Connect with us

LATEST NEWS

Udupi: ಶಿಕ್ಷಕರ ವರ್ಗಾವಣೆಗೆ ಖಂಡನೆ :ಬ್ರಹ್ಮಾವರದ ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಗ್ರಾಮಸ್ಥರು..!

Published

on

ಶಿಕ್ಷಕರ ವರ್ಗಾವಣೆ ವಿರೋಧಿಸಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ. 

ಉಡುಪಿ : ಶಿಕ್ಷಕರ ವರ್ಗಾವಣೆ ವಿರೋಧಿಸಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.

ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಒಟ್ಟು ಎಂಭತ್ತು ವಿದ್ಯಾರ್ಥಿಗಳು ಕಲಿಯುತ್ತಿದ್ದು ಈ ಮುಂಚೆ ಮೂರು ಶಿಕ್ಷಕರಿದ್ದರು.

ಇದೀಗ ಅವರಲ್ಲಿ ಒರ್ವ ಶಿಕ್ಷಕರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದ್ದು ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ‌ಮುಖಂಡ ರಮೇಶ್ ತಿಂಗಳಾಯ, ಸರಕಾರಿ ಶಾಲೆಯನ್ನು ನೇರವಾಗಿ ಮುಚ್ಚದೆ ಹಿಂಬದಿಯಿಂದ ಮುಚ್ಚಲು ಪ್ರಯತ್ನಿಸಲಾಗುತ್ತಿದೆ‌.

ಶಿಕ್ಷಣಾಧಿಕಾರಿಗಳಿಗೆ, ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಆಸಕ್ತಿ ಇದ್ದರೆ ಅವರು ಸರಕಾರಿ ಶಾಲೆಯನ್ನು ದತ್ತು ಪಡೆದು‌ ಅಭಿವೃದ್ದಿ ಪಡಿಸಲಿ ಅದು ಬಿಟ್ಟು ಶಿಕ್ಷಣವನ್ನು ಇಂದು ಉದ್ಯೋಗಕ್ಕಾಗಿ ಬಳಸಲಾಗುತ್ತಿದೆ ಇದು ಖೇದಕರ ಎಂದರು.

ಸರಕಾರಿ ಶಾಲೆಗೆ ಶಿಕ್ಷಕರನ್ನು ಕೊಡುತ್ತಿಲ್ಲ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ.

ಈ ಮುಂಚೆ ಕೌನ್ಸಿಲಿಂಗ್ ನಡೆಸುವಾಗ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ನಮ್ಮನ್ನು ಬಂಧಿಸುವ ಪ್ರಯತ್ನ ನಡೆದಿತ್ತು.

ನ್ಯಾಯಯುತವಾದ ಬೇಡಿಕೆಯಿಟ್ಟಾಗ ನಮ್ಮನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಮತ್ತೆ ನಮ್ಮ ಶಿಕ್ಷಕರೊಬ್ಬರನ್ನು ವರ್ಗಾವಣೆ ಮಾಡಲು ಸರಕಾರ ಮುಂದಾಗಿದೆ.

ಎಂಭತ್ತು ಮಕ್ಕಳು ಎರಡು ಶಿಕ್ಷಕರಿಂದ ಕಲಿಯುವುದು ಹೇಗೆ ಎಂದು‌ ಪ್ರಶ್ನಿಸಿದ ಅವರು ನಮಗೆ ನ್ಯಾಯ ದೊರಕಿಸಿಕೊಡಬೇಕು.

ಏಳು ಶಿಕ್ಷಕರು ಈ ಶಾಲೆಗೆ ಬರಬೇಕು. ಬಡ ಕೂಲಿ ಕಾರ್ಮಿಕರ ಮಕ್ಕಳು, ಮೀನುಗಾರರ ಮಕ್ಕಳು ಶಿಕ್ಷಣ ವಂಚಿತರಾಗುದರಿಂದ ತಡೆಯಬೇಕು. ಅಲ್ಲಿಯವರೆಗೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದರು.

ಎರಡು ಗ್ರಾಮಕ್ಕೆ ಒಂದು ಶಾಲೆ

ಉಡುಪಿ ಜಿಲ್ಲೆಯ ಬ್ರಹ್ಮಾವರ ವಲಯಕ್ಕೆ ಸಂಬಂದಪಟ್ಟ ಮೂರು ಕಡೆ ಜಲಾವತದಿಂದ ಅವ್ರತಗೊಂಡಿರುವ ಏಕೈಕ ಭೂ ಸಂಪರ್ಕ ಇರುವ ವಿಶೇಷ ಗ್ರಾಮವಾದ ನಮ್ಮ ಕೋಡಿ ಬೆಂಗೆ ಶಾಲೆಗೆ 98 ವರ್ಷ ಇತಿಹಾಸ ಇರುವ ಶಾಲೆಯಲ್ಲಿ ಈಗ ಕೇವಲ ಮೂರು ಜನ ಖಾಯಂ ಶಿಕ್ಷಕರಿದ್ದು 1ರಿಂದ 7ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆಯನ್ನು ಮಾಡುತ್ತಿದ್ದಾರೆ.

ಆದರೆ, ಕಳೆದ ವರ್ಷದಿಂದ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯ ನೆಪ ಒಡ್ಡಿ ಮೂರು ಜನ ಶಿಕ್ಷಕರಲ್ಲಿ ಒಬ್ಬರನ್ನು ವರ್ಗಾವಣೆ ಮಾಡುವುದನ್ನು ಗ್ರಾಮದವರು ಮಕ್ಕಳ ಹಿತದೃಷ್ಟಿಯಿಂದ ಸಂಬಂಧ ಪಟ್ಟವರಿಗೆ ಮನವಿ ನೀಡಿ ವಿರೋಧ ವ್ಯಕ್ತಪಡಿಸಿದ್ದೇವೆ.

ಆವಾಗ ವರ್ಗಾವಣೆಯ ಪ್ರಕ್ರಿಯೆ ತಾತ್ಕಾಲಿಕವಾಗಿ ಕೆಲವೊಂದು ಕಾರಣದಿಂದ ತಡೆಹಿಡಿದಿದ್ದೀರಿ. ತದನಂತರದಲ್ಲಿ ಈ ವರ್ಷದಲ್ಲಿ ಕೊರತೆ ಇರುವ ಶಿಕ್ಷಕರನ್ನು ನೀಡದೆ ಪಾರಂಭದ ಹಂತದಲ್ಲಿಯೇ ಕಳೆದ ವರ್ಷದಂತೆ ಪುನಃ ಹೆಚ್ಚುವರಿ ಶಿಕ್ಷಕರು ಎಂಬ ನೆಪ ಒಡ್ಡಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸುವ ಸೂಚನೆ ಸಿಕ್ಕಿರುತ್ತದೆ.

ಇದರಿಂದ ಶಾಲೆಯ ಶೈಕ್ಷಣಿಕ ಸ್ಥಿತಿ ಮತ್ತಷ್ಟು ಕೆಳಗಿಳಿಯುತ್ತದೆ. ಇಂತಹ ಕಾನೂನುಗಳಿಂದ ಸರಕಾರಿ ಶಾಲೆ ಮುಚ್ಚುವಂತಾಗುತ್ತದೆ ಹೊರತು ಅಭಿವೃದ್ಧಿಯಾಗಲಾರದು.

ಇದಕ್ಕೆ ಉದಾಹರಣೆಯಾಗಿ ನಮ್ಮ ಪಕ್ಕದ ಗ್ರಾಮವಾದ ಪಡುತೋನ್ಸೆ ಬೆಂಗ್ರೆಯಲ್ಲಿದ್ದ ಶಾಲೆಯು ಮುಚ್ಚಿರುತ್ತದೆ. ಈಗ ನಮ್ಮ ಎರಡೂ ಗ್ರಾಮಕ್ಕೆ ಇದೊಂದೇ ಶಾಲೆ ಉಳಿದಿರುವುದು, ನಾವು ಪೋಷಕರು ಶಿಕ್ಷಕರ ಮೇಲಿನ ಭರವಸೆಯಿಂದ ಹಾಗೂ ನಮ್ಮೂರ ಶಾಲೆಯ ಮಕ್ಕಳ ಸಂಖ್ಯೆ 21ಕ್ಕೆ ಇಳಿದು ಶಾಲೆ ಅಳಿವಿನ ಅಂಚಿನಲ್ಲಿರುವ ಸಮಯದಲ್ಲಿ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಿಂದ ಬಿಡಿಸಿ ಇಲ್ಲಿಗೆ ಸೇರ್ಪಡೆ ಮಾಡಿದ್ದರಿಂದ 21 ಇದ್ದ ಮಕ್ಕಳ ಸಂಖ್ಯೆ 72ಕ್ಕೆ ಏರಿತು, ತದನಂತರ ನಾಲ್ಕು ಖಾಯಂ ಶಿಕ್ಷಕರಲ್ಲಿ ಒಬ್ಬ ಶಿಕ್ಷಕರು ಬೇರೆ ಶಾಲೆಗೆ ವರ್ಗಾವಣೆಗೊಂಡು ಅವರ ಬದಲಿಗೆ ಇನ್ನೂ ಕೂಡ ಯಾವುದೇ ಶಿಕ್ಷಕರು ನಮ್ಮ ಶಾಲೆಗೆ ಬಂದಿರುವುದಿಲ್ಲ.

ಅಲ್ಲದೆ 2020-2021ನೇ ಸಾಲಿನ ಸ್ಯಾಟ್ ಅಂಕಿ ಅಂಶದ ಪ್ರಕಾರ ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದುದರಿಂದ ಇದರ ಆಧಾರದ ಮೇಲೆ ಈಗ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಮಾಡುವುದು ಎಷ್ಟು ಸರಿ ? ಏಕೆಂದರೆ ಈಗ 22022-2023ರ ಸ್ಯಾಟ್ ಅಂಕಿ ಅಂಶದ ಪ್ರಕಾರ ಮಕ್ಕಳ ಸಂಖ್ಯೆ 67 ಇದೆ.

ಶಿಕ್ಷಕರ ಕೊರತೆಯ ಕಾರಣದಿಂದ ನಮ್ಮ ಮಕ್ಕಳ ಭವಿಷ್ಯ ಚಿಂತಾಜನಕವಾಗಿದೆ ಹಾಗೂ ಊರಿನಲ್ಲಿರುವ ಒಂದೇ ಒಂದು ಶಾಲೆಯು ಮುಂದಿನ ದಿನಗಳಲ್ಲಿ ಮುಚ್ಚುವ ಸಂಭವವಿರುತ್ತದೆ ಆದುದರಿಂದ ತಾವು ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಕೈಬಿಡಬೇಕು.

ಅಲ್ಲದೆ ಇಲ್ಲಿ 1 ರಿಂದ 7ನೇ ತರಗತಿಯವರೆಗೆ ಇರುವುದರಿಂದ ಇನ್ನೂ 4 ಶಿಕ್ಷಕರನ್ನು ನೀಡಬೇಕು.

ಅಲ್ಲದೆ ಈಗ ಶಿಕ್ಷಣದ ಇಲಾಖೆಯಲ್ಲಿರುವ ಕಾನೂನನ್ನು ಸರಕಾರಿ ಶಾಲೆಯನ್ನು ಉಳಿಸುವ ರೀತಿಯಲ್ಲಿ ಬದಲಾವಣೆ ಮಾಡಬೇಕೆಂದು ಪೋಷಕರಾದ ನಾವು ಈ ಮೂಲಕ ವಿನಂತಿಸುತ್ತಿದ್ದೇವೆ ಎಂದಿದ್ದಾರೆ.

2021-22ರಲ್ಲಿ ವರ್ಗಾವಣೆಯಾದ ಶಿಕ್ಷಕರ ಬದಲಿಗೆ ಇನ್ನೋರ್ವ ಶಿಕ್ಷಕರನ್ನು ದಿನಾಂಕ 15/06/2023ರೊಳಗೆ ನೀಡದೆ ಇದ್ದಲ್ಲಿ 16/06/2023ರಿಂದ ಅನಿರ್ದಿಷ್ಟ ಕಾಲದವರೆಗೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದು.

ಇದರಿಂದಾಗುವ ಮಕ್ಕಳ ಶೈಕ್ಷಣಿಕ ತೊಂದರೆಗೆ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಸರಕಾರ ನೇರಾ ಹೊಣೆಯಾಗಲಿದೆ.

ಆದ್ದರಿಂದ ಶೈಕ್ಷಣಿಕವಾಗಿ ಇರುವ ಎಲ್ಲಾ ಕಾನೂನುನ್ನು ಮರುಪರಿಶೀಲಿಸುವವರೆಗೆ ವರ್ಗಾವಣೆ ಪ್ರಕ್ರಿಯೆಯನ್ನು ತಡೆ ಹಿಡಿದು ಶಾಲೆಯ ಉಳಿಯುವಿಗಾಗಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

LATEST NEWS

ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

Published

on

ಮಂಗಳೂರು/ರಾಮನಗರ : ಹಾಲಿನ ಟ್ಯಾಂಕರ್‌ ಗೆ ಹಿಂಬದಿಯಿಂದ ಡಿ*ಕ್ಕಿಯಾಗಿ ಕಾರೊಂದು ಹೊ*ತ್ತಿ ಉರಿದ ಘಟನೆ ರಾಮನಗರದ ಸಂಗಬಸವನದೊಡ್ಡಿ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಡಸ್ಟರ್ ಕಾರು ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ವೇಗವಾಗಿ ಹೋಗುತ್ತಿದ್ದ ಚಾಲಕ ಸಂಗಬಸವನದೊಡ್ಡಿ ಬಳಿ ನಿಯಂತ್ರಣ ಕಳೆದುಕೊಂಡು ಮುಂದಿನಿಂದ ಹೋಗುತ್ತಿದ್ದ ಹಾಲಿನ ಟ್ಯಾಂಕರ್‌ ಗೆ ಗು*ದ್ದಿದ್ದಾನೆ. ಕೂಡಲೇ ಕಾರಿನಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳತೊಡಗಿದೆ. ಅಪಾಯ ಅರಿತ ಕಾರಿನಲ್ಲಿದ್ದವರು ತಕ್ಷಣ ಕೆಳಕ್ಕಿಳಿದು ದೂರಕ್ಕೆ ಓಡಿದ್ದಾರೆ.  ಅದಾದ ಕೆಲವೇ ಕ್ಷಣದಲ್ಲಿ ಕಾರಿನಲ್ಲಿ ಬೆಂ*ಕಿ ಕಾಣಿಸಿಕೊಂಡು ಹೊ*ತ್ತಿ ಉ*ರಿದಿದೆ.

ಇದನ್ನೂ ಓದಿ : ಇಂದೆಂಥ ದುರವಸ್ಥೆ! 108 ಆ್ಯಂಬುಲೆನ್ಸ್ ಸಿಗದೆ ಪರದಾಟ; ಗೂಡ್ಸ್ ಟೆಂಪೋ ಮೂಲಕ ರೋಗಿ ಆಸ್ಪತ್ರೆಗೆ!

ಸ್ಥಳಕ್ಕೆ ಬಂದ ಅ*ಗ್ನಿಶಾಮಕ ದಳದ ಸಿಬ್ಬಂದಿ ಬೆಂ*ಕಿ ನಂದಿಸಿದ್ದಾರೆ. ಕಾರು ಸು*ಟ್ಟು ಕರಕಲಾಗಿದ್ದು, ಟ್ಯಾಂಕರ್‌ ನ ಹಿಂಭಾಗ ಜಖಂಗೊಂಡಿದೆ.  ಘಟನೆ ಬಗ್ಗೆ ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಇಂದೆಂಥ ದುರವಸ್ಥೆ! 108 ಆ್ಯಂಬುಲೆನ್ಸ್ ಸಿಗದೆ ಪರದಾಟ; ಗೂಡ್ಸ್ ಟೆಂಪೋ ಮೂಲಕ ರೋಗಿ ಆಸ್ಪತ್ರೆಗೆ!

Published

on

ಉಡುಪಿ : ತೀವ್ರ ಅಸ್ವಸ್ಥಗೊಂಡಿದ್ದ ವೃದ್ಧ ರೋಗಿಯೊಬ್ಬರಿಗೆ  ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ತನ್ನ ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಿದ ಆಘಾತಕಾರಿ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.

ರೋಗಿಗೆ ಸಂಬಂಧಪಟ್ಟವರು ರಾತ್ರಿ 7 ಗಂಟೆಗೆ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, 9.30 ಆದರೂ ಆ್ಯಂಬುಲೆನ್ಸ್ ಲಭ್ಯವಾಗಿಲ್ಲ. ಹೀಗಾಗಿ ಅವರು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿಯವರನ್ನು ಸಂಪರ್ಕಿಸಿದ್ದಾರೆ. ರೋಗಿಯ ಚಿಂತಾಜನಕ ಸ್ಥಿತಿ ಕಂಡ ವಿಶು ಶೆಟ್ಟಿ ಬೇರೆ ದಾರಿ ಕಾಣದೆ ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇರಿಸಿ ಅದರಲ್ಲಿ ರೋಗಿಯನ್ನು ಮಲಗಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ.

ಇದನ್ನೂ ಓದಿ : ಸುರತ್ಕಲ್‌: ದೇವರಿಗೆ ಕೈಮುಗಿವ ನೆಪದಲ್ಲಿ ಭಕ್ತರೊಬ್ಬರ ಬ್ಯಾಗಿಗೆ ಕನ್ನ ಹಾಕಿದ ಕಳ್ಳ

ಕಳೆದ ಒಂದು ವರ್ಷದಿಂದ 108 ಆ್ಯಂಬುಲೆನ್ಸ್  ಸಮಸ್ಯೆ ತಲೆದೋರುತ್ತಿದ್ದು, ಇನ್ನೂ ಪರಿಹಾರ ಕಂಡಿಲ್ಲ. ಇನ್ನಾದರೂ ಸರ್ಕಾರ, ಜಿಲ್ಲಾಡಳಿತ ಕ್ರಮ ಕೈಗೊಂಡು ಸಹಕರಿಸಿ.  ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು  ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.

Continue Reading

DAKSHINA KANNADA

ಸುರತ್ಕಲ್‌: ದೇವರಿಗೆ ಕೈಮುಗಿವ ನೆಪದಲ್ಲಿ ಭಕ್ತರೊಬ್ಬರ ಬ್ಯಾಗಿಗೆ ಕನ್ನ ಹಾಕಿದ ಕಳ್ಳ

Published

on

ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಬಳಿ ಇರುವ ದೇವಸ್ಥಾನದಲ್ಲಿ ಶನಿವಾರ ಸಂಜೆ ಅಪರಿಚಿತನೊಬ್ಬ ಭಕ್ತನ ನೋಗಿನಲ್ಲಿ ಆಗಮಿಸಿ ಕಳವು ಕ್ಯತ್ಯ ಎಸಗಿದ್ದಾನೆ.

ದೇವಸ್ಥಾನ ಒಳಗೆ ಬಂದಿದ್ದ ಈತ ದೇವಸ್ಥಾನಕ್ಕೆ ಬಂದು ಅಲ್ಲಿ ಭಕ್ತರೊಬ್ಬರು ಇಟ್ಟಿದ್ದ ಬ್ಯಾಗಿನಿಂದ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾನೆ.

ದೇವರಿಗೆ ಕೈಮುಗಿವ ನೆಪದಲ್ಲಿ ಬ್ಯಾಗಿನ ಪಕ್ಕದಲ್ಲೇ ನಿಂತು ಹಣವನ್ನು ಕಳವು ಮಾಡಿದ್ದಾನೆ. ದೇವಸ್ಥಾನದ ಒಳಗಡೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆತನ ಕಳವು ಕೃತ್ಯದ ದೃಶ್ಯಾವಳಿಗಳು ದಾಖಲಾಗಿವೆ.

ಇದನ್ನೂ ಓದಿ: ಸುರತ್ಕಲ್: ಬಾಲಕನಿಗೆ ಲೈಂ*ಗಿಕ ಕಿರುಕುಳ; ಆರೋಪಿ ಬಂಧನ

ಇದೀಗ ಹಣವನ್ನು ಕಳೆದುಕೊಂಡಿರುವರು ಸುರತ್ಕಲ್‌ ಠಾಣಾ ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಆರೋಪಿಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page