವಾಗಿದೆ. ಪ್ರೀತಿಪಾತ್ರರ ನಡುವೆ ಈ ದಿನದಂದು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಪ್ರೇಮಿಗಳ ದಿನದಂದು ಹೆಚ್ಚಾಗಿ ಹುಡುಗರು ಹುಡುಗಿಯರಿಗೆ ಗಿಫ್ಟ್‌ಗಳನ್ನು ಕೊಡುತ್ತಾರೆ. ಆದರೆ, ಜಪಾನ್ ದೇಶದಲ್ಲಿ ಹುಡುಗಿಯರು ಹುಡುಗರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಇದರ ಬದಲಾಗಿ ಹುಡುಗರು ಹುಡುಗಿಯರು ಇಷ್ಟಪಡದ ವಸ್ತುಗಳನ್ನು ಹಿಂತಿರುಗಿಸಬೇಕು.

ಇದನ್ನೂ ಓದಿ: ಗೆಳತಿಗಾಗಿ ಕಳ್ಳನಾದ ಎಂಎಲ್ಎ ಮಗ !

ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 14ರಂದು ಅಲ್ಲಿನ ಜನರು ತಮ್ಮ ತಮ್ಮ ಪ್ರೀತಿಪಾತ್ರರ ಹೆಸರನ್ನು ಹೃದಯದ ಆಕಾರದಲ್ಲಿ ಭುಜದ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇನ್ನು ಎಲ್ಲಾ ದೇಶಗಳಲ್ಲೂ ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಿದರೆ, ಬ್ರೇಜಿಲ್‌ನಲ್ಲಿ ಜೂನ್ 12 ರಂದು ವ್ಯಾಲೆಂಟೆನ್ಸ್ ಡೇ ಆಚರಿಸುತ್ತಾರೆ. ಫಿಲಿಪೈನ್ಸ್ ದೇಶದಲ್ಲಿ ಸರ್ಕಾರದ ಆಶ್ರಯದಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತವೆ.

Continue Reading

LATEST NEWS

ಗ್ರಿಲ್ಡ್ ಚಿಕನ್ ತಿಂದು 22 ಜನರು ಆಸ್ಪತ್ರೆಗೆ ದಾಖಲು

Published

on

ತಮಿಳುನಾಡು: ಹೋಟೆಲ್‌ನಲ್ಲಿ ಗ್ರಿಲ್ಡ್ ಚಿಕನ್ ತಿಂದು 22 ಜನ ಆಸ್ಪತ್ರೆಗೆ ದಾಖಲಾದ ಘಟನೆ ತಮಿಳುನಾಡಿನ ಮಧುರೈ ಚೋಳವಂಧನ್‌ನಲ್ಲಿ ನಡೆದಿದೆ.

ಮಧುರೈನ ಹೋಟೆಲ್‌ವೊಂದರಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ಇತ್ತು. ಇಲ್ಲಿ ಯಾವಾಗಲೂ ಜನಸಂಖ್ಯೆಯಿಂದಲೇ ಹೋಟೆಲ್ ತುಂಬಿಕೊಳ್ಳುತ್ತಿತ್ತು. ನಿನ್ನೆ ರಾತ್ರಿ ಬಾಸ್ಕೆಟ್ ಬಾಲ್ ಆಡಲು ಮಧುರೈಗೆ ಬಂದಿದ್ದ ಪ್ರಸನ್ನ ಎಂಬ ಆಟಗಾರ ತನ್ನ 10 ಜನ ಸ್ನೇಹಿತರೊಂದಿಗೆ ಈ ಹೋಟೆಲ್‌ನಲ್ಲಿ ಗ್ರಿಲ್ಡ್ ಚಿಕನ್ ತಿಂದಿದ್ದರು. ಇದನ್ನು ತಿಂದ ಬಳಿಕ ಅವರಲ್ಲಿ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಹಾಗೆಯೇ ಗ್ರಿಲ್ಡ್ ಚಿಕನ್ ತಿಂದ ಉಳಿದವರಿಗೂ ಇದೇ ರೀತಿ ಆಗಿ ಅಸ್ವಸ್ಥಗೊಂಡಿದ್ದಾರೆ.

ಹುಷಾರ್‌ ಇಲ್ಲದೇ ಆದ ಎಲ್ಲರನ್ನೂ ಮಧುರೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Continue Reading

LATEST NEWS

ChatGPT, DeepSeek ಬ್ಯಾನ್; ಹಣಕಾಸು ಸಚಿವಾಲಯದಿಂದ ಸುತ್ತೋಲೆ

Published

on

ಮಂಗಳೂರು/ನವದೆಹಲಿ : ಸದ್ಯ ಎಲ್ಲೆಡೆ ಚಾಟ್ ಜಿಪಿಟಿ, ಡೀಪ್ ಸೀಕ್‌ನದ್ದೇ ಸದ್ದು. ಆದರೆ, ಇಂತಹ  ಕೃತಕ ಬುದ್ಧಿಮತ್ತೆ ಟೂಲ್‌ಗಳ ಬಳಕೆಯನ್ನು ಹಣಕಾಸು ಸಚಿವಾಲಯ ನಿಷೇಧಿಸಿದೆ. AI ಭದ್ರತಾ ನೀತಿಗಳನ್ನು ಬಿಗಿಗೊಳಿಸಿರುವ ಹಣಕಾಸು ಸಚಿವಾಲಯ ಸರ್ಕಾರದ ಡೇಟಾ ಹಾಗೂ ಕಡತಗಳ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ.

ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರ ಅನುಮೋದನೆಯೊಂದಿಗೆ ಹೊರಡಿಸಲಾದ ಈ ನಿರ್ದೇಶನ ಸಚಿವಾಲಯದ ಜಾಲದಲ್ಲಿ ಬಳಸಲಾಗುವ ಎಲ್ಲಾ AI-ಚಾಲಿತ ಅಪ್ಲಿಕೇಶನ್‌ಗಳಿಗೆ ಅನ್ವಯಿಸುತ್ತದೆ.  ಸರ್ಕಾರಿ ಇಲಾಖೆಗಳ ಡಿವೈಸ್ ಗಳಲ್ಲಿ ಮಾತ್ರ ChatGPT, DeepSeek ಗಳ ಬಳಕೆಗೆ ನಿಷೇಧ ಅನ್ವಯವಾಗುತ್ತದೆ.

ಈ ಬಗ್ಗೆ ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಇಲಾಖೆಗಳಿಗೆ ಆದೇಶದ ಪ್ರತಿಯನ್ನು ರವಾನಿಸಲಾಗಿದೆ.

ಇದನ್ನೂ ಓದಿ : ಬಿಗ್‌ಬಾಸ್‌ ಸೀಸನ್-11 ರಲ್ಲಿ ಅತೀ ಕಡಿಮೆ ಸಂಬಳ ಪಡೆದ ಸ್ಪರ್ಧಿ ಇವರೇ ನೋಡಿ..!

AI ಟೂಲ್ ಗಳು ಸರ್ಕಾರಿ ಡೇಟಾದ ಗೌಪ್ಯತೆಗೆ ಅ*ಪಾಯವನ್ನುಂಟು ಮಾಡುತ್ತವೆ ಎಂದು ಪತ್ರದಲ್ಲಿ ಹೇಳಲಾಗಿದ್ದು, ಅಧಿಕೃತ ಸಾಧನಗಳಲ್ಲಿ ಅವುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕೆಂದು ಸಲಹೆ ನೀಡಿದೆ. ಎಲ್ಲಾ ಇಲಾಖೆಗಳ ಉದ್ಯೋಗಿಗಳಿಗೆ ನಿರ್ದೇಶನವನ್ನು ಪಾಲಿಸಲು ಸೂಚಿಸಲಾಗಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page